ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

​​​​​​​ನಾಳೆ ಹೊಸದಿಲ್ಲಿಯಲ್ಲಿ ನಡೆಯಲಿದೆ ಇಂಡಿಯಾ ಇಂಟರ್ನೆಟ್ ಗವರ್ನೆನ್ಸ್ ಫೋರಂ ಸಮಾವೇಶ ಐಐಜಿಎಫ್ ’23

Posted On: 04 DEC 2023 11:54AM by PIB Bengaluru

ಇಂಟರ್ನೆಟ್ ಗವರ್ನೆನ್ಸ್ ಫೋರಂ (ಐಜಿಎಫ್) ವಿವಿಧ ಗುಂಪುಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಬಹು-ಭಾಗೀದಾರರ ವೇದಿಕೆಯಾಗಿದ್ದು, ಇಂಟರ್ನೆಟ್ (ಅಂತರ್ಜಾಲ)  ಸಂಬಂಧಿತ ಸಾರ್ವಜನಿಕ ನೀತಿ ಸಮಸ್ಯೆಗಳನ್ನು ಚರ್ಚಿಸಲು ಎಲ್ಲರೂ ಸಮಾನರು ಎಂದು ಪರಿಗಣಿಸುವ ಸಂಸ್ಥೆಯಾಗಿದೆ. ಇಂಡಿಯಾ ಇಂಟರ್ನೆಟ್ ಗವರ್ನೆನ್ಸ್ ಫೋರಂ 2023 (ಐಐಜಿಎಫ್ -2023) ಹೈಬ್ರಿಡ್ ಕಾರ್ಯಕ್ರಮವಾಗಿದ್ದು, ಡಿಸೆಂಬರ್ 5 ರಂದು 09:00 - 18:30 (ಭಾರತೀಯ ಕಾಲಮಾನ) ರವರೆಗೆ  ಆಯೋಜಿಸಲಾಗಿದೆ. 2021 ಮತ್ತು 2022 ರಲ್ಲಿ ಐಐಜಿಎಫ್ ನ  ಮೊದಲ ಎರಡು ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿದ ನಂತರ, ಐಐಜಿಎಫ್   ಮೂರನೇ ಆವೃತ್ತಿಯನ್ನು "ಮುನ್ನಡೆ - ಭಾರತದ ಡಿಜಿಟಲ್ ಕಾರ್ಯಸೂಚಿಯ ಮಾಪನಾಂಕ " ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಸಲಾಗುತ್ತಿದೆ.

ಈ ಕಾರ್ಯಕ್ರಮವು ಭಾರತಕ್ಕಾಗಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕತ್ವವುಳ್ಳ ಸೈಬರ್ ಸ್ಪೇಸ್ ನಿರ್ಮಿಸುವುದು, ಭಾರತದ ಅಭಿವೃದ್ಧಿ ಗುರಿಗಳಿಗೆ ನಾವೀನ್ಯತೆಯನ್ನು ಅಳವಡಿಸಲು ಸಜ್ಜುಗೊಳಿಸುವುದು, ಕಂದಕಗಳನ್ನು ನಿವಾರಿಸುವುದು ಮತ್ತು ಜಾಗತಿಕ ಡಿಜಿಟಲ್ ಆಡಳಿತ ಮತ್ತು ಸಹಕಾರಕ್ಕೆ ಸಂಬಂಧಿಸಿದಂತೆ  ನಾಯಕತ್ವದ ಬಗ್ಗೆ ಭಾರತದ ಡಿಜಿಟಲ್ ಕಾರ್ಯಸೂಚಿಯನ್ನು ಮಾಪನಾಂಕ ಮಾಡುವುದು ಮುಂತಾದ ವಿಷಯಗಳ ಬಗ್ಗೆ ಆಳವಾಗಿ ಪರಿಶೀಲಿಸುವ ಪ್ರಯತ್ನವಾಗಿದೆ. ವೈಯಕ್ತಿಕವಾಗಿ ಭಾಗವಹಿಸುವವರಿಗಾಗಿ ಹೊಸದಿಲ್ಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೆ  ನೋಂದಾಯಿಸಲು ಮತ್ತು ವಿವರವಾದ ಕಾರ್ಯಸೂಚಿಯನ್ನು ವೀಕ್ಷಿಸಲು ಕೊಂಡಿ ಇಲ್ಲಿದೆ: https://indiaigf.in/agenda-2023/

ಭಾರತೀಯ ಕಾಲಮಾನ 10:00 ರಿಂದ 11:30 ರವರೆಗೆ ನಿಗದಿಯಾಗಿರುವ ಉದ್ಘಾಟನಾ ಅಧಿವೇಶನದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಹಾಗು ಉದ್ಯಮಶೀಲತೆ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಪಾಲ್ಗೊಳ್ಳಲಿದ್ದಾರೆ.  ಇದಲ್ಲದೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ-ಮೈಟಿ) ಕಾರ್ಯದರ್ಶಿ ಶ್ರೀ ಎಸ್ ಕೃಷ್ಣನ್ ಅವರು ವಿಶೇಷ ಭಾಷಣ ಮಾಡಲಿದ್ದಾರೆ. ಎಂಇಐಟಿವೈಯ ಜಂಟಿ ಕಾರ್ಯದರ್ಶಿ ಶ್ರೀ ಸುಶೀಲ್ ಪಾಲ್ ಅವರು ಸ್ವಾಗತ ಭಾಷಣ ಮಾಡಲಿದ್ದಾರೆ. 

ಅವರೊಂದಿಗೆ ವಿಶ್ವಸಂಸ್ಥೆಯ ಇಂಟರ್ನೆಟ್ ಆಡಳಿತ ವೇದಿಕೆ (ಐಜಿಎಫ್), ನಿಯೋಜಿತ ಹೆಸರುಗಳು ಮತ್ತು ಸಂಖ್ಯೆಗಳಿಗಾಗಿರುವ ಇಂಟರ್ನೆಟ್ ಸಹಕಾರ (ಐಸಿಎಎನ್ಎನ್) ಸೇರಿದಂತೆ  ನಾಗರಿಕ ಸಮಾಜ, ಖಾಸಗಿ ವಲಯ, ತಾಂತ್ರಿಕ ಸಮುದಾಯ, ಚಿಂತಕರ ಚಾವಡಿಗಳು, ಉದ್ಯಮ ಸಂಘಗಳು ಮುಂತಾದ ಅಂತರರಾಷ್ಟ್ರೀಯ ಸಂಸ್ಥೆಗಳ ಗಣ್ಯರು ದಿನವಿಡೀ ವಿವಿಧ ಪ್ಯಾನಲ್ ಚರ್ಚೆಗಳಲ್ಲಿ ತೊಡಗಲಿದ್ದಾರೆ.

ಐ.ಐ.ಜಿ.ಎಫ್  ಬಗ್ಗೆ

ಇಂಡಿಯಾ ಇಂಟರ್ನೆಟ್ ಗವರ್ನೆನ್ಸ್ ಫೋರಂ ಎಂಬುದು  ಯುಎನ್ ಇಂಟರ್ನೆಟ್ ಗವರ್ನೆನ್ಸ್ ಫೋರಂ (ಯುಎನ್ ಐಜಿಎಫ್) ಗೆ ಸಂಬಂಧಿಸಿದ ಉಪಕ್ರಮವಾಗಿದೆ. ಇಂಟರ್ನೆಟ್ ಗವರ್ನೆನ್ಸ್ ಫೋರಂ (ಐಜಿಎಫ್) ಅಂತರ್ಜಾಲಕ್ಕೆ ಸಂಬಂಧಿಸಿದ ಸಾರ್ವಜನಿಕ ನೀತಿ ಸಮಸ್ಯೆಗಳನ್ನು ಚರ್ಚಿಸಲು ವಿವಿಧ ಗುಂಪುಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಬಹು-ಭಾಗೀದಾರರ/ ಮಧ್ಯಸ್ಥಗಾರರ ವೇದಿಕೆಯಾಗಿದೆ. ಇಂಟರ್ನೆಟ್ ಅವಕಾಶಗಳನ್ನು ಹೇಗೆ ಗರಿಷ್ಠಗೊಳಿಸುವುದು ಮತ್ತು ಉದ್ಭವಿಸಬಹುದಾದ ಅಪಾಯಗಳು ಮತ್ತು ಸವಾಲುಗಳನ್ನು ಹೇಗೆ ಪರಿಹರಿಸುವುದು ಎಂಬುದರ ಬಗ್ಗೆ ಸಾಮಾನ್ಯ ತಿಳುವಳಿಕೆಯನ್ನು ಐಜಿಎಫ್ ಸುಗಮಗೊಳಿಸುತ್ತದೆ. ಇಂಡಿಯಾ ಐಜಿಎಫ್ ಅಥವಾ ಐಐಜಿಎಫ್ ಎಂದು ಕರೆಯಲ್ಪಡುವ ವಿಶ್ವಸಂಸ್ಥೆಯ ಐಜಿಎಫ್ ನ  ಭಾರತೀಯ ಘಟಕವನ್ನು  2021 ರಲ್ಲಿ ರಚಿಸಲಾಯಿತು. ಸರ್ಕಾರ, ನಾಗರಿಕ ಸಮಾಜ, ಕೈಗಾರಿಕೆಗಳು, ತಾಂತ್ರಿಕ ಸಮುದಾಯ, ಚಿಂತಕರ ಚಾವಡಿಗಳು, ಕೈಗಾರಿಕಾ ಸಂಘಗಳು ಇತ್ಯಾದಿಗಳನ್ನು ಪ್ರತಿನಿಧಿಸುವ 14 ಸದಸ್ಯರ ಬಹು-ಭಾಗೀದಾರರ/ ಮಧ್ಯಸ್ಥಗಾರರ ಸಮಿತಿಗಳು ಇದನ್ನು ಬೆಂಬಲಿಸುತ್ತಿವೆ. https://www.indiaigf.in 

*****


(Release ID: 1982343) Visitor Counter : 96