ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸೈಬರ್ ಸುರಕ್ಷತೆ ಕುರಿತು ರಾಷ್ಟ್ರೀಯ ಈ-ಆಡಳಿತ ವಿಭಾಗದ 42ನೇ ತರಬೇತಿ ಕಾರ್ಯಕ್ರಮ

Posted On: 06 FEB 2024 1:51PM by PIB Bengaluru

ಕೇಂದ್ರ ಸರಕಾರದ ವಿದ್ಯುನ್ಮಾನ ಮತ್ತು ಮಾಹಿತಿ ಸಚಿವಾಲಯದ 'ಸೈಬರ್ ಸುರಕ್ಷಿತ ಭಾರತ' ಉಪಕ್ರಮವು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವುದು, ಮಾಹಿತಿ ತಂತ್ರಜ್ಞಾನ ಸುರಕ್ಷಾ ಅಧಿಕಾರಿಗಳು, ಮತ್ತು ಸರಕಾರದ ಎಲ್ಲ ಇಲಾಖೆಗಳ ಮಾಹಿತಿ ತಂತ್ರಜ್ಞಾನ ಅಧಿಕಾರಿಗಳ ಕಾರ್ಯ ಸಾಮರ್ಥ್ಯವನ್ನು ಈ ನಿಟ್ಟಿನಲ್ಲಿ ಹೆಚ್ಚಿಸುವುದು, ಆ ಮೂಲಕ‌‌ ಹೆಚ್ಚುತ್ತಿರುವ ಸೈಬರ್ ಅಪರಾಧವೆಂಬ ಪಿಡುಗಿನ ವಿರುದ್ಧ ಹೋರಾಡುವುದರ ಜೊತೆಗೆ ಅವರು ದೇಶದ ಡಿಜಿಟಲ್ ಮೂಲಭೂತ ಸೌಕರ್ಯಗಳನ್ನು ಕಾಪಾಡಿಕೊಂಡು ಭವಿಷ್ಯದಲ್ಲಿ ಎಲ್ಲ ರೀತಿಯ ಸೈಬರ್ ಆಕ್ರಮಣಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಲು ಸಿದ್ದಗೊಳಿಸುವುದು ಇದರ ಉದ್ದೇಶವಾಗಿದೆ.

ರಾಷ್ಟ್ರೀಯ ಈ-ಆಡಳಿತ ವಿಭಾಗವು 42ನೇ  CISO  ತರಬೇತಿ ಕಾರ್ಯಕ್ರಮವನ್ನು ಫೆಬ್ರುವರಿ ೫ ರಿಂದ ೯ ರವರೆಗೆ ಏರ್ಪಡಿಸಿತ್ತು. ನವ ದೆಹಲಿಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ಆಯೋಜಿಸಿದ್ದ ಈ ತರಬೇತಿಯಲ್ಲಿ ಆಂಧ್ರಪ್ರದೇಶ, ಬಿಹಾರ, ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ದೆಹಲಿಯಿಂದ ಅಧಿಕಾರಿಗಳು ಭಾಗವಹಿಸಿದ್ದರು. 

ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸರಕಾರದ ವಿದ್ಯುನ್ಮಾನ ಮತ್ತು ಮಾಹಿತಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಭುವನೇಶ್ ಕುಮಾರ್, ಸೈಬರ್ ಆಕ್ರಮಣಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಸೈಬರ್ ಸುರಕ್ಷತೆಯ ಮಹತ್ವವನ್ನು ತಿಳಿಸುತ್ತ, ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ತಂತ್ರಜ್ಞಾನ ಸುರಕ್ಷಾ ಅಧಿಕಾರಿಗಳ ಗಮನಾರ್ಹ ಪಾತ್ರದ ಕುರಿತು ವಿವರಿಸಿದರು. ಸೈಬರ್ ಆಕ್ರಮಣಗಳನ್ನು ಕಡಿಮೆಗೊಳಿಸುವುದು ಮತ್ತು ಇಂತಹ ಆಕ್ರಮಣಗಳಾದಾಗ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವ ಸಂಬಂಧ ಅವರು ನಿರ್ಣಾಯಕ ಪಾತ್ರ ವಹಿಸಬಲ್ಲವರಾಗಿದ್ದಾರೆ. 

ಶ್ರೀ ಎನ್ ತ್ರಿಪಾಠಿ, ಮಹಾ ನಿರ್ದೇಶಕರು, ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ,‌  ವಿದ್ಯುನ್ಮಾನ ಮತ್ತು ಮಾಹಿತಿ ಸಚಿವಾಲಯ, ಮತ್ತು ರಾಷ್ಟ್ರೀಯ ಈ-ಆಡಳಿತ ವಿಭಾಗಗಳು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.  

ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವುದು, ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಮತ್ತು ಇಲಾಖೆಗಳ  ಸಾಮರ್ಥ್ಯ ಹೆಚ್ಚಿಸುವ ಮೂಲಕ  ಸೈಬರ್ ರೆಸಿಲಿಯಂಟ್ ಪರಿಸರವನ್ನು ನಿರ್ಮಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಸೈಬರ್ ಸುರಕ್ಷತೆ ಮತ್ತು ಭದ್ರತೆ ಕುರಿತು  ತರಬೇತಾರ್ಥಿಗಳನ್ನು ಸಂವೇದನಾಶೀಲರನ್ನಾಗಿಸುವುದು  ಆ ಮೂಲಕ ಸರಕಾರಿ ಸೇವೆಗಳನ್ನು  ಜನರಿಗೆ ತಲುಪಿಸುವ ಕ್ರೋಢೀಕೃತ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ 'ಡಿಜಿಟಲ್ ಇಂಡಿಯಾ' ಕಾರ್ಯಕ್ರಮಕ್ಕೆ ಸ್ಪಂದಿಸುವುದು ಈ ಕಾರ್ಯಕ್ರಮದ ಮತ್ತೊಂದು ಉದ್ದೇಶ.  ಸೈಬರ್ ಸುರಕ್ಷತೆ ಕುರಿತು ಸಮಗ್ರ ಮಾಹಿತಿ ಮತ್ತು ಜ್ಞಾನವನ್ನು ನೀಡುವ ಮೂಲಕ ಸರಕಾರಿ ಇಲಾಖೆಗಳು ತಮ್ಮ ಸೈಬರ್ ಸುರಕ್ಷತೆ ಮತ್ತು ಭದ್ರತೆಗಳನ್ನು ಗಮನಹರಿಸುವಂತೆ ಈ ಕಾರ್ಯಕ್ರಮ ಮಾಡುತ್ತದೆ. 

ಜೂನ್ ೨೦೧೮ ರಿಂದ ಫೆಬ್ರುವರಿ ೨೦೨೪ ರವರೆಗೆ ರಾಷ್ಟ್ರೀಯ ಈ-ಆಡಳಿತ ವಿಭಾಗವು ೧,೫೭೪ ಮಾಹಿತಿ ತಂತ್ರಜ್ಞಾನ ಸುರಕ್ಷಾ ಅಧಿಕಾರಿಗಳು ಮತ್ತು ಹಿರಿಯ ಮಾಹಿತಿ ತಂತ್ರಜ್ಞಾನ ಅಧಿಕಾರಿಗಳಿಗೆ ೪೨ ಬ್ಯಾಚುಗಳಲ್ಲಿ ತರಬೇತಿ ನೀಡಿದೆ. 

***


(Release ID: 2003137) Visitor Counter : 96


Read this release in: English , Urdu , Hindi , Tamil , Telugu