ಗಣಿ ಸಚಿವಾಲಯ
azadi ka amrit mahotsav

ಗಣಿ ಕಾರ್ಯದರ್ಶಿ ವಿ ಎಲ್ ಕಾಂತ ರಾವ್ ಅವರು ಕೋಲ್ಕೊತ್ತಾದಲ್ಲಿ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು

Posted On: 09 NOV 2023 11:27AM by PIB Bengaluru

ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿ ಎಲ್ ಕಾಂತ ರಾವ್ ಅವರು ಕೋಲ್ಕತ್ತಾದಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ (HCL) ನ ಕಾರ್ಪೊರೇಟ್ ಕಚೇರಿಗೆ ಕಂಪನಿಗೆ ಭೇಟಿ ನೀಡಿ ಚಟುವಟಿಕೆಗಳನ್ನು ಪರಿಶೀಲಿಸಿದರು.

HCL ಕಾರ್ಪೊರೇಟ್ ಕಚೇರಿ ತಾಮ್ರಾ ಭವನಕ್ಕೆ ಭೇಟಿ ನೀಡಿದ ಶ್ರೀ ರಾವ್ ಅವರನ್ನು HCL ಸಿಎಂಡಿ ಶ್ರೀ ಘನಶ್ಯಾಮ್ ಶರ್ಮಾ, ಶ್ರೀ ಸಂಜಯ್‌ ಪಂಜ್ಯಾರ್‌, ಶ್ರೀ  ಸಂಜೀವ್ ಕುಮಾರ್ ಸಿಂಗ್, ಶ್ರೀ ಉಪೇಂದ್ರ ಕುಮಾರ್ ಪಾಂಡೆ, ಮತ್ತು ಇತರ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. 

ಕಂಪನಿಯ ಒಟ್ಟಾರೆ ಚಟುವಟಿಕೆಗಳ ಜೊತೆಗೆ ನಡೆಯುತ್ತಿರುವ ಯೋಜನೆಗಳ ಬಗ್ಗೆ ಕಾರ್ಯದರ್ಶಿಗೆ ಮಾಹಿತಿ ನೀಡಲಾಯಿತು, 

ಸಭೆಯಲ್ಲಿ, ಶ್ರೀ ವಿ ಎಲ್ ಕಾಂತ ರಾವ್, HCL ನ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಸಂವಾದ ನಡೆಸಿದರು. ಭಾರತದಲ್ಲಿನ ಏಕೈಕ ತಾಮ್ರದ ಗಣಿ ಕಂಪನಿಯ ವಿಶಿಷ್ಟ ಸ್ಥಾನವನ್ನು ಶ್ಲಾಘಿಸಿದ ಶ್ರೀ ರಾವ್, ತಾಮ್ರದ ಅದಿರು ಮತ್ತು ಲೋಹ-ಸಾಂದ್ರೀಕರಣದ ಉತ್ಪಾದನೆಯನ್ನು ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಗಣಿ ಸಚಿವಾಲಯವು ಆಡಳಿತಾತ್ಮಕ ಮತ್ತು ನೀತಿ ವಿಷಯಗಳಲ್ಲಿ ಸಾಧ್ಯವಿರುವ ಎಲ್ಲ ಬೆಂಬಲ, ಸಹಕಾರ ಮತ್ತು ಸಹಾಯವನ್ನು ನೀಡುತ್ತದೆ ಎಂದು ಅವರು ಹೇಳಿದರು. ಕಂಪನಿಗೆ ಭವ್ಯವಾದ ಭವಿಷ್ಯವನ್ನು ನಿರ್ಮಿಸಲು ಶ್ರೀ ರಾವ್ ಅವರು HCL ಸಿಬ್ಬಂದಿಯನ್ನು ಪ್ರೋತ್ಸಾಹಿಸಿದರು.

****


(Release ID: 1976010) Visitor Counter : 74