ರಾಷ್ಟ್ರಪತಿಗಳ ಕಾರ್ಯಾಲಯ

ಬುದ್ಧ ಪೂರ್ಣಿಮೆಯ ಮುನ್ನಾದಿನದಂದು ರಾಷ್ಟ್ರಪತಿಯರಿಂದ ಶುಭಾ ಹಾರೈಕೆ

Posted On: 22 MAY 2024 5:31PM by PIB Bengaluru

ಬುದ್ಧ ಪೂರ್ಣಿಮೆಯ ಮುನ್ನಾದಿನವಾದ ಇಂದು ಭಾರತದ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಬುದ್ದನ ಎಲ್ಲಾ ಅನುಯಾಯಿಗಳಿಗೆ ತಮ್ಮ ಶುಭಾಶಯ ಸಂದೇಶವನ್ನು ರವಾನಿಸಿದ್ದಾರೆ.

ಅವರು, "ಬುದ್ಧ ಪೂರ್ಣಿಮೆಯ ಶುಭ ಸಂದರ್ಭದಲ್ಲಿ, ಎಲ್ಲಾ ನಾಗರಿಕರು ಮತ್ತು ಪ್ರಪಂಚದಾದ್ಯಂತ ಹರಡಿರುವ ಭಗವಾನ್ ಬುದ್ಧನ ಅನುಯಾಯಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ" ಎಂದಿದ್ದಾರೆ.

"ಸಹಾನುಭೂತಿಯ ಸಾಕಾರರೂಪವಾದ ಭಗವಾನ್ ಬುದ್ಧ ಸತ್ಯ, ಅಹಿಂಸೆ, ಸಾಮರಸ್ಯ, ಮಾನವೀಯತೆ ಮತ್ತು ಸಕಲ ಜೀವರಾಶಿಯ ಮೇಲಿನ ಪ್ರೀತಿಯ ಸಾಕಾರವಾಗಿದ್ದಾನೆ. ಭಗವಾನ್ ಬುದ್ಧ 'ಅಪ್ಪಾ ದೀಪೋ ಭವ' ಅಂದರೆ "ನಿಮಗೆ ನೀವೇ ಬೆಳಕಾಗಿರಿ" ಎಂದು ಹೇಳಿದ್ದಾನೆ. ಭಗವಾನ್ ಬುದ್ಧನ ಸಹಿಷ್ಣುತೆ, ಸ್ವಯಂ-ಅರಿವು ಮತ್ತು ಸನ್ನಡತೆಯ ಬೋಧನೆಗಳು ನಮಗೆ ಸ್ಫೂರ್ತಿದಾಯಕವಾಗಿವೆ. ಅವನ ಅಷ್ಟಾಂಗಿಕ ಮಾರ್ಗವು ಅರ್ಥಪೂರ್ಣ ಜೀವನವನ್ನು ನಡೆಸಲು ದಾರಿ ತೋರುತ್ತದೆ."

"ಭಗವಾನ್ ಬುದ್ಧನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಸಾಮರಸ್ಯದಿಂದ ರಾಷ್ಟ್ರ ನಿರ್ಮಾಣದ ಪ್ರತಿಜ್ಞೆ ಮಾಡೋಣ" ಎಂದು ರಾಷ್ಟ್ರಪತಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ರಾಷ್ಟ್ರಪತಿಗಳ ಸಂದೇಶವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

https://static.pib.gov.in/WriteReadData/specificdocs/documents/2024/may/doc2024522337801.pdf

*****



(Release ID: 2021367) Visitor Counter : 26