ಪ್ರಧಾನ ಮಂತ್ರಿಯವರ ಕಛೇರಿ

ಡಿಸೆಂಬರ್ 30 ರಂದು ಪ್ರಧಾನಿ ಅಯೋಧ್ಯೆಗೆ ಭೇಟಿ


ಅಯೋಧ್ಯೆಯಲ್ಲಿ ನಾಗರಿಕ ಸೌಲಭ್ಯಗಳ  ನವೀಕರಣ ಮತ್ತು ವಿಶ್ವದರ್ಜೆಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು 11,100 ಕೋಟಿ ರೂ. ಗಿಂತ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

ಶ್ರೀರಾಮ ಮಂದಿರದ ದೇವಾಲಯದ ವಾಸ್ತುಶಿಲ್ಪ ಚಿತ್ರಿಸುವ  ಟರ್ಮಿನಲ್ ಕಟ್ಟಡದ ಮುಂಭಾಗ, ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ

ಅಯೋಧ್ಯೆ ಧಾಮ್ ಜಂಕ್ಷನ್ ರೈಲು ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ

ಪ್ರಧಾನಿ ಅವರು 2 ಹೊಸ ಅಮೃತ್ ಭಾರತ್ ರೈಲುಗಳಿಗೆ ಹಸಿರುನಿಶಾನೆ ತೋರಲಿದ್ದು, ಇದರೊಂದಿಗೆ ಅಮೃತ್ ಭಾರತ್ ರೈಲುಗಳು ದೇಶಾದ್ಯಂತ ಕಾರ್ಯಾಚರಣೆ ಆರಂಭಿಸಲಿವೆ

6 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಚಾಲನೆ

ಮುಂಬರುವ ಶ್ರೀರಾಮ ಮಂದಿರಕ್ಕೆ ಪ್ರವೇಶ  ಹೆಚ್ಚಿಸಲು, ಅಯೋಧ್ಯೆಯಲ್ಲಿ 4 ಹೊಸ ರಸ್ತೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ

2180 ಕೋಟಿ ರೂಯಗಿಂತ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಅಯೋಧ್ಯೆ ಗ್ರೀನ್‌ಫೀಲ್ಡ್ ಟೌನ್‌ಶಿಪ್‌ಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

ಉತ್ತರ ಪ್ರದೇಶದಾದ್ಯಂತ 4,600 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಇತರ ಮಹತ್ವದ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಿ

Posted On: 28 DEC 2023 4:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಡಿಸೆಂಬರ್ 30ರಂದು ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.

ಬೆಳಿಗ್ಗೆ 11.15ರ ಸುಮಾರಿಗೆ ಪ್ರಧಾನ ಮಂತ್ರಿ ಅವರು ಪುನರಾಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಹೊಸ ಅಮೃತ್ ಭಾರತ್ ರೈಲುಗಳು ಮತ್ತು ವಂದೇ ಭಾರತ್ ರೈಲುಗಳಿಗೆ ಹಸಿರುನಿಶಾನೆ ತೋರಲಿದ್ದಾರೆ. ಜತೆಗೆ ಅವರು ಇನ್ನೂ ಹಲವಾರು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಮಧ್ಯಾಹ್ನ 12.15ರ ಸುಮಾರಿಗೆ ಪ್ರಧಾನಿ ಅವರು ಹೊಸದಾಗಿ ನಿರ್ಮಿಸಲಾದ ಅಯೋಧ್ಯೆ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರಧಾನಿ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 15,700 ಕೋಟಿ ರೂ.ಗಿಂತ ಹೆಚ್ಚಿನ ಬಹು ಅಭಿವೃದ್ಧಿ ಯೋಜನೆಗಳ ಅಲ್ಲಿ ಅವರು ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಇವುಗಳಲ್ಲಿ ಅಯೋಧ್ಯೆ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗಾಗಿ ಸುಮಾರು 11,100 ಕೋಟಿ ರೂಪಾಯಿ. ಮೊತ್ತದ ಯೋಜನೆಗಳು ಮತ್ತು ಉತ್ತರ ಪ್ರದೇಶದಾದ್ಯಂತ ಇತರ ಯೋಜನೆಗಳಿಗೆ ಸಂಬಂಧಿಸಿದ ಸುಮಾರು 4,600 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಸೇರಿವೆ.

ಅಯೋಧ್ಯೆಯಲ್ಲಿ ಆಧುನಿಕ ವಿಶ್ವ ದರ್ಜೆಯ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು, ಸಂಪರ್ಕ ಸುಧಾರಿಸುವುದು ಮತ್ತು ನಗರದ ಶ್ರೀಮಂತ ಇತಿಹಾಸ ಮತ್ತು ಪರಂಪರೆಗೆ ಅನುಗುಣವಾಗಿ ಅದರ ನಾಗರಿಕ ಸೌಲಭ್ಯಗಳನ್ನು ನವೀಕರಿಸುವುದು ಪ್ರಧಾನ ಮಂತ್ರಿ ಅವರ ದೂರದೃಷ್ಟಿಯಾಗಿದೆ. ಈ ದೂರದೃಷ್ಟಿಗೆ ಪೂರಕವಾಗಿ, ನಗರದಲ್ಲಿ ಹೊಸ ವಿಮಾನ ನಿಲ್ದಾಣ, ಹೊಸ ಪುನರಾಭಿವೃದ್ಧಿ ರೈಲ್ವೆ ನಿಲ್ದಾಣ, ಹೊಸ ನಗರ ರಸ್ತೆಗಳು ಮತ್ತು ಇತರ ನಾಗರಿಕ ಮೂಲಸೌಕರ್ಯಗಳನ್ನು ಉದ್ಘಾಟಿಸಲಾಗುತ್ತಿದೆ. ಇದಲ್ಲದೆ, ಅಯೋಧ್ಯೆ ಮತ್ತು ಸುತ್ತಮುತ್ತಲ ನಾಗರಿಕ ಸೌಲಭ್ಯಗಳ ಸೌಂದರ್ಯೀಕರಣ ಮತ್ತು ನವೀಕರಣಕ್ಕೆ ಕೊಡುಗೆ ನೀಡುವ ಹಲವಾರು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅಯೋಧ್ಯೆ ವಿಮಾನ ನಿಲ್ದಾಣ

ಅತ್ಯಾಧುನಿಕ ವಿಮಾನ ನಿಲ್ದಾಣದ 1ನೇ ಹಂತವನ್ನು 1,450 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು 6,500 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸುಸಜ್ಜಿತವಾಗಿದೆ. ಟರ್ಮಿನಲ್ ಕಟ್ಟಡದ ಮುಂಭಾಗವು ಅಯೋಧ್ಯೆ ಶ್ರೀ ರಾಮ ಮಂದಿರದ ದೇವಾಲಯದ ವಾಸ್ತುಶಿಲ್ಪವನ್ನು ಚಿತ್ರಿಸುತ್ತದೆ.  ಟರ್ಮಿನಲ್ ಕಟ್ಟಡದ ಒಳಭಾಗದಲ್ಲಿ ಭಗವಾನ್ ಶ್ರೀರಾಮನ ಜೀವನ ಚಿತ್ರಿಸುವ ಸ್ಥಳೀಯ ಕಲೆ, ವರ್ಣಚಿತ್ರಗಳು ಮತ್ತು ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ. ಅಯೋಧ್ಯೆ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಎಲ್ಇಡಿ ಲೈಟಿಂಗ್, ಮಳೆ ನೀರು ಕೊಯ್ಲು, ಕಾರಂಜಿಗಳು, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ಸೌರ ವಿದ್ಯುತ್ ಸ್ಥಾವರ ಮತ್ತು ಇತರ ಒಳಗೊಂಡ ಹಲವು ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಗೃಹ - 5 ಸ್ಟಾರ್ ರೇಟಿಂಗ್‌ ಗೆ ಅನುಗುಣವಾಗಿ ಈ ವೈಶಿಷ್ಟ್ಯಗಳನ್ನು ರೂಪಿಸಲಾಗಿದೆ. ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ಸಂಪರ್ಕ ಸುಧಾರಿಸುತ್ತದೆ. ಇದು ಪ್ರವಾಸೋದ್ಯಮ, ವ್ಯಾಪಾರ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶಗಳಲ್ಲಿ ಉತ್ತೇಜನಕ್ಕೆ ಕಾರಣವಾಗುತ್ತದೆ.

ಅಯೋಧ್ಯಾ ಧಾಮ್ ರೈಲು ನಿಲ್ದಾಣ

ಮರುಅಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣದ ಹಂತ I - ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಎಂದು ಕರೆಯಲ್ಪಡುತ್ತದೆ. ಇದನ್ನು 240 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 3 ಅಂತಸ್ತಿನ ಆಧುನಿಕ ರೈಲು ನಿಲ್ದಾಣದ ಕಟ್ಟಡವು ಲಿಫ್ಟ್ ಗಳು, ಎಸ್ಕಲೇಟರ್‌ಗಳು, ಫುಡ್ ಪ್ಲಾಜಾಗಳು, ಪೂಜಾ ಅಗತ್ಯಗಳಿಗಾಗಿ ಅಂಗಡಿಗಳು, ಕ್ಲಾಕ್ ರೂಮ್‌ಗಳು, ಮಕ್ಕಳ ಆರೈಕೆ ಕೊಠಡಿಗಳು, ಕಾಯುವ ಹಾಲ್‌ಗಳಂತಹ ಎಲ್ಲಾ ಆಧುನಿಕ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿದೆ. ನಿಲ್ದಾಣದ ಕಟ್ಟಡವು 'ಎಲ್ಲರಿಗೂ ಪ್ರವೇಶಿಸಬಹುದಾಗಿದೆ' ಮತ್ತು 'ಐಜಿಬಿಸಿ ಪ್ರಮಾಣೀಕೃತ ಹಸಿರು ನಿಲ್ದಾಣ ಕಟ್ಟಡ'ವಾಗಿರುತ್ತದೆ.

ಅಮೃತ್ ಭಾರತ್ ರೈಲುಗಳು, ವಂದೇ ಭಾರತ್ ರೈಲುಗಳು ಮತ್ತು ಇತರ ರೈಲು ಯೋಜನೆಗಳು

ಅಯೋಧ್ಯಾ ಧಾಮ್ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮವು ದೇಶದ ಹೊಸ ವರ್ಗದ ಸೂಪರ್‌ಫಾಸ್ಟ್ ಪ್ಯಾಸೆಂಜರ್ ರೈಲುಗಳಾದ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ಹಸಿರುನಿಶಾನೆತೋರಲಿದ್ದಾರೆ. ಅಮೃತ್ ಭಾರತ್ ರೈಲು ಹವಾನಿಯಂತ್ರಿತವಲ್ಲದ ಕೋಚ್‌ಗಳನ್ನು ಹೊಂದಿರುವ ಎಲ್ ಎಚ್ ಬಿ ಪುಶ್ ಪುಲ್ ರೈಲು ಆಗಿದ. ಉತ್ತಮ ವೇಗವರ್ಧನೆಗಾಗಿ ಈ ರೈಲು ಎರಡೂ ತುದಿಗಳಲ್ಲಿ ಲೊಕೊಗಳನ್ನು ಹೊಂದಿದೆ. ಇದು ರೈಲು ಪ್ರಯಾಣಿಕರಿಗೆ ಸುಂದರವಾದ ಮತ್ತು ಆಕರ್ಷಕ ವಿನ್ಯಾಸದ ಆಸನಗಳು, ಉತ್ತಮ ಲಗೇಜ್ ರಾಕ್, ಸೂಕ್ತವಾದ ಮೊಬೈಲ್ ಹೋಲ್ಡರ್ ಹೊಂದಿರುವ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಲ್‌ಇಡಿ ದೀಪಗಳು, ಸಿಸಿಟಿವಿ, ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮುಂತಾದ ಸುಧಾರಿತ ಸೌಲಭ್ಯಗಳನ್ನು ಒದಗಿಸುತ್ತದೆ. ಪ್ರಧಾನಮಂತ್ರಿಯವರು ಆರು ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನ ಮಂತ್ರಿ ಅವರು 2 ಹೊಸ ಅಮೃತ್ ಭಾರತ್ ರೈಲುಗಳಾದ ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್ ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್ ಪ್ರೆಸ್‌ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನ ಮಂತ್ರಿ ಅವರು 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇವುಗಳಲ್ಲಿ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ಅಮೃತಸರ-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್,  ಕೊಯಮತ್ತೂರು-ಬೆಂಗಳೂರು ಕ್ಯಾಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್, ಮಂಗಳೂರು-ಮಡ್ಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್, ಜಲ್ನಾ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್‌ಪ್ರೆಸ್.

ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯ ಬಲಪಡಿಸಲು 2,300 ಕೋಟಿ ರೂ. ಮೌಲ್ಯದ 3 ರೈಲ್ವೆ ಯೋಜನೆಗಳನ್ನು ಪ್ರಧಾನ ಮಂತ್ರಿ ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ. ಯೋಜನೆಗಳು ರೂಮಾ ಚಕೇರಿ-ಚಾಂದೇರಿ ಮೂರನೇ ಸಾಲಿನ ಯೋಜನೆಯನ್ನು ಒಳಗೊಂಡಿವೆ. ಜೌನ್‌ಪುರ್-ತುಳಸಿ ನಗರ, ಅಕ್ಬರ್‌ಪುರ್-ಅಯೋಧ್ಯೆ, ಸೊಹವಾಲ್-ಪತ್ರಾಂಗ ಮತ್ತು ಜೌನ್‌ಪುರ-ಅಯೋಧ್ಯೆ-ಬಾರಾಬಂಕಿ ದ್ವಿಗುಣಗೊಳಿಸುವ ಯೋಜನೆಯ ಸಫ್ದರ್‌ಗಂಜ್-ರಸೌಲಿ ವಿಭಾಗಗಳು ಮತ್ತು ಮಲ್ಹೌರ್-ದಲಿಗಂಜ್ ರೈಲ್ವೆ ವಿಭಾಗದ ಡಬ್ಲಿಂಗ್ ಮತ್ತು ವಿದ್ಯುದೀಕರಣ ಯೋಜನೆ ಸೇರಿವೆ.

ಅಯೋಧ್ಯೆಯಲ್ಲಿ ಸುಧಾರಿತ ನಾಗರಿಕ ಮೂಲಸೌಕರ್ಯ

ಶ್ರೀರಾಮ ಮಂದಿರಕ್ಕೆ ಪ್ರವೇಶ ಹೆಚ್ಚಿಸಲು ಪ್ರಧಾನ ಮಂತ್ರಿ ಅವರು ಅಯೋಧ್ಯೆಯಲ್ಲಿ ಹೊಸದಾಗಿ ಮರುಅಭಿವೃದ್ಧಿಪಡಿಸಿದ, ವಿಸ್ತರಿಸಿದ ಮತ್ತು ಸುಂದರಗೊಳಿಸಿದ 4 ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ – ರಾಮಪಥ್, ಭಕ್ತಿಪಥ್, ಧರ್ಮಪಥ್ ಮತ್ತು ಶ್ರೀ ರಾಮ ಜನ್ಮಭೂಮಿ ಪಥ ಇವಾಗಿವೆ.

ನಾಗರಿಕ ಮೂಲಸೌಕರ್ಯ ಬಲಪಡಿಸುವ, ಅಯೋಧ್ಯೆ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳನ್ನು ಸುಂದರಗೊಳಿಸುವ ಹಲವಾರು ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಉದ್ಘಾಟನಾ ಯೋಜನೆಗಳಲ್ಲಿ ರಾಜರ್ಷಿ ದಶರತ್ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜು, ಅಯೋಧ್ಯೆ-ಸುಲ್ತಾನ್‌ಪುರ ರಸ್ತೆ-ವಿಮಾನ ನಿಲ್ದಾಣ ಸಂಪರ್ಕಿಸುವ ಚತುಷ್ಪಥ ರಸ್ತೆ, ಎನ್ಎಚ್-27 ಬೈಪಾಸ್ ಮಹೋಬ್ರಾ ಬಜಾರ್ ಮೂಲಕ ತೇಧಿ ಬಜಾರ್ ಶ್ರೀರಾಮ ಜನ್ಮಭೂಮಿಯವರೆಗೆ 4 ಪಥದ ರಸ್ತೆ,  ನಗರದಾದ್ಯಂತ ಹಲವಾರು ಸುಂದರ ರಸ್ತೆಗಳು ಮತ್ತು ಅಯೋಧ್ಯೆ ಬೈಪಾಸ್,  ಎನ್ಎಚ್-330ಎ ನಲ್ಲಿ ಜಗದೀಶ್‌ಪುರ-ಫೈಜಾಬಾದ್ ವಿಭಾಗ, ಮಹೋಲಿ-ಬರಗಾಂವ್-ದಿಯೋಧಿ ರಸ್ತೆ ಮತ್ತು ಜಸರ್‌ಪುರ-ಭೌಪುರ್-ಗಂಗಾರಾಮನ್-ಸುರೇಶನಗರ ರಸ್ತೆಗಳ ಅಗಲೀಕರಣ ಮತ್ತು ಬಲವರ್ಧನೆ, ಪಂಚಕೋಸಿ ಪರಿಕ್ರಮ ಮಾರ್ಗದಲ್ಲಿ ಬಡಿ ಬುವಾ ರೈಲ್ವೇ ಕ್ರಾಸಿಂಗ್‌ನಲ್ಲಿ ROB, ಪಿಖ್ರೌಲಿ ಗ್ರಾಮದಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ ಮತ್ತು ಡಾ. ಬ್ರಜಕಿಶೋರ್ ಹೋಮಿಯೋಪತಿಕ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೊಸ ಕಟ್ಟಡಗಳು ಮತ್ತು ತರಗತಿ ಕೊಠಡಿಗಳು ಸೇರಿವೆ. ಪ್ರಧಾನ ಮಂತ್ರಿ ಅವರು ಮುಖ್ಯಮಂತ್ರಿ ನಗರ ಸೃಜನ್ ಯೋಜನೆ ಕಾಮಗಾರಿ ಮತ್ತು 5 ಪಾರ್ಕಿಂಗ್ ಮತ್ತು ವಾಣಿಜ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

ಅಯೋಧ್ಯೆಯಲ್ಲಿ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ

ಪ್ರಧಾನ ಮಂತ್ರಿ ಅವರು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಇದು ಅಯೋಧ್ಯೆಯ ನಾಗರಿಕ ಸೌಲಭ್ಯಗಳ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ ಮತ್ತು ನಗರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುತ್ತದೆ. ಇವುಗಳಲ್ಲಿ ಅಯೋಧ್ಯೆಯಲ್ಲಿ 4 ಐತಿಹಾಸಿಕ ಪ್ರವೇಶ ದ್ವಾರಗಳ ಸಂರಕ್ಷಣೆ ಮತ್ತು ಸುಂದರೀಕರಣ, ಗುಪ್ತರ್ ಘಾಟ್ ಮತ್ತು ರಾಜ್‌ಘಾಟ್ ನಡುವೆ ಹೊಸ ಕಾಂಕ್ರೀಟ್ ಘಾಟ್‌ಗಳು ಮತ್ತು ಪೂರ್ವ ನಿರ್ಮಿತ ಘಾಟ್‌ಗಳ ಪುನರ್ವಸತಿ, ನಯಾ ಘಾಟ್‌ನಿಂದ ಲಕ್ಷ್ಮಣ ಘಾಟ್‌ವರೆಗಿನ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಮತ್ತು ಸೌಂದರ್ಯೀಕರಣ, ರಾಮ್ ಕಿ ಪೈಡಿಯಲ್ಲಿ ದೀಪೋತ್ಸವ ಮತ್ತು ಇತರ ಮೇಳಗಳಿಗೆ ಸಂದರ್ಶಕರ ಗ್ಯಾಲರಿ ನಿರ್ಮಾಣ, ರಾಮ್ ಕಿ ಪೈಡಿಯಿಂದ ರಾಜ್ ಘಾಟ್ ಮತ್ತು ರಾಜ್ ಘಾಟ್ ನಿಂದ ರಾಮ ಮಂದಿರದವರೆಗೆ ಯಾತ್ರಿಕರ ಮಾರ್ಗ ಬಲಪಡಿಸುವುದು ಮತ್ತು ನವೀಕರಿಸುವ ಯೋಜನೆ ಸೇರಿದೆ.

ಪ್ರಧಾನ ಮಂತ್ರಿ ಅವರು ಅಯೋಧ್ಯೆಯಲ್ಲಿ 2,180 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಗ್ರೀನ್‌ಫೀಲ್ಡ್ ಟೌನ್‌ಶಿಪ್ ಮತ್ತು ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ವಶಿಷ್ಠ ಕುಂಜ್ ವಸತಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನ ಮಂತ್ರಿ ಅವರು ಎನ್ಎಚ್-28 (ಹೊಸ ಎನ್ಎಚ್-27) ಲಕ್ನೋ-ಅಯೋಧ್ಯೆ ವಿಭಾಗದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಎನ್ಎಚ್-28 (ಹೊಸ ಎನ್ಎಚ್-27) ಅಸ್ತಿತ್ವದಲ್ಲಿರುವ ಅಯೋಧ್ಯೆ ಬೈಪಾಸ್ ಬಲಪಡಿಸುವುದು ಮತ್ತು ಮಾರ್ಪಡಿಸುವುದು, ಅಯೋಧ್ಯೆಯಲ್ಲಿ CIPET ಕೇಂದ್ರದ ಸ್ಥಾಪನೆ ಮತ್ತು ಮುನ್ಸಿಪಲ್ ಕಾರ್ಪೊರೇಶನ್ ಅಯೋಧ್ಯೆ ಮತ್ತು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯ ನಿರ್ಮಾಣ ಕಾರ್ಯ.

ಉತ್ತರ ಪ್ರದೇಶದಾದ್ಯಂತ ಇತರ ಯೋಜನೆಗಳು

ಸಾರ್ವಜನಿಕ ಕಾರ್ಯಕ್ರಮ ಸಂದರ್ಭದಲ್ಲಿ, ಉತ್ತರ ಪ್ರದೇಶದಾದ್ಯಂತ ಇತರ ಮಹತ್ವದ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇವುಗಳಲ್ಲಿ ಗೋಸೈನ್ ಕಿ ಬಜಾರ್ ಬೈಪಾಸ್-ವಾರಾಣಸಿ(ಘಘ್ರಾ ಸೇತುವೆ-ವಾರಣಾಸಿ) (ಎನ್ಎಚ್-233)ಯ  4-ಲೇನ್ ಅಗಲೀಕರಣ, ಎನ್ಎಚ್-730ರ ಲಖಿಂಪುರ ವಿಭಾಗಕ್ಕೆ ಖುತಾರ್ ಅನ್ನು ಬಲಪಡಿಸುವುದು ಮತ್ತು ನವೀಕರಿಸುವುದು, ಅಮೇಥಿ ಜಿಲ್ಲೆಯ ತ್ರಿಶುಂಡಿಯಲ್ಲಿ ಎಲ್ಪಿಜಿ ಸ್ಥಾವರದ ಸಾಮರ್ಥ್ಯ ಹೆಚ್ಚಳ, ಪಂಖಾದಲ್ಲಿ 30 ಎಂಎಲ್ಡಿ ಮತ್ತು ಜಜ್ಮೌ ಕಾನ್ಪುರದಲ್ಲಿ 130 ಎಂಎಲ್ಡಿ ವಿಸ್ತೀರ್ಣದ ಒಳಚರಂಡಿ ಸಂಸ್ಕರಣಾ ಘಟಕ, ಉನ್ನಾವೊ ಜಿಲ್ಲೆಯಲ್ಲಿ ಚರಂಡಿಗಳು ಮತ್ತು ಒಳಚರಂಡಿ ಸಂಸ್ಕರಣಾ ಕಾರ್ಯಗಳ ತಡೆ ಮತ್ತು ತಿರುವು ಮತ್ತು ಕಾನ್ಪುರದ ಜಜ್ಮೌನಲ್ಲಿರುವ ಟ್ಯಾನರಿ ಕ್ಲಸ್ಟರ್‌ಗಾಗಿ ಸಿಇಟಿಪಿ ಯೋಜನೆಗಳು ಸೇರಿವೆ.

***

 



(Release ID: 1991487) Visitor Counter : 86