ಉಪರಾಷ್ಟ್ರಪತಿಗಳ ಕಾರ್ಯಾಲಯ
2024ರ ಏಪ್ರಿಲ್ 26ರಂದು ತಿರುಪತಿ ಮತ್ತು ಹೈದರಾಬಾದ್ಗೆ ಉಪ ರಾಷ್ಟ್ರಪತಿ ಭೇಟಿ
ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿ
ಹೈದರಾಬಾದ್ ನ ಭಾರತ್ ಬಯೋಟೆಕ್ ಗೆ ಭೇಟಿ ನೀಡಲಿದ್ದಾರೆ ಉಪರಾಷ್ಟ್ರಪತಿ
Posted On:
24 APR 2024 5:49PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನ್ಕರ್ ಅವರು 2024 ರ ಏಪ್ರಿಲ್ 26 ರಂದು ಆಂಧ್ರಪ್ರದೇಶದ ತಿರುಪತಿ ಮತ್ತು ತೆಲಂಗಾಣದ ಹೈದರಾಬಾದ್ ಗೆ ಭೇಟಿ ನೀಡಲಿದ್ದಾರೆ.
ಉಪರಾಷ್ಟ್ರಪತಿಗಳು ಆಂಧ್ರಪ್ರದೇಶದ ತಮ್ಮ ಪ್ರವಾಸವನ್ನು ತಿರುಪತಿಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮತ್ತು ದರ್ಶನ ಪಡೆಯುವ ಮೂಲಕ ಪ್ರಾರಂಭಿಸಲಿದ್ದಾರೆ. ಶ್ರೀ ಧನ್ಕರ್ ಅವರು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ 3 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ತಮ್ಮ ಒಂದು ದಿನದ ಪ್ರವಾಸದಲ್ಲಿ ಉಪರಾಷ್ಟ್ರಪತಿಗಳು ತೆಲಂಗಾಣದ ಹೈದರಾಬಾದಿನಲ್ಲಿರುವ ಭಾರತ್ ಬಯೋಟೆಕ್ ಸೌಲಭ್ಯಕ್ಕೂ ಭೇಟಿ ನೀಡಲಿದ್ದಾರೆ.
*****
(Release ID: 2019063)
Visitor Counter : 418