ಗಣಿ ಸಚಿವಾಲಯ
azadi ka amrit mahotsav

ಗಣಿಬಾಧಿತ ಪ್ರದೇಶಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಕೈಗೆತ್ತಿಕೊಂಡ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು

Posted On: 20 DEC 2023 4:04PM by PIB Bengaluru

 

ಗಣಿಬಾಧಿತ ಪ್ರದೇಶಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ [ಡಿಎಂಎಫ್] ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕುರಿತಂತೆ 16.09.2015 ರಂದು ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ [ಪಿಎಂಕೆಕೆಕೆವೈ] ಮಾರ್ಗಸೂಚಿಯನ್ನು ಗಣಿ ಸಚಿವಾಲಯ ಹೊರಡಿಸಿದೆ. ಪಿಎಂಕೆಕೆಕೆವೈ ಅಡಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕುರಿತಂತೆ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಹಣ ಮಂಜೂರು ಮಾಡಲಾಗಿದೆ. ಪಿಎಂಕೆಕೆಕೆವೈ ಯೋಜನೆ ಪ್ರಕಾರ ಗಣಿಬಾಧಿತ ಪ್ರದೇಶ ಮತ್ತು ಜನರನ್ನು ಗುರುತಿಸುವಂತೆ ಡಿಎಂಎಫ್ ಗಳಿಗೆ ನಿರ್ದೇಶನ ನೀಡಲಾಗಿದೆ. 60% ರಷ್ಟು ಹಣವನ್ನು ಆದ್ಯತಾ ವಲಯಗಳಿಗೆ ವೆಚ್ಚ ಮಾಡುವಂತೆ ಸೂಚಿಸಲಾಗಿದೆ. (i) ಕುಡಿಯುವ ನೀರು ಪೂರೈಕೆ. (ii) ಪರಿಸರ ನಿಯಂತ್ರಣ ಮತ್ತು ಮಾಲೀನ್ಯ ನಿಯಂತ್ರಣ ಕ್ರಮಗಳು, (iii) ಆರೋಗ್ಯ ಆರೈಕೆ; (iv) ಶಿಕ್ಷಣ, (v) ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, (vi) ಹಿರಿಯ ನಾಗರಿಕರು ಮತ್ತು ದಿವ್ಯಾಂಗ ಜನರ ಕಲ್ಯಾಣ, (vii) ಕೌಶಲ್ಯಾಭಿವೃದ್ಧಿ: (viii) ನೈರ್ಮಲ್ಯ ಮತ್ತು 40% ರಷ್ಟು ಹಣವನ್ನು ಇತರೆ ಆದ್ಯತೆಗಳಾದ (i) ಭೌತಿಕ ಮೂಲ ಸೌಕರ್ಯ, (ii) ನೀರಾವರಿ: (iii) ಇಂಧನ ಮತ್ತು ಜಲ ಸಂವರ್ಧನೆ ಮತ್ತು (iv) ಗಣಿ ಜಿಲ್ಲೆಯಲ್ಲಿ ಗುಣಮಟ್ಟದ ಪರಿಸರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ [ಪಿಎಂಕೆಕೆಕೆವೈ]ಯಡಿ ನಡೆದ ಕಾಮಗಾರಿ ವಿವರಗಳನ್ನು ಅನುಬಂಧ – 1 ರಲ್ಲಿ ನೀಡಲಾಗಿದೆ.

ಜಿಲ್ಲಾ ಖನಿಜ ಪ್ರತಿಷ್ಠಾನಗಳಿಗೆ [ಡಿಎಂಎಫ್] ಗಣಿ ಸಚಿವಾಲಯದಿಂದ ಕೇಂದ್ರದ ಯಾವುದೇ ಅಯವ್ಯಯ ನಿಗದಿ ಮಾಡಲು ಅವಕಾಶವಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ ನಿಗದಿತ ಶೇಕಡಾವಾರು ರಾಯಧನದ ಪ್ರಕಾರ ಗಣಿಗಾರಿಕೆಗೆ ಗುತ್ತಿಗೆ ಪಡೆದಿರುವವರಿಂದ ಶಾಸನಬದ್ಧ ಕೊಡುಗೆಗಳ ಮೂಲಕ ಡಿಎಂಎಫ್ ಗೆ ಧನ ಸಹಾಯ ನೀಡಲಾಗುತ್ತದೆ.

ಅನುಬಂಧ – 1 ಪ್ರಶ್ನೆಯ ಭಾಗ [ಬಿ]ಗೆ ಉತ್ತರವಾಗಿ ಉಲ್ಲೇಖಿಸಲಾಗಿದೆ

ಸಂಖ್ಯೆ –2887

ಕ್ರ.ಸಂಖ್ಯೆ

ವಲಯವಾರು ಕೆಲಸ

ಒಟ್ಟು ಯೋಜನೆಗಳು

[ಕೋಟಿ ರೂ ಗಳಲ್ಲಿ]

ಮಂಜೂರಾದ ಮೊತ್ತ

[ಕೋಟಿ ರೂ ಗಳಲ್ಲಿ]

ವೆಚ್ಚ ಮಾಡಿದ ಮೊತ್ತ
[ಕೋಟಿ ರೂ ಗಳಲ್ಲಿ]

ದ್ಯತೆಯ ಕೆಲಸ ಶೇ 60% ರಷ್ಟು

1

ಕುಡಿಯುವ ನೀರು ಪೂರೈಕೆ

283

187.40

180.33

2

ಪರಿಸರ ಸಂರಕ್ಷಣೆ ಮತ್ತು ಮಾಲೀನ್ಯ ನಿಯಂತ್ರಣ ಕ್ರಮಳು

67

32.78

22.16

3

ಆರೋಗ್ಯ

227

49.82

41.70

4

ಶಿಕ್ಷಣ

3049

190.37

103.62

5

ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ

7

1.33

1.11

6

ಹಿರಿಯ ನಾಗರಿಕರು ಮತ್ತು ದಿವ್ಯಾಂಗರ ಕಲ್ಯಾಣ

11

1.83

0.63

7

ಕೌಶಲ್ಯಾಭಿವೃದ್ಧಿ

3

1.47

1.11

8

ನೈರ್ಮಲ್ಯ

220

33.82

15.45

ಉಪ ಒಟ್ಟು [ಎ]

3867

498.82

366.11

ಇತರೆ ಆದ್ಯತೆ ಕೆಲಸ - 40% ರಷ್ಟು

 

ಭೌತಿಕ ಮೂಲ ಸೌಕರ್ಯ

 

2825

566.60

342.69

 

ನೀರಾವರಿ

 

1

0.05

0.05

3

ಇಂಧನ ಮತ್ತು ಜಲಸಂರ್ವಧನೆ

678

26.76

23.80

4

ಗಣಿ ಜಿಲ್ಲೆಗಳಲ್ಲಿ ಪರಿಸರದ ಗುಣಮಟ್ಟ ಹೆಚ್ಚಿಸಲು ಇತರೆ ಕ್ರಮಗಳು

47

11.86

11.84

ಉಪ ಒಟ್ಟು [ಬಿ]

3551

605.27

378.38

ಒಟ್ಟು

7418

1104.09

744.49

ಈ ಮಾಹಿತಿಯನ್ನು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹಲ್ಲಾದ್ ಜೋಶಿ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

****

 

 


(Release ID: 1988745) Visitor Counter : 67


Read this release in: Tamil , English , Urdu , Hindi