ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದ್ವೀಪ ರಾಷ್ಟ್ರ ಟಿಮೋರ್-ಲೆಸ್ಟೆ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿ ಸಭೆ

Posted On: 09 JAN 2024 11:16AM by PIB Bengaluru

ಟಿಮೋರ್-ಲೆಸ್ಟೆ ಅಧ್ಯಕ್ಷ ಗೌರವಾನ್ವಿತ ಡಾ. ಜೋಸ್ ರಾಮೋಸ್ ಹೊರ್ಟಾ ಅವರು ಗುಜರಾತಿನ ಗಾಂಧಿನಗರದಲ್ಲಿ 2024 ಜನವರಿ  8-10ರ ವರೆಗೆ ಆಯೋಜಿತವಾಗಿರುವ 10ನೇ “ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ”ಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿದ್ದಾರೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಹೋರ್ಟಾ ಗಾಂಧಿನಗರದಲ್ಲಿಂದು ಭೇಟಿಯಾದರು. ವೈಬ್ರಂಟ್ ಗುಜರಾತ್ ಶೃಂಗಸಭೆಗೆ ಅಧ್ಯಕ್ಷ ಹೋರ್ಟಾ ಮತ್ತು ಅವರ ನಿಯೋಗಕ್ಕೆ ಪ್ರಧಾನ ಮಂತ್ರಿ ಮೋದಿ ಅವರು ಆತ್ಮೀಯ ಸ್ವಾಗತ ನೀಡಿದರು. ಉಭಯ ದೇಶಗಳ ನಡುವಿನ ರಾಷ್ಟ್ರ ಮಟ್ಟದ ಅಥವಾ ಸರ್ಕಾರ ಮಟ್ಟದ ಮುಖ್ಯಸ್ಥರ ಮೊದಲ ಭೇಟಿ ಇದಾಗಿದೆ. ರೋಮಾಂಚಕ "ದೆಹಲಿ-ದಿಲಿ" ಸಂಪರ್ಕವನ್ನು ಬಲವಾಗಿ ನಿರ್ಮಿಸುವ ಭಾರತದ ಬದ್ಧತೆಯನ್ನು ಪ್ರಧಾನ ಮಂತ್ರಿ ಪುನರುಚ್ಚರಿಸಿದರು. ಟಿಮೋರ್-ಲೆಸ್ಟೆಯಲ್ಲಿ  ಭಾರತೀಯ ಮಿಷನ್ ತೆರೆಯುವುದಾಗಿ 2023 ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿ ಘೋಷಿಸಿದ್ದರು. ಸಾಮರ್ಥ್ಯ ಬಲವರ್ಧನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಹಣಕಾಸು ತಂತ್ರಜ್ಞಾನ, ಸಾಂಪ್ರದಾಯಿಕ ಔಷಧ ಮತ್ತು ಫಾರ್ಮಾ, ಇಂಧನ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಟಿಮೋರ್-ಲೆಸ್ಟೆಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಇಂಟರ್‌ನ್ಯಾಶನಲ್ ಸೋಲಾರ್ ಅಲೈಯನ್ಸ್ (ISA) ಮತ್ತು ವಿಪತ್ತು ನಿರ್ವಹಣಾ ಮೂಲಸೌಕರ್ಯ(CDRI)ಕ್ಕೆ ಸೇರುವಂತೆ ಟಿಮೋರ್-ಲೆಸ್ಟೆಗೆ ಪ್ರಧಾನಿ ಆಹ್ವಾನ ನೀಡಿದರು.

ಟಿಮೋರ್-ಲೆಸ್ಟೆಯನ್ನು ತನ್ನ 11ನೇ ಸದಸ್ಯ ರಾಷ್ಟ್ರವಾಗಿ ಒಪ್ಪಿಕೊಳ್ಳುವ ಅಸಿಯಾನ್ ನ ತಾತ್ವಿಕ ನಿರ್ಧಾರಕ್ಕಾಗಿ ಅಧ್ಯಕ್ಷ ಹೋರ್ಟಾ ಅವರನ್ನು ಅಭಿನಂದಿಸಿದರು, ಶೀಘ್ರದಲ್ಲೇ ಪೂರ್ಣ ಸದಸ್ಯತ್ವ ಪಡೆಯುವ ಭರವಸೆ ವ್ಯಕ್ತಪಡಿಸಿದರು.

ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಕ್ಕಾಗಿ ಅಧ್ಯಕ್ಷ ಹೋರ್ಟಾ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. ಅಭಿವೃದ್ಧಿ ಆದ್ಯತೆಗಳನ್ನು ಪೂರೈಸಲು ವಿಶೇಷವಾಗಿ ಆರೋಗ್ಯ ರಕ್ಷಣೆ ಮತ್ತು ಐಟಿಯ ಸಾಮರ್ಥ್ಯ ನಿರ್ಮಾಣ ಕ್ಷೇತ್ರಗಳಲ್ಲಿ ಭಾರತ ಸಂಪೂರ್ಣ ಬೆಂಬಲ ನೀಡಬೇಕು ಎಂದು ಕೋರಿದರು,

ಉಭಯ ನಾಯಕರು ಪ್ರಾದೇಶಿಕ ಸಮಸ್ಯೆಗಳು ಮತ್ತು ಇಂಡೋ-ಪೆಸಿಫಿಕ್‌ ವಲಯದ  ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವ ಹೊಂದಲು ಅಧ್ಯಕ್ಷ ಹೋರ್ಟಾ ಬಲವಾದ ಬೆಂಬಲ ವ್ಯಕ್ತಪಡಿಸಿದರು. ಬಹುಪಕ್ಷೀಯ ರಂಗದಲ್ಲಿ ತಮ್ಮ ಅತ್ಯುತ್ತಮ ಸಹಕಾರ ಮುಂದುವರಿಸಲು ನಾಯಕರು ಬದ್ಧರಾಗಿದ್ದಾರೆ. ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ 2 ಆವೃತ್ತಿಗಳಲ್ಲಿ ಟಿಮೋರ್-ಲೆಸ್ಟೆ ಸಕ್ರಿಯವಾಗಿ ಭಾಗವಹಿಸಿದ್ದನ್ನು ಪ್ರಧಾನ ಮಂತ್ರಿ ಶ್ಲಾಘಿಸಿದರು. ಜಾಗತಿಕ ಸಮಸ್ಯೆಗಳ ಬಗ್ಗೆ ಗ್ಲೋಬಲ್ ಸೌತ್‌ ದೇಶಗಳು ತಮ್ಮ ಸ್ಥಾನವನ್ನು ಸಂಯೋಜಿಸುವ ಅಗತ್ಯವಿದೆ ಎಂದು ಉಭಯ ನಾಯಕರು ಒಪ್ಪಿಕೊಂಡರು.

ಭಾರತ ಮತ್ತು ಟಿಮೋರ್-ಲೆಸ್ಟೆ ನಡುವಿನ ದ್ವಿಪಕ್ಷೀಯ ಸಂಬಂಧವು ಪ್ರಜಾಪ್ರಭುತ್ವ ಮತ್ತು ಬಹುತ್ವದ ಹಂಚಿಕೆಯ ಮೌಲ್ಯಗಳ ಆಧಾರವಾಗಿದೆ. 2002ರಲ್ಲಿ ಟಿಮೋರ್-ಲೆಸ್ಟೆಯೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದೆ.

***

 


(Release ID: 1994536) Visitor Counter : 122