ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್‌ ಶಾ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ಬದಲಾವಣೆಯ ನಾಯಕ ಶ್ರೀ ಕರ್ಪೂರಿ ಠಾಕೂರ್‌ ಜೀ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ



ಕರ್ಪೂರಿ ಅವರು ತಮ್ಮ ಸಾಮಾಜಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ತ್ಯಾಗದ ಅತ್ಯುನ್ನತ ಮಾನದಂಡಗಳನ್ನು ನಿಗದಿಪಡಿಸಿದ್ದಾರೆ - ಶ್ರೀ ಅಮಿತ್‌ ಶಾ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ಕರ್ಪೂರಿ ಠಾಕೂರ್‌ ಜೀ ಅವರಿಗೆ ಭಾರತ ರತ್ನ ನೀಡಿ ಗೌರವಿಸುವ ಮೂಲಕ ಅವರ ಕಾರ್ಯಗಳನ್ನು ಬೆಳಕಿಗೆ ತಂದಿದ್ದಾರೆ

ತಮ್ಮ ಜೀವನದುದ್ದಕ್ಕೂ ಹಿಂದುಳಿದ ಜನರು ಮತ್ತು ಮಹಿಳೆಯರ ಹಕ್ಕುಗಳಿಗೆ ಸಮರ್ಪಿತರಾಗಿದ್ದ ಠಾಕೂರ್‌ ಜೀ ಶಿಕ್ಷಣ ವ್ಯವಸ್ಥೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಪ್ರಮುಖ ಕೆಲಸ ಮಾಡಿದರು

Posted On: 17 FEB 2024 2:38PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್‌ ಶಾ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ಬದಲಾವಣೆಯ ನಾಯಕ ಶ್ರೀ ಕರ್ಪೂರಿ ಠಾಕೂರ್‌ ಜೀ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಸಾಮಾಜಿಕ ತಾಣ ಎಕ್ಸ್‌ ಖಾತೆಯ ತಮ್ಮ ಪೋಸ್ಟ್‌ನಲ್ಲಿ, ಶ್ರೀ ಅಮಿತ್‌ ಶಾ ಅವರು ಕರ್ಪೂರಿ ಜೀ ತಮ್ಮ ಸಾಮಾಜಿಕ ಜೀವನದಲ್ಲಿಪ್ರಾಮಾಣಿಕತೆ ಮತ್ತು ತ್ಯಾಗದ ಅತ್ಯುನ್ನತ ಮಾನದಂಡಗಳನ್ನು ನಿಗದಿಪಡಿಸಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಜೀವನದುದ್ದಕ್ಕೂ ಹಿಂದುಳಿದ ಜನರಿಗೆ ಮತ್ತು ಮಹಿಳೆಯರ ಹಕ್ಕುಗಳಿಗೆ ಸಮರ್ಪಿತರಾಗಿದ್ದ ಠಾಕೂರ್‌ ಜೀ ಅವರು ಶಿಕ್ಷಣ ವ್ಯವಸ್ಥೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಪ್ರಮುಖ ಕಾರ್ಯಗಳನ್ನು ಕೈಗೊಂಡರು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ಪೂರಿ ಠಾಕೂರ್‌ ಜೀ ಅವರಿಗೆ ಭಾರತ ರತ್ನ ನೀಡಿ ಗೌರವಿಸುವ ಮೂಲಕ ಅವರ ಕಾರ್ಯಗಳನ್ನು ಬೆಳಕಿಗೆ ತಂದಿದ್ದಾರೆ ಎಂದು ಶ್ರೀ ಅಮಿತ್‌ ಶಾ ಹೇಳಿದರು



(Release ID: 2006791) Visitor Counter : 35