ಉಪರಾಷ್ಟ್ರಪತಿಗಳ ಕಾರ್ಯಾಲಯ
ಜನವರಿ 6ರಂದು ಹಿಮಾಚಲ ಪ್ರದೇಶಕ್ಕೆ ಭೇಟಿನೀಡಲಿರುವ ಉಪರಾಷ್ಟ್ರಪತಿಯವರು
ಹಮೀರ್ ಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿರುವ ಉಪರಾಷ್ಟ್ರಪತಿ
'ಏಕ್ ಸೆ ಶ್ರೇಷ್ಠ'ದ 500ನೇ ಕೇಂದ್ರವನ್ನು ಉದ್ಘಾಟಿಸಲಿರುವ ಉಪರಾಷ್ಟ್ರಪತಿ
Posted On:
04 JAN 2024 9:34AM by PIB Bengaluru
ಭಾರತದ ಉಪರಾಷ್ಟ್ರಪತಿಯವರಾದ ಶ್ರೀ ಜಗದೀಪ್ ಧನಕರ್ ಅವರು 2024ರ ಜನವರಿ 06ರಂದು ಹಿಮಾಚಲ ಪ್ರದೇಶದ ಹಮೀರ್ ಪುರಕ್ಕೆ ಭೇಟಿ ನೀಡಲಿದ್ದಾರೆ.
ತಮ್ಮ ಒಂದು ದಿನದ ಪ್ರವಾಸದಲ್ಲಿ, ಉಪರಾಷ್ಟ್ರಪತಿಯವರು ಹಮೀರ್ ಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಎನ್ಐಟಿ) ಭೇಟಿ ನೀಡಲಿದ್ದು, ಅವರು 'ವಿಕಸಿತ Bharat@2047ರಲ್ಲಿ ಯುವಕರ ಪಾತ್ರ' ಎಂಬ ಕುರಿತಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಶಿಕ್ಷಣವನ್ನು ಹೆಚ್ಚಿಸುವಿಕೆಯ ಪ್ರಯತ್ನವಾದ 'ಏಕ್ ಸೆ ಶ್ರೇಷ್ಠ'ದ 500ನೇ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಧನಕರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
***
(Release ID: 1993059)
Visitor Counter : 104