ಕೃಷಿ ಸಚಿವಾಲಯ

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು 2023-24 ರ ಆರ್ಥಿಕ ವರ್ಷದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ಅಡಿಯಲ್ಲಿ 3 ನೇ ಕಂತಿನ ಹಣವಾಗಿ ಇಂದು ಕರ್ನಾಟಕ ಸರ್ಕಾರಕ್ಕೆ 235.14 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ - ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ


ರೈತರ ಕಲ್ಯಾಣಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಆರ್ ಕೆವಿವೈ ಅಡಿಯಲ್ಲಿ 2023-24 ನೇ ಸಾಲಿನಲ್ಲಿ ಒಟ್ಟು 761.89 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ, ಅದರಲ್ಲಿ 526.75 ಕೋಟಿ ರೂ.ಗಳನ್ನು ಈಗಾಗಲೇ ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದೆ -

ಬೆಂಬಲ ಬೆಲೆ ಯೋಜನೆ (PSS) ಅಡಿಯಲ್ಲಿ ಕಡಲೆ ಬೇಳೆ ಖರೀದಿಗೆ ಸಹ ಅನುಮೋದನೆ ನೀಡಲಾಗಿದೆ - ಶ್ರೀಮತಿ ಕರಂದ್ಲಾಜೆ

Posted On: 15 FEB 2024 8:07PM by PIB Bengaluru

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ(RKVY)  2024ರ ಫೆ.15 ರಂದು ಕರ್ನಾಟಕ ಸರ್ಕಾರಕ್ಕೆ 3 ನೇ ಕಂತಿನ ಹಣವಾಗಿ 2023-24 ರ ಹಣಕಾಸು ವರ್ಷಕ್ಕೆ 235.14 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಆರ್ ಕೆವಿವೈ ಯೋಜನೆಯಡಿಯಲ್ಲಿ ಈ ಕೆಳಗಿನ ಅಂಶಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರವು ಮೊತ್ತವನ್ನು ಬಳಸುತ್ತದೆ; (1) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ - RKVY (DPR) (2) ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ (SH&F) (3) ಮಳೆಯಾಧಾರಿತ ಪ್ರದೇಶ ಅಭಿವೃದ್ಧಿ (RAD) (4) ಪರಂಪರಾಗತ್ ಕೃಷಿ ವಿಕಾಸ ಯೋಜನೆ (PKVY) (5) ಕೃಷಿ ಯಾಂತ್ರೀಕರಣದ ಉಪ ಮಿಷನ್ ( SMAM) (6) ಪ್ರತಿ ಹನಿ ಹೆಚ್ಚು ಬೆಳೆ (PDMC) (7) ಕೃಷಿ ಅರಣ್ಯ & (8) ಬೆಳೆ ವೈವಿಧ್ಯೀಕರಣ ಕಾರ್ಯಕ್ರಮ (CDP)ಗಳಿಗೆ ಬಳಸಲಾಗುತ್ತದೆ. ಮಂಜೂರಾದ ಹಣವನ್ನು ಗೋದಾಮು ನಿರ್ಮಾಣ, ನೀರು ಕೊಯ್ಲು ರಚನೆಗಳು, ಪ್ರಾಥಮಿಕ ಪ್ರಾತ್ಯಕ್ಷಿಕೆ ಘಟಕಗಳ ಸ್ಥಾಪನೆ, ಟ್ರಾಕ್ಟರ್‌ಗಳು, ಪವರ್ ಟಿಲ್ಲರ್‌ಗಳು ಮತ್ತು ಡ್ರೋನ್‌ಗಳ ಖರೀದಿ, ಸಮಗ್ರ ಕೃಷಿಯ ಉತ್ತೇಜನ, ಮಣ್ಣಿನ ಆರೋಗ್ಯ ಫಲವತ್ತತೆ ಮತ್ತು ಕಸ್ಟಮ್ ಹೈರಿಂಗ್ ಸೆಂಟರ್ ಗಳ ಸ್ಥಾಪನೆಗೆ ಕೃಷಿ ವಲಯದ ಮೂಲಸೌಕರ್ಯ ಸುಧಾರಣೆಗೆ ಬಳಸಲಾಗುತ್ತದೆ. 
ಕೇಂದ್ರ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ 2023-24 ನೇ ಸಾಲಿಗೆ ಕರ್ನಾಟಕ ರಾಜ್ಯಕ್ಕೆ ಆರ್ ಕೆವಿವೈ ಅಡಿಯಲ್ಲಿ ಒಟ್ಟು 761.89 ಕೋಟಿ ರೂಪಾಯಿಗಳನ್ನು ರೈತರ ಕಲ್ಯಾಣಕ್ಕಾಗಿ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಿದೆ ಎಂದು ತಿಳಿಸಿದರು. 

ಇತ್ತೀಚೆಗೆ, ಅಂದರೆ 25 ನೇ ಜನವರಿ 2024 ರಂದು, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆರ್ ಕೆ ವಿವೈ ಯೋಜನೆಯಡಿ 178.65 ಕೋಟಿ ರೂಪಾಯಿ ಹೆಚ್ಚುವರಿ ಹಂಚಿಕೆಯನ್ನು ನೀಡಿದೆ. ಹೆಚ್ಚುವರಿ ಹಂಚಿಕೆ ಹಣದಲ್ಲಿ ಕೃಷಿ ಯಾಂತ್ರೀಕರಣದ ಉಪ-ಮಿಷನ್(SMAM)ಗೆ 120 ಕೋಟಿ ರೂ,  ಮಣ್ಣಿನ ಆರೋಗ್ಯ ಕಾರ್ಡ್ (12.00 ಕೋಟಿಗಳು) ಮತ್ತು ಆರ್ ಕೆವಿವೈ - ಡಿಪಿಆರ್ (46.65 ಕೋಟಿ ರೂಪಾಯಿ) ಅನುಷ್ಠಾನಕ್ಕೆ ಅನುಮೋದಿಸಲಾಗಿದೆ. ಆರ್ ಕೆವಿವೈ ಯೋಜನೆಯಡಿ ಆರಂಭಿಕ ಹಂಚಿಕೆ 583.24 ಕೋಟಿ ರೂಪಾಯಿಗಳಾಗಿದ್ದು, 2023-24ನೇ ಸಾಲಿಗೆ 761.89 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಇಲ್ಲಿಯವರೆಗೆ, ಕೇಂದ್ರ ಸರ್ಕಾರವು ಒಟ್ಟು 761.89 ಕೋಟಿ ರೂಪಾಯಿಗಳಲ್ಲಿ ಒಟ್ಟು 526.75 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಮತ್ತು ಉಳಿದ ಬಾಕಿ ಮೊತ್ತವನ್ನು ಈಗಾಗಲೇ ರಾಜ್ಯಕ್ಕೆ ಬಿಡುಗಡೆ ಮಾಡಿದ ಮೊತ್ತವನ್ನು ಬಳಕೆ ಮಾಡಿದ ನಂತರ ಬಿಡುಗಡೆ ಮಾಡಲಾಗುವುದು. 

* ಕರ್ನಾಟಕ ರಾಜ್ಯದಲ್ಲಿ ಪಿಎಸ್ಎಸ್ ಅಡಿಯಲ್ಲಿ ಕಡಲೆ ಬೇಳೆ ಖರೀದಿಗೆ ಅನುಮೋದನೆ;

ಕರ್ನಾಟಕ ರಾಜ್ಯದಲ್ಲಿ ಕಡಲೆ ಬೇಳೆ ಖರೀದಿಗೆ ಬೆಲೆ ಬೆಂಬಲ ಯೋಜನೆ (PSS) ಅಡಿಯಲ್ಲಿ ಪ್ರತಿ ಕ್ವಿಂಟಾಲ್ ಗೆ 5,440 ರೂಪಾಯಿಗಳಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಗರಿಷ್ಠ ಪ್ರಮಾಣ 1,39,740 ಮಿಲಿಯನ್ ಟನ್ ನ್ನು 2023-24ರ ರಬಿ ಬೆಳೆ ಋತುವಿನಲ್ಲಿ ನೀಡಲು ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಅನುಮೋದನೆಯನ್ನು ನೀಡಿದೆ ಎಂದು ಸಹ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

*****



(Release ID: 2006458) Visitor Counter : 203