ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ)ಯಡಿ 2.85 ಲಕ್ಷ ಮೆಟ್ರಿಕ್ ಟನ್(LMT) ಗೋಧಿ ಮತ್ತು 5,180 ಮಿಲಿಯನ್ ಟನ್ ಅಕ್ಕಿ 2,316 ಬಿಡ್ಡರ್‌ಗಳಿಗೆ ಕೇಂದ್ರ ಸರ್ಕಾರ ಮಾರಾಟ
Posted On:
09 NOV 2023 4:03PM by PIB Bengaluru
ಅಕ್ಕಿ, ಗೋಧಿ ಮತ್ತು ಗೋಧಿಹಿಟ್ಟುಗಳ ಚಿಲ್ಲರೆ ಬೆಲೆಯನ್ನು ನಿಯಂತ್ರಿಸಲು ಮಾರುಕಟ್ಟೆ ಮಧ್ಯಸ್ಥಿಕೆಗೆ ಭಾರತ ಸರ್ಕಾರದ ಉಪಕ್ರಮದ ಭಾಗವಾಗಿ ಗೋಧಿ ಮತ್ತು ಅಕ್ಕಿಯ ಸಾಪ್ತಾಹಿಕ ಇ- ಹರಾಜು ಪ್ರಕ್ರಿಯೆ ಆಯೋಜಿಸಲಾಗಿದೆ. ಇ-ಹರಾಜು ಪ್ರಕ್ರಿಯೆ ಇಂದು ನವೆಂಬರ್ 8ರಂದು ನಡೆಯಿತು. ಇದರಲ್ಲಿ 3 ಲಕ್ಷ ಮಿಲಿಯನ್ ಟನ್ ಗೋಧಿ ಮತ್ತು 2.25 ಲಕ್ಷ ಮಿಲಿಯನ್ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) OMSS(Domestic) ಅಡಿಯಲ್ಲಿ ನೀಡಲಾಯಿತು. 2.85 ಲಕ್ಷ ಮೆಟ್ರಿಕ್ ಟನ್ ಗೋಧಿ ಜೊತೆಗೆ 5,180 ಮಿಲಿಯನ್ ಟನ್ ಅಕ್ಕಿಯನ್ನು 2,316 ಬಿಡ್ಡರ್‌ಗಳಿಗೆ ಮಾರಾಟ ಮಾಡಲಾಯಿತು.
ಸರಾಸರಿ ಮಾರಾಟ ಬೆಲೆ 2,327.04/ಕ್ಯುಟಿಎಲ್ ಆಗಿದ್ದು ನ್ಯಾಯೋಚಿತ ಮತ್ತು ಸರಾಸರಿ ಗುಣಮಟ್ಟ(FAQ)ಗೋಧಿಗೆ ಮೀಸಲು ಬೆಲೆ 2,150/ಕ್ಯುಟಿಎಲ್ ರೂಪಾಯಿ, ಪ್ಯಾನ್ ಇಂಡಿಯಾ ಕಡಿಮೆ ನಿರ್ದಿಷ್ಟತೆಯ ಅಡಿಯಲ್ಲಿ( URS) 125/qtl ಮಿಸಲು ಬೆಲೆಗೆ ಬದಲಾಗಿ ಗೋಧಿಯ ತೂಕದ ಸರಾಸರಿ ಮಾರಾಟ ಬೆಲೆ 2,243.74/ಕ್ಯುಟಿಎಲ್ ಆಗಿದೆ.
ಮೇಲಿನವುಗಳ ಜೊತೆಗೆ, 2.5 ಎಲ್ ಎಂಟಿ ಗೋಧಿಯನ್ನು ಒಎಂಎಸ್ ಎಸ್ (ಡಿ) ಅಡಿಯಲ್ಲಿ ಅರೆ ಸರ್ಕಾರಿ ಮತ್ತು ಕೇಂದ್ರೀಯ ಭಂಡಾರ/ ಎನ್ ಸಿಸಿಎಫ್ / ಎನ್ ಎಎಫ್ ಇಡಿಯಂತಹ ಸಹಕಾರಿ ಸಂಸ್ಥೆಗಳಿಗೆ ನಿಗದಿಪಡಿಸಿದ ಗೋಧಿಯನ್ನು ಹಿಟ್ಟು ಮಾಡಲು ಮತ್ತು 'ಭಾರತ್ ಅಟ್ಟಾ' ಅಡಿಯಲ್ಲಿ ಸಾರ್ವಜನಿಕರಿಗೆ ಎಂಆರ್ ಪಿಎಲ್ ಅಡಿಯಲ್ಲಿ ಕಿಲೋಗೆ 27.50 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ನೀಡಲಾಗಿದೆ. ನಿನ್ನೆ ನವೆಂಬರ್ 7ರವರೆಗೆ, ಈ 3 ಸಹಕಾರಿ ಸಂಘಗಳಿಂದ 6051 ಮಿಲಿಯನ್ ಟನ್ ಗೋಧಿಯನ್ನು ಮತ್ತಷ್ಟು ಹಿಟ್ಟು ಆಗಿ ಪರಿವರ್ತಿಸಲು ಹರಾಜಿನಲ್ಲಿ ತೆಗೆದುಕೊಳ್ಳಲಾಗಿದೆ.
ಒಎಂಎಸ್ ಎಸ್(ಡಿ) ಅಡಿಯಲ್ಲಿ ವ್ಯಾಪಾರಿಗಳನ್ನು ಗೋಧಿ ಮಾರಾಟದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ನವೆಂಬರ್ 7, 2023ರವರೆಗೆ ದಾಸ್ತಾನು ಸಂಗ್ರಹಣೆಯನ್ನು ತಪ್ಪಿಸಲು ದೇಶಾದ್ಯಂತ 1,851 ಸಲ ಯಾದೃಚ್ಛಿಕವಾಗಿ ತಪಾಸಣೆಗಳನ್ನು ಮಾಡಲಾಗಿದೆ.
***
(Release ID: 1976014)
Visitor Counter : 81