ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ವಾರಣಾಸಿಗೆ ತಲುಪಿದ ಕಾಶಿ ತಮಿಳು ಸಂಗಮಂ ಹಂತ IIರ ತಮಿಳು ಶಿಕ್ಷಕರ ಗುಂಪು
Posted On:
19 DEC 2023 6:58PM by PIB Bengaluru
ಕಾಶಿ ತಮಿಳು ಸಂಗಮಂನ ತಮಿಳು ಶಿಕ್ಷಕರ ಎರಡನೇ ನಿಯೋಗವು (ಪವಿತ್ರ ಯಮುನಾ ನದಿಯ ಹೆಸರಿಡಲಾಗಿದೆ) ಇಂದು ವಾರಣಾಸಿ ತಲುಪಿತು. ನಿಲ್ದಾಣದಲ್ಲಿ ಕೇಂದ್ರ ಮುದ್ರಾಂಕ ಮತ್ತು ನ್ಯಾಯಾಲಯ ಶುಲ್ಕ, ನೋಂದಣಿ ಖಾತೆ ರಾಜ್ಯ ಸಚಿವ (ಸ್ವತಂತ್ರ ಖಾತೆ) ಶ್ರೀ ರವೀಂದ್ರ ಜೈಸ್ವಾಲ್ ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಡಿಸೆಂಬರ್ 20ರಂದು ನಮೋ ಘಾಟ್‌ನಲ್ಲಿ ಬಿಎಚ್ಯು ವತಿಯಿಂದ ಶೈಕ್ಷಣಿಕ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಿಎಚ್ಯು ಶಿಕ್ಷಕರು ಮತ್ತು ದಕ್ಷಿಣದ ಅವರ ಸಹವರ್ತಿಗಳು ಅರ್ಥಪೂರ್ಣ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ.
ಅವರು ನಗರದಲ್ಲಿ ತಂಗಿರುವ ಸಮಯದಲ್ಲಿ ತಮಿಳುನಾಡು ಮತ್ತು ಉತ್ತರ ಪ್ರದೇಶದ ಕಲೆ ಮತ್ತು ಸಂಸ್ಕೃತಿಯ ವೈಭವ, ಸೊಬಗಿನ ಬಗ್ಗೆ ತಿಳಿಯಲಿದ್ದಾರೆ. ಅವರು ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ, ಕಾಲ ಭೈರವ ದೇವಸ್ಥಾನ, ಹನುಮಾನ್ ಘಾಟ್ ಇತರೆಡೆ ಭೇಟಿ ನೀಡುತ್ತಾರೆ. ಹಾಗೆಯೇ ಸಾರನಾಥ, ಪ್ರಯಾಗ್ ರಾಜ್ ಮತ್ತು ಅಯೋಧ್ಯೆಗೂ ಭೇಟಿ ನೀಡುತ್ತಾರೆ.
***
(Release ID: 1988565)
Visitor Counter : 84