ಕಲ್ಲಿದ್ದಲು ಸಚಿವಾಲಯ
azadi ka amrit mahotsav

​​​​​​​ಕಲ್ಲಿದ್ದಲು ಉತ್ಪಾದನೆಯು 10.75% ಬೆಳವಣಿಗೆಯೊಂದಿಗೆ, 2023 ರ ಡಿಸೆಂಬರಿನಲ್ಲಿ 92.87 ಮಿಲಿಯನ್ ಟನ್ ಗೆ  ತಲುಪಿದೆ


2023-24ರ ಹಣಕಾಸು ವರ್ಷದಲ್ಲಿ ಡಿಸೆಂಬರ ವರೆಗಿನ ಸಂಚಿತ ಉತ್ಪಾದನೆ 684.31 ಮೆಟ್ರಿಕ್ ಟನ್ ಆಗಿದ್ದು, 12.47% ಬೆಳವಣಿಗೆಯನ್ನು ದಾಖಲಿಸಿದೆ

Posted On: 02 JAN 2024 12:00PM by PIB Bengaluru

ಕಲ್ಲಿದ್ದಲು ಸಚಿವಾಲಯವು 2023ರ ಡಿಸೆಂಬರ ನಲ್ಲಿ  ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯಲ್ಲಿ 92.87 ಮಿಲಿಯನ್ ಟನ್ (ಎಂಟಿ) ಕಲ್ಲಿದ್ದಲನ್ನು ಉತ್ಪಾದಿಸಿ  ಗಣನೀಯ ಹೆಚ್ಚಳವನ್ನು  ಸಾಧಿಸಿದೆ, ಹಿಂದಿನ ವರ್ಷದ 83.86 ಮೆಟ್ರಿಕ್ ಟನ್ ಉತ್ಪಾದನೆಗೆ ಹೋಲಿಸಿದಾಗ ಈ ವರ್ಷದ ಪ್ರಮಾಣ ಹೆಚ್ಚಾಗಿದ್ದು, ಇದು 10.75% ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್)ನ  ಉತ್ಪಾದನೆಯು 2023 ರ ಡಿಸೆಂಬರ್ ತಿಂಗಳಲ್ಲಿ 71.86 ಮೆಟ್ರಿಕ್ ಟನ್ ಗೆ  ಏರಿದೆ, ಇದು 2022 ರ ಡಿಸೆಂಬರಿನಲ್ಲಿ ಉತ್ಪಾದನೆಯಾದ  66.37 ಮೆಟ್ರಿಕ್ ಟನ್ ಗೆ  ಹೋಲಿಸಿದರೆ 8.27% ಬೆಳವಣಿಗೆ ದಾಖಲಿಸಿದೆ. ಸಂಚಿತ ಕಲ್ಲಿದ್ದಲು ಉತ್ಪಾದನೆ (2023 ರ ಡಿಸೆಂಬರ ವರೆಗೆ) 2023-24ರ ಹಣಕಾಸು ವರ್ಷದಲ್ಲಿ 684.31 ಮೆಟ್ರಿಕ್ ಟನ್ನಿಗೆ  ಏರಿದೆ.  ಹಿಂದಿನ ಹಣಕಾಸು ವರ್ಷ 2022-23 ರ ಇದೇ ಅವಧಿಯಲ್ಲಿ ಉತ್ಪಾದನೆಯಾದ 608.34 ಮೆಟ್ರಿಕ್ ಟನ್ನಿಗೆ ಹೋಲಿಸಿದರೆ ಬೆಳವಣಿಗೆ ಪ್ರಮಾಣ  12.47  %.ರಷ್ಟು

2023 ರ ಡಿಸೆಂಬರ ನಲ್ಲಿ  ಕಲ್ಲಿದ್ದಲು ರವಾನೆಯು 86.23 ಮೆಟ್ರಿಕ್ ಟನ್ ಗೆ ತಲುಪಿದ್ದು, 2022 ರ ಡಿಸೆಂಬರನಲ್ಲಿ ದಾಖಲಾದ 79.58 ಮೆಟ್ರಿಕ್  ಟನ್ನಿಗೆ  ಹೋಲಿಸಿದರೆ ಇದು 8.36% ಬೆಳವಣಿಗೆಯ ದರದೊಂದಿಗೆ ಗಮನಾರ್ಹ ಪ್ರಗತಿಯನ್ನು ಪ್ರದರ್ಶಿಸಿದೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ರವಾನೆಯು 2023 ರ ಡಿಸೆಂಬರ್ ನಲ್ಲಿ  66.10 ಮೆಟ್ರಿಕ್ ಟನ್ ಆಗಿದ್ದು, 2022 ರ ಡಿಸೆಂಬರ್ ನಲ್ಲಿ ರವಾನಿಸಲಾದ  62.66 ಮೆಟ್ರಿಕ್ ಟನ್ನಿಗೆ  ಹೋಲಿಸಿದರೆ, ಇದು 5.49% ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಸಂಚಿತ ಕಲ್ಲಿದ್ದಲು ರವಾನೆ (2023 ರ ಡಿಸೆಂಬರ್ ವರೆಗೆ) 2023-24ರ ಹಣಕಾಸು ವರ್ಷದಲ್ಲಿ 709.80 ಮೆಟ್ರಿಕ್ ಟನ್ ಆಗಿದ್ದು,  ಗಮನಾರ್ಹ ಏರಿಕೆ ಕಂಡಿದೆ, ಇದು 22-23ರ ಹಣಕಾಸು ವರ್ಷದ ಇದೇ ಅವಧಿಯ 637.40 ಮೆಟ್ರಿಕ್ ಟನ್ ಗೆ ಹೋಲಿಸಿದರೆ, 11.36% ಬೆಳವಣಿಗೆಯನ್ನು ದಾಖಲಿಸಿದೆ.

ಕಲ್ಲಿದ್ದಲು ವಲಯವು ಉತ್ಪಾದನೆಯ ಅಭೂತಪೂರ್ವ ಏರಿಕೆಗೆ ಸಾಕ್ಷಿಯಾಗಿದೆ, ಉತ್ಪಾದನೆ, ರವಾನೆ ಮತ್ತು ದಾಸ್ತಾನು ಮಟ್ಟಗಳು ಗಮನಾರ್ಹ ಎತ್ತರಕ್ಕೆ ಏರಿವೆ. ಈ ಬೆಳವಣಿಗೆಗೆ ಕಲ್ಲಿದ್ದಲು ಕ್ಷೇತ್ರದ ಪಿಎಸ್ ಯುಗಳು  ಕಾರಣವಾಗಿದ್ದು, ಈ ಪ್ರಗತಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದು ಕಲ್ಲಿದ್ದಲು ಪೂರೈಕೆ ಸರಪಳಿಯ ಬದ್ಧತೆಯನ್ನು, ಸಮರ್ಪಣಾಭಾವವನ್ನು  ಒತ್ತಿಹೇಳುತ್ತದೆ, ದೇಶಾದ್ಯಂತ ಕಲ್ಲಿದ್ದಲಿನ ತಡೆರಹಿತ ವಿತರಣೆಯನ್ನು ಖಚಿತಪಡಿಸುತ್ತದೆ. ಕಲ್ಲಿದ್ದಲು ಸಚಿವಾಲಯವು ಸ್ಥಿರವಾದ ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆಯನ್ನು ನಿರ್ವಹಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ, ವಿಶ್ವಾಸಾರ್ಹ ಮತ್ತು ಪುನಶ್ಚೇತನಯುಕ್ತ ಇಂಧನ ಕ್ಷೇತ್ರಕ್ಕೆ ನಿರಂತರ ಪೂರೈಕೆಯನ್ನು ಖಚಿತಪಡಿಸುತ್ತದೆ

****


(Release ID: 1992386) Visitor Counter : 85