ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

​​​​​​​ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪಂಡಿತ್ ಜಸರಾಜ್ ಅವರ ಸಂಗೀತೋತ್ಸವದ 50 ವರ್ಷಗಳ ನೆನಪಿನ ಸ್ಮರಣಾರ್ಥ ನಡೆದ ‘ಪಂಡಿತ್ ಮೋತಿರಾಮ್ ಪಂಡಿತ್ ಮಣಿರಾಮ್ ಸಂಗೀತ ಸಮರೋಹ’ ಸಂಬಂಧ ವಿಶೇಷ ಅಂಚೆ ಚೀಟಿಯನ್ನು ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು


ಪಂಡಿತ್ ಜಸರಾಜ್ ಅವರು ಭಾರತೀಯ ಶಾಸ್ತ್ರೀಯ, ಪುಷ್ಟಿಮಾರ್ಗಿಯ ಸಂಗೀತ ಮತ್ತು ವೈಷ್ಣವ ಸಂಪ್ರದಾಯದ ಭಕ್ತಿ ಪದಗಳನ್ನು 8 ದಶಕಗಳಿಂದ ಇಡೀ ವಿಶ್ವದ ಸಂಗೀತ ಪ್ರೇಮಿಗಳಿಗಾಗಿ ಅಮರಗೊಳಿಸಿದ್ದಾರೆ

ಪಂಡಿತ್ ಜಸರಾಜ್ ಅವರು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಪದವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದಿದ್ದರಿಂದ ಪ್ರಪಂಚದಾದ್ಯಂತ ಜನ ಅವರಿಗೆ ಸಾಕಷ್ಟು ಪ್ರೀತಿ ತೋರುತ್ತಾರೆ

ಭಾರತೀಯ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತವನ್ನು ಬಲಪಡಿಸಲು ಅವರು ನೀಡಿದ ಕೊಡುಗೆಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ

ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರವು ಅವರ ಸ್ಮರಣಾರ್ಥ ವಿಶೆಷ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ

ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರದ ಈ ಗೌರವವು ಪಂಡಿತ್ ಜಸರಾಜ್ ಅವರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಪ್ರೀತಿಯ ಛಾಪು ಒತ್ತಿದೆ

Posted On: 27 DEC 2023 7:11PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪಂಡಿತ್ ಜಸರಾಜ್ ಅವರ ಸಂಗೀತೋತ್ಸವದ 50 ವರ್ಷಗಳ ನೆನಪಿಗಾಗಿ ನಡೆದ ‘ಪಂಡಿತ್ ಮೋತಿರಾಮ್ ಪಂಡಿತ್ ಮಣಿರಾಮ್ ಸಂಗೀತ ಸಮರೋಹ’ದ ಸ್ಮರಣಾರ್ಥ ಕೇಂದ್ರ ಸಂವಹನಗಳ ಇಲಾಖೆ, ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಚೀಟಿಯನ್ನು ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಅಮಿತ್ ಶಾ ಅವರು ಮಾತನಾಡಿ, ಪಂಡಿತ್ ಜಸರಾಜ್ ಅವರು ಭಾರತೀಯ ಶಾಸ್ತ್ರೀಯ, ಪುಷ್ಟಿಮಾರ್ಗಿಯ ಸಂಗೀತ ಮತ್ತು ವೈಷ್ಣವ ಸಂಪ್ರದಾಯದ ಭಕ್ತಿ ಪದಗಳ ಮೂಲಕ ಎಂಟು ದಶಕಗಳಿಂದ ಇಡೀ ವಿಶ್ವದ ಸಂಗೀತ ಪ್ರೇಮಿಗಳಿಗೆ ಅಮರಗೊಳಿಸಿದ್ದಾರೆ ಎಂದು ಬಣ್ಣಿಸಿದರು. ಪಂಡಿತ್ ಜಸರಾಜ್ ಅವರು ಭಜನೆಯನ್ನು  ಭಕ್ತಿಯಿಂದ ಎಷ್ಟು ಭಾವಪರವಶರಾಗಿ ಹಾಡುತ್ತಿದ್ದರೆಂದರೆ ಶ್ರೀಕೃಷ್ಣನ ರೂಪವೇ ಕೇಳುಗರ ಮುಂದೆ ಜೀವಂತವಾಗಿ ಅನಾವರಣಗೊಳ್ಳುವಂತೆ ಮಾಡುತ್ತಿತ್ತು.  ಪಂಡಿತ್ ಜಸರಾಜ್ ಅವರು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಪದಗಳನ್ನು ಇನ್ನಷ್ಟು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಜನರು ಅವರನ್ನು ತುಂಬಾ ಪ್ರೀತಿಸುತ್ತಾರೆ. ಭಾರತೀಯ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತವನ್ನು ಬಲಪಡಿಸಲು ಅವರು ನೀಡಿದ ಕೊಡುಗೆಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶ್ರೀ ಶಾ ಸ್ಮರಿಸಿದರು. ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರವು ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಅವರ ಪರಂಪರೆಯನ್ನು ಮುನ್ನಡೆಸಲು ನಿರ್ಧರಿಸಿದೆ. ಭಾರತ ಸರ್ಕಾರದ ಈ ಗೌರವವು ಅವರ ಅಭಿಮಾನಿಗಳ ಹೃದಯದಲ್ಲಿ ಪಂಡಿತ್ ಜಸರಾಜ್ ಅವರ ನೆನಪುಗಳನ್ನು ಅಚ್ಚಳಿಯದ ಛಾಪು ಒತ್ತಲಿದೆ ಎಂದು ಶ್ರೀ ಶಾ ಹೇಳಿದರು.

ಈ ಸಂಗೀತ ಉತ್ಸವವನ್ನು 1972ರಲ್ಲಿ ಪಂಡಿತ್ ಜಸರಾಜ್ ಅವರು ತಮ್ಮ ತಂದೆ, ಸಂಗೀತ ರತ್ನ ಪಂಡಿತ್ ಮೋತಿರಾಮ್ ಅವರ ಸ್ಮರಣಾರ್ಥ ಆರಂಭಿಸಿದರು. ಕೇವಲ ನಾಲ್ಕು ವರ್ಷದ ವಯಸ್ಸಿನ ಜಸರಾಜ್‌ ಹಾಗೂ ಅವರ ಹಿರಿಯ ಸಹೋದರ ಮತ್ತು ನಂತರ ಅವರ ಗುರು, ಸಂಗೀತ ಮಹಾಮೋಪಾಧ್ಯಾಯ ಪಂಡಿತ್ ಮಣಿರಾಮ್ ಅವರನ್ನು ಪಂಡಿತ್‌ ಮೋತಿರಾಮ್‌ ಅವರು ಅಗಲಿದ್ದರು.

ಪಂಡಿತ್‌ ಜಸ್‌ರಾಜ್‌ ಅವರು ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಶಾಸ್ತ್ರೀಯ ಗಾಯಕರಲ್ಲಿ ಒಬ್ಬರಲ್ಲದೆ, ಹೈದರಾಬಾದ್‌ನ ಪ್ರೇಕ್ಷಕರಿಗೆ ಯುವ ಸಂಗೀತಗಾರರನ್ನು ಕಾಳಜಿಯಿಂದ ಪರಿಚಯಿಸುವ ಮೂಲಕ ಭಾರತದ ಸಂಸ್ಕೃತಿ ಮತ್ತು ಸಂಗೀತ ಕ್ಷೇತ್ರದಲ್ಲಿ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಆ ಮೂಲಕ ಅವರು ಈಗ ತಮ್ಮದೇ ಆದ ದಂತಕಥೆಗಳಾಗಿ ಬೆಳೆದಿದ್ದಾರೆ.

ಅವರ ಜೀವಿತಾವಧಿಯಲ್ಲಿ 47 ವರ್ಷಗಳ ಕಾಲ ಒಂದೇ ಒಂದು ವಿರಾಮವಿಲ್ಲದೆ ಪಂಡಿತ್ ಜಸರಾಜ್ ಅವರು ಈ ವಾರ್ಷಿಕ ಸಂಗೀತ ಸಮರೋಹವನ್ನು ಸ್ವತಃ ಆಯೋಜಿಸಿದರು. ಹಾಗಾಗಿ ಅದು ಇಂದು ಹೈದರಾಬಾದ್‌ನ ಅತ್ಯಂತ ಹಳೆಯ ಹಬ್ಬವಾಗಿದೆ ಮತ್ತು ಈ ಪರಂಪರೆಯನ್ನು ಪಂಡಿತ್ ಜಸ್‌ರಾಜ್ ಕಲ್ಚರಲ್ ಫೌಂಡೇಶನ್ ಮುಂದುವರಿಸಿದೆ. ಈ ಅನನ್ಯ ಕೊಡುಗೆಗಾಗಿ ಅವರನ್ನು "ಹೈದರಾಬಾದ್‌ನ ಸುಪುತ್ರ" ಎಂದು ಕರೆಯಲಾಯಿತು.

ಅಂಚೆ ಚೀಟಿ ಬಿಡುಗಡೆ ಸಂದರ್ಭದಲ್ಲಿ ಪಂಡಿತ್ ಜಸರಾಜ್ ಅವರ ಪುತ್ರಿ ಶ್ರೀಮತಿ ದುರ್ಗಾ ಜಸರಾಜ್ ಮತ್ತು ಪಂಡಿತ್ ಮಣಿರಾಮ್ ಅವರ ಪುತ್ರ ಹಾಗೂ ಪಂಡಿತ್ ಮೋತಿರಾಮ್ ಅವರ ಮೊಮ್ಮಗ ಪಂಡಿತ್ ದಿನೇಶ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

****


(Release ID: 1991113) Visitor Counter : 95