ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತದಲ್ಲಿ ಸಮುದಾಯ ರೇಡಿಯೊಗಳಿಗೆ 20ನೇ ವರ್ಷದ ಸಡಗರ

Posted On: 12 FEB 2024 5:00PM by PIB Bengaluru

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚೆನ್ನೈಯ ಅನ್ನಾ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಸಮುದಾಯ ರೇಡಿಯೊಗಳ ಸಮ್ಮೇಳನವನ್ನು (ದಕ್ಷಿಣ) 13 ಮತ್ತು 14 ಫೆಬ್ರವರಿ 2024 ರಂದು ಆಯೋಜಿಸುತ್ತಿದ್ದು, ಭಾರತದಲ್ಲಿ ಸಮುದಾಯ ಆಕಾಶವಾಣಿ ( ರೇಡಿಯೊ ) ಕೇಂದ್ರ ಪ್ರಾರಂಭವಾಗಿ 20ನೇ ವರ್ಷಾಚರಣೆಯ ಸಂಭ್ರಮವನ್ನು ಆಚರಿಸಲಾಗುವುದು. ದಕ್ಷಿಣ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ 117 ಸಮುದಾಯ ಆಕಾಶವಾಣಿ ( ರೇಡಿಯೊ )  ಕೇಂದ್ರಗಳು ಈ ಸಮಾರಂಭದಲ್ಲಿ ಭಾಗವಹಿಸಲಿವೆ.

ಈ ಸಂದರ್ಭದಲ್ಲಿ ಮಾನ್ಯ ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರು ಪ್ರಮುಖ ಭಾಷಣವನ್ನು ಮಾಡಲಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಸಭೆಯನ್ನು ಉದ್ದೇಶಿಸಿ  ಭಾಷಣ ಮಾತನಾಡಲಿದ್ದಾರೆ.

ಗೌರವಾನ್ವಿತ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು, ಪ್ರಾದೇಶಿಕ ಸಮುದಾಯ ರೇಡಿಯೊ ಸಮ್ಮೇಳನದ ಸಮಯದಲ್ಲಿ ಸಮುದಾಯ ರೇಡಿಯೊ ಕ್ಷೇತ್ರಕ್ಕೆ ಉತ್ತೇಜನ ನೀಡಲು ಕ್ಷೇತ್ರಕ್ಕೆ ಕೆಲವು ನೀತಿ ಬದಲಾವಣೆಗಳನ್ನು ಘೋಷಿಸುವ ನಿರೀಕ್ಷೆಯಿದೆ. 

ಭಾರತ ಸರ್ಕಾರವು ಐಐಟಿಗಳು/ಐಐಎಂಗಳು ಸೇರಿದಂತೆ ಸುಸಜ್ಜಿತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಮುದಾಯ ರೇಡಿಯೊ ಕೇಂದ್ರಗಳನ್ನು ಸ್ಥಾಪಿಸಲು ಪರವಾನಗಿಗಳ ಮಂಜೂರಾತಿಗೆ ನೀತಿಯನ್ನು ಅನುಮೋದಿಸಿದಾಗ, ಭಾರತದಲ್ಲಿ ಸಮುದಾಯ ರೇಡಿಯೊದ ಪ್ರಯಾಣವು 2002 ರಲ್ಲಿ ಪ್ರಾರಂಭವಾಯಿತು. ಸಮುದಾಯ ರೇಡಿಯೋಗಳು ಸಮುದಾಯದ ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಿ, ನಾಗರಿಕ ಸಮಾಜ ಮತ್ತು ಸ್ವಯಂಸೇವಾ ಸಂಸ್ಥೆಗಳಂತಹ ಲಾಭರಹಿತ ಸಂಸ್ಥೆಗಳನ್ನು ಸಮುದಾಯ ರೇಡಿಯೋಗಳ ಕಾನೂನಿನ ವ್ಯಾಪ್ತಿಯ ಅಡಿಯಲ್ಲಿ ತರುವ ಮೂಲಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆಗಾಗಿ ನೀತಿಯನ್ನು ವಿಶಾಲ ತಳಹದಿಯಲ್ಲಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿತು. ಇದರ ಫಲವಾಗಿ ಮೊದಲ ಸಮುದಾಯ ಆಕಾಶವಾಣಿ ಕೇಂದ್ರವನ್ನು ಭಾರತ ರತ್ನ ಶ್ರೀ ಎಲ್.ಕೆ. ಅಡ್ವಾಣಿ ಜೀ ಅವರು 1 ನೇ, ಫೆಬ್ರವರಿ 2004 ರಂದು  ಉದ್ಘಾಟಿಸಿದರು.  ಸಮುದಾಯ ಆಕಾಶವಾಣಿ ಕೇಂದ್ರದ ಪ್ರಯಾಣವನ್ನು ನಿಧಾನಗತಿಯಲ್ಲಿ ಪ್ರಾರಂಭಿಸಲಾಯಿತು ಮತ್ತು ನಂತರ ಇತರ ಸಮುದಾಯ-ಆಧಾರಿತ ಸಂಸ್ಥೆಗಳು ಸಹ ಸಮುದಾಯ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಲು ಅನುಮತಿಸಿದಾಗ ಪ್ರಚೋದನೆಯನ್ನು ನೀಡಲಾಯಿತು.

ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಅರ್ಜಿಗಳನ್ನು ಸಲ್ಲಿಸಲು ಸುಗಮವಾಗಲು ಹಲವಾರು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ. ಅರ್ಜಿಗಳನ್ನು ಸಲ್ಲಿಸಲು ಸಂಪೂರ್ಣ ಆನ್ಲೈನ್ ಪ್ರಕ್ರಿಯೆಯನ್ನು ಮಾಡುವ ಮೂಲಕ ಸಮುದಾಯ ಆಕಾಶವಾಣಿ ಕೇಂದ್ರಗಳ ವಲಯದಲ್ಲಿ ಸುಲಭವಾಗಿ ಸ್ಥಾಪನೆ-ಕಾರ್ಯನಿರ್ವಹಣೆ ಸಾಧ್ಯವಾಗಿದೆ. ಹಾಗೂ ಸಮುದಾಯ ರೇಡಿಯೊ ಕೇಂದ್ರಗಳ ಸಂಖ್ಯೆಯು 481 ಕ್ಕೆ ಹೆಚ್ಚಿದೆ. ಇದರಲ್ಲಿ 155 ಕಳೆದ ಎರಡು ವರ್ಷಗಳಲ್ಲಿ ಸೇರಿಸಲಾದ ಸಮುದಾಯ ಆಕಾಶವಾಣಿ ಕೇಂದ್ರಗಳಾಗಿವೆ. ಕಳೆದ 9 ವರ್ಷಗಳಲ್ಲಿ ಕ್ಷೇತ್ರವು ಗಣನೀಯವಾಗಿ ಬೆಳೆದಿದೆ ಮತ್ತು 2014 ರಲ್ಲಿದ್ದ ಸಮುದಾಯ ರೇಡಿಯೊ ಕೇಂದ್ರಗಳ ಸಂಖ್ಯೆಯು 140 ರಿಂದ 2023 ರಲ್ಲಿ 481 ಕ್ಕೆ ಏರಿದೆ.


"ವಿಶ್ವ ರೇಡಿಯೋ ದಿನ" ವನ್ನು ಗುರುತಿಸುವ ನಿಟ್ಟಿನಲ್ಲಿ ಸಮುದಾಯ ರೇಡಿಯೊ ಕೇಂದ್ರಗಳ ಪ್ರಾದೇಶಿಕ ಸಮ್ಮೇಳನವನ್ನು ಫೆಬ್ರವರಿ 13, 2024 ರಂದು ಉದ್ಘಾಟಿಸಲಾಗುತ್ತಿದೆ.

ರೇಡಿಯೊ ಪ್ರಸಾರದಲ್ಲಿ ಸಮುದಾಯ ರೇಡಿಯೊವು ಪ್ರಮುಖ ಮೂರನೇ ಹಂತವಾಗಿದೆ. ಸಾರ್ವಜನಿಕ ಸೇವಾ ರೇಡಿಯೊ ಪ್ರಸಾರ ಮತ್ತು ವಾಣಿಜ್ಯ ರೇಡಿಯೊದಿಂದ ಇದು ಭಿನ್ನವಾಗಿದೆ. ಸಮುದಾಯ ರೇಡಿಯೋ ಕೇಂದ್ರಗಳು ಕಡಿಮೆ ಶಕ್ತಿಯ ರೇಡಿಯೋ ಕೇಂದ್ರಗಳಾಗಿವೆ. ಇವುಗಳನ್ನು ಸ್ಥಳೀಯ ಸಮುದಾಯಗಳು – ಸಂಸ್ಥೆಗಳು ಸ್ಥಾಪಿಸಲು ಮತ್ತು ನಿರ್ವಹಿಸಲು ಉದ್ದೇಶಿಸಲಾಗಿದೆ.

ಸಮುದಾಯ ರೇಡಿಯೋ ಕೇಂದ್ರಗಳು ಸಾಮಾನ್ಯವಾಗಿ, ಆರೋಗ್ಯ, ಪೋಷಣೆ, ಶಿಕ್ಷಣ, ಕೃಷಿ ಇತ್ಯಾದಿ ಸಮಸ್ಯೆಗಳ ಕುರಿತು ಸ್ಥಳೀಯ ಸಮುದಾಯದ ನಡುವೆ ಸ್ಥಳೀಯ ಧ್ವನಿಯಾಗಿ ಸಂದೇಶಗಳನ್ನು ಪ್ರಸಾರ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಮೇಲಾಗಿ, ಸಮುದಾಯ ರೇಡಿಯೋ, ಸಮಾಜದ ಅಂಚಿನಲ್ಲಿರುವ ವರ್ಗಗಳು ತಮ್ಮ ಸಮಸ್ಯೆ- ಕಳವಳ- ಆವಶ್ಯಗಳನ್ನು ವ್ಯಕ್ತಪಡಿಸಲು ಪ್ರಬಲ ಮಾಧ್ಯಮವಾಗಿದೆ. ಇದಲ್ಲದೆ, ಪ್ರಸಾರವು ಸ್ಥಳೀಯ ಭಾಷೆಗಳಲ್ಲಿ ಮತ್ತು ಉಪಭಾಷೆಗಳಲ್ಲಿ ಇರುವುದರಿಂದ, ಜನರು ಅದನ್ನು ತಕ್ಷಣವೇ ಅರಿಯಲು ಮತ್ತು ಸಂಪರ್ಕಿಸಲು ಸಾಧ್ಯವಾಗುತ್ತದೆ.

ಸಮುದಾಯ ರೇಡಿಯೋ ತನ್ನ ಸಮಗ್ರ ವಿಧಾನದ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನರ ಭಾಗವಹಿಸುವಿಕೆಯನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ರಾಜ್ಯವು ತನ್ನದೇ ಆದ ಭಾಷೆ ಮತ್ತು ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಹೊಂದಿರುವ ಭಾರತದಂತಹ ದೇಶದಲ್ಲಿ, ಸಿ.ಆರ್.ಎಸ್. ಗಳು ಸ್ಥಳೀಯ ಜಾನಪದ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಭಂಡಾರವಾಗಿದೆ. ಅನೇಕ ಸಿ.ಆರ್.ಎಸ್. ಗಳು ಸ್ಥಳೀಯ ಹಾಡುಗಳನ್ನು ದಾಖಲು (ರೆಕಾರ್ಡ್) ಮಾಡಿ ಸಂರಕ್ಷಿಸುತ್ತವೆ ಮತ್ತು ಸ್ಥಳೀಯ ಕಲಾವಿದರಿಗೆ ಸಮುದಾಯಕ್ಕೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುತ್ತವೆ. ಸಕಾರಾತ್ಮಕ ಸಾಮಾಜಿಕ ಬದಲಾವಣೆಯ ಸಾಧನವಾಗಿ ಸಿ.ಆರ್.ಎಸ್. ನ ವಿಶಿಷ್ಟ ಸಮುದಾಯ ರೇಡಿಯೋ ಸ್ಥಾನ-ಮಾನವು ಸಮುದಾಯದ ಸಬಲೀಕರಣಕ್ಕೆ ಆದರ್ಶ ಸಾಧನವಾಗಿದೆ.

*****



(Release ID: 2005589) Visitor Counter : 31