ಸಂಪುಟ
ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ಗಳನ್ನು ಒದಗಿಸುವ ಕೇಂದ್ರ ವಲಯದ ಯೋಜನೆಗೆ ಸಂಪುಟದ ಅನುಮೋದನೆ
Posted On:
29 NOV 2023 2:22PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2024-25 ರಿಂದ 2025-26 ರ ಅವಧಿಗೆ 1261 ಕೋಟಿ ರೂ.ಗಳ ವೆಚ್ಚದೊಂದಿಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್ ಎಚ್ ಜಿ) ಡ್ರೋನ್ ಗಳನ್ನು ಒದಗಿಸುವ ಕೇಂದ್ರ ವಲಯ ಯೋಜನೆಗೆ ಅನುಮೋದನೆ ನೀಡಿದೆ.
ಕೃಷಿ ಉದ್ದೇಶಕ್ಕಾಗಿ ರೈತರಿಗೆ ಬಾಡಿಗೆ ಸೇವೆಗಳನ್ನು ಒದಗಿಸಲು 2023-24 ರಿಂದ 2025-2026 ರ ಅವಧಿಯಲ್ಲಿ ಆಯ್ದ 15,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ಗಳನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಯೋಜನೆಯು ಮಹಿಳಾ ಸ್ವಸಹಾಯ ಗುಂಪುಗಳನ್ನು (ಎಸ್ ಎಚ್ ಜಿ) ಸಬಲೀಕರಣಗೊಳಿಸಲು ಮತ್ತು ಡ್ರೋನ್ ಸೇವೆಗಳ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ತರಲು ಪ್ರಯತ್ನಿಸುತ್ತದೆ.
ಈ ಯೋಜನೆಯ ಮುಖ್ಯಾಂಶಗಳು ಕೆಳಕಂಡಂತಿವೆ:
i. ಈ ಯೋಜನೆಯು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ರಸಗೊಬ್ಬರ ಇಲಾಖೆ, ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಪ್ರಮುಖ ರಸಗೊಬ್ಬರ ಕಂಪನಿಗಳ ಸಂಪನ್ಮೂಲಗಳು ಮತ್ತು ಪ್ರಯತ್ನಗಳನ್ನು ಒಟ್ಟುಗೂಡಿಸುವ ಮೂಲಕ ಸಮಗ್ರ ಮಧ್ಯಸ್ಥಿಕೆಗಳನ್ನು ಅನುಮೋದಿಸುತ್ತದೆ.
ii ಡ್ರೋನ್ ಗಳ ಬಳಕೆ ಆರ್ಥಿಕವಾಗಿ ಕಾರ್ಯಸಾಧ್ಯವಾದ ಸೂಕ್ತ ಕ್ಲಸ್ಟರ್ ಗಳನ್ನು ಗುರುತಿಸಲಾಗುತ್ತದೆ ಮತ್ತು ಗುರುತಿಸಲಾದ ಕ್ಲಸ್ಟರ್ ಗಳಲ್ಲಿ ವಿವಿಧ ರಾಜ್ಯಗಳಲ್ಲಿ ಪ್ರಗತಿಪರ 15,000 ಮಹಿಳಾ ಸ್ವಸಹಾಯ ಗುಂಪುಗಳನ್ನು ಡ್ರೋನ್ ಗಳನ್ನು ಒದಗಿಸಲು ಆಯ್ಕೆ ಮಾಡಲಾಗುತ್ತದೆ.
iii ಡ್ರೋನ್‌ಗಳ ವೆಚ್ಚದ ಶೇ.80 ರಷ್ಟು ಕೇಂದ್ರ ಹಣಕಾಸು ನೆರವು ಮತ್ತು ಡ್ರೋನ್ ಗಳನ್ನು ಖರೀದಿಸಲು ಮಹಿಳಾ ಸ್ವಸಹಾಯ ಸಂಘಗಳಿಗೆ ಗರಿಷ್ಠ ಎಂಟು ಲಕ್ಷ ರೂ.ಗಳವರೆಗಿನ ಪರಿಕರಗಳು/ಪೂರಕ ಶುಲ್ಕಗಳನ್ನು ಒದಗಿಸಲಾಗುತ್ತದೆ. ಸ್ವಸಹಾಯ ಗುಂಪುಗಳ ಕ್ಲಸ್ಟರ್ ಲೆವೆಲ್ ಫೆಡರೇಶನ್ (CLFs) ರಾಷ್ಟ್ರೀಯ ಕೃಷಿ ಮೂಲಸೌಕರ್ಯ ಹಣಕಾಸು ಸೌಲಭ್ಯ ಫೆಸಿಲಿಟಿ (AIF) ಅಡಿಯಲ್ಲಿ ಸಾಲವಾಗಿ ಬಾಕಿ ಮೊತ್ತವನ್ನು (ಸಂಗ್ರಹಣೆಯ ಒಟ್ಟು ವೆಚ್ಚ ಮೈನಸ್ ಸಬ್ಸಿಡಿ) ಸಂಗ್ರಹಿಸಬಹುದು. AIF ಸಾಲದ ಮೇಲೆ ಶೇ.3 ಬಡ್ಡಿ ವಿನಾಯಿತಿಯನ್ನು ಒದಗಿಸಲಾಗುವುದು.
iv. ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಲ್ಲಿ ಉತ್ತಮ ಅರ್ಹತೆ ಹೊಂದಿರುವ, 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಬ್ಬರನ್ನು ಎಸ್ ಆರ್ ಎಲ್ ಎಂ ಮತ್ತು ಎಲ್ ಎಫ್ ಸಿ ಗಳು 15 ದಿನಗಳ ತರಬೇತಿಗಾಗಿ ಚುನಾಯಿಸುತ್ತವೆ, ಇದರಲ್ಲಿ 5 ದಿನಗಳ ಕಡ್ಡಾಯ ಡ್ರೋನ್ ಪೈಲಟ್ ತರಬೇತಿ ಮತ್ತು ಹೆಚ್ಚುವರಿ 10 ದಿನಗಳ ತರಬೇತಿಯನ್ನು ಕೃಷಿ ಉದ್ದೇಶಕ್ಕಾಗಿ ಪೋಷಕಾಂಶ ಮತ್ತು ಕೀಟನಾಶಕ ಅಪ್ಲಿಕೇಶನ್ ಇರುತ್ತದೆ. ಎಲೆಕ್ಟ್ರಿಕಲ್ ವಸ್ತುಗಳ ರಿಪೇರಿ, ಫಿಟ್ಟಿಂಗ್ ಮತ್ತು ಮೆಕ್ಯಾನಿಕಲ್ ಕೆಲಸಗಳನ್ನು ಕೈಗೊಳ್ಳಲು ಒಲವು ಹೊಂದಿರುವ ಸ್ವಸಹಾಯ ಗುಂಪಿನ ಇತರ ಸದಸ್ಯರು / ಕುಟುಂಬದ ಸದಸ್ಯರನ್ನು ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (SRLM) ಮತ್ತು ಎಲ್ ಎಫ್ ಸಿ ಗಳು ಡ್ರೋನ್ ತಂತ್ರಜ್ಞ/ಸಹಾಯಕರಾಗಿ ತರಬೇತಿ ನೀಡುತ್ತವೆ. ಈ ತರಬೇತಿಯನ್ನು ಡ್ರೋನ್ ಗಳ ಪೂರೈಕೆಯೊಂದಿಗೆ ಪ್ಯಾಕೇಜ್ ನಂತೆ ನೀಡಲಾಗುತ್ತದೆ.
v. ಡ್ರೋನ್ ಕಂಪನಿಗಳ ಮೂಲಕ ಡ್ರೋನ್ ಗಳನ್ನು ಖರೀದಿಸಲು, ಡ್ರೋನ್ ಗಳ ದುರಸ್ತಿ ಮತ್ತು ನಿರ್ವಹಣೆಯಲ್ಲಿ ಸ್ವಸಹಾಯ ಗುಂಪುಗಳು ಎದುರಿಸಬಹುದಾದ ತೊಂದರೆಗಳನ್ನು ಪರಿಗಣಿಸಿ, ಎಲ್ ಎಫ್ ಸಿ ಗಳು ಡ್ರೋನ್ ಪೂರೈಕೆದಾರ ಕಂಪನಿಗಳು ಮತ್ತು ಎಸ್ ಹೆಚ್ ಜಿ ಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ.
vi. ಎಲ್ ಎಫ್ ಸಿ ಗಳು ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಯಂತಹ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಸ್ವಸಹಾಯ ಗುಂಪುಗಳೊಂದಿಗೆ ಡ್ರೋನ್ ಮೂಲಕ ಉತ್ತೇಜಿಸುತ್ತವೆ. ಸ್ವಸಹಾಯ ಸಂಘಗಳು ಡ್ರೋನ್ ಸೇವೆಗಳನ್ನು ರೈತರಿಗೆ ನ್ಯಾನೋ ರಸಗೊಬ್ಬರಕ್ಕಾಗಿ ಮತ್ತು ಕೀಟನಾಶಕಗಳ ಬಳಕೆಗಾಗಿ ಬಾಡಿಗೆಗೆ ನೀಡುತ್ತವೆ.
ಯೋಜನೆಯ ಅಡಿಯಲ್ಲಿ ಅನುಮೋದಿತ ಉಪಕ್ರಮಗಳು 15,000 ಸ್ವಸಹಾಯ ಗುಂಪುಗಳಿಗೆ ಸುಸ್ಥಿರ ವ್ಯಾಪಾರ ಮತ್ತು ಜೀವನೋಪಾಯದ ಬೆಂಬಲವನ್ನು ಒದಗಿಸುತ್ತವೆ ಮತ್ತು ಅವರು ವಾರ್ಷಿಕವಾಗಿ ಕನಿಷ್ಠ ಒಂದು ಲಕ್ಷ ರೂಪಾಯಿಗಳ ಹೆಚ್ಚುವರಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಯೋಜನೆಯು ಸುಧಾರಿತ ದಕ್ಷತೆಗಾಗಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಸಹಾಯ ಮಾಡುತ್ತದೆ, ಬೆಳೆ ಇಳುವರಿಯನ್ನು ಹೆಚ್ಚಿಸಲು ಮತ್ತು ರೈತರ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ.
*****
(Release ID: 1980782)
Visitor Counter : 122
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam