ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಡಿಡಿ ನ್ಯೂಸ್ / ಡಿಡಿ ಇಂಡಿಯಾ ಆಂಕರ್‌ಗಳ ಸ್ಟೈಲಿಂಗ್‌ನ ಸಹಯೋಗಕ್ಕೆ ಕೆವಿಐಸಿ ಅಧ್ಯಕ್ಷರಿಂದ ಚಾಲನೆ
KVIC 18ನೇ ಸೆಪ್ಟೆಂಬರ್ 2023 ರಂದು ಪ್ರಸಾರ ಭಾರತಿ ಜೊತೆಗಿನ ತಿಳಿವಳಿಕಾ ಒಪ್ಪಂದದ ಭಾಗವಾಗಿ ಡಿಡಿ ನ್ಯೂಸ್ / ಡಿಡಿ ಇಂಡಿಯಾದ ವಿನ್ಯಾಸದ ಸಹಯೋಗವನ್ನು ಪ್ರಾರಂಭ
Posted On:
10 MAR 2024 4:53PM by PIB Bengaluru
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್ ಅವರು ಡಿಡಿ ನ್ಯೂಸ್ / ಡಿಡಿ ಇಂಡಿಯಾ ಆಂಕರ್‌ಗಳ ಸ್ಟೈಲಿಂಗ್‌ನ ಸಹಯೋಗವನ್ನು ಪ್ರಸಾರಭಾರತಿ ಮತ್ತು ದೂರದರ್ಶನ ಸಿಇಒ ಶ್ರೀ ಗೌರವ್ ದ್ವಿವೇದಿ, ಸಮ್ಮುಖದಲ್ಲಿ 9 ಮಾರ್ಚ್ 2024ರಂದು ಮಂಡಿಹೌಸ್‌ನಲ್ಲಿರುವ ದೂರದರ್ಶನ ಭವನದಲ್ಲಿ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಕೆವಿಐಸಿ, ನಯೇ ಭಾರತ್ ಕಿ ನಯಿ ಖಾದಿಯು ಎಲ್ಲಾ ಆಂಕರ್‌ಗಳ ವೇಷಭೂಷಣಕ್ಕೆ ಸಿದ್ಧವಾಗಿದೆ. ರಾಷ್ಟ್ರಮಟ್ಟದಲ್ಲಿ ಪ್ರತಿ ಮನೆಯಲ್ಲೂ ಖಾದಿಯನ್ನು ಜನಪ್ರಿಯಗೊಳಿಸುವಲ್ಲಿ ದು ಗೌರವಾನ್ವಿತ ಪ್ರಧಾನಿ ಮೋದಿಯವರ ಗ್ಯಾರಂಟಿಯ ಸಾಧನೆಯಾಗಿದೆ. ‘ದೇಶಕ್ಕಾಗಿ ಖಾದಿ, ಫ್ಯಾಷನ್‌ಗಾಗಿ ಖಾದಿ ಮತ್ತು ಪರಿವರ್ತನೆಗಾಗಿ ಖಾದಿ’ ಎಂಬುದು ಪ್ರಧಾನಿಯವರ ಮಂತ್ರವಾಗಿದೆ ಎಂದರು.
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕಳೆದ 9 ವರ್ಷಗಳಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ (ಕೆವಿಐ) ವಲಯವು 1.34 ಲಕ್ಷ ಕೋಟಿ ರೂ.ಗಳ ವಹಿವಾಟು ಮಾಡಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಮತ್ತು 9.50 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಖಾದಿ ಕುಶಲಕರ್ಮಿಗಳ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ.
KVIC ಜೊತೆಗಿನ ಸಹಯೋಗವು DD ಇಂಡಿಯಾ ಆಂಕರ್‌ಗಳ ಸ್ಟೈಲಿಂಗ್ ರೂಪದಲ್ಲಿ ವಾಸ್ತವದಲ್ಲಿ ಜಗತ್ತಿಗೆ ಗೋಚರಿಸಿದಾಗ ದೂರದರ್ಶನಕ್ಕೆ ಇದು ಹೆಮ್ಮೆಯ ಕ್ಷಣ ಎಂದು ಪ್ರಸಾರಭಾರತಿಯ ಸಿಇಒ ಶ್ರೀ ಗೌರವ್ ದ್ವಿವೇದಿ ಅಭಿಪ್ರಾಯಪಟ್ಟಿದ್ದಾರೆ.
*****
(Release ID: 2013326)
Visitor Counter : 83