ರಾಷ್ಟ್ರಪತಿಗಳ ಕಾರ್ಯಾಲಯ
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 145ನೇ ಕೋರ್ಸ್ನ ಪಾಸಿಂಗ್ ಔಟ್ ಪರೇಡ್ ಅನ್ನು ಭಾರತದ ರಾಷ್ಟ್ರಪತಿಯವರು ಪರಿಶೀಲಿಸಿದರು
Posted On:
30 NOV 2023 12:22PM by PIB Bengaluru
ರಾಷ್ಟ್ರೀಯ ರಕ್ಷಣಾ (ನ್ಯಾಶನಲ್ ಡಿಫೆನ್ಸ್ ) ಅಕಾಡೆಮಿಯ 145ನೇ ಕೋರ್ಸ್ನ ಪಾಸಿಂಗ್ ಔಟ್ ಪರೇಡ್ ಅನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 30, 2023) ಖಡಕ್ವಾಸ್ಲಾದಲ್ಲಿ ಪರಿಶೀಲಿಸಿದರು. ಅವರು ಮುಂಬರುವ 5ನೇ ಬೆಟಾಲಿಯನ್ ಗಾಗಿ ನೂತನ ಕಟ್ಟಡಕ್ಕೆ ಅಡಿಪಾಯ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಮಹಾನ್ ಯೋಧರಿಗೆ ಜನ್ಮ ನೀಡಿದ ನಾಯಕತ್ವದ ತೊಟ್ಟಿಲು ಎನ್ ಡಿ ಎ ಆಗಿದೆ. ಈ ಅಕಾಡೆಮಿಯು ದೇಶದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಮತ್ತು ಸಶಸ್ತ್ರ ಪಡೆಗಳಿಗೆ ಮತ್ತು ದೇಶಕ್ಕೆ ಬಲವಾದ ಆಧಾರಸ್ತಂಭವಾಗಿ ಗುರುತಿಸಲ್ಪಟ್ಟಿದೆ. ಎನ್ಡಿಎಯಿಂದ ಪಡೆದ ತರಬೇತಿ ಮತ್ತು ಜೀವನ ಮೌಲ್ಯಗಳು ಕೆಡೆಟ್ ಗಳಿಗೆ ತಮ್ಮ ಜೀವನದಲ್ಲಿ ಮುಂದುವರಿಯಲು ಯಾವಾಗಲೂ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಹೇಳಿದರು.
ಭವಿಷ್ಯದ ಸವಾಲುಗಳನ್ನು ಎದುರಿಸಲು ಹೊಸ ತಂತ್ರಜ್ಞಾನಗಳನ್ನು ಕಲಿಯುವ ಮತ್ತು ಅಳವಡಿಸಿಕೊಳ್ಳುವ ಮೂಲಕ ಮುನ್ನಡೆಯಲು ಅವರು ಕೆಡೆಟ್ಗಳಿಗೆ ಸಲಹೆ ನೀಡಿದರು. ಸಶಸ್ತ್ರ ಸೇವೆಗಳ ಮೌಲ್ಯಗಳನ್ನು ಇನ್ನೂ ಮುಂದಕ್ಕೆ ಸಾಗಿಸುವಾಗ ಅವರು ಧೈರ್ಯ ಮತ್ತು ಶೌರ್ಯದಿಂದ ಪ್ರತಿ ಸವಾಲನ್ನು ಎದುರಿಸುತ್ತಾರೆ ಎಂದು ರಾಷ್ಟ್ರಪತಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಪ್ರಥಮ ಬಾರಿಗೆ ಎನ್ಡಿಎಯ ಪಾಸಿಂಗ್ ಔಟ್ ಪರೇಡ್ನಲ್ಲಿ ಮಹಿಳಾ ಕೆಡೆಟ್ಗಳ ಕವಾಯತು ತಂಡ ಭಾಗವಹಿಸಿದ್ದಕ್ಕೆ ರಾಷ್ಟ್ರಪತಿಯವರು ಸಂತಸ ವ್ಯಕ್ತಪಡಿಸಿದರು. ಈ ದಿನ ನಿಜವಾದ ಅರ್ಥದಲ್ಲಿ ಐತಿಹಾಸಿಕ ಎಂದು ಅವರು ಹೇಳಿದರು. ಎಲ್ಲಾ ಮಹಿಳಾ ಕೆಡೆಟ್ಗಳು ಭವಿಷ್ಯದಲ್ಲಿ ದೇಶ ಮತ್ತು ಎನ್ಡಿಎಯ ಖ್ಯಾತಿನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾವು 'ವಸುಧೈವ ಕುಟುಂಬಕಂ' ಸಂಪ್ರದಾಯವನ್ನು ಅನುಸರಿಸುತ್ತೇವೆ. ಆದರೆ, ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಭಾರತದ ಗಡಿಗಳ ರಕ್ಷಣೆ ಮತ್ತು ಆಂತರಿಕ ಭದ್ರತೆ ಅತ್ಯಗತ್ಯ . ನಮ್ಮ ಪಡೆಗಳು ದೇಶ ಕಾಯುವಲ್ಲಿ ಸಂಪೂರ್ಣವಾಗಿ ಸಮರ್ಥವಾಗಿವೆ ಮತ್ತು ದೇಶದ ಏಕತೆ ಮತ್ತು ಸಮಗ್ರತೆಯ ಮನೋಭಾವವನ್ನು ಹಾಳುಮಾಡುವ ಯಾವುದೇ ಬಾಹ್ಯ ಅಥವಾ ಆಂತರಿಕ ಪರಿಸ್ಥಿತಿಯನ್ನು ಎದುರಿಸಲು ಸದಾ ಸಿದ್ಧವಾಗಿವೆ ಎಂದು ರಾಷ್ಟ್ರಪತಿಯವರು ಈ ಸಂದರ್ಭದಲ್ಲಿ ಹೇಳಿದರು.
http://ರಾಷ್ಟ್ರಪತಿಯವರ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
*****
(Release ID: 1981102)
Visitor Counter : 89