ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav g20-india-2023

ಐಐಎಂಸಿಯಿಂದ ನಾಳೆ 55 ನೇ ಘಟಿಕೋತ್ಸವ


 ಘಟಿಕೋತ್ಸವ ಭಾಷಣ ಮಾಡಲಿರುವ ಭಾರತದ ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್  

Posted On: 09 JAN 2024 1:00PM by PIB Bengaluru

ದೆಹಲಿಯ ಪ್ರಗತಿ ಮೈದಾನದ ಭಾರತ್‌ ಮಂಟಪದಲ್ಲಿ 2024 ರ ಜನವರಿ 10 ರಂದು ಭಾರತೀಯ ಸಮೂಹ ಸಂಪರ್ಕ ಸಂಸ್ಥೆ[ಐಐಎಂಸಿ]ಯ 55 ಘಟಿಕೋತ್ಸವ ನಡೆಯಲಿದೆ. ಭಾರತದ ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್‌ ಕೋವಿಂದ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಈ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಐಐಎಂಸಿ ಅಧ್ಯಕ್ಷರಾದ ಶ್ರೀ ಆರ್.‌ ಜಗನ್ನಾಥನ್ ಮತ್ತು ಮಹಾ ಪ್ರಧಾನ ನಿರ್ದೇಶಕರಾದ ಡಾ. ಅನುಪಮ ಭಟ್ನಾಗರ್‌ ಅವರು ಭಾಗವಹಿಸಲಿದ್ದಾರೆ. 

ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ನವದೆಹಲಿ ಮತ್ತು ಐದು ಪ್ರಾದೇಶಿಕ ಕೇಂದ್ರಗಳಾದ ಧೆಂಕನಾಲ್‌, ಐಜ್ವಾಲ್‌, ಅಮರಾವತಿ, ಕೊಟ್ಟಾಯಂ ಮತ್ತು ಜಮ್ಮುವಿನ  ಐಐಎಂಸಿ ಬೋಧಕ ಸಿಬ್ಬಂದಿ ವರ್ಗ ಪಾಲ್ಗೊಳ್ಳಲಿದೆ. 

ಘಟಿಕೋತ್ಸವದಲ್ಲಿ 2021-22 ಮತ್ತು 2022-23 ಸಾಲಿನ ಬ್ಯಾಚ್ ನ ಐಐಎಂಸಿ ವಿದ್ಯಾರ್ಥಿಗಳಿಗೆ [ಐಐಎಂಸಿ ದೆಹಲಿ ಮತ್ತು ಎಲ್ಲಾ ಕೇಂದ್ರಗಳ] ಸ್ನಾತಕೋತ್ತರ ಡಿಪ್ಲಮೋ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ. ಹೆಚ್ಚುವರಿಯಾಗಿ ಎರಡು ಬ್ಯಾಚ್‌ ಗಳ 65 ವಿದ್ಯಾರ್ಥಿಗಳಿಗೆ ವಿವಿಧ ವರ್ಗಗಳಡಿ ಪದಕ ಪ್ರದಾನ ಮಾಡಲಾಗುತ್ತಿದೆ.  

ಐಐಎಂಸಿ ಭಾರತದ ಪ್ರಮುಖ ಸಂಸ್ಥೆಯಾಗಿದ್ದು, ಮಾಧ್ಯಮ ಮತ್ತು ಸಂಪರ್ಕ ವಲಯದಲ್ಲಿ ಶಿಕ್ಷಣ ನೀಡುತ್ತಿದೆ. ಈ ಸಂಸ್ಥೆಯನ್ನು 1965 ರಲ್ಲಿ ಸ್ಥಾಪಿಸಿದ್ದು, ಐಐಎಂಸಿ ಡಿಪ್ಲಮೋ ಕೋರ್ಸ್ ಗಳನ್ನು ಹಿಂದಿ ಪತ್ರಿಕೋದ್ಯಮ, ಇಂಗ್ಲೀಷ್‌ ಪತ್ರಿಕೋದ್ಯಮ, ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ, ರೇಡಿಯೋ ಮತ್ತು ಟೆಲಿವಿಷನ್‌, ಡಿಜಿಟಲ್‌ ಮಾಧ್ಯಮ, ಓಡಿಯಾ, ಮರಾಠಿ, ಮಲಯಾಳಂ ಮತ್ತು ಉರ್ದು ಭಾಷೆಯಲ್ಲಿ ಪತ್ರಿಕೋದ್ಯಮ ಶಿಕ್ಷಣ ನೀಡುತ್ತಿದೆ. 

******



(Release ID: 1994533) Visitor Counter : 102