ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿ ಭಾರತ-ಇಥಿಯೋಪಿಯಾ ಜಂಟಿ ವ್ಯಾಪಾರ ಸಮಿತಿಯ 6 ನೇ ಅಧಿವೇಶನ ಯಶಸ್ವಿ


ಇಥಿಯೋಪಿಯಾದ ಎಥ್‌ಸ್ವಿಚ್‌ನೊಂದಿಗೆ ಭಾರತದ ಏಕೀಕೃತ ಪಾವತಿ ಇಂಟರ್‌ಫೇಸ್‌ನಲ್ಲಿ ಸಹಕರಿಸಲು ಭಾರತವು ಇಥಿಯೋಪಿಯಾವನ್ನು ಆಹ್ವಾನಿಸುತ್ತದೆ.

ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಮತ್ತು ವಿದೇಶಿ ವಿನಿಮಯವನ್ನು ಉಳಿಸಲು ಸ್ಥಳೀಯ ಕರೆನ್ಸಿಯಲ್ಲಿ ವ್ಯಾಪಾರ ವಹಿವಾಟುಗಳ ವೃದ್ಧಿಸಲು ಇಥಿಯೋಪಿಯಾಗೆ ಭಾರತ ಒತ್ತಾಯ

ಸ್ಟ್ಯಾಂಡರ್ಡೈಸೇಷನ್ ಮತ್ತು ಗುಣಮಟ್ಟದ ಭರವಸೆ ಮತ್ತು ಕಸ್ಟಮ್ಸ್ ಕಾರ್ಯವಿಧಾನದ ಕುರಿತು ತಿಳಿವಳಿಕಾ ಒಪ್ಪಂದ ತ್ವರಿತಗೊಳಿಸಲು ಆದ್ಯತೆ

Posted On: 08 NOV 2023 4:06PM by PIB Bengaluru

ಭಾರತ-ಇಥಿಯೋಪಿಯಾ ಜಂಟಿ ವ್ಯಾಪಾರ ಸಮಿತಿಯ (JTC) 6ನೇ ಅಧಿವೇಶನ ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿ 6-7 ನವೆಂಬರ್, ರಂದು ನಡೆಯಿತು. ಸಭೆಯ ವಾಣಿಜ್ಯ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಆರ್ಥಿಕ ಸಲಹೆಗಾರರು ಅಧ್ಯಕ್ಷತೆ ವಹಿಸಿದ್ದರು. ಇಂಟರ್‌ನ್ಯಾಶನಲ್ ಮತ್ತು ರೀಜನಲ್ ಟ್ರೇಡ್ ಇಂಟಿಗ್ರೇಷನ್‌ನ ಲೀಡ್ ಎಕ್ಸಿಕ್ಯೂಟಿವ್ ಶ್ರೀಮತಿ ಪ್ರಿಯಾ ಪಿ. ನಾಯರ್ , ವ್ಯಾಪಾರ ಮತ್ತು ಪ್ರಾದೇಶಿಕ ಏಕೀಕರಣ ಸಚಿವಾಲಯ, ರಾಯಭಾರಿ ಶ್ರೀ ಟೇಜಸ್ ಮುಲುಗೆಟಾ, ಶ್ರೀ ರಾಬರ್ಟ್ ಶೆಟ್ಕಿಂಟಾಂಗ್ ಮತ್ತು ಉಭಯ ದೇಶಗಳ  ಇತರ ಹಿರಿಯ ಅಧಿಕಾರಿಗಳು ಜೆಟಿಸಿಯಲ್ಲಿ ಭಾಗವಹಿಸಿದರು.

ದ್ವಿಪಕ್ಷೀಯ ವ್ಯಾಪಾರಕ್ಕೆ ಅಡ್ಡಿಯಾಗುವ ಎಲ್ಲಾ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಮತ್ತು ಉಭಯ ದೇಶಗಳ ನಡುವಿನ ವ್ಯಾಪಾರ ಉತ್ತೇಜನಕ್ಕೆ ಅನುಕೂಲವಾಗುವಂತೆ ಉಭಯ ದೇಶಗಳವರು  ಒಪ್ಪಿಕೊಂಡರು. ಇಥಿಯೋಪಿಯಾದ ಎಥ್‌ಸ್ವಿಚ್‌ನೊಂದಿಗೆ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಸಹಯೋಗಕ್ಕೆ ಇಥಿಯೋಪಿಯನ್ ತಂಡಕ್ಕೆ ಭಾರತ ಆಹ್ವಾನ ನೀಡಿತು. ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಮತ್ತು ವಿದೇಶಿ ವಿನಿಮಯವನ್ನು ಉಳಿಸಲು ಸಹಾಯ ಮಾಡುವ ಸ್ಥಳೀಯ ಕರೆನ್ಸಿಯಲ್ಲಿ ವ್ಯಾಪಾರ ವಹಿವಾಟುಗಳ ಇತ್ಯರ್ಥದ ಸಾಧ್ಯತೆಯನ್ನು ಅನ್ವೇಷಿಸಲು ಇಥಿಯೋಪಿಯಾಕ್ಕೆ ಭಾರತ ಒತ್ತಾಯಿಸಿತು. ಭಾರತ-ಇಥಿಯೋಪಿಯಾ JTC ಯ 6 ನೇ ಅಧಿವೇಶನಗಳ ಚರ್ಚೆಗಳು ಸೌಹಾರ್ದಯುತವಾಗಿದ್ದವು, ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸಾಗಿದವು. ಇದು ಎರಡೂ ದೇಶಗಳ ನಡುವಿನ ಸಾಂಪ್ರದಾಯಿಕವಾಗಿ ಸೌಹಾರ್ದ ಮತ್ತು ವಿಶೇಷ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.

ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ವಿವರವಾದ ಪರಿಶೀಲನೆಯನ್ನು ನಡೆಸಲಾಯಿತು. ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಹೆಚ್ಚಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಈ ಪರಿಣಾಮಕ್ಕಾಗಿ, ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಪರಸ್ಪರ ಲಾಭದಾಯಕ ಹೂಡಿಕೆಗಳನ್ನು ಹೆಚ್ಚಿಸಲು ಹಲವಾರು ಕ್ಷೇತ್ರಗಳನ್ನು ಗುರುತಿಸಿದವು. ಇವುಗಳಲ್ಲಿ ಆರೋಗ್ಯ ಮತ್ತು ಔಷಧಗಳು, ವಾಹನಗಳು, ಜವಳಿ, ಮೂಲಸೌಕರ್ಯ ಯೋಜನೆಗಳು, ಆಹಾರ ಮತ್ತು ಕೃಷಿ ಸಂಸ್ಕರಣೆ ಮತ್ತು ಇತ್ಯಾದಿ ಸೇರಿವೆ. 

ಸ್ಟ್ಯಾಂಡರ್ಡೈಸೇಶನ್ ಮತ್ತು ಕ್ವಾಲಿಟಿ ಅಶ್ಯೂರೆನ್ಸ್ ಮತ್ತು ಕಸ್ಟಮ್ಸ್ ಕಾರ್ಯವಿಧಾನದ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದ (ಎಂಒಯು) ಗಾಗಿ ನಡೆಯುತ್ತಿರುವ ಚರ್ಚೆಗಳ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಲಾಯಿತು. ಅವುಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಒಪ್ಪಲಾಯಿತು. ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಆರಂಭಿಕ ಅಂತಿಮಗೊಳಿಸುವಿಕೆಯನ್ನು ತ್ವರಿತಗೊಳಿಸುವಂತೆ ವಿನಂತಿಸಲಾಯಿತು.

ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾ ಆಫ್ರಿಕನ್ ಪ್ರದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. 2021-22 ರಲ್ಲಿ 6.4% ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಭಾರತ ಮತ್ತು ಇಥಿಯೋಪಿಯಾ ನಡುವಿನ ದ್ವಿಪಕ್ಷೀಯ ವ್ಯಾಪಾರವು 2022-23ರಲ್ಲಿ USD 642.59 ಮಿಲಿಯನ್ ಆಗಿತ್ತು. ಇಥಿಯೋಪಿಯಾಕ್ಕೆ ಭಾರತ ಎರಡನೇ ಅತಿ ದೊಡ್ಡ ರಫ್ತುದಾರ ದೇಶವಾಗಿದೆ. . ಭಾರತೀಯ ಕಂಪನಿಗಳು ಇಥಿಯೋಪಿಯಾದಲ್ಲಿ 5 ಶತಕೋಟಿ USD ನಷ್ಟು ಅಸ್ತಿತ್ವದಲ್ಲಿರುವ ಹೂಡಿಕೆಯೊಂದಿಗೆ ಅಗ್ರ ಮೂರು ವಿದೇಶಿ ಹೂಡಿಕೆದಾರರಲ್ಲಿ ಸೇರಿವೆ. ಅದರಲ್ಲಿ ಸುಮಾರು USD 3-4 ಶತಕೋಟಿಯಾಗಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ಕಂಪನಿಗಳು ಕೃಷಿ ಮತ್ತು ತೋಟಗಾರಿಕೆ, ಎಂಜಿನಿಯರಿಂಗ್, ಪ್ಲಾಸ್ಟಿಕ್, ಉತ್ಪಾದನೆ, ಹತ್ತಿ ಮತ್ತು ಜವಳಿ, ನೀರು ನಿರ್ವಹಣೆ, ಔಷಧೀಯ ಮತ್ತು ಆರೋಗ್ಯ ರಕ್ಷಣೆಯಂತಹ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿವೆ.

****



(Release ID: 1975679) Visitor Counter : 109


Read this release in: English , Urdu , Hindi , Tamil , Telugu