ವಾರ್ತಾ ಮತ್ತು ಪ್ರಸಾರ ಸಚಿವಾಲಯ
54 ನೇ ಭಾರತೀಯ ಅಂತರ ರಾಷ್ಟ್ರೀಯ ಚಲನಚಿತ್ರ ಉತ್ಸವ (ಐಎಫ್‌ಎಫ್‌ಐ) ದಲ್ಲಿ ವೆಬ್ ಸರಣಿಗಾಗಿ ಇರುವ ಉದ್ಘಾಟನಾ ಒಟಿಟಿ ಪ್ರಶಸ್ತಿಯನ್ನು ಗಳಿಸಿದ 'ಪಂಚಾಯತ್ 2'
ಗೋವಾ, 28 ನವೆಂಬರ್ 2023
ಗೋವಾದಲ್ಲಿ ನಡೆದ 54 ನೇ ಭಾರತೀಯ ಅಂತರ ರಾಷ್ಟ್ರೀಯ ಚಲನಚಿತ್ರ ಉತ್ಸವ (ಐಎಫ್‌ಎಫ್‌ಐ) ದಲ್ಲಿ ವೆಬ್ ಸರಣಿಗಾಗಿ ಇರುವ ಪ್ರತಿಷ್ಠಿತ ಮೊದಲ ಒಟಿಟಿ ಪ್ರಶಸ್ತಿಯನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸರಣ ಮಾಡಿದ ಹೃದಯಸ್ಪರ್ಶಿ ಹಿಂದಿ ಹಾಸ್ಯ-ನಾಟಕ ಸರಣಿ - ಪಂಚಾಯತ್ 2, ಗೆದ್ದುಕೊಂಡಿದೆ.
54 ನೇ ಭಾರತೀಯ ಅಂತರ ರಾಷ್ಟ್ರೀಯ ಚಲನಚಿತ್ರ ಉತ್ಸವ (ಐಎಫ್‌ಎಫ್‌ಐ) ದಲ್ಲಿ ವೆಬ್ ಸರಣಿಗಾಗಿ ಇರುವ ಪ್ರತಿಷ್ಠಿತ ಮೊದಲ ಒಟಿಟಿ ಪ್ರಶಸ್ತಿಯನ್ನು ಪಂಚಾಯತ್ 2 ರ ನಿರ್ಮಾಪಕರು ಸ್ವೀಕರಿಸುತ್ತಿದ್ದಾರೆ
ಶ್ರೀ ದೀಪಕ್ ಕುಮಾರ್ ಮಿಶ್ರಾ ನಿರ್ದೇಶಿಸಿದ್ದಾರೆ ಮತ್ತು ಶ್ರೀ ಚಂದನ್ ಕುಮಾರ್ ಕಥೆ ಬರೆದಿದ್ದಾರೆ, ಪಂಚಾಯತ್ 2 ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿರುವ ದೂರದ ಕಾಲ್ಪನಿಕ ಹಳ್ಳಿಯಾದ ಫುಲೇರಾದಲ್ಲಿ ಹಳೆಯದಾದ ಪಂಚಾಯತ್ ಕಚೇರಿಯಲ್ಲಿ ಒಬ್ಬ ನಗರದ ಪದವೀಧರ ಶ್ರೀ ಅಭಿಷೇಕ್ ತ್ರಿಪಾಠಿ ಇಷ್ಟವಿಲ್ಲದೆ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಪಾತ್ರವನ್ನು ಕಥೆಯ ಮೂಲಕನ್ನು ಸಂಕೀರ್ಣವಾಗಿ ಹೆಣೆಯಲಾಗಿದೆ.
ತನ್ನ ಚೊಚ್ಚಲ ಪ್ರದರ್ಶನದ ಅದ್ಭುತ ಯಶಸ್ಸಿನ ನಂತರ, ಎರಡನೇ ಸೀಸನ್ ಫುಲೇರಾದಲ್ಲಿ ಅಭಿಷೇಕ್ ಅವರ ಜೀವನದಲ್ಲಿ ಮುಂದಿನ ಹಂತಕ್ಕೆ ಸಾಗಿಸುತ್ತಿದೆ. ಹಳ್ಳಿಯ ರಾಜಕೀಯದ ನಡುವೆ ಹೊಸ ಸವಾಲುಗಳನ್ನು ಎದಿರಿಸುತ್ತಾ ಅವರು ಸಿಎಟಿ ಪರೀಕ್ಷೆಗಳಿಗೆ ತಯಾರಿ ನಡೆಸಿದರು. ಕಾರ್ಪೊರೇಟ್ ಭವಿಷ್ಯಕ್ಕಾಗಿ ಶ್ರಮಿಸಿದರು. ಈ ಸೀಸನ್, ಹೇರಳವಾದ ಹಾಸ್ಯದಿಂದ ಕೂಡಿದ ಉತ್ತಮ ದೃಶ್ಯ- ಕ್ಷಣಗಳು ಮತ್ತು ಹಳ್ಳಿಯ ಜೀವನದ ದೈನಂದಿನ ಪ್ರಯೋಗಗಳನ್ನು ಪ್ರಾಮಾಣಿಕವಾಗಿ ಚಿತ್ರಿಸಿದೆ. ವೈವಿಧ್ಯಮಯ ಹಳ್ಳಿಯ ಸಮಸ್ಯೆಗಳನ್ನು ಬಿಡಿಸುವಾಗ, ಪ್ರಧಾನ್, ವಿಕಾಸ್, ಪ್ರಹ್ಲಾದ್ ಮತ್ತು ಮಂಜು ದೇವಿಯೊಂದಿಗೆ ಅಭಿಷೇಕ್ ಅವರ ಸನಿಹದ ಸಂಬಂಧಗಳು ಏರ್ಪಡುತ್ತದೆ.
54 ನೇ ಭಾರತೀಯ ಅಂತರ ರಾಷ್ಟ್ರೀಯ ಚಲನಚಿತ್ರ ಉತ್ಸವ (ಐಎಫ್‌ಎಫ್‌ಐ) ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು, ʼಭಾರತದಲ್ಲಿ ಒಟಿಟಿ ಉದ್ಯಮವು ಉತ್ಕರ್ಷವನ್ನು ಕಂಡಿದೆ ಮತ್ತು ಭಾರತದಲ್ಲಿ ರಚಿಸಲಾದ ಮೂಲ ವಿಷಯವು ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ” ಎಂದು ಹೇಳಿದ್ದಾರೆ. ಈ ವಲಯದಲ್ಲಿ ವಾರ್ಷಿಕವಾಗಿ 28% ರಷ್ಟು ಸಕಾರಾತ್ಮಕ ಬೆಳವಣಿಗೆಯ ದರವನ್ನು ಉಲ್ಲೇಖ ಮಾಡಿದ ಸಚಿವರು, “ವೇದಿಕೆಗಳಲ್ಲಿ ಅಸಾಧಾರಣ ಡಿಜಿಟಲ್ ವಿಷಯ ರಚನೆಕಾರರನ್ನು ಗೌರವಿಸಲು ಒಟಿಟಿ ಪ್ರಶಸ್ತಿಗಳನ್ನು ಪರಿಚಯಿಸಲಾಗಿದೆ” ಎಂದು ಹೇಳಿದ್ದರು.
ಶ್ರೀ ಭಯ್ ಪನ್ನು ಅವರ ರಾಕೆಟ್ ಬಾಯ್ಸ್ ಸೀಸನ್ 1, ಶ್ರೀ ರಾಹುಲ್ ಪಾಂಡೆ ಮತ್ತು ಶ್ರೀ ಸತೀಶ್ ನಾಯರ್ ಅವರ ನಿರ್ಮಲ್ ಪಾಠಕ್ ಕಿ ಘರ್ ವಾಪ್ಸಿ ಮತ್ತು ಶ್ರೀ ವಿಪುಲ್ ಅಮೃತಲಾಲ್ ಶಾ ಮತ್ತು ಶ್ರೀ ಮೊಜೆಜ್ ಸಿಂಗ್ ನಿರ್ದೇಶನದ ಹ್ಯೂಮನ್ ಸೇರಿದಂತೆ ಹಲವುಗಳ ಜೊತೆಗೆ ಪಂಚಾಯತ್ 2 ಅಂತಿಮ ನಾಮನಿರ್ದೇಶನಗಳಲ್ಲಿ ಉತ್ತಮ ಸ್ಪರ್ಧೆ ನೀಡಿತ್ತು.
ಒಟಿಟಿ ವೆಬ್ ಸರಣಿ ಪಂಚಾಯತ್ 2 ರ ಚಿತ್ರ
ಸೋನಿ ಲೈವ್ ನಲ್ಲಿ ಪ್ರಸಾರವಾದ ರಾಕೆಟ್ ಬಾಯ್ಸ್ ಸೀಸನ್ 1 ರ ವೆಬ್ ಸರಣಿಯ ವಿಶೇಷ ಉಲ್ಲೇಖವನ್ನು ತೀರ್ಪುಗಾರರ ಸಮಿತಿಯು ಸರ್ವಾನುಮತದಿಂದ ಶಿಫಾರಸು ಮಾಡಿದೆ.
ಸ್ಪರ್ಧೆಯು 15 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಂದ 10 ಭಾಷೆಗಳ ಅತ್ಯಂತ ಪ್ರಭಾವಶಾಲಿ 32 ವೆಬ್ ಸರಣಿಗಳನ್ನು ಸ್ಪರ್ಧೆಗಾಗಿ ಸ್ವೀಕರಿಸಿದೆ.
*****
(Release ID: 1980628)
Visitor Counter : 125