ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ಮೇರಾ ಯುವ ಭಾರತ್ (ಮೈ ಭಾರತ್‌) ಪೋರ್ಟಲ್‌ನಲ್ಲಿ 26 ಲಕ್ಷ ದಾಟಿದ ಯುವಜನರ ನೋಂದಣಿ

Posted On: 21 DEC 2023 6:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ ಅಂದರೆ 2023ರ ಅಕ್ಟೋಬರ್ 31ರಂದು ದೇಶದ ಯುವಕರಿಗಾಗಿ ʻಮೇರಾ ಯುವ ಭಾರತ್ (ಎಂವೈ ಭಾರತ್)' ವೇದಿಕೆಗೆ ನವದೆಹಲಿಯ ಕರ್ತವ್ಯ ಪಥ್‌ನಲ್ಲಿ ಚಾಲನೆ ನೀಡಿದ್ದರು. ಅದು ಯುವ ಸಬಲೀಕರಣ ಮತ್ತು ಯುವಜನತೆಗೆ ಪ್ರಮುಖವಾದ, ತಂತ್ರಜ್ಞಾನ-ಚಾಲಿತ ಸೌಲಭ್ಯವಾಗಿ ರೂಪಿಸಲಾದ ವೇದಿಕೆಯಾಗಿದ್ದು ಆ ಮೂಲಕ ಯುವಜನರು ತಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಮತ್ತು "ವಿಕ್ಷಿತ್ ಭಾರತ್" (ಅಭಿವೃದ್ಧಿ ಹೊಂದಿದ ಭಾರತ) ರಚನೆಗೆ ಕೊಡುಗೆ ನೀಡಲು ಸಮಾನ ಅವಕಾಶಗಳನ್ನು ಒದಗಿಸುವ ಪ್ರಮುಖ ಗುರಿಯೊಂದಿಗೆ ಮುನ್ನಡೆಸಿದ್ದರು. ಇದು ʻಫಿಜಿಟಲ್ ಪ್ಲಾಟ್‌ಫಾರ್ಮ್' (ದೈಹಿಕ + ಡಿಜಿಟಲ್) ದೈಹಿಕ ಚಟುವಟಿಕೆಯನ್ನು ಒಳಗೊಂಡಿರುವ ಜೊತೆಗೆ ಡಿಜಿಟಲ್ ಸಂಪರ್ಕಕ್ಕೆ ಅವಕಾಶ ನೀಡುವುದು ವಿಶೇಷ.

ದೇಶಾದ್ಯಂತ ಯುವಕರು ʻಎಂವೈ ಭಾರತ್‌ʼ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು (https://www.mybharat.gov.in/ ) ಮತ್ತು ಪೋರ್ಟಲ್‌ನಲ್ಲಿ ಲಭ್ಯವಿರುವ ವಿವಿಧ ಅವಕಾಶಗಳು ಮತ್ತು ಈವೆಂಟ್‌ಗಳಿಗೆ ಸೈನ್ ಅಪ್ ಆಗಬಹುದಾಗಿದೆ. 18.12.2023ರವರೆಗೆ ಪೋರ್ಟಲ್‌ನಲ್ಲಿ ಯುವಕರ ನೋಂದಣಿ 26 ಲಕ್ಷ ದಾಟಿದೆ.

ಈ ವೇದಿಕೆ ಬಗ್ಗೆ ವ್ಯಾಪಕ ಪ್ರಚಾರ, ನೋಂದಣಿಗಾಗಿ ಫೇಸ್‌ಬುಕ್, ಎಕ್ಸ್ (ಟ್ವಿಟರ್), ಯೂಟ್ಯೂಬ್, ಕೂ, ಇನ್‌ಸ್ಟಾಗ್ರಾಮ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮತ್ತು ಯುವ ವ್ಯವಹಾರಗಳ ಇಲಾಖೆಯ ಮೂಲಕ ಉತ್ತೇಜಿಸಲಾಗಿದೆ.

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಮೈ ಭಾರತ್ ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳು ಮತ್ತು ಅದರ ಲಿಂಕ್ ಗಳು:

  1. ಟ್ವಿಟರ್

1.https://twitter.com/YASMinistry

2.https://twitter.com/mybharatgov

  1. Instagram

1.https://www.instagram.com/yasministryindia/

2.https://www.instagram.com/mybharatgov/

  1. ಫೇಸ್ ಬುಕ್

1.https://www.facebook.com/yasministry

2.https://www.facebook.com/mybharatgov/

  1. YouTube

1.https://www.youtube.com/@yasministry

2. https://www.youtube.com/@mybharatgov

  1. ಕೂ

https://www.kooapp.com/profile/YASMinistry

  1. ಲಿಂಕ್ಡ್ಇನ್

https://www.linkedin.com/company/mybharatgov/

*****



(Release ID: 1989510) Visitor Counter : 74


Read this release in: English , Urdu , Hindi , Telugu