ಗಣಿ ಸಚಿವಾಲಯ
azadi ka amrit mahotsav

​​​​​​​ಗಣಿ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಗಣಿಗಾರಿಕೆ ಮತ್ತು ಖನಿಜ ವಲಯದಲ್ಲಿ ಆವಿಷ್ಕಾರಗಳಿಗೆ ಧನಸಹಾಯಕ್ಕಾಗಿ ಐದು ನವೋದ್ಯಮಗಳಿಗೆ ಹಣಕಾಸು ಅನುದಾನದ ಪತ್ರಗಳನ್ನು ಹಸ್ತಾಂತರಿಸಿದರು

Posted On: 01 MAR 2024 12:52PM by PIB Bengaluru

ಭಾರತ ಸರ್ಕಾರದ ಗಣಿ ಸಚಿವಾಲಯವು ಗಣಿ ಸಚಿವಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮ (ಎಸ್ &ಟಿ ಕಾರ್ಯಕ್ರಮ) ಅಡಿಯಲ್ಲಿ ಈ ಕ್ಷೇತ್ರಗಳಲ್ಲಿ ಸುರಕ್ಷತೆ, ಆರ್ಥಿಕತೆ, ವೇಗ ಮತ್ತು ದಕ್ಷತೆಗಾಗಿ 1978 ರಿಂದ ಗಣಿಗಾರಿಕೆ ಮತ್ತು ಲೋಹಶಾಸ್ತ್ರ ಕ್ಷೇತ್ರದ ಅನೇಕ ಸಂಶೋಧನಾ ಸಂಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ (ಆರ್ & ಡಿ ಯೋಜನೆಗಳಿಗೆ) ಧನಸಹಾಯ ನೀಡುತ್ತಿದೆ.

ಇತ್ತೀಚೆಗೆ, ಗಣಿ ಸಚಿವಾಲಯವು ಗಣಿಗಾರಿಕೆ ಮತ್ತು ಖನಿಜ ಕ್ಷೇತ್ರದಲ್ಲಿ ಕೆಲಸ ಮಾಡುವ ಸ್ಟಾರ್ಟ್ಅಪ್ಗಳು ಮತ್ತು ಎಂಎಸ್ಎಂಇಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ಧನಸಹಾಯ ನೀಡಲು ಮತ್ತು ಸಂಶೋಧನೆ ಮತ್ತು ವಾಣಿಜ್ಯೀಕರಣದ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ಗಣಿಗಾರಿಕೆ ಮತ್ತು ಖನಿಜ ವಲಯದಲ್ಲಿ ಸಂಪೂರ್ಣ ಮೌಲ್ಯ ಸರಪಳಿಗಾಗಿ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು 2023 ರ ನವೆಂಬರ್ನಲ್ಲಿ ಎಸ್ &ಟಿ-ಪ್ರಿಸ್ಮ್ ಅನ್ನು ಪ್ರಾರಂಭಿಸುವ ಮೂಲಕ ಎಸ್ &ಟಿ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸಿದೆ.  ಒಟ್ಟು 56 ಸ್ಟಾರ್ಟ್ ಅಪ್ ಗಳು/ ಎಂಎಸ್ ಎಂಇಗಳು ಭಾಗವಹಿಸಿದ್ದವು ಅವುಗಳಲ್ಲಿ 5 ಅನ್ನು ಮೈಲಿಗಲ್ಲುಗಳ ಆಧಾರದ ಮೇಲೆ ಒಟ್ಟು 6 ಕೋಟಿ ರೂ.ಗಳ ಧನಸಹಾಯಕ್ಕಾಗಿ ಆಯ್ಕೆ ಮಾಡಲಾಗಿದೆ. ಹಣಕಾಸಿನ ಅನುದಾನದ ಜೊತೆಗೆ, ಈ ಆಯ್ದ ನವೋದ್ಯಮಗಳು / ಎಂಎಸ್ಎಂಇಗಳಿಗೆ ಇಡೀ ಯೋಜನಾ ಅವಧಿಯಲ್ಲಿ ಅನುಷ್ಠಾನ ಏಜೆನ್ಸಿಯಡಿ ಸೌಲಭ್ಯ ಮತ್ತು ಮಾರ್ಗದರ್ಶನ ತಂಡದಿಂದ ಮಾರ್ಗದರ್ಶನ ಅಥವಾ ಇನ್ಕ್ಯುಬೇಷನ್ ಬೆಂಬಲ ಮತ್ತು ತಾಂತ್ರಿಕ ಸಲಹಾ ಬೆಂಬಲವನ್ನು ನೀಡಲಾಗುವುದು.

ಗಣಿ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ನಾಗ್ಪುರದ ಜವಾಹರಲಾಲ್ ನೆಹರು ಅಲ್ಯೂಮಿನಿಯಂ ರಿಸರ್ಚ್ ಡೆವಲಪ್ಮೆಂಟ್ ಅಂಡ್ ಡಿಸೈನ್ ಸೆಂಟರ್ ಅನ್ನು ಎಸ್ &ಟಿ - ಪ್ರಿಸ್ಮ್ ಅನುಷ್ಠಾನ ಏಜೆನ್ಸಿಯನ್ನಾಗಿ ಮಾಡಲಾಗಿದೆ.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು 2024ರಫೆಬ್ರವರಿ 29 ರಂದು ಹಣಕಾಸು ಅನುದಾನದ ಪತ್ರಗಳನ್ನು ಹಸ್ತಾಂತರಿಸಿದರು. ಈ ಐದು ಸ್ಟಾರ್ಟ್ ಅಪ್ ಗಳು ಮತ್ತು ಎಂಎಸ್ ಎಂಇಗಳ ವಿವರಗಳು ಈ ಕೆಳಗಿನಂತಿವೆ:

  1. ಮಹಾರಾಷ್ಟ್ರದ ಪುಣೆಯ ಅಶ್ವಿನಿ ರೇರ್ ಅರ್ಥ್ ಪ್ರೈವೇಟ್ ಲಿಮಿಟೆಡ್ ಗೆ ಎನ್ ಡಿಎಫ್ ಇಬಿ ಬೇಸ್ ಪರ್ಮನೆಂಟ್ ಮ್ಯಾಗ್ನೆಟ್ ಅಪ್ಲಿಕೇಶನ್ ಗಾಗಿ ಕ್ಯಾಲ್ಸಿಯೊ-ಥರ್ಮಿಕ್ ರಿಡಕ್ಷನ್ ಮಾರ್ಗದ ಮೂಲಕ ನಿಯೋಡಿಮಿಯಂ - ಪ್ರಸಿಯೋಡಿಮಿಯಂ ಆಕ್ಸೈಡ್ ನಿಂದ ನಿಯೋಡಿಮಿಯಂ - ಪ್ರಸಿಯೋಡಿಮಿಯಂ ಲೋಹವನ್ನು ಹೊರತೆಗೆಯಲು ಪ್ರಾಯೋಗಿಕ ಘಟಕವನ್ನು ಸ್ಥಾಪಿಸಲು 1.5 ಕೋಟಿ ರೂ. ಮಂಜೂರು ಮಾಡಲಾಗಿದೆ.
  2. ಕ್ಷಾರೀಯ ಲೋಹಗಳಿಗಾಗಿ ಲಿಥಿಯಂ ಅಯಾನ್-ಎಲೆಕ್ಟ್ರೋ ಫ್ಯೂಷನ್ ರಿಯಾಕ್ಟರ್ ಗಾಗಿ ಪ್ರಾಯೋಗಿಕ ಪ್ರಮಾಣದ ಸ್ಥಾವರವನ್ನು ಸ್ಥಾಪಿಸಲು ಉತ್ತರ ಪ್ರದೇಶದ ಮೀರತ್ ನ ಮೆಸರ್ಸ್ ಸರು ಸ್ಮೆಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಗೆ 1.16 ಕೋಟಿ ರೂ. ಮಂಜೂರು ಮಾಡಲಾಗಿದೆ.
  3. ಸೋಡಿಯಂ ಕಾರ್ಬೋನೇಟ್ ನ ವಿದ್ಯುದ್ವಿಭಜನೆಯ ಮೂಲಕ ಅಲ್ಯುಮಿನಾ ಹೈಡ್ರೇಟ್ ಗಳ ಪರಿಣಾಮಕಾರಿ ಮತ್ತು ಸುಸ್ಥಿರ ಉತ್ಪಾದನೆಗಾಗಿ ಒಡಿಶಾದ ಭುವನೇಶ್ವರದ ಎಲ್ ಎನ್ ಇಂಡ್ಟೆಕ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಗೆ 0.40 ಕೋಟಿ ರೂ. ಮಂಜೂರು ಮಾಡಲಾಗಿದೆ.
  4. ಲಿಥಿಯಂ-ಐಯಾನ್ ಬ್ಯಾಟರಿ ಆನೋಡ್ ಗಾಗಿ ಹೈ ಪ್ಯೂರಿಟಿ ಬ್ಯಾಟರಿ ಗ್ರೇಡ್ ಸಿಲಿಕಾನ್ ಸಾಮಗ್ರಿಯ ಪೈಲಟ್ ಸ್ಕೇಲ್ ಉತ್ಪಾದನೆಯನ್ನು (ದಿನಕ್ಕೆ 25 ಕೆಜಿ) ಸ್ಥಾಪಿಸಲು ಒರಿಸ್ಸಾದ ಕಟಕ್ ನಲ್ಲಿರುವ ಮೆಸರ್ಸ್ ಸೆಲ್ಲಾರ್ಕ್ ಪವರ್ ಟೆಕ್ ಪ್ರೈವೇಟ್ ಲಿಮಿಟೆಡ್ ಗೆ 1.7 ಕೋಟಿ ರೂ. ಮಂಜೂರು ಮಾಡಲಾಗಿದೆ.
  5. ಮೇಘಾಲಯದ ಶಿಲ್ಲಾಂಗ್ ನಲ್ಲಿರುವ ಮೆಸರ್ಸ್ ಕ್ಯಾಲಿಚೆ ಪ್ರೈವೇಟ್ ಲಿಮಿಟೆಡ್ ಗೆ ಅಪರೂಪದ-ಭೂಮಿ-ಮೂಲವಸ್ತುಗಳ ಅನ್ವೇಷಣೆಗಾಗಿ ಗಾರ್ಬ್ ಎಂಬ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲು 1.2 ಕೋಟಿ ರೂ.

ಗಣಿ ಸಚಿವಾಲಯವು 2024ರ ಮಾರ್ಚ್ 1ರಿಂದ ಮುಂದಿನ ಸುತ್ತಿನ ಎಸ್ &ಟಿ ಪ್ರಿಸ್ಮ್ ಅಡಿಯಲ್ಲಿ ಪ್ರಸ್ತಾಪಗಳನ್ನು ಆಹ್ವಾನಿಸಲಿದ್ದು, 2024ರ ಏಪ್ರಿಲ್30 ರೊಳಗೆ ಯೋಜನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

****


(Release ID: 2010633) Visitor Counter : 71