ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ನಮ್ಮ ರಾಷ್ಟ್ರದಲ್ಲಿ ಹೂಡಿಕೆ ಮಾಡಲು ನಾವು ಜಗತ್ತನ್ನೇ ಸ್ವಾಗತಿಸುತ್ತೇವೆ. ಭಾರತ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ: ಪ್ರಧಾನ ಮಂತ್ರಿಗಳು

प्रविष्टि तिथि: 26 NOV 2023 8:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತವು ಹೂಡಿಕೆದಾರರ ನೆಚ್ಚಿನ ತಾಣವಾಗಿದ್ದು ಉದ್ಯಮಿಗಳಲ್ಲಿರುವ ಆಶಾವಾದವನ್ನು ಸಂತಸ ತಂದಿದೆ ಎಂದು ಹೆಮ್ಮೆಯಿಂದ ನುಡಿದಿದ್ದಾರೆ.

ಲೇಖಕರೂ ಆದ ವಾಣಿಜ್ಯೋದ್ಯಮಿ ಬಾಲಾಜಿ ಎಸ್. ಅವರು 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಭಾರತವು ಪುರಾತನ ನಾಗರೀಕತೆಯ ಹೊಂದಿರುವ ಜತೆ ಜತೆಗೆ ನವೋದ್ಯಮಗಳ ರಾಷ್ಟ್ರ ವಾಗಿಯೂ ಹೊರಹೊಮ್ಮುತ್ತಿದ್ದು, ತನ್ನ ಸಾಮರ್ಥ್ಯವನ್ನು  ವೃದ್ಧಿಸಿಕೊಂಡಿದೆ ಎಂದಿದ್ದಾರೆ. 

ಅವರ ಅಭಿಪ್ರಾಯಕ್ಕೆ ' ಎಕ್ಸ್' ಸಾಮಾಜಿಕ ಜಾಲತಾಣದಲ್ಲೇ  ಪ್ರಧಾನಮಂತ್ರಿಗಳು ಪ್ರತ್ಯುತ್ತರ ನೀಡಿ ಸಂದೇಶ ಪೋಸ್ಟ್ ಮಾಡಿದ್ದಾರೆ:

"ನಾನು ನಿಮ್ಮ ಆಶಾವಾದವನ್ನು ಗೌರವಿಸುತ್ತೇನೆ. ಹಾಗೆಯೇ ಭಾರತದ ಪ್ರಜೆಗಳು ನಾವೀನ್ಯತೆ ವಿಷಯಕ್ಕೆ ಬಂದಾಗ  ಟ್ರೆಂಡ್‌ಸೆಟರ್‌ಗಳು ಮತ್ತು ಟ್ರೈಲ್‌ಬ್ಲೇಜರ್‌ಗಳಾಗಿರುತ್ತಾರೆ.

ನಮ್ಮ ರಾಷ್ಟ್ರದಲ್ಲಿ ಹೂಡಿಕೆ ಮಾಡಲು ನಾವು ಜಗತ್ತಿನ ರಾಷ್ಟ್ರಗಳನ್ನು ಸ್ವಾಗತಿಸುತ್ತೇವೆ. ಭಾರತ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ" ಎಂದೂ ಭರವಸೆ ನೀಡಿದ್ದಾರೆ

***


(रिलीज़ आईडी: 1980306) आगंतुक पटल : 112
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam