ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಸ್ಪೋರ್ಟ್ಸ್ ಸೈನ್ಸ್ ಕಾನ್ಕ್ಲೇವ್ ‌ನಲ್ಲಿ ಪ್ಯಾರಾ ಅಥ್ಲೀಟ್ ‌ಗಳಿಗೆ ಬದ್ಧತೆಯನ್ನು ಖಚಿತ ಪಡಿಸಿದ ಸಚಿವ ಶ್ರೀ ಅನುರಾಗ್ ಠಾಕೂರ್


ಪ್ರಮುಖ ವಿಷಯಗಳ ಕುರಿತು ಕಾನ್ಕ್ಲೇವ್ ಹಮ್ಮಿಕೊಂಡ ಪ್ಯಾನೆಲ್ ಚರ್ಚೆಗಳು ಮತ್ತು ಉಪನ್ಯಾಸಗಳಲ್ಲಿ ಹಲವಾರು ಗಣ್ಯ ವ್ಯಕ್ತಿಗಳ ಭಾಗವಹಿಸಿದರು

Posted On: 13 DEC 2023 5:43PM by PIB Bengaluru

ಖೇಲೋ ಇಂಡಿಯಾದ ಸಹಯೋಗದೊಂದಿಗೆ ರಾಷ್ಟ್ರೀಯ ಕ್ರೀಡಾ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ (ಎನ್‌ಸಿಎಸ್‌ಎಸ್‌ಆರ್) ಆಯೋಜಿಸಿರುವ ಎರಡು ದಿನಗಳ ಕ್ರೀಡಾ ವಿಜ್ಞಾನ ಕಾನ್ಕ್ಲೇವ್ ಕಾರ್ಯಕ್ರಮವು ಕ್ರೀಡೆಯಲ್ಲಿ ಒಳಗೊಳ್ಳುವಿಕೆ ಮತ್ತು ಪ್ರಗತಿಗೆ ಬದ್ಧತೆಯನ್ನು ಪ್ರದಶಿಸುವ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿತು. ಕ್ರೀಡಾ ಚರ್ಚೆಗಳನ್ನು ಉತ್ತೇಜಿಸುವುದು ಮತ್ತು ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಯಶಸ್ಸಿಗೆ ತಂತ್ರಗಳನ್ನು ರೂಪಿಸುವುದು ಮುಖ್ಯವಾದ ವಿಷಯವಾಗಿತ್ತು. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಇವರ ನೇತೃತ್ವದಲ್ಲಿ ಈ ಉಪಕ್ರಮ ಮುಂಚೂಣಿಯಾಗಿ ಮಹತ್ವದ ಹಂತ ತಲುಪಿತು

https://static.pib.gov.in/WriteReadData/userfiles/image/image001N99F.jpg

ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಇಂದು (ಬುಧವಾರ ) ನಡೆದ ಕ್ರೀಡಾ ವಿಜ್ಞಾನ ಸಮಾವೇಶದ ಉದ್ಘಾಟನೆಯು ಭಾರತದ ವಿಕಾಸಗೊಳ್ಳುತ್ತಿರುವ ಕ್ರೀಡಾ ವ್ಯವಸ್ಥೆಯ ಬೃಹತ್‌ ಚೌಕಟ್ಟಿಗೆ ಸಾಕ್ಷಿಯಾಗಿತು. ವಿಶೇಷವಾಗಿ ಸವಾಲು ಹೊಂದಿರುವ ಕ್ರೀಡಾಪಟುಗಳಿಗೆ ಕ್ರೀಡಾಕೂಟಗಳ ಮೇಲೆ ಗಮನ ಮತ್ತು ಶ್ರದ್ಧೆ ಹೆಚ್ಚಿಸುವ ಮೂಲಕ ಸಾಂಪ್ರದಾಯಿಕ ಗಡಿ ಮೀರಿದ ಸಮಾರಂಭವಾಗಿ ಹೊರಹೊಮ್ಮಿತು.

ಪ್ಯಾರಾ ಅಥ್ಲೀಟ್‌ಗಳಿಗೆ ಒಳಗೊಳ್ಳುವಿಕೆ ಮತ್ತು ಸಮಾನ ಅವಕಾಶಗಳನ್ನು ಪ್ರತಿಪಾದಿಸಿದ ಶ್ರೀ ಠಾಕೂರ್ ಅವರು, "ಎನ್‌.ಸಿ.ಎಸ್‌.ಎಸ್‌.ಆರ್‌.ನ ಪ್ರಮುಖ ಕಾನ್‌ಕ್ಲೇವ್‌ ಗಳನ್ನು ಆಯೋಜಿಸಲು ಇದು ನಿಜವಾಗಿಯೂ ಉತ್ತೇಜನಕಾರಿಯಾಗಿದೆ, ಅಲ್ಲಿ ಮಧ್ಯಸ್ಥಗಾರರು ಸಬಲರು ಮತ್ತು ಪ್ಯಾರಾ ಅಥ್ಲೀಟ್‌ಗಳ ಪಥವನ್ನು ರೂಪಿಸಲು ಸಮಾವೇಶಗೊಳ್ಳುತ್ತಾರೆ. ಎಲ್ಲಾ ಕ್ರೀಡಾಪಟುಗಳಿಗೆ ಸಮಾನ ಸೌಲಭ್ಯಗಳು ಮತ್ತು ಗೌರವವನ್ನು ವಿಸ್ತರಿಸುವುದರೊಂದಿಗೆ ಒಳಗೊಳ್ಳುವ ವಿಧಾನವು ಚಾಲ್ತಿಯಲ್ಲಿದೆ, ಯಾವುದೇ ವ್ಯತ್ಯಾಸಗಳನ್ನು ಈ ಕ್ರೀಡಾ ವಿಧಾನವು ಮಸುಕುಗೊಳಿಸುತ್ತದೆ. ಸಂಘಟನೆಯ ಪರಿಕಲ್ಪನೆಯಾದ 'ಲಿಮಿಟ್ಲೆಸ್ ಹಾರಿಜಾನ್ಸ್,' 'ಹೌಸ್ಲೋ ಕಿ ಉಡಾನ್' ಗಳ ಉತ್ಸಾಹದೊಂದಿಗೆ ಆಳವಾಗಿ ಅನುರಣಿಸುತ್ತದೆ. ಇದು ವಿಕಲಾಂಗರು ಮತ್ತು ಪ್ಯಾರಾ ಅಥ್ಲೀಟ್‌ಗಳಿಗೆ ಕ್ರೀಡಾ ವಿಜ್ಞಾನವನ್ನು ಗುರುತಿಸುವ ಮತ್ತು ಚರ್ಚಿಸುವ ಮೀಸಲಾದ ವೇದಿಕೆಯಾಗಿದೆ, ಇದು ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಮುನ್ನಡೆಸಲು ಸಿದ್ಧವಾಗಿದೆ” ಎಂದು ಹೇಳಿದರು.

"ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನ ಪ್ರಮುಖ ಕಾರ್ಯಕ್ರಮ ಖೇಲೋ ಇಂಡಿಯಾ ಯೂತ್ ಗೇಮ್ಸ್ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ನ ಸಂಯೋಜನೆಯು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತದೆ. ಇದು ಕ್ರೀಡೆಯಲ್ಲಿ ಒಳಗೊಳ್ಳುವಿಕೆ ಮತ್ತು ಸಮಾನತೆಗೆ ಪ್ರಧಾನಮಂತ್ರಿ ಅವರ ಬದ್ಧತೆಯನ್ನು ದೃಢೀಕರಿಸುತ್ತದೆ.” ಎಂದು ಹೇಳಿದರು.

" ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಿಒಪಿಎಸ್) ಅಡಿಯಲ್ಲಿ, 49 ಪ್ಯಾರಾ ಅಥ್ಲೀಟ್‌ಗಳು ವಾಸ, ಆಹಾರ ಮತ್ತು ತರಬೇತಿಯನ್ನು ಒಳಗೊಂಡ ಸಮಗ್ರ ಬೆಂಬಲವನ್ನು ಪಡೆಯುತ್ತಾರೆ ಎಂಬ ವಿಷಯ ನನಗೆ ಸಂತೋಷ ತರುತ್ತಿದೆ “ಎಂದು ಹೇಳಿದರು.

ಡಾ ದೀಪಾ ಮಲಿಕ್ (ಅಧ್ಯಕ್ಷರು ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ), ಶ್ರೀ ಅಂಕುರ್ ಧಾಮ (ಪ್ಯಾರಾ ಲಾಂಗ್ ಡಿಸ್ಟೆನ್ಸ್ ರನ್ನರ್), ಶ್ರೀಮತಿ ಭಾವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನ್ನಿಸ್ ಅಥ್ಲೀಟ್), ಶ್ರೀ ವಿ ಕೆ ಡಬ್ಬಾಸ್ (ಪ್ಯಾರಾ ಈಜು ತರಬೇತುದಾರ), ಡಾ. ಪಿಯರೆ, ಬ್ಯೂಚಾಂಪ್ (ಎಚ್‌ಪಿಡಿ ಎನ್‌ಆರ್‌ಎಐ), ಡಾ. ಇಶಾ ಜೋಶಿ (ಸ್ಪೋರ್ಟ್ಸ್ ಫಿಸಿಯೋಥೆರಪಿಸ್ಟ್), ಮತ್ತು ಡಾ. ಅಮೇಯ ಕಾಗಲಿ (ಸ್ಪೋರ್ಟ್ಸ್ ಮೆಡಿಸಿನ್) ಮುಂತಾದ ಹಲವಾರು ಗಣ್ಯರು ಕ್ರೀಡಾ ವಿಜ್ಞಾನ ಸಮಾವೇಶದ ‌ ಮೊದಲದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

'ಲಿಮಿಟ್ಲೆಸ್ ಹಾರಿಜಾನ್: ಸ್ಪೋರ್ಟ್ಸ್ ಸೈನ್ಸ್ ಫಾರ್ ಪೀಕ್ ಪರ್ಫಾರ್ಮೆನ್ಸ್' - ಕಾನ್‌ಕ್ಲೇವ್‌ನ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಕ್ರೀಡಾಳಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕ್ರೀಡಾ ವಿಜ್ಞಾನವನ್ನು ವೇಗವರ್ಧಕವಾಗಿ ಬಳಸಿಕೊಳ್ಳುವುದರ ಕುರಿತಾಗಿತ್ತು ಈ ಅಧಿವೇಶನ. ಸೂಕ್ತವಾದ ತರಬೇತಿ ವಿಧಾನಗಳು, ಅತ್ಯಾಧುನಿಕ ತಂತ್ರಜ್ಞಾನಗಳು, ಪ್ಯಾರಾ ಅಥ್ಲೀಟ್‌ಗಳ ಅನನ್ಯ ಅಗತ್ಯಗಳಿಗೆ ಅನುಗುಣವಾಗಿ ವೈಜ್ಞಾನಿಕ ಪ್ರಗತಿಗಳನ್ನು ಸೂಕ್ಷ್ಮವಾಗಿ ಈ ಕಾನ್‌ಕ್ಲೇವ್‌ನಲ್ಲಿ ಪರಿಶೀಲಿಸಲಾಯಿತು.

ಪ್ಯಾರಾ ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಸೈನ್ಸ್: ಪ್ಯಾರಾ ಅಥ್ಲೀಟ್‌ಗಳ ಯಶಸ್ಸು, ಮಾನಸಿಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮುಂತಾದ ವಿಷಯಗಳ ಕುರಿತು ಪ್ಯಾನಲ್ ಚರ್ಚೆಗಳು ಕಾನ್ಕ್ಲೇವ್‌ನ ಆರಂಭಿಕ ದಿನದಂದು ನಡೆದವು. ಪ್ಯಾರಾ ಗೇಮ್‌ಗಳ ಕುರಿತಾದ ಜ್ಞಾನ-ಹೇಗೆ ಮತ್ತು ಪ್ರಾಮುಖ್ಯತೆ, ಪ್ಯಾರಾ ಕ್ರೀಡೆಗಳಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬೆಂಬಲ, ಮತ್ತು ಪ್ಯಾರಾ ಕ್ರೀಡೆಗಳಲ್ಲಿ ಕ್ರೀಡಾ ಆಡಳಿತ, ಮುಂತಾದ ವರ್ಗೀಕೃತ ವಿವಿಧ ವಿಷಯಗಳ ಕುರಿತು ಅವಲೋಕನ, ಉಪನ್ಯಾಸಗಳು ನಡೆದವು.

ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ 2023 ಬಗ್ಗೆ

ಭಾರತ ಸರ್ಕಾರದ ಖೇಲೋ ಇಂಡಿಯಾ ಉಪಕ್ರಮಕ್ಕೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ 2023 ಇತ್ತೀಚಿನ ಸೇರ್ಪಡೆಯಾಗಿದೆ. ತಳಮಟ್ಟದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವ ಗುರಿಯೊಂದಿಗೆ, ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಅಂಗವೈಕಲ್ಯವನ್ನು ಎದುರಿಸುತ್ತಿರುವ ಪ್ರತಿಯೊಬ್ಬ ಕ್ರೀಡಾಪಟುವನ್ನು ಸಬಲೀಕರಣಗೊಳಿಸಲು ಈ ಯೋಜನೆಯು ಪ್ರಯತ್ನಿಸುತ್ತದೆ. ಈ ಪ್ರಯತ್ನದ ಮೂಲಕ ಅಂತರರಾಷ್ಟ್ರೀಯ ಪ್ಯಾರಾ ಈವೆಂಟ್‌ಗಳಲ್ಲಿ ಭಾರತವನ್ನು ಹೆಮ್ಮೆಪಡಿಸುವಂತಹ ಚಾಂಪಿಯನ್‌ಗಳ ತಂಡವನ್ನು ಗುರುತಿಸುವ ಮತ್ತು ಸೃಷ್ಠಿಸುವ ಉದ್ದೇಶವಾಗಿದೆ.

ಕೆಐಪಿಜಿ 2023 ಅನ್ನು ಡಿಸೆಂಬರ್ 10 ರಿಂದ 17 ರವರೆಗೆ ನವದೆಹಲಿಯಲ್ಲಿ ಮೂರು ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಕ್ರೀಡಾಕೂಟವು ಸರಿಸುಮಾರು 1,400 ಕ್ರೀಡಾಪಟುಗಳನ್ನು ಒಂದಡೆ ಒಟ್ಟುಗೂಡಿಸುತ್ತದೆ. ಅಥ್ಲೆಟಿಕ್ಸ್, ಶೂಟಿಂಗ್, ಬಿಲ್ಲುಗಾರಿಕೆ, ಫುಟ್‌ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮತ್ತು ಪವರ್‌ಲಿಫ್ಟಿಂಗ್ - ಈ ಕ್ರೀಡಾಪಟುಗಳು ಏಳು ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.

ದೀಪಾಲಿ ವಿನ್ಯಾಸಗಳು ಮತ್ತು ಪ್ರದರ್ಶನ ಸಂಸ್ಥೆಯ ವಿಭಾಗವಾದ ದೀಪಾಲಿ ಸ್ಪೋರ್ಟ್ಸ್, ಈ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕ ಸಂಸ್ಥೆಯಾಗಿದೆ. ಐಬಿಡಿಎನ್ ಮತ್ತು ಸೂರ್ಯ ರೋಶ್ನಿ ಲಿಮಿಟೆಡ್‌ ಸಂಸ್ಥೆಗಳು ಸಹ ಪ್ರಾಯೋಜಕ ಸಂಸ್ಥೆಗಳಾಗಿವೆ.

***



(Release ID: 1986038) Visitor Counter : 54