ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದುರ್ಬಲ ವರ್ಗಗಳಿಗೆ ಸಾಲ ಸಹಾಯಕ್ಕಾಗಿ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು


ಪ್ರಧಾನ ಮಂತ್ರಿ ಸಾಮಾಜಿಕ್ ಉತ್ಥಾನ್ ಏವಂ ರೋಜ್ಗರ್ ಅಧಾರಿತ್ ಜನಕಲ್ಯಾಣ್ (ಪಿಎಂ-ಸುರಜ್ PM-SURAJ) ಪೋರ್ಟಲ್ಲಿಗೆ ಚಾಲನೆ ನೀಡಿದರು 

ದುರ್ಬಲ ವರ್ಗದ ಒಂದು ಲಕ್ಷ ಉದ್ಯಮಿಗಳಿಗೆ ಸಾಲದ ನೆರವು 

ನಮಸ್ತೆ ಯೋಜನೆಯಡಿ  ಸಫಾಯಿ ಮಿತ್ರರಿಗೆ ಆಯುಷ್ಮಾನ್ ಹೆಲ್ತ್ ಕಾರ್ಡ್ಗಳು ಮತ್ತು ಪಿಪಿಇ ಕಿಟ್ ಗಳನ್ನು ವಿತರಿಸಿದರು

"ಇಂದಿನ ಸಂದರ್ಭವು ದುರ್ಬಲ ವರ್ಗದವರಿಗೆ ಆದ್ಯತೆ ನೀಡುವ ಸರ್ಕಾರದ ಬದ್ಧತೆಯ ಒಂದು ನೋಟವನ್ನು ನೀಡುತ್ತದೆ"

"ನಾನು ಅವರಿಗಿಂತ ಭಿನ್ನವಾಗಿಲ್ಲ ಮತ್ತು ನೀವು ನನ್ನ ಕುಟುಂಬವಾಗಿರುವುದರಿಂದ ಹಿಂದುಳಿದವರನ್ನು ತಲುಪುವ ಪ್ರಯೋಜನಗಳನ್ನು ನೋಡಿ ನಾನು ಭಾವುಕನಾಗಿದ್ದೇನೆ "

ಹಿಂದುಳಿದವರ  ಅಭಿವೃದ್ಧಿ ಆಗದೆ  2047ರ ವೇಳೆಗೆ ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ

ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಹಿಂದುಳಿದವರನ್ನು ಗೌರವಿಸುವ ಆಂದೋಲನವು ಮುಂದಿನ 5 ವರ್ಷಗಳಲ್ಲಿ ತೀವ್ರಗೊಳ್ಳಲಿದೆ ಎಂದು ಮೋದಿ ಭರವಸೆ ನೀಡುತ್ತೇನೆ. ನಿಮ್ಮ ಅಭಿವೃದ್ಧಿಯೊಂದಿಗೆ ನಾವು ವಿಕಸಿತ ಭಾರತದ ಕನಸನ್ನು ನನಸು ಮಾಡುತ್ತೇವೆ

Posted On: 13 MAR 2024 5:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದುರ್ಬಲ ವರ್ಗಗಳಿಗೆ ಸಾಲದ ಸಹಾಯಕ್ಕಾಗಿ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿಯವರು ಪ್ರಧಾನ ಮಂತ್ರಿ ಸಾಮಾಜಿಕ್ ಉತ್ಥಾನ್ ಏವಂ ರೋಜ್ಗಾರ್ ಅಧಾರಿತ್ ಜನಕಲ್ಯಾಣ್ (ಪಿಎಂ-ಸೂರಜ್ PM-SURAJ) ರಾಷ್ಟ್ರೀಯ ಪೋರ್ಟಲ್ ಗೆ ಚಾಲನೆ ನೀಡಿದರು  ಮತ್ತು ದೇಶದ ಹಿಂದುಳಿದ ವರ್ಗಗಳ ಒಂದು ಲಕ್ಷ ಉದ್ಯಮಿಗಳಿಗೆ ಒಂದು ಲಕ್ಷ ಉದ್ಯಮಿಗಳಿಗೆ ಸಾಲದ ನೆರವನ್ನು ಮಂಜೂರು ಮಾಡಿದರು. ಅವರು ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳು ಮತ್ತು ಪೌರ ಕಾರ್ಮಿಕರು ಸೇರಿದಂತೆ ಹಿಂದುಳಿದ ವರ್ಗಗಳ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಮಾತನಾಡಿದರು.

ಮಧ್ಯಪ್ರದೇಶದ ಇಂದೋರ್ ನ ಶ್ರೀ ನರೇಂದ್ರ ಸೇನ್ ಅವರು ಕ್ಲೌಡ್ ಕಂಪ್ಯೂಟಿಂಗ್ ನಲ್ಲಿ ವ್ಯವಹರಿಸುವ ಇಂಟರ್ನೆಟ್ ಕಂಪನಿಯ ಸಂಸ್ಥಾಪಕರು. ಸೈಬರ್ ಕೆಫೆಯನ್ನು ಹೊಂದುವುದರಿಂದ ಹಿಡಿದು ಕೋಡಿಂಗ್ ಕಲಿಯುವವರೆಗೆ ಮತ್ತು ಸಂಸ್ಥಾಪಕರಾಗುವವರೆಗಿನ ತಮ್ಮ ಪ್ರಯಾಣವನ್ನು ಅವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಸಣ್ಣ, ಅತಿ ಸಣ್ಣ, ಮಧ್ಯಮ ಉದ್ದಿಮೆಗಳನ್ನು (ಎಂಎಸ್ಎಂ ಇ) ಡಿಜಿಟಲೀಕರಣಗೊಳಿಸುವ ಮೂಲಕ ಸಬಲೀಕರಣಗೊಳಿಸುವ ಗುರಿ ಹೊಂದಿರುವುದಾಗಿ ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ಇನ್ನೊಬ್ಬ ನರೇಂದ್ರನ ಕಥೆಯನ್ನು ತಿಳಿದುಕೊಳ್ಳಬೇಕೆಂದು ಪ್ರಧಾನಮಂತ್ರಿಯವರು  ಲಘುವಾದ ಹಾಸ್ಯದಿಂದ ಕೇಳಿದಾಗ, ಶ್ರೀ ಸೇನ್ ಅವರು ತಾವು ಹಳ್ಳಿಯಿಂದ ಬಂದವರು ಆದರೆ ಅವರ ಕುಟುಂಬವು ಇಂದೋರ್ ಗೆ ಸ್ಥಳಾಂತರಗೊಂಡಿತು ಮತ್ತು ಅವರು ವಾಣಿಜ್ಯದಲ್ಲಿ ಹಿನ್ನೆಲೆ ಹೊಂದಿದ್ದರೂ ಸಹ ತಂತ್ರಜ್ಞಾನದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ನಾಸ್ಕಾಮ್ ನ ಕಾರ್ಯಕ್ರಮವೊಂದರಲ್ಲಿ ಪ್ರಧಾನಮಂತ್ರಿಯವರ ಭಾಷಣ ಮತ್ತು ಭಾರತದಲ್ಲಿ ಕ್ಲೌಡ್ ಗೋಡೌನ್ ಗಾಗಿ ಅವರ ಬೇಡಿಕೆಯು ಕ್ಲೌಡ್ ಕಂಪ್ಯೂಟಿಂಗ್ ನಲ್ಲಿ ಕೆಲಸ ಮಾಡಲು ಅವರನ್ನು ಪ್ರೇರೇಪಿಸಿತು ಎಂದು ಪ್ರಧಾನಮಂತ್ರಿ ಮೋದಿಯವರಿಗೆ ತಿಳಿಸಿದರು. "ಒಂದು ಹಳ್ಳಿಯಲ್ಲಿ ಕುಳಿತಿರುವ ಒಬ್ಬ ನರೇಂದ್ರ ಇನ್ನೊಬ್ಬ ನರೇಂದ್ರನಿಂದ ಪ್ರೇರಿತನಾದನು" ಎಂದು ಶ್ರೀ ಸೇನ್ ಹೇಳಿದರು. ಸರ್ಕಾರದ ಸವಾಲುಗಳು ಮತ್ತು ಬೆಂಬಲದ ಕುರಿತ ಪ್ರಧಾನ ಮಂತ್ರಿಯವರ ಪ್ರಶ್ನೆಗೆ, ಶ್ರೀ ಸೇನ್ ಅವರು ಸಹಾಯಕ್ಕಾಗಿ ಅವರ ವಿನಂತಿಯನ್ನು ಆಗಿನ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಅನುಮೋದಿಸಿದರು, ಇದು ಭಾರತದ ಮೊದಲ ಡೇಟಾ ಸೆಂಟರ್ ಪಾರ್ಕ್ ನ ಅಭಿವೃದ್ಧಿಗೆ ಕಾರಣವಾಯಿತು. ನವೋದ್ಯಮಗಳಲ್ಲಿ ಆಸಕ್ತಿ ವಹಿಸಿದ್ದಕ್ಕಾಗಿ ಸೇನ್ ಮತ್ತು ಇತರ ಯುವಕರ ಬಗ್ಗೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು ಮತ್ತು ಅವರ ವಿಧಾನವನ್ನು ಶ್ಲಾಘಿಸಿದರು. ಅವರ ಯಶಸ್ಸಿಗಾಗಿ  ಅಭಿನಂದಿಸಿದರು.

ಜಮ್ಮುವಿನಿಂದ ಬೂಟಿಕ್ ನಡೆಸುತ್ತಿರುವ ನೀಲಂ ಕುಮಾರಿ ಅವರು ಪ್ರಧಾನಮಂತ್ರಿಯವರೊಂದಿಗೆ  ಮಾತನಾಡಿದರು. ಲಾಕ್- ಡೌನ್ ಸಮಯದಲ್ಲಿ ಅನುಭವಿಸಿದ ಸಮಸ್ಯೆಗಳನ್ನು ಅವರು ನೆನಪಿಸಿಕೊಂಡರು. ಅವರು ಉಜ್ವಲಾ, ಪಿಎಂ ಆವಾಸ್, ಆಯುಷ್ಮಾನ್ ಮತ್ತು ಸ್ವಚ್ಛ ಭಾರತ್ ನಂತಹ ಅನೇಕ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಿದ್ದಾರೆ. ಅವರು ವ್ಯಾಪಾರವನ್ನು ಪ್ರಾರಂಭಿಸಲು ಸರ್ಕಾರದ ಸಾಲವನ್ನು ಪಡೆದರು. ಆಕೆ ಉದ್ಯೋಗದಾತೆ ಎಂದು ಪ್ರಧಾನಮಂತ್ರಿಯವರು ಹೊಗಳಿದರು. ಈ ಹಿಂದೆ ನಿರ್ಲಕ್ಷಿಸಲ್ಪಟ್ಟಿದ್ದ ದೇಶದ ಮೂಲೆ ಮೂಲೆಯ ಜನರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿಯವರು ಅವರಿಗೆ ತಿಳಿಸಿದರು. ಅವರ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅವರಿಗೆ ಧನ್ಯವಾದ ಅರ್ಪಿಸಿದರು. ಜನ್ ಧನ್, ಮುದ್ರಾ, ಪ್ರಧಾನಮಂತ್ರಿ ಆವಾಸ್ ಮತ್ತು ಉದ್ಯಮ ವಿಕಾಸ ಯೋಜನೆಯಂತಹ ಯೋಜನೆಗಳು ಹಿಂದೆ ಉಳಿದಿದ್ದವರ ಜೀವನವನ್ನು ಬದಲಾಯಿಸುತ್ತಿವೆ ಎಂದು   ಹೇಳಿದರು. 

ಜಲ ಜೀವನ್ ಆಗ್ರೊಟೆಕ್ ನ ಸಹ-ಸಂಸ್ಥಾಪಕರಾದ ಮಹಾರಾಷ್ಟ್ರದ ಅಹ್ಮದ್ನಗರದ ಶ್ರೀ ನರೇಶ್ ಅವರು ತಮ್ಮ ನವೋದ್ಯಮ ಕೃಷಿ ತ್ಯಾಜ್ಯ ನೀರನ್ನು ಸಂರಕ್ಷಿಸುವ ವ್ಯವಹಾರದಲ್ಲಿ ಇದೆ ಎಂದು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ಅಂಬೇಡ್ಕರ್ ಸೋಶಿಯಲ್ ಇನ್ನೋವೇಶನ್ ಮಿಷನ್ ಅಡಿಯಲ್ಲಿ 30 ಲಕ್ಷ ರೂಪಾಯಿಗಳ ಸಾಲವನ್ನು  ಪಡೆದು ತಮ್ಮ ಕಂಪನಿಯನ್ನು ಸ್ಥಾಪಿಸಲು ಯಂತ್ರೋಪಕರಣಗಳನ್ನು ಖರೀದಿಸಲು ಸಹಾಯವಾಯಿತು ಎಂದು ಅವರು ಹೇಳಿದರು. ಅವರು ಪ್ರಧಾನಮಂತ್ರಿಯವರಿಗೆ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಕೃಷಿ ಕ್ಷೇತ್ರದಿಂದ ಕಂಪನಿಯೊಂದರ ಸಂಸ್ಥಾಪಕರಾಗುವವರೆಗಿನ ಅವರ ಪ್ರಯಾಣದ ಬಗ್ಗೆ ಪ್ರಧಾನಮಂತ್ರಿಯವರ ಪ್ರಶ್ನೆಗೆ, ಶ್ರೀ ನರೇಶ್ ಅವರು ತಮ್ಮ ತಂದೆ ತಾಯಿಯವರೊಡನೆ ತೋಟಗಳಲ್ಲಿ ಕೆಲಸ ಮಾಡಿದ್ದು ಅವರಿಗೆ ಅಗತ್ಯವಾದ ಅನುಭವವನ್ನು ನೀಡಿತು ಎಂದು ಹೇಳಿದರು. ಆಯುಷ್ಮಾನ್ ಭಾರತ್ ಕಾರ್ಡ್ ಮತ್ತು ರಾಷ್ಟ್ರೀಯ ಪಡಿತರ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿರುವ ಬಗ್ಗೆ ಅವರು ಪ್ರಧಾನಮಂತ್ರಿಗಳಿಗೆ  ತಿಳಿಸಿದರು. ತಮ್ಮ ಕಂಪನಿಯ ಮೂಲಕ ರೈತರನ್ನು ಬೆಂಬಲಿಸುವ ಬಗ್ಗೆ ಶ್ರೀ ನರೇಶ್ ಅವರು ತಮ್ಮ ಕಂಪನಿಯು ತಯಾರಿಸಿದ ಮತ್ತು ವಿನ್ಯಾಸಗೊಳಿಸಿದ ಉತ್ಪನ್ನವು ಭಾರತ ಸರ್ಕಾರದಿಂದ ಪೇಟೆಂಟ್ ಪಡೆದಿದೆ ಮತ್ತು ಇದು ಕೃಷಿ ಸಮಯದಲ್ಲಿ ನೀರು ಪೋಲಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಸರ್ಕಾರದ ಯೋಜನೆಗಳ ಲಾಭ ಪಡೆಯಲು ಕೃಷಿ ಕ್ಷೇತ್ರದಲ್ಲಿ ಛಾಪು ಮೂಡಿಸಲು ಪ್ರಯತ್ನಿಸುತ್ತಿರುವ ಹೊಸ ಕೈಗಾರಿಕೆಗಳಿಗೆ ಅವರು ಒತ್ತಾಯಿಸಿದರು. ಅವರ ಉತ್ಸಾಹವನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಮೋದಿಯವರು ಕೃಷಿ ಕ್ಷೇತ್ರವನ್ನು ಪ್ರವೇಶಿಸಲು ಬಯಸುವ ಯುವಕರಿಗೆ ಶ್ರೀ ನರೇಶ್ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

ಪೌರ ಕಾರ್ಮಿಕರಾಗಿರುವ (ಸಫಾಯಿ ಕರ್ಮಚಾರಿ) ಗುಂಟೂರಿನ ಶ್ರೀಮತಿ ಮುತ್ತಮ್ಮ ಅವರು ತಮ್ಮ ಜೀವನವನ್ನು ಬದಲಿಸಿದ ಸೆಪ್ಟಿಕ್ ಟ್ಯಾಂಕ್ ಡೆಸ್ಲಡ್ಜಿಂಗ್ ವಾಹನವನ್ನು ತಮ್ಮ ಹೆಸರಿನಲ್ಲಿ ಪಡೆದ ಹೆಮ್ಮೆಯ ಬಗ್ಗೆ ಪ್ರಧಾನಮಂತ್ರಿಯವರಿಗೆ ತಿಳಿಸಿದರು. ಅವರು ತಮ್ಮ ಪ್ರಯಾಣವನ್ನು ವಿವರಿಸುವ ಬಗ್ಗೆ ಭಾವುಕರಾದರು. “ಈ ವಾಹನವು ನನಗೆ ಶಕ್ತಿಯನ್ನು ನೀಡಿದೆ ಮತ್ತು ಸಮಾಜವು ನನಗೆ ಹೊಸ ಗೌರವವನ್ನು ನೀಡಲು ಪ್ರಾರಂಭಿಸಿದೆ. ಇದೆಲ್ಲವೂ ನಿಮ್ಮ ಉಪಕ್ರಮಗಳಿಂದಾಗಿ" ಎಂದು ಅವರು ಹೇಳಿದರು. ಪ್ರಧಾನಿಯವರ ಪ್ರಶ್ನೆಗೆ, ಅವರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಅವರಿಗೆ ತಿಳಿಸಿದರು ಮತ್ತು ಅವರು ಡ್ರೈವಿಂಗ್ ಕಲಿಯುವ ಮೂಲಕ ಅವರ ಜೀವನವನ್ನು ಬದಲಾಯಿಸುತ್ತಿದ್ದಾರೆ ಎಂದು ಹೇಳಿದರು. ತಾನು ಮತ್ತು ತನ್ನ ಕುಟುಂಬ ಪಡೆಯುತ್ತಿರುವ ಎಲ್ಲಾ ವಿವಿಧ ಕಲ್ಯಾಣ ಯೋಜನೆಗಳಿಗಾಗಿ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿಯವರು ತಮ್ಮ ನೆಚ್ಚಿನ ಕ್ಷೇತ್ರವನ್ನು ಅಂದರೆ ಸ್ವಚ್ಛತೆಯನ್ನು ಉತ್ತೇಜಿಸುತ್ತಿರುವುದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ನಾಗರಿಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸರ್ಕಾರವು ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದು ಹೇಳಿದರು. "ಮಹಿಳೆಯರ ಘನತೆ ಮತ್ತು ಸಮೃದ್ಧಿ ನಮ್ಮ ಸಂಕಲ್ಪದ ಪ್ರಮುಖ ಭಾಗಗಳಾಗಿವೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.
ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು 470 ಜಿಲ್ಲೆಗಳಿಂದ ಸುಮಾರು 3 ಲಕ್ಷ ಜನರ ವಾಸ್ತವೋಪಮವಾಗಿ , ವಿಡಿಯೋ ಮೂಲಕ ಇರುವ ಉಪಸ್ಥಿತಿಯನ್ನು   ಕಂಡು ಸಂತೋಷ ಮತ್ತು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ದಲಿತರು, ಹಿಂದುಳಿದವರು ಮತ್ತು ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ರಾಷ್ಟ್ರವು ಮತ್ತೊಂದು ಬಹುದೊಡ್ಡ ಸಂದರ್ಭಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಮೋದಿಯವರು ಒತ್ತಿ ಹೇಳಿದರು. ಇಂದಿನ ಸಂದರ್ಭ ಹಿಂದುಳಿದವರಿಗೆ ಆದ್ಯತೆ ನೀಡುವ ಸರ್ಕಾರದ ಬದ್ಧತೆಯ ಕಿರುನೋಟವನ್ನು ಒದಗಿಸುತ್ತದೆ ಎಂದು ಹೇಳಿದರು. ಭಾರತದ 500 ವಿವಿಧ ಜಿಲ್ಲೆಗಳಿಂದ ಬಂದಿರುವ ಹಿಂದುಳಿದ ವರ್ಗಗಳ 1 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 720 ಕೋಟಿ ರೂಪಾಯಿಗಳ ಆರ್ಥಿಕ ಸಹಾಯವನ್ನು ನೇರವಾಗಿ ವರ್ಗಾಯಿಸುವ ಬಗ್ಗೆ ಪ್ರಸ್ತಾಪಿಸಿದ ಅವರು, "ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇಂತಹ ಡಿಬಿಟಿ ವ್ಯವಸ್ಥೆಯ ಬಗ್ಗೆ  ಊಹಿಸಲೂ ಸಾಧ್ಯವಿಲ್ಲ" ಎಂದು ಹೇಳಿದರು. ಇತರ ಸರ್ಕಾರಿ ಯೋಜನೆಗಳಿಂದ ನೇರ ಲಾಭ ವರ್ಗಾವಣೆಯಂತೆಯೇ ಮತ್ತು ಮಧ್ಯವರ್ತಿಗಳು, ಆಯೋಗಗಳು ಮತ್ತು ಶಿಫಾರಸುಗಳಿಂದ ಮುಕ್ತವಾದಂತೆ ಸಮಾಜದ ಹಿಂದುಳಿದ ವರ್ಗಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಸುರಜ್  ಪೋರ್ಟಲ್ ಅನ್ನು ಪ್ರಾರಂಭಿಸಿರುವುದರ ಬಗ್ಗೆ ಹೇಳಿದರು. ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್  ಕೆಲಸಗಳಲ್ಲಿ ತೊಡಗಿರುವ ʼಸಫಾಯಿ ಮಿತ್ರರಿಗೆʼ ಆಯುಷ್ಮಾನ್ ಭಾರತ್ ಕಾರ್ಡ್ ಗಳು ಮತ್ತು ಪಿಪಿಇ ಕಿಟ್ಗಳ ವಿತರಣೆಯ ಬಗ್ಗೆಯೂ ಪ್ರಧಾನಮಂತ್ರಿ ಅವರು  ಹೇಳಿದರು. ಸೇವೆಗಳ ವಿಸ್ತರಣೆಯು ದುರ್ಬಲ ವರ್ಗಗಳ ಜೊತೆಗೆ ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಕಲ್ಯಾಣ ಅಭಿಯಾನದ ಭಾಗವಾಗಿದೆ ಎಂದು ಅವರು ಹೇಳಿದರು ಮತ್ತು ಇಂದಿನ ಯೋಜನೆಗಳಿಗೆ ಅವರನ್ನು ಅಭಿನಂದಿಸಿದರು.

ಫಲಾನುಭವಿಗಳೊಂದಿಗಿನ ತಮ್ಮ ಸಂವಾದವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕಲ್ಯಾಣ ಯೋಜನೆಗಳು ದಲಿತರು, ವಂಚಿತರು ಮತ್ತು ಹಿಂದುಳಿದ ಸಮುದಾಯಗಳಿಗೆ  ತಲುಪುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ನಾನು ಅವರಿಗಿಂತ ಭಿನ್ನವಾಗಿಲ್ಲ ಮತ್ತು ನೀವು ನನ್ನ ಕುಟುಂಬವಾಗಿರುವುದರಿಂದ ಹಿಂದುಳಿದವರನ್ನು ತಲುಪುವ ಪ್ರಯೋಜನಗಳನ್ನು ನೋಡಿ ನಾನು ಭಾವುಕನಾಗಿದ್ದೇನೆ " ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

2047 ರ ವೇಳೆಗೆ ವಿಕಸಿತ ಭಾರತದ ಗುರಿಯ ಕುರಿತು ಮಾತನಾಡುತ್ತಾ, ಹಿಂದುಳಿದವರ ಅಭಿವೃದ್ಧಿ ಇಲ್ಲದೆ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿಯವರು ಹೇಳಿದರು. ಹಿಂದಿನ ಮನಸ್ಥಿತಿಯನ್ನು ಮುರಿದು ಇತರರಿಗೆ ಸಿಗುವ ಗ್ಯಾಸ್ ಸಂಪರ್ಕ, ಬ್ಯಾಂಕ್ ಖಾತೆ, ಶೌಚಾಲಯ ಮುಂತಾದ ಸೌಲಭ್ಯಗಳು ದಲಿತರು, ಹಿಂದುಳಿದವರು, ವಂಚಿತರು, ಆದಿವಾಸಿಗಳಿಗೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಹಿಂದುಳಿದ ವರ್ಗದವರು ಕೇವಲ ಮೂಲ ಸೌಕರ್ಯ ಪಡೆಯಲು ಹಲವು ತಲೆಮಾರುಗಳು ವ್ಯರ್ಥವಾದವು ಎಂದರು ಪ್ರಧಾನಮಂತ್ರಿಯವರು  ಹೇಳಿದರು. "2014 ರ ನಂತರ ಸರ್ಕಾರವು ಯಾವುದೇ ನಿರೀಕ್ಷೆಗಳಿಲ್ಲದ ವರ್ಗಗಳನ್ನು ತಲುಪಿತು ಮತ್ತು ಅವರನ್ನು ರಾಷ್ಟ್ರದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡಿತು" ಎಂದು ಪ್ರಧಾನಮಂತ್ರಿಯವರು ಹೇಳಿದರು. ಉಚಿತ ಪಡಿತರ, ಉಚಿತ ಚಿಕಿತ್ಸೆ, ಪಕ್ಕಾ ಮನೆ, ಶೌಚಾಲಯ, ಉಜ್ವಲ ಅನಿಲ ಸಂಪರ್ಕದಂತಹ ಯೋಜನೆಗಳ ಹೆಚ್ಚಿನ ಫಲಾನುಭವಿಗಳು ವಂಚಿತ ವರ್ಗದ ಜನರಾಗಿದ್ದಾರೆ ಎಂದು ಹೇಳಿದರು. “ಈಗ ನಾವು ಈ ಯೋಜನೆಗಳನ್ನು ಸಂಪೂರ್ಣವಾಗಿ ಈಡೇರಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಮತ್ತು ಪೌರ ಕಾರ್ಮಿಕರಿಗೆ  ನಮಸ್ತೆ ಯೋಜನೆಗಳ ಬಗ್ಗೆಯೂ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಮನುಷ್ಯರಿಂದ ಮಲ ತೆಗೆಸುವ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಎನ್ನುವ ಅಮಾನವೀಯ ಪದ್ಧತಿಯನ್ನು ತೊಡೆದುಹಾಕುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, 60,000 ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಗಿದ್ದು, ಅವರು ಮತ್ತೆ ಘನತೆಯ ಜೀವನ ನಡೆಸಬಹುದು ಎಂದು ಹೇಳಿದರು. 

"ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಸಮುದಾಯಗಳನ್ನು ಸಬಲೀಕರಣಗೊಳಿಸಲು ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ಹೇಳಿದ ಪ್ರಧಾನಮಂತ್ರಿ ಮೋದಿಯವರು, ಕಳೆದ 10 ವರ್ಷಗಳಲ್ಲಿ ಇವರಿಗೆ ವಿವಿಧ ಸರ್ಕಾರಿ ಸಂಸ್ಥೆಗಳು ನೀಡುವ ನೆರವು ದುಪ್ಪಟ್ಟಾಗಿದೆ ಎಂದರುಎಂದು ತಿಳಿಸಿದರು. ಎಸ್ ಸಿ ಸಮುದಾಯದ ಕಲ್ಯಾಣಕ್ಕಾಗಿ ಈ ವರ್ಷವೇ ಸರ್ಕಾರ ಸುಮಾರು 1 ಲಕ್ಷದ 60 ಸಾವಿರ ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಅವರು ಮಾಹಿತಿ ನೀಡಿದರು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಲಕ್ಷ ಕೋಟಿ ರೂಪಾಯಿಗಳ ಹಗರಣಗಳು ಮಾತ್ರ ನಡೆದಿವೆ ಎಂದು ತೋರಿಸಿದ ಪ್ರಧಾನಮಂತ್ರಿಯವರು, ಈ ಹಣವನ್ನು ದಲಿತರು ಮತ್ತು ವಂಚಿತರ ಕಲ್ಯಾಣಕ್ಕಾಗಿ ಮತ್ತು ದೇಶದ ಅಭಿವೃದ್ಧಿಗೆ ಖರ್ಚು ಮಾಡುವುದನ್ನು ದೃಢಪಡಿಸಿದರು. ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಯುವಕರಿಗೆ ಹೆಚ್ಚುತ್ತಿರುವ ಸ್ಕಾಲರ್ ಶಿಪ್, ಅಖಿಲ ಭಾರತ ವೈದ್ಯಕೀಯ ಸೀಟುಗಳಲ್ಲಿ ಒಬಿಸಿಗೆ 27 ಪ್ರತಿಶತ ಸೀಟುಗಳ ಮೀಸಲಾತಿ, ನೀಟ್ ಪರೀಕ್ಷೆಯಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಪ್ರವೇಶ, ಮತ್ತು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನದಿಂದ ಸಹಾಯದ ಬಗ್ಗೆ ಮಾತನಾಡಿದರು. ವಿದೇಶದಲ್ಲಿ ಮಾಸ್ಟರ್ ಮತ್ತು ಪಿಎಚ್ ಡಿ ಪದವಿಗಳನ್ನು ಮುಂದುವರಿಸಿ. ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಪಿಎಚ್ ಡಿ ಮಾಡಲು ಸಹಾಯ ಮಾಡಲು ರಾಷ್ಟ್ರೀಯ ಫೆಲೋಶಿಪ್ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಸಿಕ್ಕಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. 

"ಸರ್ಕಾರವು ವಂಚಿತ ವರ್ಗಗಳ ಯುವಕರ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡುತ್ತಿದೆ", ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳು ಸೇರಿದಂತೆ ಬಡವರಿಗೆ ಸುಮಾರು 30 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಸಹಾಯವನ್ನು ಒದಗಿಸಿದ ಮುದ್ರಾ ಯೋಜನೆಯ ಬಗ್ಗೆ ಹೇಳಿದರು. ಅವರು ಎಸ್ಸಿ ಮತ್ತು ಎಸ್ಟಿ ವರ್ಗಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಸ್ಟ್ಯಾಂಡ್ ಅಪ್ ಇಂಡಿಯಾ ಸ್ಕೀಮ್ ಮತ್ತು ವೆಂಚರ್ ಕ್ಯಾಪಿಟಲ್ ಫಂಡ್ ಸ್ಕೀಮ್ ಬಗ್ಗೆ ಸಹ ತಿಳಿಸಿದರು. "ದಲಿತರಲ್ಲಿನ ಉದ್ಯಮಶೀಲತೆಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಸರ್ಕಾರವು ಅಂಬೇಡ್ಕರ್ ಸಾಮಾಜಿಕ ಆವಿಷ್ಕಾರ ಮತ್ತು ಸಂರಕ್ಷಣೆಯ (ಇನ್ಕ್ಯುಬೇಷನ್) ಮಿಷನ್ ಅನ್ನು ಸಹ ಪ್ರಾರಂಭಿಸಿದೆ" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ದಲಿತ ಮತ್ತು ವಂಚಿತ ಸಮುದಾಯಗಳ ಅನುಕೂಲಕ್ಕಾಗಿ ನೀತಿಗಳ ಬಗ್ಗೆ  ಉಲ್ಲೇಖಿಸಿದ ಪ್ರಧಾನಮಂತ್ರಿಯವರು, “ದೀನದಲಿತರಿಗೆ ಘನತೆ ಮತ್ತು ನ್ಯಾಯವನ್ನು ಒದಗಿಸುವ ನಮ್ಮ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಮೋದಿ ನಿಮಗೆ ಈ ಗ್ಯಾರಂಟಿ ನೀಡುತ್ತಾನೆ, ಈ ಅಭಿವೃದ್ಧಿ ಮತ್ತು ವಂಚಿತ ವರ್ಗದ ಗೌರವದ ಅಭಿಯಾನವು ಮುಂಬರುವ 5 ವರ್ಷಗಳಲ್ಲಿ ತೀವ್ರಗೊಳ್ಳುತ್ತದೆ. ನಿಮ್ಮ ಅಭಿವೃದ್ಧಿಯ ಮೂಲಕ ನಾವು ವಿಕಸಿತ ಭಾರತದ ಕನಸನ್ನು ನನಸು ಮಾಡುತ್ತೇವೆ” ಎಂದರು.

ಹಿನ್ನೆಲೆ:

ಹಿಂದುಳಿದ ವರ್ಗಗಳಿಗೆ ಸಾಲ ಸಹಾಯಕ್ಕಾಗಿ ಪಿಎಂ-ಸುರಾಜ್ (PM-SURAJ) ರಾಷ್ಟ್ರೀಯ ಪೋರ್ಟಲ್ ಹಿಂದುಳಿದವರಿಗೆ ಆದ್ಯತೆ ನೀಡುವ ಪ್ರಧಾನ ಮಂತ್ರಿಯವರ ಬದ್ಧತೆಯನ್ನು ಸಾಕಾರಗೊಳಿಸುತ್ತದೆ   ಇದು ಪರಿವರ್ತಕ ಉಪಕ್ರಮವಾಗಿದ್ದು, ಸಮಾಜದ ಅತ್ಯಂತ ಹಿಂದುಳಿದ ವರ್ಗದವರನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದೆ. ದೇಶದಾದ್ಯಂತ ಅರ್ಹ ವ್ಯಕ್ತಿಗಳಿಗೆ ಸಾಲದ ಬೆಂಬಲವನ್ನು ಒದಗಿಸಲಾಗುತ್ತದೆ ಮತ್ತು ಬ್ಯಾಂಕ್ಗಳು, ಎನ್ ಬಿ ಎಫ್ ಸಿ- ಎಂಎಫ್ ಐ ಗಳು ಮತ್ತು ಇತರ ಸಂಸ್ಥೆಗಳ ಮೂಲಕ ಒದಗಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿಯವರು ಆಯುಷ್ಮಾನ್ ಹೆಲ್ತ್ ಕಾರ್ಡ್ಗಳು ಮತ್ತು ಪಿಪಿಇ ಕಿಟ್ಗಳನ್ನು ಸಫಾಯಿ ಮಿತ್ರರಿಗೆ (ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕೆಲಸಗಾರರು) ಯಾಂತ್ರಿಕೃತ ನೈರ್ಮಲ್ಯ ಪರಿಸರ ವ್ಯವಸ್ಥೆ (ನಮಸ್ತೆ) ಗಾಗಿ ರಾಷ್ಟ್ರೀಯ ಕ್ರಮದ ಅಡಿಯಲ್ಲಿ ವಿತರಿಸಿದರು. ಈ ಉಪಕ್ರಮವು ಸವಾಲಿನ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುವ ಮುಂಚೂಣಿಯ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯನ್ನು ತೋರಿಸುತ್ತದೆ.

ದೇಶದಾದ್ಯಂತ ಸುಮಾರು 500 ಜಿಲ್ಲೆಗಳಿಂದ ಸರ್ಕಾರದ ಹಿಂದುಳಿದ ವರ್ಗಗಳ ವಿವಿಧ ಯೋಜನೆಗಳ ಸುಮಾರು 3 ಲಕ್ಷ ಫಲಾನುಭವಿಗಳ ಭಾಗವಹಿಸುವಿಕೆಗೆ ಕಾರ್ಯಕ್ರಮವು ಸಾಕ್ಷಿಯಾಯಿತು.

 

*****


(Release ID: 2016374) Visitor Counter : 76