ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಡೋಪಿಂಗ್ ವಿರೋಧಿ ಮತ್ತು ಪೌಷ್ಟಿಕಾಂಶ ಕುರಿತು ಭಾರತೀಯ ರಾಷ್ಟ್ರೀಯ ಉದ್ದೀಪನ ಮದ್ದು-ನಿರೋಧಕ ಸಂಸ್ಥೆ (ನಾಡಾ ಇಂಡಿಯಾ) ರಾಷ್ಟ್ರೀಯ ಮಟ್ಟದ ಸೆಮಿನಾರ್ ಅನ್ನು ಆಯೋಜಿಸಿದೆ
Posted On:
31 JAN 2024 6:48PM by PIB Bengaluru
ಭಾರತೀಯ ರಾಷ್ಟ್ರೀಯ ಉದ್ದೀಪನ ಮದ್ದು-ನಿರೋಧಕ ಸಂಸ್ಥೆ (ನಾಡಾ ಇಂಡಿಯಾ) ಫಿಸಿಕಲ್ ಎಜುಕೇಶನ್ ಫೌಂಡೇಶನ್ ಆಫ್ ಇಂಡಿಯಾ ಮತ್ತು ಹೆಚ್.ಎಲ್.ಎಮ್.ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಗಳ ಸಹಯೋಗದೊಂದಿಗೆ ಡೋಪಿಂಗ್ ವಿರೋಧಿ ಮತ್ತು ಪೌಷ್ಟಿಕಾಂಶ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಿದೆ. ಡೋಪಿಂಗ್ ಅನ್ನು ಎದುರಿಸಲು ಮತ್ತು ಸರಿಯಾದ ಪೌಷ್ಟಿಕಾಂಶ -ಪೋಷಣೆಗಳ ಮೂಲಕ ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಜ್ಞಾನ ಮತ್ತು ಸಾಧನಗಳೊಂದಿಗೆ ಕ್ರೀಡಾಳುಗಳು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಶಿಕ್ಷಣ ಮತ್ತು ಮಾನಸಿಕವಾಗಿ ಸಜ್ಜುಗೊಳಿಸುವ ಗುರಿಯನ್ನು ಈ ಸಂಕಿರಣ ಹೊಂದಿದೆ.
ಭಾರತದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯ ಮಹಾನಿರ್ದೇಶಕ ಮತ್ತು ಸಿಇಒ, ಶ್ರೀ ಆಶೀಶ್ ಭಾರ್ಗವ ಮುಖ್ಯ ಅತಿಥಿಯಾಗಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ, ಅನುಭವಿ ಹಾಕಿ ತರಬೇತುದಾರ ಡಾ. ಎ.ಕೆ ಬನ್ಸಾಲ್, ಗಾಜಿಯಾಬಾದ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಭಾವತೋಷ್ ಶಂಖಧರ್ ಅವರು ಗೌರವ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯ ಭಾಷಣ ಮಾಡಿದರು.
ಸೆಮಿನಾರ್ ನಲ್ಲಿ ದೈಹಿಕ ಶಿಕ್ಷಣ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳು ಸೇರಿದಂತೆ ವಿವಿಧ ಹಿನ್ನೆಲೆಯ ಸುಮಾರು 300 ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಭಾರತೀಯ ರಾಷ್ಟ್ರೀಯ ಉದ್ದೀಪನ ಮದ್ದು-ನಿರೋಧಕ ಸಂಸ್ಥೆ (ನಾಡಾ ಇಂಡಿಯಾ) ಯ ಸಹಾಯಕ ಯೋಜನಾ ಅಧಿಕಾರಿ ಶ್ರೀ ಜಯ್ ಸಿಂಗ್ ಮತ್ತು ಫೋಸ್ಟಾಕ್ ಆಹಾರ ಸುರಕ್ಷತಾ ತರಬೇತುದಾರ - ಹೆಲ್ತ್ ಸಪ್ಲಿಮೆಂಟ್ಸ್ ಮತ್ತು ನ್ಯೂಟ್ರಾಸ್ಯುಟಿಕಲ್ ನೋಂದಾಯಿತ ಡಯೆಟಿಶಿಯನ್ ಶ್ರೀಮತಿ ಅಪರ್ಣಾ ಟಂಡನ್ ಜೈನ್ ಭಾಗವಹಿಸಿದವರನ್ನು ಉದ್ದೇಶಿಸಿ ಸ್ವಚ್ಛ ಕ್ರೀಡೆ ಮತ್ತು ಉತ್ತಮ ಪೌಷ್ಟಿಕಾಂಶ-ಪೋಷಣೆಯ ಕುರಿತು ತಮ್ಮ ಪರಿಣತಿ - ಅನುಭವ - ಒಳನೋಟಗಳನ್ನು ಹಂಚಿಕೊಂಡರು, ಹಾಗೂ ಸಲಹೆಗಳನ್ನು ನೀಡಿದರು.
ಡೋಪಿಂಗ್ ವಿರೋಧಿ ಬಗ್ಗೆ ಅಧಿಕೃತ ಮಾಹಿತಿ ಹಂಚುವಿಕೆಯೊಂದಿಗೆ ಭವಿಷ್ಯದ ಪೀಳಿಗೆಯನ್ನು ಉತ್ತಮ ರೀತಿಯಲ್ಲಿ ಸಜ್ಜುಗೊಳಿಸುವ ಮೂಲಕ, ಭಾರತೀಯ ರಾಷ್ಟ್ರೀಯ ಉದ್ದೀಪನ ಮದ್ದು-ನಿರೋಧಕ ಸಂಸ್ಥೆಯು (ನಾಡಾ ಇಂಡಿಯಾ) ಕ್ರೀಡೆಯ ಸಮಗ್ರತೆಯನ್ನು ಕಾಪಾಡಲು ಮತ್ತು ಉಜ್ವಲ ಭವಿಷ್ಯದತ್ತ ಭಾರತವನ್ನು ಮುನ್ನಡೆಸಲು ಪ್ರಯತ್ನಿಸುತ್ತಿದೆ.
***
(Release ID: 2001056)
Visitor Counter : 93