ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

​​​​​​​ಫೆ.26ಕ್ಕೆ ಮಿಜೋರಾಂನ ಐಜ್ವಾಲ್ ಗೆ ಭೇಟಿ ನೀಡಲಿರುವ ಉಪ ರಾಷ್ಟ್ರಪತಿಗಳು


​​​​​​​ಮಿಜೋರಾಂ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಉಪ ರಾಷ್ಟ್ರಪತಿಗಳು ಭಾಗಿ 

ಮಿಜೋರಾಂನ  9ನೇ ವಿಧಾನಸಭೆಯನ್ನು ಉದ್ದೇಶಿಸಿ ಉಪ ರಾಷ್ಟ್ರಪತಿಗಳ ಭಾಷಣ 

ಪ್ರಕಟಣಾ ದಿನಾಂಕ: 24 FEB 2024 1:51PM by PIB Bengaluru

ಫೆಬ್ರವರಿ 24: ಭಾರತದ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್ ಕರ್ ಅವರು ಫೆಬ್ರವರಿ 26, 2024 ರಂದು ಮಿಜೋರಾಂನ ಐಜ್ವಾಲ್‌ಗೆ ಒಂದು ದಿನದ ಪ್ರವಾಸ ಕೈಗೊಳ್ಳಲಿದ್ದಾರೆ. 

ಅವರ ಭೇಟಿಯ ಸಂದರ್ಭದಲ್ಲಿ, ಮಿಜೋರಾಂ ವಿಶ್ವವಿದ್ಯಾಲಯದ 18 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ ಐಜ್ವಾಲ್‌ನಲ್ಲಿ ಮಿಜೋರಾಂನ  9ನೇ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ತಮ್ಮ ಒಂದು ದಿನದ ಪ್ರವಾಸದಲ್ಲಿ ಉಪ ರಾಷ್ಟ್ರಪತಿಗಳಾದ ಶ್ರೀ ಧನ್ ಕರ್ ಅವರು ಐಜ್ವಾಲ್‌ನ ರಾಜಭವನಕ್ಕೂ ಭೇಟಿ ನೀಡಲಿದ್ದಾರೆ.

*****


(ಪ್ರಕಟಣೆ ಐ.ಡಿ.: 2008693) ವಿಸಿಟರ್ ಕೌಂಟರ್ : 98
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , हिन्दी , Tamil