ಗೃಹ ವ್ಯವಹಾರಗಳ ಸಚಿವಾಲಯ

ಗುಜರಾತ್ ನ ಗಾಂಧಿನಗರದಲ್ಲಿ ಇಂದು ನಡೆದ ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯದ (ಎನ್..ಎಫ್..ಎಸ್.ಯು.) 5 ನೇ ಅಂತರರಾಷ್ಟ್ರೀಯ ಮತ್ತು ಅಖಿಲ ಭಾರತ ಅಪರಾಧಶಾಸ್ತ್ರ ಸಮ್ಮೇಳನದ 44 ನೇ ಆವೃತ್ತಿಯನ್ನು ಉದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಭಾಷಣ ಮಾಡಿದರು


ತಂತ್ರಜ್ಞಾನದ ಸಹಾಯದಿಂದ, ಅಪರಾಧ ನ್ಯಾಯ ವ್ಯವಸ್ಥೆಯ ಎಲ್ಲಾ ಸವಾಲುಗಳನ್ನು ತೆಗೆದುಹಾಕುವ ಮೂಲಕ ಮುಂಬರುವ 5 ವರ್ಷಗಳಲ್ಲಿ ದೇಶದ ನ್ಯಾಯ ವ್ಯವಸ್ಥೆಯು ಅತ್ಯಂತ ಆಧುನಿಕವಾಗಲಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ  ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ 50 ಕ್ಕೂ ಹೆಚ್ಚು ಐತಿಹಾಸಿಕ ಕೆಲಸಗಳನ್ನು ಮಾಡಿದೆ.

ಎಲ್ಲಾ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು 5 ವರ್ಷಗಳಲ್ಲಿ ಜಾರಿಗೆ ತರಲಾಗುವುದು

ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಪ್ರತಿ ವರ್ಷ 9000 ಕ್ಕೂ ಹೆಚ್ಚು ವಿಧಿವಿಜ್ಞಾನ ಅಧಿಕಾರಿಗಳನ್ನು ರೂಪಿಸುವ ವ್ಯವಸ್ಥೆಯನ್ನು ಮೋದಿ ಸರ್ಕಾರ ಮಾಡಲಿದೆ.

ಹೊಸ ಕಾನೂನುಗಳಲ್ಲಿ ತಂತ್ರಜ್ಞಾನದ ಬಳಕೆಯೊಂದಿಗೆ, ನ್ಯಾಯವು ಈಗ ಕೈಗೆಟುಕಲಿದೆ, ಲಭ್ಯವಾಗಲಿದೆ, ಮತ್ತು ಎಲ್ಲರಿಗೂ ಅವಕಾಶ ಸಿಗಲಿದೆ

ಮೂರು ಹೊಸ ಕಾನೂನುಗಳು ಪೊಲೀಸ್ ಮತ್ತು ನ್ಯಾಯ ವ್ಯವಸ್ಥೆಯ ಸುಗಮ ಯುಗವನ್ನು ತರಲಿವೆ

ಮುಂಬರುವ ವರ್ಷದಲ್ಲಿ ದೇಶಾದ್ಯಂತ ಎನ್..ಎಫ್..ಎಸ್..ಯು. ನ ನೂತನ 9 ಕ್ಯಾಂಪಸ್‌ ಗಳನ್ನು ತೆರೆಯಲಾಗುವುದು

ಅಪರಾಧಿಗಳಿಗಿಂತ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಎರಡು ತಲೆಮಾರುಗಳಷ್ಟು ಮುಂದಿರಬೇಕು

ಹೊಸ ಕಾನೂನುಗಳಲ್ಲಿ, ತನಿಖೆ, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ನ್ಯಾಯ ವಿಜ್ಞಾನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ, ಇದು ಯುವಜನರಿಗೆ ದೊಡ್ಡ ಅವಕಾಶಗಳ ಮಾರ್ಗಗಳನ್ನು ತೆರೆಯಲಿದೆ.

Posted On: 23 JAN 2024 5:34PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್‌ನ ಗಾಂಧಿನಗರದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯದ  5 ನೇ ಅಂತರರಾಷ್ಟ್ರೀಯ ಮತ್ತು 44 ನೇ ಅಖಿಲ ಭಾರತ ಅಪರಾಧಶಾಸ್ತ್ರ ಸಮ್ಮೇಳನವನ್ನು ಉದ್ದೇಶಿಸಿ ಭಾಷಣ ಮಾಡಿದರು.

https://static.pib.gov.in/WriteReadData/userfiles/image/image0014HYK.jpg

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, “ಭಾರತದ ಅಪರಾಧ ನ್ಯಾಯ ವ್ಯವಸ್ಥೆಯು ಹೊಸ ಯುಗಕ್ಕೆ ಪ್ರವೇಶಿಸುತ್ತಿರುವ ಸಮಯದಲ್ಲಿ ಈ ಸಮ್ಮೇಳನವನ್ನು ಉದ್ಘಾಟಿಸಲಾಗುತ್ತಿದೆ. ಭಾರತವು 150 ವರ್ಷಗಳ ಹಿಂದಿನ ಕ್ರಿಮಿನಲ್ ನ್ಯಾಯದ ಮೂಲ ಕಾನೂನುಗಳನ್ನು ರದ್ದುಪಡಿಸಿದೆ ಮತ್ತು ಹೊಸ ಕಾನೂನುಗಳನ್ನು ಪರಿಚಯಿಸಿದೆ. ಈ ಮೂರು ಕಾನೂನುಗಳಲ್ಲಿ ಎರಡು ಪ್ರಮುಖ ವಿಷಯಗಳು ಈ ಸಮ್ಮೇಳನಕ್ಕೆ ಸಂಬಂಧಿಸಿವೆ” ಎಂದು ಹೇಳಿದರು. “ಮೊದಲನೆಯದಾಗಿ, ಸಕಾಲಿಕ ನ್ಯಾಯವನ್ನು ನೀಡಲು ಮತ್ತು ಎರಡನೆಯದಾಗಿ, ಅಪರಾಧದ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಅಪರಾಧಗಳನ್ನು ನಿಗ್ರಹಿಸಲು ವ್ಯವಸ್ಥೆ ರೂಪಿಸಲಾಗಿದೆ. ಈ ಮೂರೂ ಕಾನೂನುಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಈ ಎರಡೂ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತಿದೆ . ನಾವು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಮತ್ತು 7 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ಹೊಂದಿರುವ ಅಪರಾಧಗಳ ಸಂದರ್ಭದಲ್ಲಿ, ಅಪರಾಧ ಘಟಿಸಿದ ಸ್ಥಳಕ್ಕೆ ಫೋರೆನ್ಸಿಕ್ ಸೈನ್ಸ್ ಅಧಿಕಾರಿ ಭೇಟಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ತನಿಖೆ ಸರಳವಾಗುತ್ತದೆ, ನ್ಯಾಯಾಧೀಶರಿಗೆ ಸುಲಭವಾಗುತ್ತದೆ ಮತ್ತು ಪ್ರಾಸಿಕ್ಯೂಷನ್ ಕೂಡ ಸರಳವಾಗುತ್ತದೆ. ಇದು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ನಮಗೆ ಸಹಾಯ ಮಾಡುತ್ತದೆ. ಇದರೊಂದಿಗೆ ಇಡೀ ಪ್ರಕ್ರಿಯೆಯನ್ನು ಆಧುನೀಕರಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. 5 ವರ್ಷಗಳ ನಂತರ, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದ ಅತ್ಯಂತ ಆಧುನಿಕ ವ್ಯವಸ್ಥೆಯಾಗಲಿದೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ 50 ಕ್ಕೂ ಹೆಚ್ಚು ಐತಿಹಾಸಿಕ ಕೆಲಸಗಳನ್ನು ಮಾಡಿದ್ದಾರೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. “ಮೋದಿ ಸರಕಾರ ಕಳೆದ 5 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ 3 ಮಹತ್ವದ ಕೆಲಸಗಳನ್ನು ಮಾಡಿದೆ . ಮೊದಲನೆಯದಾಗಿ, 40 ವರ್ಷಗಳ ನಂತರ, ಮೋದಿ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಂದಿತು, ಅದು ಸಂಪೂರ್ಣವಾಗಿ ಭಾರತೀಯ ಶಿಕ್ಷಣವನ್ನು ಆಧರಿಸಿದೆ, ಇದು ಇಡೀ ಜಗತ್ತಿಗೆ ಮುಕ್ತವಾಗಿದೆ ಮತ್ತು ನಮ್ಮ ಮಕ್ಕಳಿಗೆ ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ. ಎರಡನೆಯದಾಗಿ, 2003 ರಲ್ಲಿ ಗುಜರಾತ್‌ನಲ್ಲಿ ಸ್ಥಾಪಿಸಲಾದ ಎನ್..ಎಫ್..ಎಸ್.ಯು.ನ ಅಡಿಪಾಯವು ವಿಸ್ತರಿಸಿ, ಮುಂದಕ್ಕೆ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕಾರಣವಾಯಿತು. ಮೂರನೆಯದಾಗಿ, 150 ವರ್ಷಗಳ ನಂತರ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ, ನಾವು ಮೂರು ಹೊಸ ಕಾನೂನುಗಳನ್ನು ಮಾಡಿದ್ದೇವೆ. ಈ ಮೂರು ಬದಲಾವಣೆಗಳನ್ನು ಒಟ್ಟಿಗೆ ನೋಡಿದರೆ, ಶಿಕ್ಷಣ, ನ್ಯಾಯ ವಿಜ್ಞಾನ ಮತ್ತು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯಾಗಬಹುದು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 5 ವರ್ಷಗಳ ನಂತರ ದೇಶವು ಪ್ರತಿ ವರ್ಷ 9 ಸಾವಿರಕ್ಕೂ ಹೆಚ್ಚು ವೈಜ್ಞಾನಿಕ ಅಧಿಕಾರಿಗಳು ಮತ್ತು ವಿಧಿ ವಿಜ್ಞಾನ ತಜ್ಞರನ್ನು ದೇಶ ಪಡೆಯುವಂತಹ ವ್ಯವಸ್ಥೆಗಳನ್ನು ಮಾಡಲಾಗಿದೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

“ಅಪರಾಧಿಗಳ ವರ್ತನೆಯ ವಿಜ್ಞಾನ(ಫೋರೆನ್ಸಿಕ್ ಬಿಹೇವಿಯರಲ್ ಸೈನ್ಸ್) ವಿಷಯದ ಮೇಲೆ ಇಂದಿನ ಸಮ್ಮೇಳನ ನಡೆಯುತ್ತಿದ್ದು, ಇದು ಉದಯೋನ್ಮುಖ ಕ್ಷೇತ್ರವಾಗಿದೆ” ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಕಟ್ಟುನಿಟ್ಟಿನ ಆಡಳಿತ ಮತ್ತು ಉತ್ತಮ ನ್ಯಾಯಾಂಗದಂತೆಯೇ ಅಪರಾಧಿಗಳ ವರ್ತನೆಯ ವಿಜ್ಞಾನವು ಅಪರಾಧಗಳನ್ನು ತಡೆಗಟ್ಟುವಲ್ಲಿ ಸಮಾನ ಪಾತ್ರವನ್ನು ವಹಿಸುತ್ತದೆ. ನಾವು ರಚಿಸಿರುವ ಮೋಡಸ್ ಆಪರೇಂಡಿ ಬ್ಯೂರೋಗಿಂತ ಈ ಆಲೋಚನೆ ಒಂದು ಹೆಜ್ಜೆ ಮುಂದಿದೆ. ನಡತೆಯನ್ನು ಚೆನ್ನಾಗಿ ಅಧ್ಯಯನ ಮಾಡಿ ಪ್ರಾಥಮಿಕ ಶಿಕ್ಷಣದಲ್ಲಿ ಸ್ಥಾನ ಕಲ್ಪಿಸಿ ಸಮನ್ವಯಗೊಳಿಸಿದರೆ ಅಪರಾಧಿಗಳ ನಿರ್ಮಾಣವನ್ನು ತಡೆಯಬಹುದು. ನ್ಯಾಯ ವಿಜ್ಞಾನವು ಸಮಾಜಕ್ಕೆ ಪ್ರತ್ಯೇಕವಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಾವು ಎಲ್ಲಾ ಪಾಲುದಾರರೊಂದಿಗೆ ನ್ಯಾಯ ವಿಜ್ಞಾನವನ್ನು ಸಂಯೋಜಿಸದ ಹೊರತು ಅದರ ಪ್ರಯೋಜನಗಳನ್ನು ನಾವು ಪಡೆಯಲು ಸಾಧ್ಯವಿಲ್ಲ. ಫೋರೆನ್ಸಿಕ್ ಸೈನ್ಸ್ ಅನ್ನು ತನಿಖೆ, ಕಾನೂನು ಕ್ರಮ, ನ್ಯಾಯ ವ್ಯವಸ್ಥೆಯಲ್ಲಿ ಬಳಸಬೇಕು ಮತ್ತು ಈಗ ಅದನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಸಮಯ ಬಂದಿದೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು. “ತಡೆಗಟ್ಟುವ, ಮುನ್ಸೂಚಕ ಮತ್ತು ರಕ್ಷಣಾತ್ಮಕ ಪೊಲೀಸ್‌ಕರ್ತವ್ಯ-ಕಾರ್ಯಾಚರಣೆ ದಿಕ್ಕಿನಲ್ಲಿ ಇದು ಪ್ರಮುಖ ಘಟನೆಯಾಗಿದೆ. ಕ್ರಿಮಿನಲ್ ಮನಸ್ಸು ಮತ್ತು ನಡವಳಿಕೆಯ ಆಳವಾದ ಅಧ್ಯಯನ ಮತ್ತು ಮುಂದಿನ ದಿನಗಳಲ್ಲಿ ಅಪರಾಧಗಳು ನಡೆಯದಂತೆ ತಡೆಯುವಲ್ಲಿ ಮತ್ತು ಅಪರಾಧಿಗಳು ತಲೆ ಎತ್ತದಂತೆ ತಡೆಯುವಲ್ಲಿ ಅದರ ಕಾರ್ಯತಂತ್ರದ ಬಳಕೆಯು ಇಡೀ ಜಗತ್ತಿಗೆ ಉತ್ತಮ ಸೇವೆಯಾಗಿದೆ. ಸಾಮರ್ಥ್ಯ ವೃದ್ಧಿ ಮತ್ತು ತನಿಖೆಗೆ ನೆರವಾಗಲು ಡಿಜಿಟಲ್ ಫೊರೆನ್ಸಿಕ್ ಎಕ್ಸಲೆನ್ಸ್ ಸೆಂಟರ್ ಕೂಡ ಇಂದು ಉದ್ಘಾಟನೆಗೊಂಡಿದೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

https://static.pib.gov.in/WriteReadData/userfiles/image/image002YM60.jpg 

“ ಸ್ವಾತಂತ್ರ್ಯದ ನಂತರ ಕಳೆದ 75 ವರ್ಷಗಳಲ್ಲಿ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಭಾರತೀಯ ಜನರ ನಂಬಿಕೆಯನ್ನು ಜಗತ್ತಿನಲ್ಲಿ ಇಂದು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ” ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ತುಂಬಿದಾಗ, ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಮುನ್ನಡೆಸುವ ಸಂಕಲ್ಪವನ್ನು ಈಡೇರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಂದು ಕ್ಷೇತ್ರದಲ್ಲಿ ಮಾಡಿದ ಸುಧಾರಣೆಗಳ ಆಧಾರದ ಮೇಲೆ ನಾವು ಅವರ ದೃಷ್ಟಿಕೋನದ ಜೊತೆಗೆ ಮುನ್ನಡೆಯಬೇಕಾಗಿದೆ. ಇಂತಹ ಹೊತ್ತಿನಲ್ಲಿ ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಮುಂದೆ 4 ಸವಾಲುಗಳಿವೆ - ತಂತ್ರಜ್ಞಾನದ ಬಳಕೆಗೆ ಅವಕಾಶ ನೀಡದೆ, ಮೂಲ ಪೊಲೀಸಿಂಗ್ ತತ್ವಕ್ಕೆ ಧಕ್ಕೆಯಾಗದಂತೆ ಇಡೀ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಧೈರ್ಯದಿಂದ ಸ್ವೀಕರಿಸುವ ಮೂಲಕ ನಮ್ಮದು ಅತ್ಯಂತ ಆಧುನಿಕ ಪೊಲೀಸ್ ವ್ಯವಸ್ಥೆಯಾಗಬೇಕು. ಮಾನವ ಉಪಸ್ಥಿತಿಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವುದು, ಹೈಬ್ರಿಡ್ ಮತ್ತು ಬಹು ಆಯಾಮದ ಬೆದರಿಕೆಗಳನ್ನು ಗುರುತಿಸುವುದು ಮತ್ತು ಅವುಗಳಿಂದ ನಮ್ಮ ವ್ಯವಸ್ಥೆಗಳನ್ನು ರಕ್ಷಿಸಲು ಸಂಪೂರ್ಣ ನೆಟ್‌ವರ್ಕ್ ಅನ್ನು ಸಿದ್ಧಪಡಿಸುವುದು ಮತ್ತು ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ವಿಶ್ವದ ಅತ್ಯಂತ ಆಧುನಿಕ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಮಾಡಲು ಮತ್ತು ಅದರಲ್ಲಿ ನ್ಯಾಯಶಾಸ್ತ್ರವನ್ನು ಅಳವಡಿಸಿಕೊಳ್ಳುವುದು ನಮ್ಮ ಮುಂದಿರುವ ಅವಕಾಶವಾಗಿದೆ. ಈ 4 ಸವಾಲುಗಳೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ನ್ಯಾಯವನ್ನು ಪಡೆಯುವ ಪ್ರಕ್ರಿಯೆಯಲ್ಲಿ, ಅದರ ಲಭ್ಯತೆ, ಅವಕಾಶ ಮತ್ತು ಕೈಗೆಟುಕುವ ಹಂತಗಳಲ್ಲಿ ಸಮಸ್ಯೆಗಳಿದ್ದು, ಈ ಮೂರಕ್ಕೂ ತಂತ್ರಜ್ಞಾನದಲ್ಲಿ ಪರಿಹಾರವಿದೆ. ಇಂದು ಅಪರಾಧದ ಸ್ವರೂಪ, ರೀತಿ ಮತ್ತು ವಿಧಾನವು ಪ್ರತಿದಿನ ಬದಲಾಗುತ್ತಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಪೊಲೀಸರು ಅಪರಾಧ ಮತ್ತು ಅಪರಾಧಿಗಳಿಗಿಂತ ಎರಡು ತಲೆಮಾರುಗಳ ಮುಂದೆ ಇರಬೇಕಾಗಿದೆ. ಅಪರಾಧಗಳನ್ನು ತಡೆಗಟ್ಟಲು ನಾವು ತಂತ್ರಜ್ಞಾನದ ನೀತಿಗಳು ಮತ್ತು ನಿಯಮಗಳಲ್ಲಿ ಜಾಗತಿಕ ಏಕರೂಪತೆಯನ್ನು ತರಲು ಪ್ರಯತ್ನಿಸಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

“ ಕ್ರಿಮಿನಲ್ ನ್ಯಾಯ ವ್ಯವಸ್ಥೆ, ತಂತ್ರಜ್ಞಾನ ಮತ್ತು ಫೋರೆನ್ಸಿಕ್ ತನಿಖೆಯನ್ನು ಸಂಯೋಜಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ” ಎಂದು ಶ್ರೀ ಅಮಿತ್ ಶಾ ಹೇಳಿದರು. “ಮೋದಿ ಸರ್ಕಾರವು ಮೂರು ಹೊಸ ಕಾನೂನುಗಳಲ್ಲಿ - ಕಾನೂನಿನ ಆಧಾರದ ಮೇಲೆ ತನಿಖೆ, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ - ವಿಧಿ ವಿಜ್ಞಾನಕ್ಕೆ ದೊಡ್ಡ ಸ್ಥಾನವನ್ನು ನೀಡಿದೆ. ಇದು ಯುವಕರಿಗೆ ಅವಕಾಶಗಳ ದೊಡ್ಡ ಕ್ಷೇತ್ರವನ್ನು ತೆರೆಯಲಿದೆ. ಫೋರೆನ್ಸಿಕ್ ತಂತ್ರಜ್ಞಾನದ ಸಹಾಯದಿಂದ ನಾವು ಕಾನೂನು ರಕ್ಷಣೆ ನೀಡುವ ಮೂಲಕ ತನಿಖೆಯ ಸ್ವಾತಂತ್ರ್ಯ, ಸ್ವಾಯತ್ತತೆ ಮತ್ತು ನ್ಯಾಯಸಮ್ಮತತೆಯನ್ನು ಉತ್ತಮ ರೀತಿಯಲ್ಲಿ ರಕ್ಷಿಸಲು ಸಾಧ್ಯವಾಯಿತು” ಎಂದು ಗೃಹ ಸಚಿವರು ಹೇಳಿದರು. ಈ ಮೂರು ಕಾನೂನುಗಳೊಂದಿಗೆ ಈಸ್ ಆಫ್ ಜಸ್ಟಿಸ್ ಮತ್ತು ಈಸ್ ಆಫ್ ಪೊಲೀಸಿಂಗ್ ಪದಗಳು ಬಳಕೆಗೆ ಬರುತ್ತವೆ ಮತ್ತು ಸಾರ್ವಜನಿಕರು ಸಹ ಅವುಗಳ ಪ್ರಯೋಜನವನ್ನು ಪಡೆಯಲಿದ್ದಾರೆ. ತೀವ್ರ ಕಠಿಣ ಪರಿಶ್ರಮದ ನಂತರ ಕೇಂದ್ರ ಗೃಹ ಸಚಿವಾಲಯವು ಕಳೆದ 5 ವರ್ಷಗಳಲ್ಲಿ ಅನೇಕ ಡೇಟಾಬೇಸ್‌ಗಳನ್ನು ಸಿದ್ಧಪಡಿಸಿದೆ ಮತ್ತು ಡೇಟಾ ಏಕೀಕರಣದ ಬಗ್ಗೆಯೂ ಸಾಕಷ್ಟು ಕೆಲಸ ಮಾಡಲಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

https://static.pib.gov.in/WriteReadData/userfiles/image/image003Z9JR.jpg

“ಈ ಮೂರು ಹೊಸ ಕಾನೂನುಗಳನ್ನು ಪ್ರತ್ಯೇಕವಾಗಿ ತರಲಾಗಿಲ್ಲ ಮತ್ತು ಅವುಗಳನ್ನು ತರುವ ಮೊದಲು ಮುಂದಿನ 5 ವರ್ಷಗಳಲ್ಲಿ ಏನು ಮಾಡಬೇಕೋ ಅದನ್ನು ಸ್ಪಷ್ಟವಾಗಿ ದೃಶ್ಯೀಕರಿಸಲಾಗಿದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಎಲ್ಲಾ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು 5 ವರ್ಷಗಳಲ್ಲಿ ಜಾರಿಗೆ ತರಲಾಗುವುದು. ಇಲ್ಲಿಯವರೆಗೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ಎಲ್ಲರಿಗೂ ಸರಿಹೊಂದುವ ಒಂದು ಹಲೇಯ ಗಾತ್ರ-ಆಕಾರವನ್ನು ಆಧರಿಸಿತ್ತು , ಆದರೆ ಹೊಸ ಶಿಕ್ಷಣ ನೀತಿಯ ಮೂಲಕ ಮೋದಿ ಜಿ ಅದನ್ನು ಕ್ರಿಯಾತ್ಮಕ ಮತ್ತು ಸಮಯೋಚಿತವಾಗಿಸಿದ್ದಾರೆ. ಇದನ್ನು ಬಳಸಿಕೊಂಡು ವಿಧಿ ವಿಜ್ಞಾನದ ತಜ್ಞರನ್ನು ತಯಾರು ಮಾಡಲು ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪಿಸಿದ್ದೇವೆ. ಒಂದು ವರ್ಷದಲ್ಲಿ ಈ ವಿಶ್ವವಿದ್ಯಾನಿಲಯದ ಒಂಬತ್ತು ಕ್ಯಾಂಪಸ್‌ಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಮತ್ತು ದೇಶದ ಇತರ ರಾಜ್ಯಗಳಲ್ಲಿ ಒಂದು ಕ್ಯಾಂಪಸ್ ಲಭ್ಯವಾಗಲಿದೆ. ಯುವ ವಿದ್ಯಾರ್ಥಿಗಳು ಒನ್ ಡಾಟಾ ಒನ್ ಎಂಟ್ರಿ ತತ್ವದಡಿ ಕೆಲಸ ಮಾಡಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

“ಮೋದಿಜೀ ಅವರು ತಂದ ಮೂರು ಹೊಸ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಅಧಿನಿಯಮಗಳಲ್ಲಿ ಮೊದಲ ಬಾರಿಗೆ ನ್ಯಾಯದ ಮೂಲ ಭಾರತೀಯ ಪರಿಕಲ್ಪನೆಗೆ ಸ್ಥಾನ ನೀಡಲಾಗಿದೆ” ಎಂದು ಶ್ರೀ ಅಮಿತ್ ಶಾ ಹೇಳಿದರು. ಹಳೆಯ ಕಾನೂನುಗಳ ಉದ್ದೇಶ ಬ್ರಿಟಿಷ್ ಆಳ್ವಿಕೆಯನ್ನು ರಕ್ಷಿಸುವುದಾಗಿದೆ, ಆದರೆ ಮೋದಿ ಜಿಯವರ ಈ ಮೂರು ಕಾನೂನುಗಳನ್ನು ಅಖಿಲ ಭಾರತೀಯ ದೃಷ್ಟಿಕೋನದಿಂದ ಮಾಡಲಾಗಿದೆ. ಈಗ ಈ ಹೊಸ ಕಾನೂನುಗಳನ್ನು ಪರಿಚಯಿಸಿದ ನಂತರ ಎಫ್‌.ಐ.ಆರ್.‌ಗಳ ನಿರ್ಧಾರವನ್ನು 3 ವರ್ಷಗಳಲ್ಲಿ ಖಚಿತಪಡಿಸಲಾಗುವುದು. ಈ ಕಾನೂನುಗಳಲ್ಲಿ, ನಾವು ನ್ಯಾಯದ ಸುಲಭತೆಯಿಂದ ಹಿಡಿದು ಸರಳ, ಸ್ಥಿರ, ಪಾರದರ್ಶಕ ಮತ್ತು ಸಮಯೋಚಿತ ಆಯಾಮಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

https://static.pib.gov.in/WriteReadData/userfiles/image/image0049LCV.jpg

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯುವಕರನ್ನು ಉದ್ಧೇಶಿಸಿ ಮಾತನಾಡುತ್ತಾ, “ಪ್ರಧಾನಮಂತ್ರಿ ಶ್ರೀ ಮೋದಿಯವರು ಭಾರತವನ್ನು ಪ್ರತಿ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಕನಸು ಕಂಡಿದ್ದಾರೆ, ಇದರಲ್ಲಿ ವಿಧಿ ವಿಜ್ಞಾನವೂ ಸೇರಿದ್ದು, ಈ ಕೆಲಸವನ್ನು ಯುವಕರು ಮಾಡಬೇಕು. ಹೊಸ ನ್ಯಾಯ ವ್ಯವಸ್ಥೆಗಳನ್ನು ಮಾಡಿದ ನಂತರ ಭಾರತವು ಖಂಡಿತವಾಗಿಯೂ ವಿಧಿವಿಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿರುತ್ತದೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

 

*****

 

 



(Release ID: 1999035) Visitor Counter : 77