ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ರಾಷ್ಟ್ರಪತಿಗಳಿಂದ ಭಾರತದ 19 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2024 ಪ್ರದಾನ


ಶೌರ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆ ವಿಭಾಗಗಳಲ್ಲಿ ತಲಾ ಒಂದು ಮಗು, ಸಮಾಜ ಸೇವೆ ವಿಭಾಗದಲ್ಲಿ ನಾಲ್ಕು, ಕ್ರೀಡೆ ವಿಭಾಗದಲ್ಲಿ ಐದು ಮತ್ತು ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಏಳು ಮಕ್ಕಳನ್ನು ಒಳಗೊಂಡಿದೆ.

ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯ ಶುಭ ದಿನದಂದು, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಗವಾನ್ ರಾಮನ ಸಹನೆ, ಹಿರಿಯರಿಗೆ ಗೌರವ, ಧೈರ್ಯ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಶಾಂತತೆಯ ಗುಣಗಳನ್ನು ನೆನಪಿಸಿದರು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಸ್ಮೃತಿ ಇರಾನಿ ಅವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಮಹತ್ವದ ಬಗ್ಗೆ ತಿಳಿಸಿದರು.

ಶ್ರೇಷ್ಠತೆಯ ಸಾಧನೆಗಳನ್ನು ಹುಡುಕಲು ರಾಷ್ಟ್ರೀಯ ಮಟ್ಟದ ಪ್ರಶಸ್ತಿಯಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗಿದೆ

Posted On: 23 JAN 2024 5:38PM by PIB Bengaluru

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸ್ಥಾಪಿಸಿದ “ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ” ವನ್ನು 19 ಮಕ್ಕಳಿಗೆ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ವಿಜ್ಞಾನ ಭವನದಲ್ಲಿ ನವದೆಹಲಿ 22ನೇ ಜನವರಿ 2024 ರಂದುನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಡಾ.ಮುಂಜಪರಾ ಮಹೇಂದ್ರಭಾಯಿ, ವಿವಿಧ ಸಂಸ್ಥೆಗಳ ಗಣ್ಯರು, ಹಿರಿಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು ಉಪಸ್ಥಿತರಿದ್ದರು.

ಶೌರ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆ ವಿಭಾಗಗಳಲ್ಲಿ ತಲಾ ಒಂದು ಮಗು, ಸಮಾಜ ಸೇವೆ ವಿಭಾಗದಲ್ಲಿ ನಾಲ್ಕು, ಕ್ರೀಡೆ ವಿಭಾಗದಲ್ಲಿ ಐದು ಮತ್ತು ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಏಳು ಮಕ್ಕಳನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಯಿತು ಮತ್ತು ರಾಷ್ಟ್ರದ ಸಮಗ್ರತೆಯ ಹೃದಯಸ್ಪರ್ಶಿ ಕೈಗನ್ನಡಿಯಾಗಿದ್ದು, ಪ್ರತಿ ಮಗುವು ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಪ್ರಶಸ್ತಿಯನ್ನು ಸ್ವೀಕರಿಸಿತು, ಇದು ದೇಶದ ಶ್ರೀಮಂತ ಸಾಂಸ್ಕೃತಿಕ ವಸ್ತ್ರವನ್ನು ಸಂಕೇತಿಸುತ್ತದೆ.

ಪ್ರಶಸ್ತಿ ಪುರಸ್ಕೃತರನ್ನು ರಾಷ್ಟ್ರಪತಿಗಳು ಅಭಿನಂದಿಸಿದರು. ಈ ಮಕ್ಕಳು ಬಹುಮುಖ ಪ್ರತಿಭೆ ಮತ್ತು ಅವರ ಕಠಿಣ ಪರಿಶ್ರಮದಿಂದ ತಮ್ಮ ಗುರುತನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಕ್ಕಳು ತಮ್ಮ ಕೌಶಲ್ಯ ಮತ್ತು ಉತ್ಸಾಹವನ್ನು ಉತ್ತಮವಾಗಿ ಬಳಸಿಕೊಳ್ಳಲು ಸರಿಯಾದ ದಿಕ್ಕನ್ನು ತೋರಿಸಬೇಕು ಎಂದು ಅವರು ಹೇಳಿದರು.

ಯುವಜನರು ಭಾರತಕ್ಕೆ ಅಮೂಲ್ಯವಾದ ಸಂಪನ್ಮೂಲವನ್ನು ಪ್ರತಿನಿಧಿಸುತ್ತಾರೆ, ರಾಷ್ಟ್ರದ ಪ್ರಗತಿಗೆ ಮಾತ್ರವಲ್ಲದೆ ಜಾಗತಿಕ ಅಭಿವೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ನಮ್ಮ ಯುವಕರು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧರಾಗಲು ಸರ್ಕಾರವು ಹೊಸ-ಯುಗದ ಕೌಶಲ್ಯಗಳು, ಫ್ಯೂಚರಿಸ್ಟಿಕ್ ತಂತ್ರಜ್ಞಾನ ಮತ್ತು ಕೃತಕಬುದ್ಧಿಮತ್ತೆಗೆ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು.

ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯ ಮಂಗಳಕರ ದಿನದಂದು, ರಾಷ್ಟ್ರಪತಿಗಳು ಭಗವಾನ್ ರಾಮನ ತಾಳ್ಮೆಯ ಸದ್ಗುಣಗಳನ್ನು ನೆನಪಿಸಿದರು; ಹಿರಿಯರಿಗೆ ಗೌರವ; ಧೈರ್ಯ; ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಶಾಂತತೆ ತೋರಿದ ಹಾಗೆ, ತಮ್ಮ ಜೀವನದಲ್ಲಿ ಭಗವಾನ್ ರಾಮನ ಆದರ್ಶಗಳು ಮತ್ತು ರಾಮಾಯಣದ ಮೌಲ್ಯಗಳನ್ನು ಅನುಸರಿಸಲು ಮಕ್ಕಳಿಗೆ ತಿಳಿ ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಮಹತ್ವದ ಬಗ್ಗೆ ತಿಳಿಸಿದರು. ಪಿಎಂಆರ್‌ಬಿಪಿಗೆ ಆನ್‌ಲೈನ್‌ನಲ್ಲಿ ತಮ್ಮ ನಾಮನಿರ್ದೇಶನಗಳನ್ನು ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್‌ನಲ್ಲಿ ಭರ್ತಿ ಮಾಡಿದ ಸಾವಿರಾರು ಮಕ್ಕಳಿಗೆ ಧನ್ಯವಾದ ಹೇಳಿದರು. ನಮ್ಮ ಮಕ್ಕಳು ಭಾರತವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವುದಲ್ಲದೆ, ಭಾರತವನ್ನು ವಿಶ್ವದ ಪ್ರಮುಖ ಶಕ್ತಿಯನ್ನಾಗಿ ಮಾಡುತ್ತಾರೆ. ಶ್ರೇಷ್ಠತೆಯ ಸಾಧನೆಗಳನ್ನು ಹುಡುಕಲು ರಾಷ್ಟ್ರೀಯ ಮಟ್ಟದ ಪ್ರಶಸ್ತಿಯಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಸಲಾಗಿದೆ ಎಂಬುದನ್ನು ಸಚಿವರು ವಿವರಿಸಿದರು.

18 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 19 ಪ್ರಶಸ್ತಿ ಪುರಸ್ಕೃತರ ಕುಟುಂಬಗಳಿಗೆ ಅವರು ತಮ್ಮ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು, ಅವರು ಮಾದರಿ ಧೈರ್ಯ, ದೃಢತೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಿದರು. ಕೇಂದ್ರ ಸಚಿವರು ಮಕ್ಕಳನ್ನು ಗೌರವಿಸಿದರು ಮತ್ತು ಅವರು ಭಾರತದ ಪ್ರಧಾನಮಂತ್ರಿಯವರ ‘ವಿಕಸಿತ್ ಭಾರತ್’ದೃಷ್ಟಿಯನ್ನು ಈಡೇರಿಸಲು ನೆರವಾಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಸ್ವಾಗತ ಭಾಷಣವನ್ನು MoWCD ಕಾರ್ಯದರ್ಶಿ ಶ್ರೀ ಇಂದೇವರ ಪಾಂಡೆ ಮಾಡಿದರು. ಅವರು ಯುವ ಚಾಂಪಿಯನ್‌ಗಳನ್ನು ಅಭಿನಂದಿಸಿದರು, ಭವಿಷ್ಯಕ್ಕಾಗಿ ಶುಭ ಹಾರೈಸಿದರು ಮತ್ತು ಯಶಸ್ಸಿನ ಹೊಸ ಎತ್ತರಗಳನ್ನು ಸಾಧಿಸಲು ಪ್ರೇರೇಪಿಸಿದರು.

ಪ್ರತಿ ವರ್ಷ, ಭಾರತ ಸರ್ಕಾರವು 5 ರಿಂದ 18 ವರ್ಷ ವಯಸ್ಸಿನ ಮಕ್ಕಳ ಅಸಾಧಾರಣ ಸಾಧನೆಗಳನ್ನು ಅವರಿಗೆ 'ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (PMRBP) ನೀಡುವ ಮೂಲಕ ಅಂಗೀಕರಿಸುತ್ತದೆ. ಪ್ರತಿ ಪ್ರಶಸ್ತಿ ಪುರಸ್ಕೃತರು ರಾಷ್ಟ್ರಪತಿಗಳಿಂದ ಪದಕ ಮತ್ತು ಪ್ರಮಾಣ ಪತ್ರ ಪಡೆದರು.

 

ಪ್ರಶಸ್ತಿಗಾಗಿ ನಾಮನಿರ್ದೇಶನಗಳನ್ನು ಭಾರತ ಸರ್ಕಾರದ ಪ್ರಶಸ್ತಿ www.awards.gov.in ಪೋರ್ಟಲ್‌ನಲ್ಲಿ ಆನ್‌ಲೈನ್ ಮೋಡ್‌ನಲ್ಲಿ ಸ್ವೀಕರಿಸಲಾಗಿದೆ. ಒಟ್ಟು 1879 ಅರ್ಜಿದಾರರನ್ನು ಸ್ವೀಕರಿಸಲಾಗಿದೆ, ಅದರಲ್ಲಿ 1597 ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯು ಪ್ರಶಸ್ತಿ ಪುರಸ್ಕೃತರ ಆಯ್ಕೆಯನ್ನು ಮಾಡಿದೆ.

 

ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2024 ಪ್ರಶಸ್ತಿ ವಿಜೇತರ ಹೆಸರುಗಳು

 

ಕ್ರಮಸಂಖ್ಯೆ

ಹೆಸರು

ರಾಜ್ಯ

ವಿಭಾಗ

1

ಆದಿತ್ಯ ವಿಜಯ್‌ ಬ್ರಹ್ಮಣೆ (ಮರಣೋತ್ತರ)

ಮಹಾರಾಷ್ಟ್ರ

ಶೌರ್ಯ

2

ಅನುಷ್ಕಾ ಪಾಠಕ್‌

ಉತ್ತರ ಪ್ರದೇಶ

ಕಲೆ, ಸಂಸ್ಕೃತಿ

3

ಅರ್ಜಿತ್‌ ಬ್ಯಾನರ್ಜಿ

ಪಶ್ಚಿಮ ಬಂಗಾಲ

ಕಲೆ, ಸಂಸ್ಕೃತಿ

4

ಅರ್ಮಾನ್‌ ಉಬ್ರಾನಿ

ಛತ್ತೀಸ್‌ಗಢ

ಕಲೆ, ಸಂಸ್ಕೃತಿ

5

ಹೆಟ್ವಿ ಕಾಂತಿಭಾಐಯಿ ಖಿಮ್‌ ಸೂರ್ಯ

ಗುಜರಾತ್‌

ಕಲೆ, ಸಂಸ್ಕೃತಿ

6

ಇಷ್ಫಾಕ್‌ ಹಮೀದ್‌

ಜಮ್ಮು ಕಾಶ್ಮೀರ

ಕಲೆ, ಸಂಸ್ಕೃತಿ

7

ಮೊಹಮ್ಮದ್‌ ಹುಸೇನ್‌

ಬಿಹಾರ

ಕಲೆ, ಸಂಸ್ಕೃತಿ

8

ಪೆಂದ್ಯಾಲ ಲಕ್ಷ್ಮಿ ಪ್ರಿಯಾ

ತೆಲಂಗಾಣ

ಕಲೆ, ಸಂಸ್ಕೃತಿ

9

ಸುಹಾನಿ ಚೌಹಾಣ್‌

ದೆಹಲಿ

ಕ್ರಿಯಾಶೀಲತೆ

10

ಆರ್ಯನ್‌ ಸಿಂಗ್‌

ರಾಜಸ್ಥಾನ

ವಿಜ್ಞಾನ-ತಂತ್ರಜ್ಞಾನ

11

ಅವ್ನಿಷ್‌ ತಿವಾರಿ

ಮಧ್ಯಪ್ರದೇಶ

ಸಮಾಜ ಸೇವೆ

12

ಗರಿಮಾ

ಹರಿಯಾಣ

ಸಮಾಜ ಸೇವೆ

13

ಜೋತ್ಸ್ನಾ ಅಖ್ತರ್‌

ತ್ರಿಪುರಾ

ಸಮಾಜ ಸೇವೆ

14

ಸೈಯಮ್‌ ಮಜುಂದಾರ್‌

ಅಸ್ಸಾಂ

ಸಮಾಜ ಸೇವೆ

15

ಆದಿತ್ಯ ಯಾದವ್‌

ಉತ್ತರ ಪ್ರದೇಶ

ಕ್ರೀಡೆ

16

ಚಾರ್ವಿ ಎ

ಕರ್ನಾಟಕ

ಕ್ರೀಡೆ

17

ಜೆಸ್ಸಿಕಾ ನೇಯಿ ಸಾರಂಗ್‌

ಅರುಣಾಚಲ ಪ್ರದೇಶ

ಕ್ರೀಡೆ

18

ಲಿಂಥೋಯಿ ಚನಾಮ್‌ಬಾಮ್‌

ಮಣಿಪುರ

ಕ್ರೀಡೆ

19

ಆರ್‌. ಸೂರ್ಯ ಪ್ರಸಾದ್‌

ಆಂಧ್ರಪ್ರದೇಶ

ಕ್ರೀಡೆ

Click here to see booklet

******

 

 

 



(Release ID: 1999038) Visitor Counter : 56