ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

​​​​​​​ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ವರ್ಷಾಂತ್ಯದ ಪರಾಮರ್ಶೆ


ಎನ್ಎಂಡಿಎಫ್ಸಿ 22.5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 8,300 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ವಿತರಿಸಿದೆ, ಅದರಲ್ಲಿ 85% ಕ್ಕೂ ಹೆಚ್ಚು ಫಲಾನುಭವಿಗಳು ಮಹಿಳೆಯರು

2022-23ರಲ್ಲಿ, ಪರಿಷ್ಕೃತ ಪಿಎಂಜೆವಿಕೆಯನ್ನು 15 ನೇ ಹಣಕಾಸು ಆಯೋಗದ ವರ್ತುಲದಲ್ಲಿ ಮುಂದುವರಿಸಲು ಸರ್ಕಾರ ಅನುಮೋದಿಸಿತು, ಅಂದರೆ 2022-23 ರಿಂದ 2025-26 ರ ಹಣಕಾಸು ವರ್ಷದ ಅವಧಿವರೆಗೆ  ಮುಂದುವರಿಕೆ

2023 ರಲ್ಲಿ ಪಿಎಂವಿಕಾಸ್ ಯೋಜನೆಯಲ್ಲಿ ಹಲವಾರು ಚಟುವಟಿಕೆಗಳನ್ನು  ಕೈಗೊಳ್ಳಲಾಗಿದೆ; ಸಚಿವಾಲಯವು 9,63,448 ಫಲಾನುಭವಿಗಳಿಗೆ ತರಬೇತಿ ನೀಡಿದೆ

ಹಜ್ -2023 ರಲ್ಲಿ ಎಲ್ ಡಬ್ಲ್ಯು ಎಂ ವಿಭಾಗದಲ್ಲಿ 4000 ಕ್ಕೂ ಹೆಚ್ಚು ಮಹಿಳೆಯರು ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ್ದಾರೆ.ಇದು ಸಾರ್ವಕಾಲಿಕ ದಾಖಲೆ

Posted On: 22 DEC 2023 3:56PM by PIB Bengaluru

ಅಲ್ಪಸಂಖ್ಯಾತ ಸಮುದಾಯಗಳಾದ ಜೈನರು, ಪಾರ್ಸಿಗಳು, ಬೌದ್ಧರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಸಬಲೀಕರಣಗೊಳಿಸಲು ಅಲ್ಪಸಂಖ್ಯಾತ ಸಚಿವಾಲಯವನ್ನು 2006 ರಲ್ಲಿ ಸ್ಥಾಪಿಸಲಾಯಿತು. ಸಚಿವಾಲಯವು ನಮ್ಮ ರಾಷ್ಟ್ರದ ಬಹು-ಜನಾಂಗೀಯ, ಬಹು-ಸಾಂಸ್ಕೃತಿಕ, ಬಹು-ಭಾಷಾ ಮತ್ತು ಬಹು-ಧಾರ್ಮಿಕ ಗುಣಲಕ್ಷಣವನ್ನು ಬಲಪಡಿಸಲು ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ಶಿಕ್ಷಣ, ಉದ್ಯೋಗ, ಆರ್ಥಿಕ ಚಟುವಟಿಕೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮಾನ ಪಾಲನ್ನು ಒದಗಿಸಲು ಮತ್ತು ಅವರ ಉನ್ನತಿಯನ್ನು ಹೆಚ್ಚಿಸಲು ಕ್ರಿಯಾತ್ಮಕ ರಾಷ್ಟ್ರವನ್ನು ನಿರ್ಮಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶವನ್ನು ಒದಗಿಸುವುದು,  ದೃಢವಾದ ಕ್ರಮ ಮತ್ತು ಅಂತರ್ಗತ ಅಭಿವೃದ್ಧಿಯ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಇದರ ಧ್ಯೇಯವಾಗಿದೆ.

2023 ರಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಪ್ರಮುಖ ಸಾಧನೆಗಳು ಕೆಳಗಿನಂತಿವೆ:

ಪಿಎಂ ವಿಕಾಸ್ ಯೋಜನೆ:

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ (ಎಂಒಎಂಎ) ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (ಪಿಎಂ ವಿಕಾಸ್) ಯೋಜನೆಯನ್ನು ಪರಿಕಲ್ಪನೆ ಮಾಡಿದೆ, ಇದು ಸಚಿವಾಲಯದ ಐದು ಯೋಜನೆಗಳನ್ನು ಸಂಯೋಜಿಸಿದ ಯೋಜನೆಯಾಗಿದೆ.  ಸೀಖೋ ಔರ್ ಕಮಾವೊ (ಎಸ್ಎಕೆ), ಯುಎಸ್ಟಿಟಿಎಡಿ (ಉಸ್ತಾದ್), ಹಮಾರಿ ಧರೋಹರ್, ನಯೀ ರೋಶಿನಿ, ನಯೀ ಮಂಜಿಲ್ ಗಳು ಇದರಲ್ಲಿ ಅಡಕವಾಗಿವೆ.  ಅಲ್ಪಸಂಖ್ಯಾತ ಸಮುದಾಯದ ಸೌಲಭ್ಯ ವಂಚಿತ ವಿಭಾಗದ ಜೀವನ ಚಕ್ರವನ್ನು ಸೇರಿಸಿಕೊಂಡು ಮತ್ತು ಜೀವನೋಪಾಯದ ಅವಕಾಶಗಳನ್ನು ಒದಗಿಸುವತ್ತ ಗಮನ ಹರಿಸುವುದು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯನ್ನು ನಾಲ್ಕು ಘಟಕಗಳಲ್ಲಿ ಜಾರಿಗೆ ತರಲು ಯೋಜಿಸಲಾಗಿದೆ:ಅವುಗಳೆಂದರೆ:

  •   ಕೌಶಲ್ಯ ಮತ್ತು ತರಬೇತಿ ಘಟಕ
  •  ಸಾಲ ಬೆಂಬಲದೊಂದಿಗೆ ನಾಯಕತ್ವ ಮತ್ತು ಉದ್ಯಮಶೀಲತೆ ಘಟಕ
  •  ಶಾಲೆ ತೊರೆದ ಮಕ್ಕಳಿಗೆ ಶಿಕ್ಷಣ ಘಟಕ; ಮತ್ತು
  •  ಮೂಲಸೌಕರ್ಯ ಅಭಿವೃದ್ಧಿ ಘಟಕ.

ಯೋಜನೆಯಡಿ ಸಚಿವಾಲಯವು 9,63,448 ಫಲಾನುಭವಿಗಳಿಗೆ ತರಬೇತಿ ನೀಡಿದೆ.

ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ

ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ (ಪಿಎಂಜೆವಿಕೆ) ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಗುರುತಿಸಲ್ಪಟ್ಟ  ಪ್ರದೇಶಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಅಭಿವೃದ್ಧಿ ಕೊರತೆಗಳನ್ನು ಎದುರಿಸುತ್ತಿರುವ  ಪ್ರದೇಶಗಳಲ್ಲಿ ಸಮುದಾಯ ಆಸ್ತಿ/ಸ್ವತ್ತುಗಳಾದ ಮೂಲಸೌಕರ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಇದನ್ನು ಜಾರಿಗೆ ತರುತ್ತಿದೆ. 2022-23ರಲ್ಲಿ, ಪರಿಷ್ಕೃತ ಪಿಎಂಜೆವಿಕೆಯನ್ನು 15 ನೇ ಹಣಕಾಸು ಆಯೋಗದ ವರ್ತುಲದಲ್ಲಿ ಅಂದರೆ 2022-23 ರಿಂದ 2025-26 ರವರೆಗಿನ ಹಣಕಾಸು ವರ್ಷದಲ್ಲಿ ಮುಂದುವರಿಸಲು ಸರ್ಕಾರ ಅನುಮೋದನೆ ನೀಡಿದೆ. ಎಲ್ಲಾ ಮಹತ್ವಾಕಾಂಕ್ಷೆಯ ಆಶೋತ್ತರಗಳ ಜಿಲ್ಲೆಗಳು ಸೇರಿದಂತೆ ದೇಶದ ಎಲ್ಲಾ ಜಿಲ್ಲೆಗಳಿಗೆ ಪರಿಷ್ಕೃತ ಪಿಎಂಜೆವಿಕೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಲಾನಯನ ಪ್ರದೇಶದಲ್ಲಿ (15 ಕಿ.ಮೀ ತ್ರಿಜ್ಯ ವ್ಯಾಪ್ತಿ) ಅಲ್ಪಸಂಖ್ಯಾತ ಜನಸಂಖ್ಯೆಯ ಸಾಂದ್ರತೆಯು 25% ಕ್ಕಿಂತ ಹೆಚ್ಚಿರುವ ಗುರುತಿಸಲಾದ ಪ್ರದೇಶಗಳಲ್ಲಿ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ.  

2022-23ರಲ್ಲಿ ಯೋಜನೆಯಡಿ ಅನುಮೋದಿಸಲಾದ ಯೋಜನೆಗಳಲ್ಲಿ ಶಾಲಾ ಕಟ್ಟಡಗಳು, ವಸತಿ ಶಾಲೆಗಳು, ಹಾಸ್ಟೆಲ್ ಗಳು, ಐಟಿಐಗಳು, ಕೌಶಲ್ಯ ಕೇಂದ್ರಗಳು, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಸದ್ಭಾವನಾ ಮಂಟಪ, ಸಮುದಾಯ ಭವನ, ಕ್ರೀಡಾ ಸಂಕೀರ್ಣ, ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್ ಇತ್ಯಾದಿಗಳಂತಹ ಕ್ರೀಡಾ ಯೋಜನೆಗಳು ಸೇರಿವೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್, ಇಸ್ರೋ –ಇದರ ಸಹಯೋಗದೊಂದಿಗೆ ಯೋಜನೆಯಡಿ ನಿರ್ಮಿಸಲಾದ ಮೂಲಸೌಕರ್ಯಗಳ ಜಿಯೋ ಟ್ಯಾಗಿಂಗ್ ಪ್ರಾರಂಭಿಸಿದೆ.

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಎನ್.ಎಂ.ಡಿ.ಎಫ್.ಸಿ.)

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಎನ್ಎಂಡಿಎಫ್ ಸಿ) ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 8 ರ ಅಡಿಯಲ್ಲಿ ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸರ್ಕಾರಿ ನಿಗಮವಾಗಿದೆ. ಆಯಾ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಮತ್ತು ಕೆನರಾ ಬ್ಯಾಂಕ್ ನಿಂದ ನಾಮನಿರ್ದೇಶನಗೊಂಡ ರಾಜ್ಯ ಚಾನಲೈಸಿಂಗ್ (ಅನುಷ್ಠಾನ) ಏಜೆನ್ಸಿಗಳ (ಎಸ್ಸಿಎ) ಮೂಲಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ನಿಗಮವನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ, 1992 ರ ಅಡಿಯಲ್ಲಿ ಕೇಂದ್ರ ಸರ್ಕಾರವು ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಪಾರ್ಸಿಗಳು ಮತ್ತು ಜೈನರು ಎಂಬ ಆರು ಅಲ್ಪಸಂಖ್ಯಾತರನ್ನುಗುರುತಿಸಿ ಅಧಿಸೂಚನೆ ಹೊರಡಿಸಿದೆ.

2022-23ರ ಹಣಕಾಸು ವರ್ಷದಲ್ಲಿ, ಎನ್ಎಂಡಿಎಫ್ ಸಿ 2.05 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 881.70 ಕೋಟಿ ರೂ.ಗಳ ಸಾಲ ವಿತರಣೆಯನ್ನು ಮಾಡಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. 2021-22ರಲ್ಲಿ 1.60 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 700.00 ಕೋಟಿ ರೂ.ಗಳನ್ನು ವಿತರಿಸಲಾಗಿತ್ತು.  ಇದಲ್ಲದೆ, ಪ್ರಾರಂಭವಾದಾಗಿನಿಂದ ಎನ್ಎಂಡಿಎಫ್ ಸಿ 22.5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 8,300 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ವಿತರಿಸಿದೆ, ಅದರಲ್ಲಿ 85% ಕ್ಕೂ ಹೆಚ್ಚು ಫಲಾನುಭವಿಗಳು ಮಹಿಳೆಯರು.

ಎನ್ಎಂಡಿಎಫ್ ಸಿಯ ಎಂಐಎಸ್ ಪೋರ್ಟಲಿನ ಏಕೀಕರಣ ಸೇರಿದಂತೆ ಅರ್ಜಿದಾರರು, ಎಸ್ಸಿಎಗಳು ಮತ್ತು ಎನ್ಎಂಡಿಎಫ್ ಸಿ ನಡುವಿನ ಸಾಲ ಲೆಕ್ಕಪತ್ರ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲು ಎನ್ಎಂಡಿಎಫ್ ಸಿ  ಮಿಲಾನ್ (ಎನ್ಎಂಡಿಎಫ್ ಸಿಗಾಗಿ ಅಲ್ಪಸಂಖ್ಯಾತ ಸಾಲ ಲೆಕ್ಕಪತ್ರ ಸಾಫ್ಟ್ವೇರ್) ಎಂಬ ಸಾಫ್ಟ್ವೇರ್ ಅನ್ನು ಪ್ರಾರಂಭಿಸಿತು, ಇದರಲ್ಲಿ 12 ಲಕ್ಷ ಫಲಾನುಭವಿಗಳ ದತ್ತಾಂಶ  ಲಭ್ಯವಿದೆ. ಮಿಲನ್ ಮೊಬೈಲ್ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಯನ್ನು ಸಹ ಪ್ರಾರಂಭಿಸಲಾಗಿದೆ.

ಹಜ್ ಯಾತ್ರೆ 2023

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತೀಯ ಹಜ್ ಸಮಿತಿ ಮತ್ತು ಹಜ್ ಕಾರ್ಯಾಚರಣೆಯಲ್ಲಿ ತೊಡಗಿರುವ ಇತರ ಭಾಗೀದಾರರ ನಡುವೆ ಅತ್ಯುತ್ತಮ ಸಮನ್ವಯ ಮತ್ತು ಸಹಕಾರದೊಂದಿಗೆ ಸೌದಿ ಅರೇಬಿಯಾದಲ್ಲಿ ಹಜ್ 2023 ಕಾರ್ಯಾಚರಣೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.

ಹಜ್ -2023 ಪ್ರಮುಖ ಮುಖ್ಯಾಂಶಗಳು ಕೆಳಗಿನಂತಿವೆ:-

ಎ. ಮೊದಲ ಬಾರಿಗೆ, ಒಂಟಿ ಮಹಿಳೆಯರಿಗೆ ಲೇಡಿ ವಿತೌಟ್ ಮೆಹ್ರಾಮ್ (ಎಲ್ಡಬ್ಲ್ಯೂಎಂ) ವಿಭಾಗದಲ್ಲಿ ಹಜ್ ಯಾತ್ರೆಗೆ  ಅರ್ಜಿ ಸಲ್ಲಿಸಲು ಅವಕಾಶ ನೀಡಲಾಯಿತು. ಇದರ ಪರಿಣಾಮವಾಗಿ, ಸಾರ್ವಕಾಲಿಕ ಗರಿಷ್ಠವಾದ 4000 ಕ್ಕೂ ಹೆಚ್ಚು ಮಹಿಳೆಯರು ಹಜ್ -2023 ರಲ್ಲಿ ಎಲ್ಡಬ್ಲ್ಯೂಎಂ ವಿಭಾಗದಲ್ಲಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ್ದಾರೆ.

ಬಿ. ಹಜ್ -2023 ರಲ್ಲಿ ಸರ್ಕಾರಿ ವಿವೇಚನಾ ಕೋಟಾದಡಿಯ 500 ಸೀಟುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಮತ್ತು ಅರ್ಹ ನಾಗರಿಕರಿಗೆ ಅವಕಾಶವನ್ನು ಗರಿಷ್ಠಗೊಳಿಸಲು ಮತ್ತು ಯಾವುದೇ ವಿಐಪಿ ಸಂಸ್ಕೃತಿಯನ್ನು ಪ್ರಚಾರ ಮಾಡದಂತೆ ಖಚಿತಪಡಿಸಿಕೊಳ್ಳಲು ಕೋಟಾದಡಿ ಸೀಟುಗಳನ್ನು ನಿಯಮಿತ ಹಂಚಿಕೆ ಕಾರ್ಯವಿಧಾನದಲ್ಲಿ ವಿಲೀನಗೊಳಿಸಲಾಗಿದೆ.

ಸಿ. ಭಾರತೀಯ ಯಾತ್ರಾರ್ಥಿಗಳ ಆರಾಮದಾಯಕ ವಾಸ್ತವ್ಯಕ್ಕಾಗಿ ಮಕ್ಕಾದಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಸೌಲಭ್ಯಗಳನ್ನು ಹೊಂದಿರುವ ಒಟ್ಟು 477 ಕಟ್ಟಡಗಳನ್ನು ಬಾಡಿಗೆಗೆ ಪಡೆಯಲಾಯಿತು.

ಡಿ. ಯಾತ್ರಾರ್ಥಿಗಳಿಗೆ ಸಹಾಯ ಮತ್ತು ನೆರವಿನಲ್ಲಿ  ಉತ್ತಮ ವೃತ್ತಿಪರತೆ ಮತ್ತು ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಸಿಎಪಿಎಫ್ ನಿಂದ ಸಿಬ್ಬಂದಿಗಳನ್ನು ಎರವಲು ಪಡೆದು  ಆಡಳಿತಾತ್ಮಕ ನಿಯೋಜನೆಗಳನ್ನು ಮಾಡಲಾಯಿತು.  

ಇ.  ಯಾತ್ರಾರ್ಥಿಗಳಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ &ಎಫ್ ಡಬ್ಲ್ಯೂ) ಮತ್ತು ಅದರ ಏಜೆನ್ಸಿಗಳು ಹಜ್ 2023 ರ ಸಮಯದಲ್ಲಿ ಹಜ್ ಯಾತ್ರಿಕರ ಆರಂಭಿಕ ತಪಾಸಣೆಗಾಗಿ ಮತ್ತು ಯಾತ್ರಾರ್ಥಿಗಳ ಸಹಾಯ ಮತ್ತು ನೆರವಿಗಾಗಿ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಆಯ್ಕೆ ಮಾಡಲು ಮತ್ತು ನಿಯೋಜಿಸಲು ನೇರವಾಗಿ ಭಾಗಿಯಾದವು.

ಎಫ್. ಹಜ್ ಅವಧಿಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆದ ಎಲ್ಲಾ ಭಾರತೀಯ ಯಾತ್ರಾರ್ಥಿಗಳ ಆರೋಗ್ಯ ಡೇಟಾಬೇಸ್ ರಚಿಸಲು ಮತ್ತು ನಿರ್ವಹಿಸಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇ-ಹೆಲ್ತ್ ನಂತಹ ಪೋರ್ಟಲ್ ಗಳು ಸಹಿತ  ತೀರ್ಥಯಾತ್ರೆಯ ಕಾರ್ಯಾಚರಣೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು.

ಜಿ. ಹಜ್ -2023 ಗಾಗಿ, ಭಾರತ ಸರ್ಕಾರವು ಎಚ್ ಸಿಒಐ ಮೂಲಕ ಹೋಗುವ ಸುಮಾರು 65% ಯಾತ್ರಾರ್ಥಿಗಳಿಗೆ ಮದೀನಾದ ಮರ್ಕಾಜಿಯಾ ಪ್ರದೇಶದಲ್ಲಿ ವಸತಿ ಪಡೆಯುವಲ್ಲಿ ಯಶಸ್ವಿಯಾಗಿದೆ, ಮತ್ತು ಇದು ದಾಖಲೆಯಾಗಿದೆ.

ಎಚ್.  ಹಜ್ -2023 ರ ಸಮಯದಲ್ಲಿ ಸಚಿವಾಲಯವು ಅಭಿವೃದ್ಧಿಪಡಿಸಿದ ಪ್ರತಿಕ್ರಿಯೆ(ಹಿಮ್ಮಾಹಿತಿ)  ಪೋರ್ಟಲ್ ನಲ್ಲಿ 25000 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ಪ್ರತಿಕ್ರಿಯೆ ನಮೂದುಗಳನ್ನು ಸ್ವೀಕರಿಸಲಾಗಿದೆ, ಇದು ಮುಂದಿನ ವರ್ಷಗಳಲ್ಲಿ ಸೌಲಭ್ಯಗಳು ಮತ್ತು ಸೇವೆಗಳ ಸುಧಾರಣೆಗೆ ಅನುವು ಮಾಡಿಕೊಡಲು ಮೌಲ್ಯಯುತ ಪ್ರತಿಕ್ರಿಯೆ ಮತ್ತು ಒಳಹರಿವುಗಳನ್ನು ಒದಗಿಸುತ್ತದೆ.

ಎ. ಹಜ್ ಗ್ರೂಪ್ ಆರ್ಗನೈಸರ್ (ಎಚ್ ಜಿಒ) ನೀತಿ ಮತ್ತು ಎಚ್ ಜಿಒಗಳಿಗೆ ಜಿಎಸ್ ಟಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವುದು ಉತ್ತಮ ಅನುಸರಣೆಗೆ ಕಾರಣವಾಗಿದೆ, ಇದು ಹಜ್ ಯಾತ್ರಿಕರ ಸೇವೆಗಳ ಗುಣಮಟ್ಟವನ್ನು ಸುಧಾರಿಸಿದೆ. ಎಚ್ ಜಿ ಒಗಳಿಂದ ಸುಧಾರಿತ ತೆರಿಗೆ ಅನುಸರಣೆಯು ಬೊಕ್ಕಸಕ್ಕೆ 200 ಕೋಟಿ ರೂ.ಗಿಂತ ಹೆಚ್ಚು ತೆರಿಗೆ ಆದಾಯಕ್ಕೆ ಕಾರಣವಾಗಿದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಐಸಿಟಿ ಚಟುವಟಿಕೆಗಳು

ಕ್ರಮ ಸಂಖ್ಯೆ

ಕಾರ್ಯಚಟುವಟಿಕೆ

1.

ಸೀಖೋ ಔರ್ ಕಮಾವೊ

ಅಲ್ಪಸಂಖ್ಯಾತರ ಕೌಶಲ್ಯ ಅಭಿವೃದ್ಧಿ ಯೋಜನೆ

(ಕಲಿಯಿರಿ ಮತ್ತು ಸಂಪಾದಿಸಿ)

2.

ನಯೀ ರೋಶ್ನಿ

ಅಲ್ಪಸಂಖ್ಯಾತ ಮಹಿಳೆಯರ ನಾಯಕತ್ವ ಅಭಿವೃದ್ಧಿ ಯೋಜನೆ

3.

ನಯೀ ಮಂಜಿಲ್

ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮಗ್ರ ಶಿಕ್ಷಣ ಮತ್ತು ಜೀವನೋಪಾಯ ಉಪಕ್ರಮ

4.

ಉಸ್ತಾದ್ (USTTAD)

ಅಲ್ಪಸಂಖ್ಯಾತ ಸಮುದಾಯಗಳ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲತೆಯನ್ನು ಸಂರಕ್ಷಿಸಲು ಸಾಮರ್ಥ್ಯ ವರ್ಧನೆ ಉಪಕ್ರಮಗಳನ್ನು ಬೆಂಬಲಿಸುವ ಯೋಜನೆ

 

ಯುಎಸ್ ಟಿಟಿಎಡಿ

ಯುಎಸ್ ಟಿಟಿಎಡಿ (ಅಭಿವೃದ್ಧಿಗಾಗಿ ಸಾಂಪ್ರದಾಯಿಕ ಕಲೆಗಳು / ಕರಕುಶಲತೆಗಳಲ್ಲಿ ಕೌಶಲ್ಯ ಮತ್ತು ತರಬೇತಿಯನ್ನು ಉನ್ನತೀಕರಿಸುವುದು)

5.

ನಯಾ ಸವೇರಾ

 

ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳು / ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಮತ್ತು ಸಂಬಂಧಿತ ಯೋಜನೆ

 

ಹಿಂದೆ ಇದನ್ನು "ಉಚಿತ ಕೋಚಿಂಗ್" ಎಂದು ಕರೆಯಲಾಗುತ್ತಿತ್ತು

6.

ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ (ಪಿ.ಎಂ.ಜೆ.ವಿ.ಕೆ.-PMJVK)

 

ಅಲ್ಪಸಂಖ್ಯಾತ ಬಾಹುಳ್ಯದ/ಕೇಂದ್ರೀಕೃತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಯೋಜನೆ

7.

ಸ್ವಯಂಸೇವಾ ಸಂಸ್ಥೆ (ಎನ್ಜಿಒ) ಅನುದಾನ ಪೋರ್ಟಲ್

ಅಗ್ರಿಗೇಟರ್ ಮತ್ತು ವೆಬ್ ಪೋರ್ಟಲ್

8.

ಜಿಯೋ ಪಾರ್ಸಿ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಐಸಿಟಿ ವ್ಯವಸ್ಥೆಗಳನ್ನು ಜಾರಿಗೆ ತರುವ ಮೂಲಕ ಪ್ರಕ್ರಿಯೆಯನ್ನು ಸ್ವಯಂಚಾಲಿತ ವ್ಯವಸ್ಥೆಗೆ ಒಳಪಡಿಸಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಈ ಸಚಿವಾಲಯದ ಯೋಜನೆಗಳಿಗಾಗಿ ವೆಬ್ ಪೋರ್ಟಲ್ ಗಳನ್ನು ರಚಿಸಲಾಗಿದೆ ಮತ್ತು ಅವುಗಳನ್ನು  ಹೋಸ್ಟ್ ಮಾಡಲಾಗಿದೆ, ಅವುಗಳೆಂದರೆ:

ಪೋರ್ಟಲ್ ಗಳಲ್ಲಿ, ಪ್ರೋಗ್ರಾಂ ಇಂಪ್ಲಿಮೆಂಟಿಂಗ್ ಏಜೆನ್ಸಿಗಳಿಂದ (ಪಿಐಎ) ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ ಮತ್ತು ನಿಧಿ ಹಂಚಿಕೆಯ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಮತ್ತು ವರ್ಗಾಯಿಸಲಾಗುತ್ತದೆ. ಪಿಐಎಗಳು ಆನ್ ಲೈನ್ ನಲ್ಲಿ ಸಲ್ಲಿಸಿದ ಭೌತಿಕ ಮತ್ತು ಆರ್ಥಿಕ ಪ್ರಗತಿ ವರದಿಗಳ ಬಳಿಕ ನಿಧಿಗಳ ಬಳಕೆಯ ಮೇಲ್ವಿಚಾರಣೆ ಮಾಡಲಾಗುತ್ತದೆ. ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಪಿಐಎಗಳಿಂದ ತೃಪ್ತಿಕರ ಕಾರ್ಯಸಾಧನೆಯನ್ನು ಅವಲಂಬಿಸಿ ಮುಂದಿನ ಕಂತುಗಳ ಹಣವನ್ನು ಮಂಜೂರು ಮಾಡಲಾಗುತ್ತದೆ. ಅಂತಿಮ  ಬಳಕೆ ಪ್ರಮಾಣಪತ್ರವನ್ನು ಪಿ.ಐ.ಎ.ಗಳು ಆನ್ ಲೈನ್ ನಲ್ಲಿ ಮಾಡುತ್ತಾರೆ.

ವಿಶಿಷ್ಟ ಗುರುತಿನ ಸಂಖ್ಯೆಗಳು ಮತ್ತು ಇತರ ಮಾನದಂಡಗಳು/ನಿಯತಾಂಕಗಳನ್ನು ಬಳಸಿಕೊಂಡು ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿ ಪಟ್ಟಿಯಿಂದ ತೆಗೆದು ಹಾಕುವ ಕಾರ್ಯವನ್ನು  ಸ್ವಯಂಚಾಲಿತವಾಗಿ ಮಾಡಲಾಗುತ್ತಿದೆ.

ಯೋಜನೆಗಳ ಅನುಷ್ಠಾನವು ಡೇಟಾಬೇಸ್ ಸರ್ವರ್ ಗಳನ್ನು ಬಳಸಿಕೊಂಡು ವೆಬ್ ಅಪ್ಲಿಕೇಶನ್ ಅಭಿವೃದ್ಧಿ, ವರ್ಚುವಲ್ ಯಂತ್ರಗಳ ಬಳಕೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಉಚಿತ ಮತ್ತು ಓಪನ್ ಸೋರ್ಸ್ (ಮುಕ್ತ ಮೂಲ) ಸಾಫ್ಟ್ವೇರ್ ಸೇರಿದಂತೆ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಐಸಿಟಿ ವ್ಯವಸ್ಥೆಯನ್ನು ಆಂತರಿಕವಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು  ಸಚಿವಾಲಯವು ಕೈಗೊಂಡಿದೆ. vision@2047 ನಿಟ್ಟಿನಲ್ಲಿ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದನ್ನು/ ನಿಯೋಜಿಸುವುದನ್ನು ಮುಂದುವರಿಸಲು ಯೋಜಿಸಲಾಗಿದೆ.

****

 

 

 



(Release ID: 1991137) Visitor Counter : 73