ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಸಚಿವಾಲಯವು 2024-25ರ ಹಣಕಾಸು ವರ್ಷದಲ್ಲಿ ವಾಣಿಜ್ಯ / ಕ್ಯಾಪ್ಟಿವ್ ಗಣಿಗಳಿಂದ ಪ್ರತ್ಯೇಕವಾಗಿ 186.63 ಮಿಲಿಯನ್ ಟನ್ ಕಲ್ಲಿದ್ದಲನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ
Posted On:
08 JAN 2024 2:35PM by PIB Bengaluru
ಕಲ್ಲಿದ್ದಲು ಸಚಿವಾಲಯವು 2024-25ರ ಹಣಕಾಸು ವರ್ಷದಲ್ಲಿ ಕ್ಯಾಪ್ಟಿವ್ (ಕಂಪೆನಿಗಳ ಮಾಲಿಕತ್ವದಲ್ಲಿರುವ ಗಣಿಗಳು ಅಂದರೆ ಹೊರಗಿನ ಮಾರಾಟಕ್ಕಿಲ್ಲದ ಆದರೆ ಕಂಪೆನಿಯ ಮಾಲಿಕರ ಸಂಸ್ಥೆಯ ಉಪಯೋಗಕ್ಕೆ ಗಣಿಗಾರಿಕೆ ಮಾಡುವ ) / ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಪ್ರತ್ಯೇಕವಾಗಿ 186.63 ಮಿಲಿಯನ್ ಟನ್ (ಎಂಟಿ) ಕಲ್ಲಿದ್ದಲನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. 2025-26ರ ಹಣಕಾಸು ವರ್ಷದಲ್ಲಿ ಉತ್ಪಾದನೆಯನ್ನು 225.69 ಮಿಲಿಯನ್ ಟನ್ ಗಳಿಗೆ ಹೆಚ್ಚಿಸಲಾಗುವುದು ಮತ್ತು ಸಚಿವಾಲಯದ ಪ್ರಸ್ತುತ ಯೋಜನೆಗಳ ಪ್ರಕಾರ, ಅಂತಹ ಗಣಿಗಳಿಂದ ಉತ್ಪಾದನಾ ಗುರಿ 2029-30ರ ಹಣಕಾಸು ವರ್ಷದ ವೇಳೆಗೆ 383.56 ಮಿಲಿಯನ್ ಟನ್ ಗಳನ್ನು ತಲುಪಲಿದೆ.
ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ (2023ರ ಡಿಸೆಂಬರ್, 31) 50 ಕ್ಯಾಪ್ಟಿವ್ / ವಾಣಿಜ್ಯ ಕಲ್ಲಿದ್ದಲು ಗಣಿಗಳು ಉತ್ಪಾದನೆಯನ್ನು ಮಾಡುತ್ತಿವೆ ಮತ್ತು ಅವುಗಳಲ್ಲಿ 32 ಗಣಿಗಳನ್ನು ವಿದ್ಯುತ್ ವಲಯಕ್ಕೆ, 11 ಗಣಿಗಳನ್ನು ನಿಯಂತ್ರಿತವಲ್ಲದ ವಲಯಕ್ಕೆ ಮತ್ತು ಏಳು ಗಣಿಗಳನ್ನು ಕಲ್ಲಿದ್ದಲು ಮಾರಾಟಕ್ಕೆಂದು ನಿಗದಿಪಡಿಸಲಾಗಿದೆ. 2020 ರಲ್ಲಿ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಪ್ರಾರಂಭವಾದ ಮೂರೂವರೆ ವರ್ಷಗಳಲ್ಲಿ, 14.87 ಮಿಲಿಯನ್ ಟನ್ (ಎಂಟಿ) ಸಂಚಿತ ಗರಿಷ್ಠ ರೇಟಿಂಗ್ ಸಾಮರ್ಥ್ಯ (ಪಿಆರ್ಸಿ) ಹೊಂದಿರುವ ಆರು ಗಣಿಗಳು ಈಗಾಗಲೇ ಉತ್ಪಾದನೆಯನ್ನು ಪ್ರಾರಂಭಿಸಿವೆ.
2023ರ ಡಿಸೆಂಬರ್ ತಿಂಗಳಲ್ಲಿ, ಕ್ಯಾಪ್ಟಿವ್ ಮತ್ತು ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಒಟ್ಟು ಕಲ್ಲಿದ್ದಲು ಉತ್ಪಾದನೆ 14.04 ಮೆಟ್ರಿಕ್ ಟನ್ ಆಗಿತ್ತು, ಇದು ಹಿಂದಿನ ವರ್ಷದ ಇದೇ ತಿಂಗಳಲ್ಲಿ ಮಾಡಲಾದ 10.14 ಮೆಟ್ರಿಕ್ ಟನ್ ಉತ್ಪಾದನೆಗೆ ಹೋಲಿಸಿದಾಗ 38% ಹೆಚ್ಚಾಗಿದೆ.
2023 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರ ಅವಧಿಯಲ್ಲಿ ಕ್ಯಾಪ್ಟಿವ್ ಮತ್ತು ವಾಣಿಜ್ಯ ಕಲ್ಲಿದ್ದಲು ನಿಕ್ಷೇಪಗಳಿಂದ ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. 2023 ರ ಏಪ್ರಿಲ್ 1 ರಿಂದ 2023 ರ ಡಿಸೆಂಬರ್ 31 ರ ನಡುವಿನ ಅವಧಿಯಲ್ಲಿ ಕ್ಯಾಪ್ಟಿವ್ ಮತ್ತು ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಒಟ್ಟು ಕಲ್ಲಿದ್ದಲು ಉತ್ಪಾದನೆ 98 ಮೆಟ್ರಿಕ್ ಟನ್ ಆಗಿತ್ತು.
****
(Release ID: 1994216)
Visitor Counter : 87