ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ನವದೆಹಲಿಯಲ್ಲಿ ಜರುಗಿದ ರಾಷ್ಟ್ರೀಯ ಔಟ್ ರೀಚ್ ಕಾರ್ಯಕ್ರಮದಲ್ಲಿ 'ದಿವ್ಯಾಂಗ್ ಮಕ್ಕಳಿಗಾಗಿ ಅಂಗನವಾಡಿ ಶಿಷ್ಟಾಚಾರ' ವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಚಾಲನೆ ಮಾಡಿದರು
"ಮಗುವಿನ ಹೃದಯದ ಸಾಮರ್ಥ್ಯವನ್ನು ಮಿತಿಗೊಳಿಸಲು ನಮ್ಮ ಮನಸ್ಸನ್ನು ನಾವು ಅನುಮತಿಸಬಾರದು: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ
ಪೋಶನ್ ಟ್ರ್ಯಾಕರ್ ನಲ್ಲಿ ಮಕ್ಕಳ ಬೆಳವಣಿಗೆಯ ಹಂತಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ
ಉತ್ತಮ ಅಭ್ಯಾಸಗಳನ್ನು ಗುರುತಿಸಲು "ಅಂಗನವಾಡಿ ಕೇಂದ್ರದಲ್ಲಿ ಆರಂಭಿಕ ಗುರುತಿಸುವಿಕೆ, ಪರಿಶೀಲನೆ ಮತ್ತು ಸೇರ್ಪಡೆಗಾಗಿ ಕಾರ್ಯತಂತ್ರಗಳು" ಎಂಬ ಶೀರ್ಷಿಕೆಯ ಪ್ಯಾನಲ್ ಚರ್ಚೆ ನಡೆಯಿತು.
Posted On:
29 NOV 2023 9:31AM by PIB Bengaluru
ದಿವ್ಯಾಂಗ ಮಕ್ಕಳಿಗಾಗಿ ಅಂಗನವಾಡಿ ಶಿಷ್ಟಾಚಾರವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ಇಂದು (28ನೇ ನವೆಂಬರ್, 2023 ರಂದು) ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರಾರಂಭಿಸಿದರು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆಯುಷ್ ರಾಜ್ಯ ಖಾತೆ ಸಚಿವರಾದ ಡಾ. ಮುಂಜ್ಪಾರಾ ಮಹೇಂದ್ರಭಾಯಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ಇಂದೇವರ್ ಪಾಂಡೆ, ಡಿ.ಇ.ಪಿ.ಡಬ್ಲ್ಯೂ.ಡಿ. ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಮತ್ತು ಎಂ.ಒ.ಎಚ್.ಎಫ್.ಡಬ್ಲ್ಯು ಆರ್ಥಿಕ ಸಲಹೆಗಾರ ಡಾ. ಕೆ.ಕೆ. ತ್ರಿಪಾಠಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸುಧಾರಿತ ಯೋಗಕ್ಷೇಮಕ್ಕೆ ದಿವ್ಯಾಂಗ ಮಕ್ಕಳ ಒಟ್ಟಾರೆ ಅವಕಾಶವನ್ನು ಬಲಪಡಿಸುವ ಬದ್ಧತೆಯನ್ನು ಅರಿತುಕೊಳ್ಳಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಎಂ.ಒ.ಎಚ್.ಎಫ್.ಡಬ್ಲ್ಯು, ಡಿ.ಇ.ಪಿ.ಡಬ್ಲ್ಯೂ.ಡಿ, ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಸಿ.ಡಿ.ಪಿ.ಒ.ಗಳು, ಮಹಿಳಾ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಮತ್ತು ನಿಮಾಹ್ಸ್ ನಂತಹ ಪ್ರಮುಖ ಸಂಸ್ಥೆಗಳ ತಜ್ಞರು ಭಾಗವಹಿಸಿದ್ದರು.
ತಮ್ಮ ಮುಖ್ಯ ಭಾಷಣದಲ್ಲಿ ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು, ಎಂ.ಡಬ್ಲ್ಯೂ.ಸಿ.ಡಿ.ಯ ಉಪಕ್ರಮಕ್ಕೆ ಬೆಂಬಲವನ್ನು ಜೋಡಿಸಿದ್ದಕ್ಕಾಗಿ ಡಿ.ಇ.ಪಿ.ಡಬ್ಲ್ಯೂ.ಡಿ, ಮತ್ತು ಎಂ.ಒ.ಎಚ್.ಎಫ್.ಡಬ್ಲ್ಯು. ಗಳಿಗೆ ಧನ್ಯವಾದ ತಿಳಿಸಿದರು. “ಪ್ರಸ್ತುತ 3 ರಿಂದ 6 ವರ್ಷ ವಯಸ್ಸಿನ 4.37 ಕೋಟಿ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ಮತ್ತು ಇಸಿಸಿಇ(ಪ್ರಾರಂಭಿಕ ಆರೈಕೆ ಮತ್ತು ಶಿಕ್ಷಣ) , 0 ರಿಂದ 3 ವರ್ಷದೊಳಗಿನ 4.5 ಕೋಟಿ ಮಕ್ಕಳಿಗೆ ಮನೆಗೊಯ್ಯುವ ಪಡಿತರ ಮತ್ತು ಮನೆಗೆ ಭೇಟಿ ನೀಡಲಾಗುತ್ತಿದೆ ಮತ್ತು 8 ಕೋಟಿಗೂ ಹೆಚ್ಚು ಮಕ್ಕಳಿಗೆ ಬೆಂಬಲ ನೀಡಲಾಗುತ್ತಿದೆ” ಎಂದು ಸಚಿವರು ಹೇಳಿದರು. “0-6 ವರ್ಷ ವಯಸ್ಸಿನ ಕೋಟ್ಯಾಂತರ ಮಕ್ಕಳಿಗೆ ಅವರ ಪ್ರಾರಂಭಿಕ ಬೆಳವಣಿಗೆಯ ಮೇಲ್ವಿಚಾರಣೆ ಮತ್ತು ಬಾಲ್ಯದ ಬೆಳವಣಿಗೆಯನ್ನು ಹೆಚ್ಚಿಸಲು ಉತ್ತಮ ಆರೋಗ್ಯ ವ್ಯವಸ್ಥೆಗೆ ಬೆಂಬಲ ನೀಡಲಾಗುತ್ತದೆ. ಕಳೆದ 4 ತಿಂಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಮಕ್ಕಳ ಯೋಗಕ್ಷೇಮಕ್ಕಾಗಿ 16 ಕೋಟಿ ಮನೆ ಭೇಟಿ ನೀಡುವ ಕಾರ್ಯ ಕೈಗೊಳ್ಳಲಾಗಿದೆ” ಎಂದು ಸಚಿವರು ಮಾಹಿತಿ ಹಂಚಿಕೊಂಡರು.
“ಶ್ರೀ ನರೇಂದ್ರ ಮೋದಿಯವರ ವರ್ತಮಾನ ‘ಅಮೃತ್ ಕಾಲ್’ ನಲ್ಲಿ, ನಮ್ಮ ಈ “ಸ್ವಸ್ಥ್ ಸುಪೋಷಿತ್ ಭಾರತ್” ಯೋಜನೆಯು ಅವರ ದೂರದೃಷ್ಟಿಗೆ ಹೊಂದಿಕೆಯಾಗುತ್ತದೆ, ಈ ಶಿಷ್ಟಾಚಾರ ಪೋಶನ್ ಅಭಿಯಾನದ ಅಡಿಯಲ್ಲಿ ದಿವ್ಯಾಂಗಜನರ ಒಳಗೊಳ್ಳುವ ಆರೈಕೆಗಾಗಿ ಪ್ರತಿ ಹಂತ-ಹಂತದ ವಿಧಾನದೊಂದಿಗೆ ಸೇರಿಸಿಕೊಳ್ಳುವ ಸಾಮಾಜಿಕ ಮಾದರಿಯನ್ನು ಒಳಗೊಂಡಿದೆ” ಎಂದು ತಮ್ಮ ‘ಎಕ್ಸ್’ ಖಾತೆಯ ಸಂದೇಶದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ಹೇಳಿದ್ದಾರೆ.
ಹಂತ 1: ಆರಂಭಿಕ ಅಂಗವೈಕಲ್ಯ ಚಿಹ್ನೆಗಳಿಗಾಗಿ ಪರಿಶೀಲನೆ
ಹಂತ 2: ಸಮುದಾಯದ ಕಾರ್ಯಕ್ರಮಗಳಲ್ಲಿ ಸೇರ್ಪಡೆ ಮತ್ತು ಕುಟುಂಬಗಳನ್ನು ಸಬಲೀಕರಣಗೊಳಿಸುವುದು
ಹಂತ 3: ಆಶಾ / ಎ.ಎನ್.ಎಮ್. ಮತ್ತು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್.ಬಿ.ಎಸ್.ಕೆ.) ತಂಡಗಳ ಮೂಲಕ ಪರಿಚಯಿಸುವ ಬೆಂಬಲ.
ದಿವ್ಯಾಂಗ್ ಶಿಷ್ಟಾಚಾರ ಮೂಲಕ, ಶಿಕ್ಷಣ ಮತ್ತು ಪೋಷಣೆಯ ವಿಶೇಷ ಅಗತ್ಯಗಳನ್ನು ಪರಿಹರಿಸಲು, ದಿವ್ಯಾಂಗ್ ಮಕ್ಕಳು ಮತ್ತು ಅವರ ಕುಟುಂಬಗಳ ಸಬಲೀಕರಣಕ್ಕಾಗಿ ಸ್ವಾವಲಂಬನ್ ಕಾರ್ಡ್ಗಳನ್ನು ಪೂರೈಸುವಲ್ಲಿ ಪ್ರತಿ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡಲಾಗುವುದು. ಪೋಶನ್ ಟ್ರ್ಯಾಕರ್ ನಲ್ಲಿ ಮಕ್ಕಳ ಬೆಳವಣಿಗೆಯ ಹಂತಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ ಮತ್ತು ಡೇಟಾವು ಸಂಬಂಧಿತ ವಿವಿಧ ಸಚಿವಾಲಯಗಳ ನಡುವಿನ ಒಮ್ಮುಖವನ್ನು ಮತ್ತಷ್ಟು ಬೆಂಬಲಿಸುತ್ತದೆ. ಎಂದು ಅವರು ಹೇಳಿದರು; ಕಿರಣ್ ಹೆಲ್ಪ್ಲೈನ್ ಮತ್ತು ಸಂವಾದ್ ಹೆಲ್ಪ್ಲೈನ್ ಗಳ ನಡುವೆ ತಮ್ಮ ಅತ್ಯುತ್ತಮ ಸಾಮರ್ಥ್ಯ ಒಗ್ಗೂಡಿಸಲು ಸಹ ಅವರು ಸಲಹೆ ಪ್ರಸ್ತಾಪಿಸಿದರು.
ಅಂಗನವಾಡಿ ಕೇಂದ್ರಗಳನ್ನು ಇನ್ನಷ್ಟು ಒಳಗೊಳ್ಳುವಂತೆ ಮಾಡಲು ಅವುಗಳ ಸುಧಾರಣೆ ಮತ್ತು ಉನ್ನತೀಕರಣದ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗಾಗಿ ರೂ. 300 ಕೋಟಿಯನ್ನು ವಿನಿಯೋಗಿಸಲಾಗುತ್ತಿದೆ ಮತ್ತು ದಿವ್ಯಾಂಗ್ ಮಕ್ಕಳನ್ನು ಗುರುತಿಸಲು, ಶಿಫಾರಸು ಮಾಡಲು ಮತ್ತು ಸೇರಿಸಲು ಎ.ಡಬ್ಲ್ಯೂ.ಡಬ್ಲ್ಯೂ. ಗಳ ವಿಶೇಷ ತರಬೇತಿಯಲ್ಲಿ ಸಚಿವಾಲಯ, ಇಲಾಖೆಗಳ ಮಾರ್ಗದರ್ಶನ ಮತ್ತು ಬೆಂಬಲ ಅಮೂಲ್ಯವಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.
ಸಮುದಾಯಗಳ ಪಾತ್ರದ ಕುರಿತು ಮಾತನಾಡುತ್ತಾ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು “ಇದೊಂದು ಮೌನ ಕ್ರಾಂತಿಯಾಗಿದ್ದು, ತಳಮಟ್ಟದಲ್ಲಿ ಜಾಗೃತಿ ಮತ್ತು ಸಂವೇದನೆಯನ್ನು ಮನಸ್ಥಿತಿಯನ್ನು ಬದಲಾಯಿಸಲು ಎ.ಡಬ್ಲ್ಯೂ.ಡಬ್ಲ್ಯೂ.ಗಳು ಕಾರಣರಾಗುತ್ತಾರೆ. ದಿವ್ಯಾಂಗ ಮಗುವಿಗೆ ಶಿಕ್ಷಣ ನೀಡುವ ಪ್ರಕ್ರಿಯೆಯು ದುಬಾರಿಯಾಗಿದೆ ಮತ್ತು ಅನೇಕರಿಗೆ ಕೈಗೆಟುಕುವಂತಿಲ್ಲ, ಆದರೆ ಈಗ ಅಂಗನವಾಡಿ ನೆಟ್ವರ್ಕ್ ಮೂಲಕ ದಿವ್ಯಾಂಗ ಮಕ್ಕಳ ಆರೈಕೆ ಕೈಗೆಟುಕುವಂತೆ ಮಾಡಲಾಗುತ್ತಿದೆ. ವಿಶೇಷ ಅಗತ್ಯವುಳ್ಳ ಮಕ್ಕಳ ಪೋಷಕರಿಗೆ ಸಂಪರ್ಕವನ್ನು ಸೃಷ್ಟಿಸಲು ಮತ್ತು ಈ ಮಧ್ಯಸ್ಥಿಕೆಗಳು ಅವರ ಮಕ್ಕಳ ಪ್ರತಿಭೆ ಮತ್ತು ಧೈರ್ಯವನ್ನು ಉತ್ಕೃಷ್ಟಗೊಳಿಸಲು ಮತ್ತು ಕಲಿಕೆಯನ್ನು ಹೆಚ್ಚು ಒಳಗೊಳ್ಳಲು ಮಾಧ್ಯಮವಾಗಿದೆ ಎಂಬ ಅರಿವನ್ನು ಮೂಡಿಸಲು ಕಾರ್ಯ ಆಗಬೇಕಾಗಿದೆ. ಮಗುವಿನ ಸಮರ್ಥ ಹೃದಯದ ಸಾಮರ್ಥ್ಯವನ್ನು ಮಿತಿಗೊಳಿಸಲು ನಮ್ಮ ಮನಸ್ಸನ್ನು ಎಂದಿಗೂ ಅನುಮತಿಸಬೇಡಿ" ಎಂದು ಹೇಳುವ ಮೂಲಕ ಸಚಿವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆಯುಷ್ ರಾಜ್ಯ ಖಾತೆ ಸಚಿವರಾದ ಡಾ. ಮುಂಜ್ಪಾರಾ ಮಹೇಂದ್ರಭಾಯಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, “ಪ್ರತಿ ಮಗುವನ್ನು ದೇಶದ ಬೆಳವಣಿಗೆ ಮತ್ತು ಭವಿಷ್ಯದ ಸಮಾನ ಭಾಗವನ್ನಾಗಿ ಮಾಡುವ ಗುರಿ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸುವುದು ಈ ಪ್ರಯತ್ನಕ್ಕೆ ಪ್ರಮುಖವಾಗಿದೆ. ಅಂಗನವಾಡಿ ಶಿಷ್ಟಾಚಾರವು ದಿವ್ಯಾಂಗ ಮಕ್ಕಳ ಬೆಂಬಲ ಮತ್ತು ಬೆಳವಣಿಗೆಗೆ ಪೋಷಣೆಯ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರ ಮೇಲಿನ ವಿಶ್ವಾಸ ಮತ್ತು ನಂಬಿಕೆಯನ್ನು ಪುನರುಚ್ಚರಿಸುವ ಮೂಲಕ ಅವರು ತಮ್ಮ ಭಾಷಣವನ್ನು ಕೊನೆಗೊಳಿಸಿದರು ಮತ್ತು ಭಾರತ ಮತ್ತು ಜಗತ್ತಿಗೆ ಬಾಲ್ಯದ ಆರೈಕೆ, ಶಿಕ್ಷಣ ಮತ್ತು ಪೋಷಣೆಯನ್ನು ಒಳಗೊಂಡಂತೆ ಸಮುದಾಯದ ಪ್ರಭಾವದ ಉಜ್ವಲ ಉದಾಹರಣೆಯಾಗಿ ಹೊರಹೊಮ್ಮುವ ಅವರ ಸಾಮರ್ಥ್ಯವನ್ನು ಪುನರುಚ್ಚರಿಸಿದರು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ಇಂದೇವರ್ ಪಾಂಡೆ ಅವರು “ತಮ್ಮ ಸ್ವಾಗತ ಭಾಷಣದಲ್ಲಿ ದಿವ್ಯಾಂಗ ಮಕ್ಕಳಿಗಾಗಿ ಅಂಗನವಾಡಿ ಶಿಷ್ಟಾಚಾರಗಳ ಕೊರತೆಯ ಪರಿಣಾಮಗಳ ಬಗ್ಗೆ ಮಾತನಾಡಿದರು. ಇದರ ಫಲವಾಗಿ ಈ ನೂತನ ಶಿಷ್ಟಾಚಾರ ರಚನೆಯಾಗಿದೆ” ಎಂದು ಹೇಳಿದರು.
“ಆರಂಭಿಕ ವರ್ಷಗಳಲ್ಲಿ ಪತ್ತೆಯಾಗದ ಅಂಗವೈಕಲ್ಯಗಳು ಪುನರ್ವಸತಿಯಲ್ಲಿ ವಿಳಂಬವನ್ನು ಉಂಟುಮಾಡಬಹುದು ಮತ್ತು ಮಗುವಿನ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಸರ್ಕಾರದ ಗುರುತಿಸಿದೆ. ಭಾರತದಲ್ಲಿ 30% ರಷ್ಟು ವಿಕಲಾಂಗತೆಗಳು ಮೊದಲೇ ಪರಿಶೀಲನೆಯಲ್ಲಿ ಕಂಡುಬಂದರೆ ಅದನ್ನು ತಡೆಗಟ್ಟಬಹುದು ಎಂದು ಅಧ್ಯಯನಗಳು ತೋರಿಸುತ್ತವೆ ಮತ್ತು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸರಿಯಾದ ಪ್ರಚೋದನೆ ಮತ್ತು ಸರಳವಾದ ಆಟದ ಆಧಾರಿತ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಿದರೆ, ಬೆಳವಣಿಗೆಯ ವಿಳಂಬಗಳು ಹೆಚ್ಚು ತೀವ್ರ ಅಸಾಮರ್ಥ್ಯಗಳಾಗಿ ಬೆಳೆಯುವುದನ್ನು ತಡೆಯಬಹುದು. ಆಶಾ ಕಾರ್ಯಕರ್ತೆಯರು ಅಂಗವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ಕುಟುಂಬಗಳಿಗೆ ಅವರ ಮನೆಗೆ ಭೇಟಿ ನೀಡುವಲ್ಲಿ ಸಹಾಯ ಮಾಡುತ್ತಾರೆ ಮತ್ತು ಅಗತ್ಯವಿರುವಲ್ಲೆಲ್ಲಾ ಮಕ್ಕಳನ್ನು ಆರೋಗ್ಯ ಸೇವೆಗಳಿಗೆ ಶಿಫಾರಸು ಮಾಡಲು ಸಹಾಯ ಮಾಡುತ್ತಾರೆ” ಎಂದು ಕಾರ್ಯದರ್ಶಿ ಶ್ರೀ ಇಂದೇವರ್ ಪಾಂಡೆ ಅವರು ಹೇಳಿದರು.
ತಮ್ಮ ಸಮಾರೋಪ ಭಾಷಣದಲ್ಲಿ ಕಾರ್ಯದರ್ಶಿ ಶ್ರೀ ಇಂದೇವರ್ ಪಾಂಡೆ ಅವರು, ಎಲ್ಲಾ ಸಮುದಾಯದ ಸದಸ್ಯರು ತಮ್ಮ ಪಾತ್ರಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ದಿವ್ಯಾಂಗ ಮಕ್ಕಳಿಗೆ ಶಕ್ತಿಯ ಆಧಾರ ಸ್ತಂಭಗಳಾಗಿ ಸ್ವೀಕರಿಸಲು ಮತ್ತು ಅವರ ಅನನ್ಯ ಸಾಮರ್ಥ್ಯಗಳನ್ನು ನೆನಪಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಕನಸುಗಳನ್ನು ಸಾಧಿಸಲು ಅವರನ್ನು ಪ್ರೇರೇಪಿಸುವಂತೆ ಒತ್ತಾಯಿಸಿದರು.
ಅಂಗನವಾಡಿ ಶಿಷ್ಟಾಚಾರ ಅನ್ನು ಸೇರ್ಪಡೆಗೊಳಿಸುವಲ್ಲಿ ಬಹಳ ಮುಖ್ಯವಾದ ಮೈಲಿಗಲ್ಲು ಪ್ರಾರಂಭಿಸುವುದನ್ನು ಡಿಇಪಿಡಬ್ಲ್ಯೂಡಿ. ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಅವರು ಸ್ವಾಗತಿಸಿದರು. “2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ 2.2% ಜನರು ಅಂಗವಿಕಲರಾಗಿದ್ದಾರೆ, ಇದು ಪ್ರಸ್ತುತ ಜನಸಂಖ್ಯೆಗೆ ಹೊಂದಿಕೊಂಡಂತೆ ಸುಮಾರು 3 ಕೋಟಿಯಾಗಿದೆ” ಎಂದು ಅವರು ಹೇಳಿದರು. “ಇದು ಆರಂಭಿಕ ಹಸ್ತಕ್ಷೇಪ , ಪರಿಶೀಲನೆ ಮತ್ತು ಗುರುತಿಸುವಿಕೆಯನ್ನು ನಿರ್ಣಾಯಕವಾಗಿಸುತ್ತದೆ. ಡಿಪಿಡಬ್ಲ್ಯುಡಿ 1 ಕೋಟಿ ಯುಡಿಐಡಿ ಕಾರ್ಡ್ ಅಥವಾ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿಗಳನ್ನು ಬಿಡುಗಡೆ ಮಾಡಿದೆ ಮತ್ತು ವಯಸ್ಸು, ಲಿಂಗ, ಜಿಲ್ಲೆಯ ಪ್ರತ್ಯೇಕ ಡೇಟಾವನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಆರಂಭಿಕ ವರ್ಷಗಳು, ಮೊದಲ ಮೂರು ವರ್ಷಗಳು ಉತ್ತಮ ಮೋಟಾರು ನಿಯಂತ್ರಣ, ಅರಿವಿನ ಮತ್ತು ಮಾನಸಿಕ ಬೆಳವಣಿಗೆಗೆ ನಿರ್ಣಾಯಕವಾಗಿದೆ ಮತ್ತು ಪೋಷಕರಿಗೆ ಅರಿವಿಲ್ಲದಿದ್ದರೆ ಅಥವಾ ದಾರಿ ತಪ್ಪಿದರೆ, ಈ ಅವಕಾಶದ ಕಿಟಕಿಯು ಕಣ್ಮರೆಯಾಗುತ್ತದೆ ಹಾಗೂ ಇದು ಅಂಗನವಾಡಿ ಕಾರ್ಯಕರ್ತೆಯರ ಪಾತ್ರವನ್ನು ಇನ್ನಷ್ಟು ನಿರ್ಣಾಯಕಗೊಳಿಸುತ್ತದೆ ” ಎಂದು ಅವರು ಹೇಳಿದರು.
“ಶಿಷ್ಟಾಚಾರದ ಚಾಲನೆಯಿಂದ ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದೃಷ್ಟಿಯ ಆರೋಗ್ಯದ ಮಾರ್ಗದರ್ಶನದ ಜೊತೆಗೆ ಇದು ಸೇರ್ಪಡೆಯಾಗುತ್ತದೆ ಮತ್ತು ಒಮ್ಮುಖವಾಗಲು ಸುವರ್ಣ ಅವಕಾಶವನ್ನು ಒದಗಿಸುತ್ತದೆ. ಆರಂಭಿಕ ಪರಿಶೀಲನೆಯು ವಿಕಲಾಂಗತೆಗಳು ಉಲ್ಬಣಗೊಳ್ಳುವುದನ್ನು ತಡೆಯುವ ಪ್ರಮುಖ ಪರಿಹಾರವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪರಿಶೀಲನೆ, ಪರಿಚಯಿಸುವಿಕೆ (ರೆಫರಲ್), ಸೇರ್ಪಡೆ ಮತ್ತು ಒಮ್ಮುಖ ಪ್ರಯತ್ನಗಳು ಈ ವಿಷಯದಲ್ಲಿ ನಿರ್ಣಾಯಕವಾಗಿದೆ.” ಎಂದು ಎಂ.ಒ.ಎಚ್.ಎಫ್.ಡಬ್ಲ್ಯು ಆರ್ಥಿಕ ಸಲಹೆಗಾರ ಡಾ. ಕೆ.ಕೆ. ತ್ರಿಪಾಠಿ ಅವರು ಹೇಳಿದರು.
"ಅಂಗನವಾಡಿ ಕೇಂದ್ರದಲ್ಲಿ ಆರಂಭಿಕ ಗುರುತಿಸುವಿಕೆ, ಪರಿಶೀಲನೆ ಮತ್ತು ಸೇರ್ಪಡೆಗಾಗಿ ತಂತ್ರಗಳು" ಎಂಬ ಶೀರ್ಷಿಕೆಯ ಪ್ಯಾನೆಲ್ ಚರ್ಚೆಯನ್ನು ಕಾರ್ಯಕ್ರಮವು ಆಯೋಜಿಸಿತು. ಈ ಮೂಲಕ ಉತ್ತಮ ಅಭ್ಯಾಸಗಳನ್ನು ಗುರುತಿಸಲಾಯಿತು. ದೆಹಲಿ ವಿಶ್ವವಿದ್ಯಾಲಯ ವಿಕಲಾಂಗ ಮಕ್ಕಳ ವಿಭಾಗದ ಡಾ. ಗೀತಾ ಚೋಪ್ರಾ, ನಿಪ್ಮನ್ ಫೌಂಡೇಶನ್ ಮತ್ತು ವೀಲ್ಸ್ ಫಾರ್ ಲೈಫ್ ಸಂಸ್ಥಾಪಕ ಶ್ರೀ ನಿಪುನ್ ಮಲ್ಹೋತ್ರಾ, ಮತ್ತು ಮಾಜಿ ಹಿರಿಯ ಪ್ರಾಧ್ಯಾಪಕ, ಪ್ರಸ್ತುತ ಸಂವಾದ್ (ಎಂ. ಡಬ್ಲ್ಯು.ಸಿ.ಡಿ- ನಿಮಾಹ್ಸ್ ) ಸಲಹೆಗಾರ ಡಾ. ಶೇಖರ್ ಶೇಷಾದ್ರಿ , ಬೆಂಗಳೂರಿನ ನಿಮ್ಹಾನ್ಸ್, ಮಕ್ಕಳ ಮತ್ತು ಹದಿಹರೆಯದವರ ಮನೋವೈದ್ಯಶಾಸ್ತ್ರ ವಿಭಾಗದ ಡಾ. ಶೇಖರ್ ಶೇಷಾದ್ರಿ ಮುಂತಾದ ತಜ್ಞರನ್ನು ಸಮಿತಿಯು ಹೊಂದಿತ್ತು. ಸಮಿತಿಯಿಂದ ಪ್ರಸ್ತುತಿ ಪ್ರದರ್ಶನ ನೀಡಲಾಯಿತು. ಸಮಿತಿಯು ಅಂಗವೈಕಲ್ಯಕ್ಕೆ ಅಂತರ್ಗತವಾಗಿರುವ ಅಪಾಯಗಳು ಮತ್ತು ಅದು ತರುವ ವ್ಯವಸ್ಥಿತ ಸವಾಲುಗಳೆರಡರ ಮೇಲೆ ಕೇಂದ್ರೀಕರಿಸಿದ ಚರ್ಚೆ ನಡೆಸಿತು.
ಅಂಗನವಾಡಿ ಕಾರ್ಯಕರ್ತೆಯರು (ಮಹಾರಾಷ್ಟ್ರದ ಸೋಲಾಪುರ; ಹರಿಯಾಣದ ಗುರ್ಗಾಂವ್ ಮತ್ತು ಉತ್ತರ ಪ್ರದೇಶದ ನೋಯ್ಡಾ) ವಿಶೇಷ ಸಾಮರ್ಥ್ಯವುಳ್ಳ ಮಕ್ಕಳೊಂದಿಗೆ ಕೆಲಸ ಮಾಡುವ ಅನುಭವಗಳನ್ನು ಹಂಚಿಕೊಳ್ಳುವುದರೊಂದಿಗೆ ರಾಷ್ಟ್ರೀಯ ಕಾರ್ಯಕ್ರಮವು ಮುಕ್ತಾಯಗೊಂಡಿತು. ಯಾವುದೇ ದಿವ್ಯಾಂಗ ಮಗು ಹಿಂದುಳಿದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಅವರ ಸಾಮೂಹಿಕ ಜವಾಬ್ದಾರಿಯನ್ನು ಪೂರೈಸಲು ಪ್ರತಿಯೊಬ್ಬರನ್ನು ಇದು ಪ್ರೇರೇಪಿಸಿತು.
ಪ್ರಸ್ತುತ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಮಯದಲ್ಲಿ ಗುರಿ ಇಟ್ಟಿರುವ ಫಲಾನುಭವಿಗಳ ಮೇಲೆ ಯೋಜನೆಯನ್ನು ಕೇಂದ್ರೀಕರಿಸಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಾರಂಭಿಸಿದ ವಿವಿಧ ಉಪಕ್ರಮಗಳಲ್ಲಿ ಪೋಶನ್ ಅಭಿಯಾನ ಕೂಡ ಒಂದು ಪ್ರಮುಖ ಉಪಕ್ರಮವಾಗಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ದೇಶಾದ್ಯಂತ ಯಾತ್ರೆಯನ್ನು ಬೆಂಬಲಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. 6 ವರ್ಷದೊಳಗಿನ ಮಕ್ಕಳು, ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕಾಂಶದ ಸ್ಥಿತಿಯಲ್ಲಿ ಸುಧಾರಣೆಯನ್ನು ಸಾಧಿಸುವ ಉದ್ದೇಶದಿಂದ ಪೋಷಣ್ ಅಭಿಯಾನವನ್ನು 8ನೇ ಮಾರ್ಚ್ 2018 ರಂದು ಯೋಜನಾಕ್ರಮವಾಗಿ ಮತ್ತು ಫಲಿತಾಂಶ-ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಧಾನಮಂತ್ರಿಯವರು ಪ್ರಾರಂಭಿಸಿದರು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರು ದಿವ್ಯಾಂಗ ಮಕ್ಕಳ ಅಂಗನವಾಡಿ ಶಿಷ್ಟಾಚಾರದ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಭಾಷಣ:-
ದಿವ್ಯಾಂಗ ಮಕ್ಕಳಿಗಾಗಿ ಅಂಗನವಾಡಿ ಶಿಷ್ಟಾಚಾರವನ್ನು ಪ್ರಾರಂಭಿಸುವ ರಾಷ್ಟ್ರೀಯ ಕಾರ್ಯಕ್ರಮದ ಯೂಟ್ಯೂಬ್ ಕೊಂಡಿ
****
(Release ID: 1980842)
Visitor Counter : 127