ಗೃಹ ವ್ಯವಹಾರಗಳ ಸಚಿವಾಲಯ
ಶಿಲ್ಲಾಂಗ್ ನಲ್ಲಿಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 71 ನೇ ಈಶಾನ್ಯ ಮಂಡಳಿ ಸಭೆ ಉದ್ದೇಶಿಸಿ ಮಾತನಾಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಳೆದ ಹತ್ತು ವರ್ಷಗಳ ಅವಧಿ ಈಶಾನ್ಯ ರಾಜ್ಯಗಳಿಗೆ ಸುವರ್ಣ ಯುಗ: ಮೋದಿ ಸರ್ಕಾರ ಈಶಾನ್ಯ ಭಾಗದಲ್ಲಿ “ಆಕ್ಟ್ ಈಸ್ಟ್, ಆಕ್ಟ್ ಫಾಸ್ಟ್ ಮತ್ತು ಆಕ್ಟ್ ಫಸ್ಟ್” ನೀತಿ ಅನುಸರಿಸುತ್ತಿದೆ.
ಮೋದಿ ಆಡಳಿತದಲ್ಲಿ ಈಶಾನ್ಯ ಭಾಗ ಹಿಂಸಾಚಾರ ಬದಿಗಿಟ್ಟು ಶಾಂತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ
ಮೋದಿ ಜೀ ಅವರ ನಾಯಕತ್ವದ “ಆಕ್ಟ್ ಈಸ್ಟ್ ನೀತಿಯಡಿ ಎನ್.ಇ.ಸಿ ಪಾತ್ರ ಮತ್ತು ವ್ಯಾಪ್ತಿ ಹೆಚ್ಚಾಗಿದೆ
ಶಾಂತಿ ಮತ್ತು ಸಮೃದ್ಧತೆ ಒಗ್ಗೂಡಿದಾಗ ಅಭಿವೃದ್ಧಿಯಾಗುತ್ತದೆ ಮತ್ತು ಈ ದಿಸೆಯಲ್ಲಿ ಮೋದಿ ಸರ್ಕಾರ ಹಲವಾರು ಶಾಂತಿ ಒಪ್ಪಂದಗಳನ್ನು ಮಾಡಿಕೊಂಡಿದೆ
ಮೋದಿ ಜೀ ಅವರ ಆಡಳಿತದಲ್ಲಿ ಈಶಾನ್ಯ ಭಾಗದಲ್ಲಿ ಹಿಂಸಾಚಾರ ಪ್ರಕರಣಗಳು 73% ರಷ್ಟು ತಗ್ಗಿವೆ
ಮೂಲ ಸೌಕರ್ಯ ಅಭಿವೃದ್ಧಿಯಿಂದ ಈಶಾನ್ಯ ಭಾಗ ಮತ್ತು ದೆಹಲಿ ನಡುವೆ ಅಂತರವಷ್ಟೇ ತಗ್ಗಿಲ್ಲ ಹಾಗೂ ಆದರೆ ಭಾರತದ ಉಳಿದ ಭಾಗಗಳ ಹೃದಯಗಳ ಭಿನ್ನಮತವನ್ನು ತಗ್ಗಿಸಿದೆ
ಸಾವಯವ ಉತ್ಪನ್ನಗಳು, ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಮೊಟ್ಟೆ ಉತ್ಪಾದನಾ ವಲಯದಲ್ಲಿ 13 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ
ಈಶಾನ್ಯ ರಾಜ್ಯಗಳಲ್ಲಿ ವಿತ್ತೀಯ ಕೊರತೆಯನ್ನು ತಗ್ಗಿಸಬೇಕು ಎಂದು ಗುರಿ ನಿಗದಿ ಮಾಡಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ
Posted On:
19 JAN 2024 5:12PM by PIB Bengaluru
ಶಿಲ್ಲಾಂಗ್ ನಲ್ಲಿಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 71 ನೇ ಈಶಾನ್ಯ ಮಂಡಳಿ ಸಭೆ ಉದ್ದೇಶಿಸಿ ಮಾತನಾಡಿದರು.
ತಮ್ಮ ಭಾಷಣದಲ್ಲಿ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಳೆದ ಹತ್ತು ವರ್ಷಗಳ ಅವಧಿ ಈಶಾನ್ಯ ರಾಜ್ಯಗಳಿಗೆ ಮಹತ್ವದ್ದಾಗಿದ್ದು, ಸ್ವಾತಂತ್ರ್ಯ ನಂತರದ ಕಳೆದ 75 ವರ್ಷಗಳ ಅವಧಿಯಲ್ಲಿ ಈಶಾನ್ಯ ಭಾಗ ಅತ್ಯಂತ ಪ್ರಮುಖವಾದ ರೀತಿಯಲ್ಲಿ ಪ್ರಗತಿ ಸಾಧಿಸಿದೆ. ಹತ್ತು ವರ್ಷಗಳ ಅವಧಿಯಲ್ಲಿ ಮೋದಿ ಜೀ ಅವರ ನಾಯಕತ್ವದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಿಂದ ಈಶಾನ್ಯ ಭಾಗ ಮತ್ತು ದೆಹಲಿ ನಡುವೆ ಅಂತರ ತಗ್ಗಿದೆ. ಭಾರತದ ಉಳಿದ ಭಾಗ ಮೂಲ ಸೌಕರ್ಯ ಅಭಿವೃದ್ಧಿ ಜೊತೆಗೆ ಉಳಿದ ಭಾಗಗಳ ಹೃದಯಗಳ ಭಿನ್ನಮತವನ್ನು ತಗ್ಗಿಸಿದೆ. ಈಶಾನ್ಯ ಭಾಗ ಈ ಮುನ್ನ ವಿವಿಧ ಜನಾಂಗೀಯ, ಭಾಷೆ, ಗಡಿ ಮತ್ತು ಆತಂಕವಾದ ಗುಂಪುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಜೊತೆ ಹೋರಾಡುತ್ತಿತ್ತು. ಹತ್ತು ವರ್ಷಗಳಲ್ಲಿ ತಾಜಾತನದ ಶಾಂತಿ ಮತ್ತು ದೀರ್ಘಕಾಲ ಬಾಳಿಕೆ ಬರುವ ಯುಗಾರಂಭವನ್ನು ಕಂಡಿದೆ ಎಂದರು.
ಸ್ವಾತಂತ್ರ್ಯ ನಂತರದ ಕಳೆದ 75 ವರ್ಷಗಳ ಅವಧಿಗೆ ಹೋಲಿಸಿದರೆ ಈ ಹತ್ತು ವರ್ಷಗಳು ಖಂಡಿತವಾಗಿಯೂ ಈಶಾನ್ಯ ರಾಜ್ಯಗಳಿಗೆ ಸುವರ್ಣ ಯುಗ ಎಂದು ಪರಿಗಣಿಸಬಹುದು. ನಾವು ಯಾವಾಗಲೂ ಈಶಾನ್ಯ ಭಾಗವನ್ನು ಭಾರತದ ಅತ್ಯಂತ ಪ್ರಮುಖ ಭಾಗ ಎಂದು ಭಾವಿಸಿದ್ದೇವೆ. ಅಟಲ್ ಜೀ ಅವರ ಸಮಯದಲ್ಲಿ ಈ ಭಾಗಕ್ಕೆ ಆದ್ಯತೆ ನೀಡಲಾಗಿದ್ದು, ಆಗ ಈಶಾನ್ಯ ರಾಜ್ಯಗಳಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಯಿತು ಮತ್ತು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಡಿ “ಆಕ್ಟ್ ಈಸ್ಟ್, ಆಕ್ಟ್ ಫಾಸ್ಟ್ ಮತ್ತು ಆಕ್ಟ್ ಫಸ್ಟ್” ನೀತಿಯನ್ನು ಜಾರಿಮಾಡಲಾಗಿದೆ. ಇದರೊಂದಿಗೆ ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳಲ್ಲಿ ಈಶಾನ್ಯಕ್ಕೆ ಆದ್ಯತೆ ನೀಡುವ ಮೂಲಕ ಉತ್ತೇಜನ ಕೊಡಲಾಗುತ್ತಿದೆ ಎಂದು ಹೇಳಿದರು.
ಈಶಾನ್ಯ ಮಂಡಳಿ [ಎನ್.ಇ.ಸಿ] ಸ್ಥಾಪನೆಯಾಗಿ 50 ವರ್ಷಗಳು ಪೂರ್ಣಗೊಂಡಿದ್ದು, ಈ ಭಾಗದ ಎಲ್ಲಾ ರಾಜ್ಯಗಳಿಗೆ ನೀತಿ ಆಧಾರಿತ ವೇದಿಕೆ ಕಲ್ಪಿಸುವ ಮೂಲಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಂಡಿದೆ ಮತ್ತು ತಮ್ಮ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ಕಂಡುಕೊಂಡಿದೆ. ಈ 50 ವರ್ಷಗಳಲ್ಲಿ 12,000 ಕಿಲೋಮೀಟರ್ ರಸ್ತೆಯನ್ನು ಈ ಭಾಗದಲ್ಲಿ ನಿರ್ಮಿಸಿದ್ದು, 700 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ಸ್ಥಾಪಿಸಲಾಗಿದೆ ಹಾಗೂ ಎನ್.ಇ.ಸಿ ಮಾರ್ಗದರ್ಶನದಲ್ಲಿ ಹಲವಾರು ರಾಷ್ಟ್ರಮಟ್ಟದ ಉತ್ಕೃಷ್ಟತಾ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಮೋದಿ ಜೀ ಅವರ ನಾಯಕತ್ವದ ಆಕ್ಟ್ ಈಸ್ಟ್ ನೀತಿಯಡಿ ಎನ್.ಸಿ.ಸಿ ಪಾತ್ರ ಮತ್ತು ಮಹತ್ವ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮೋದಿ ಸರ್ಕಾರ ಕಾನೂನು ಸುವ್ಯವಸ್ಥೆ ಬಲಪಡಿಸುವ, ಒಳನುಸುಳುವಿಕೆ ಮತ್ತು ಈ ಭಾಗದ ಗಡಿ ಸಮಸ್ಯೆಗಳನ್ನು ಗಣನೀಯವಾಗಿ ಬಗೆಹರಿಸಿ ಸಾಧನೆ ಮಾಡಿದೆ. ಇದರೊಂದಿಗೆ ನಾರ್ಥ್ ಈಸ್ಟ್ರನ್ ಸ್ಪೇಸ್ ಅಪ್ಲಿಕೇಷನ್ ಸೆಂಟರ್ - [ಎನ್.ಇ.ಎಸ್.ಎ.ಸಿ] ಕೇಂದ್ರವನ್ನು ಬಳಸಿಕೊಂಡು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ಕೆಲಸವನ್ನು ಸಹ ಮಾಡಲಾಗಿದೆ. ಇಲ್ಲಿನ ಭಾಷೆ, ಆಹಾರ, ಉಡುಪು ಮತ್ತು ನೈಸರ್ಗಿಕ ಸೌಂದರ್ಯ ಜಾಗತಿಕ ಪ್ರವಾಸೋದ್ಯಮ ವಲಯದಲ್ಲಿ ಪರಮೋಚ್ಚ ಪುಷ್ಟಿ ನೀಡಲಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016 ರಲ್ಲಿ ಎನ್.ಇ.ಸಿ ಸಮಗ್ರ ಅಧಿವೇಶನದಲ್ಲಿ ಭಾಗವಹಿಸಿದ್ದರು. 40 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿಯೊಬ್ಬರು ಇಂತಹ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದು ವಿಶೇಷ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಜೀ ಅವರು 50ಕ್ಕೂ ಅಧಿಕ ಬಾರಿ ಈಶಾನ್ಯ ಭಾಗಕ್ಕೆ ಭೇಟಿ ನೀಡಿದ್ದಾರೆ ಮತ್ತು ಇಡೀ ದೇಶದಲ್ಲಿ ಸರ್ಕಾರದ ಆದ್ಯತೆಗಳು ಅತ್ಯಂತ ಸ್ಪಷ್ಟವಾಗಿವೆ. ಕೇಂದ್ರ ಸಚಿವರು ಸಹ 500 ಕ್ಕೂ ಅಧಿಕ ಬಾರಿ ಈಶಾನ್ಯ ಭಾಗಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ಸರ್ಕಾರ ಈಶಾನ್ಯದ ಹೆಮ್ಮೆ, ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ವೇಷಭೂಷಣಗಳು ಮತ್ತು ಈ ಭಾಗದ ಆಹಾರವನ್ನು ಶ್ರೀಮಂತಗೊಳಿಸಲು ಕೆಲಸ ಮಾಡಿದೆ. ಇಡೀ ಭಾರತಕ್ಕೆ ಇಲ್ಲಿನ ವೈಶಿಷ್ಟ್ಯಗಳನ್ನು ಪರಿಚಯಿಸುವ ಕೆಲಸ ಮಾಡಿದೆ ಎಂದು ಹೇಳಿದರು.
ಈಶಾನ್ಯ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆ ತರಲು ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಹಲವಾರು ಹೆಜ್ಜೆಗಳನ್ನು ಇಟ್ಟಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇಂದು ಎನ್.ಇ.ಸಿ ಈಯರ್ ಬುಕ್ – 2024 ಬಿಡುಗಡೆ ಮಾಡಲಾಗಿದೆ. ಈಶಾನ್ಯದ ಎಲ್ಲಾ ರಾಜ್ಯಗಳು ನಿವ್ವಳ ವಿತ್ತೀಯ ಕೊರತೆಯನ್ನು ತಗ್ಗಿಸಬೇಕು ಮತ್ತು ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ತ್ರಿಪುರ ಈ ನಿಟ್ಟಿನಲ್ಲಿ ಶ್ಲಾಘನೀಯ ಪಾತ್ರ ನಿರ್ವಹಿಸುತ್ತಿದೆ. ಈಶಾನ್ಯ ಭಾಗವನ್ನು ಪ್ರವಾಹ ಮುಕ್ತ ಮತ್ತು ಮಾದಕ ದ್ರವ್ಯಮುಕ್ತಗೊಳಿಸಲು ಒತ್ತು ನೀಡಿದ್ದು, ಎನ್.ಇ.ಎಸ್.ಎ.ಸಿಯನ್ನು ಬಳಸಿಕೊಂಡು ನೀರಿನ ನಿರ್ವಹಣೆ ಬಲಪಡಿಸಬೇಕು. ಮಳೆ ನೀರು ಸಂಗ್ರಹಿಸಲು ದೊಡ್ಡ ಕೆರೆಗಳನ್ನು ನಿರ್ಮಿಸಬೇಕು, ಪ್ರವಾಸೋದ್ಯಮವನ್ನು ಆಕರ್ಷಿಸಬೇಕು ಮತ್ತು ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯವನ್ನು ಬಲಪಡಿಸಬೇಕು ಎಂದರು.
ನಮ್ಮದು 21 ನೇ ಶತಮಾನದ ಅಪರಾಧ ನ್ಯಾಯ ವ್ಯವಸ್ಥೆಯಾಗಿದ್ದು, ಮೋದಿ ಜೀ ಅವರ ನಾಯಕತ್ವದಲ್ಲಿ 3 ಹೊಸ ಕಾನೂನುಗಳನ್ನು ತರಲಾಗಿದೆ ಮತ್ತು ಅಧಿಸೂಚನೆ ನಂತರ ಮುಂದಿನ ಮೂರು ವರ್ಷಗಳಲ್ಲಿ ನಮ್ಮ ಅಪರಾಧ ನ್ಯಾಯ ವ್ಯವಸ್ಥೆ ಅತ್ಯಂತ ಆಧುನಿಕವಾಗಲಿದೆ ಮತ್ತು ಅಪರಾಧ ನ್ಯಾಯ ವ್ಯವಸ್ಥೆ ಇಡೀ ಜಗತ್ತಿನಲ್ಲಿಯೇ ಅತ್ಯಂತ ವೈಜ್ಞಾನಿಕವಾಗಿರಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಕಳೆದ 2004 ರಿಂದ 2014 ರ ಅವಧಿಯಲ್ಲಿ ಈಶಾನ್ಯ ಭಾಗದಲ್ಲಿ 11121 ಹಿಂಸಾಚಾರ ಪ್ರಕರಣಗಳು ವರದಿಯಾಗಿದ್ದವು. 2014 ರಿಂದ 2023 ರ ಅವಧಿಯಲ್ಲಿ ಈ ಪ್ರಮಾಣ ಶೇ 73 ರಷ್ಟು ತಗ್ಗಿದೆ. ಇದೇ ಅವಧಿಯಲ್ಲಿ 458 ರಷ್ಟಿದ್ದ ಭದ್ರತಾ ಪಡೆಯ ಸಿಬ್ಬಂದಿ ಸಾವುಗಳ ಪ್ರಮಾಣ 132 ಕ್ಕೆ ಅಂದರೆ ಶೇ 71 ರಷ್ಟು ಹಾಗೂ ನಾಗರಿಕರ ಸಾವು ಪ್ರಮಾಣ ಶೇ 86 ರಷ್ಟು ಕಡಿಮೆಯಾಗಿದೆ. ಒಳನುಸುಳುವ ಸಮಸ್ಯೆ ಕೂಡ ತಗ್ಗಿದ್ದು, ಇದಕ್ಕೆ ಕಾರಣ ಕಳೆದ 5 ವರ್ಷಗಳಲ್ಲಿ 8900 ಬಂಡುಕೋರರು ಶರಣಾಗಿದ್ದಾರೆ ಮತ್ತು ಇವರೆಲ್ಲರೂ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ. ಇಡೀ ದೇಶದಲ್ಲಿ ಶಾಂತಿ ಮತ್ತು ಸಮೃದ್ಧತೆ ಪರಸ್ಪರ ಸಂಬಂಧ ಹೊಂದಿರುವುದನ್ನು ಸೂಚಿಸುತ್ತದೆ. ಇಂತಹ ಸಕಾರಾತ್ಮಕ ಪರಿಸ್ಥಿತಿ ಇಲ್ಲದಿದ್ದರೆ ರಾಜ್ಯಗಳು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಈಶಾನ್ಯ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆ ತರಲು ಮೋದಿ ಸರ್ಕಾರ 9 ಒಡಂಬಡಿಕೆಗಳಿಗೆ ಅಂಕಿತ ಹಾಕಿದೆ. ಕಾನೂನು ಸುವ್ಯವಸ್ಥೆಗೆ ಸಂಬಂದಿಸಿದಂತೆ ಬಾಕಿ ಉಳಿದಿದ್ದ ಹಲವಾರು ವಿಷಯಗಳನ್ನು ಯಶಸ್ವಿಯಾಗಿ ಬಗೆಹರಿಸಿದೆ. ಅಸ್ಸಾಂ ಮತ್ತು ಮಣಿಪುರ ಹೊರತುಪಡಿಸಿ ಶೇ 75 ರಷ್ಟು ಪ್ರದೇಶಗಳಲ್ಲಿ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ [ಎ.ಎಫ್.ಎಸ್.ಪಿ.ಎ]ಯನ್ನು 2018 ರಲ್ಲಿ ತೆಗೆದುಹಾಕಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
2022-23 ರಿಂದ 2025-26 ಅವಧಿಗೆ ಮೋದಿ ಸರ್ಕಾರ ಈಶಾನ್ಯ ಭಾಗಕ್ಕೆ 4800 ಕೋಟಿ ರೂಪಾಯಿ ಮೊತ್ತವನ್ನು ಮಂಜೂರು ಮಾಡಿದೆ ಮತ್ತು ಆಯವ್ಯಯದ ಮೊತ್ತ ಶೇ 162 ರಷ್ಟು ಹೆಚ್ಚಳವಾಗಿದೆ. ಶೇ 10 ರಷ್ಟು ನಿವ್ವಳ ಆಯವ್ಯಯ ಬೆಂಬಲ ಯೋಜನೆಯು ಈಶಾನ್ಯದ ಅಭಿವೃದ್ಧಿಗೆ ಹೆಚ್ಚು ಪ್ರಯೋಜನ ನೀಡಿದೆ. ಪಿಎಂ-ಡೇವ್ ಐಎನ್ಇ [ಈಶಾನ್ಯ ಭಾಗದ ಪ್ರಧಾನಮಂತ್ರಿಗಳ ಅಭಿವೃದ್ಧಿ ಉಪಕ್ರಮ]ದಡಿ 1500 ಕೋಟಿ ರೂಪಾಯಿ ಮಂಜೂರು ಮಾಡಿದ್ದು, 2023 ಮತ್ತು 2025 – 26 ರ ಅವಧಿಗೆ 6600 ಕೋಟಿ ರೂಪಾಯಿ ದೊರೆಯಲಿದೆ. ಕೃಷಿ ವಲಯದಲ್ಲಿ ಅಂತರ್ ಸಚಿವಾಲಯ ಕಾರ್ಯಪಡೆ ರಚಿಸಿದ್ದು, ನ್ಯಾಷನಲ್ ರೋಪ್ ವೇ ಡವಲಪ್ಮೆಂಟ್ ಕಾರ್ಯಕ್ರಮದಡಿ 8 ರೋಪ್ ವೇಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ. ಈಶಾನ್ಯ ರಾಜ್ಯಗಳ ಅಭಿವೃದ್ದಿ –ಡಿಒಎನ್ಇಆರ್ ಸಚಿವಾಲಯದ ಆಯವ್ಯಯ ಶೇ 153 ರಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ಈಶಾನ್ಯ ಭಾಗಕ್ಕೆ 234 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು, ತಾಳೆ ಎಣ್ಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದರೊಂದಿಗೆ 1713 ಕೋಟಿ ರೂಪಾಯಿ ಮೊತ್ತದ 32 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಈಶಾನ್ಯ ಭಾಗದ ವಿಶೇಷ ಅಭಿವೃದ್ಧಿ ಯೋಜನೆಯಡಿ ಮಂಜೂರಾತಿ ನೀಡಲಾಗಿದೆ. ಈಶಾನ್ಯ ಅಭಿವೃದ್ಧಿ ಹಣಕಾಸು ನಿಗಮ 2023 ರ ಜನವರಿಯಿಂದ 2023 ರ ಡಿಸೆಂಬರ್ ಅವಧಿಗೆ 5490 ಕೋಟಿ ರೂಪಾಯಿ ಯೋಜನೆಗಳಿಗೆ ಮಂಜೂರಾತಿ ನೀಡಿದೆ. ‘ಸಂಭವ್’ ಯೋಜನೆಯಡಿ 8 ರಾಜ್ಯಗಳ 42 ಜಿಲ್ಲೆಗಳ 75 ಗ್ರಾಮ ಪಂಚಾಯತ್ ಗಳಲ್ಲಿ ಮೂಲ ಸೌಕರ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಎನ್ಇಎಸ್ಎಸಿಯನ್ನು ನಾವು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಹಾಗೂ ಇದನ್ನು ವಿಪತ್ತು ನಿರ್ವಹಣೆ, ನೀರು ನಿರ್ವಹಣೆ ಹಾಗೂ ಜನಕೇಂದ್ರಿತ ಆಡಳಿತ ಮತ್ತು ಆಧುನಿಕ ವ್ಯವಸ್ಥೆಯಯನ್ನು ರೂಪಿಸಲು ಬಳಕೆ ಮಾಡಿಕೊಳ್ಳಬೇಕು. ಈಶಾನ್ಯ ರಾಜ್ಯಗಳಿಗೆ ಮೋದಿ ಸರ್ಕಾರ ಹೆಚ್ಚಿನ ಮೂಲ ಸೌಕರ್ಯವನ್ನು ವಿಸ್ತರಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ರೈಲ್ವೆಯಲ್ಲಿ 81,000 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ರಸ್ತೆ ಸಂಪರ್ಕಕ್ಕಾಗಿ 48,000 ಕೋಟಿ ರೂಪಾಯಿ ಮತ್ತು ಭಾರತ್ ಮಾಲಾ ಯೋಜನೆಯಡಿ 5196 ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿದೆ. ಉಡಾನ್ ಯೋಜನೆಯಡಿ 8 ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಿದ್ದು, ಹತ್ತು ವರ್ಷಗಳಲ್ಲಿ 71 ಹೊಸ ಮಾರ್ಗಗಳನ್ನು ಆರಂಭಿಸಲಾಗಿದೆ. ಸಾವಯವ ಉತ್ಪನ್ನಗಳು, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಮೊಟ್ಟೆ ಉತ್ಪಾದನೆಯಲ್ಲಿ ಈಶಾನ್ಯ ಭಾಗ ಸ್ವಾವಲಂಬನೆ ಸಾಧಿಸಿದ್ದು, ಈ 4 ವಲಯಗಳಿಂದ 13 ಲಕ್ಷ ಜನರಿಗೆ ಉದ್ಯೋಗ ದೊರೆತಿದೆ. ಈ ವಲಯದ ಅಭಿವೃದ್ಧಿ ಪೂರ್ಣಗೊಂಡಿಲ್ಲ. ಆದರೆ ಈ ವಲಯದುದ್ದಕ್ಕೂ ವ್ಯಕ್ತಿಗಳ ಅಭಿವೃದ್ಧಿ ಮತ್ತು ಕೈಗಾರಿಕಾ ಉತ್ಪಾದನೆ, ಕೃಷಿ ಕೇವಲ ಆಯ್ಕೆಗಳಾಗಿವೆ. ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲು ಈಶಾನ್ಯ ಭಾಗ ತನ್ನ ಸಿಂಹಪಾಲು ನೀಡುವಂತೆ ಗುರಿ ನಿಗದಿ ಮಾಡಬೇಕಾಗಿದೆ. 2047 ರ ವೇಳೆಗೆ ಇಡೀ ಭಾರತ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಬೇಕು, ಈಶಾನ್ಯ ಭಾಗ ಸ್ವಾವಲಂಬಿ ಮತ್ತು ಪೂರ್ಣ ಪ್ರಮಾಣದಲ್ಲಿ ಅಭ್ಯುದಯ ಸಾಧಿಸಿದ ಭಾಗವಾಗಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು.
***
(Release ID: 1997956)
Visitor Counter : 83