ಸಹಕಾರ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ಬುಧವಾರ, 08 ನವೆಂಬರ್ 2023 ರಂದು ನ್ಯಾಷನಲ್ ಕೋಆಪರೇಟಿವ್ ಆರ್ಗಾನಿಕ್ಸ್ ಲಿಮಿಟೆಡ್ (ಎನ್.ಸಿ.ಒ.ಎಲ್.) ಆಯೋಜಿಸುತ್ತಿರುವ ಸಾವಯವ ಉತ್ಪನ್ನಗಳ ಉತ್ತೇಜನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭಾಷಣ ಮಾಡಲಿದ್ದಾರೆ.


ಎನ್.ಸಿ.ಒ.ಎಲ್. ನ ಲಾಂಛನ, ಜಾಲತಾಣ ಮತ್ತು ಬ್ರೋಷರ್ ಗಳನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಬಿಡುಗಡೆ ಮಾಡಲಿದ್ದಾರೆ ಮತ್ತು ಎನ್.ಸಿ.ಒ.ಎಲ್. ಸದಸ್ಯರಿಗೆ ಸದಸ್ಯತ್ವ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ

ಒಂದು ದಿನದ ವಿಚಾರ ಸಂಕಿರಣದಲ್ಲಿ, ಎನ್.ಸಿ.ಒ.ಎಲ್.ನ ಉದ್ದೇಶಗಳು, ಸಾವಯವ ಉತ್ಪನ್ನಗಳ ಪ್ರಾಮುಖ್ಯತೆ ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಗತಿ ಹಾಗೂ ಉನ್ನತಿಯಲ್ಲಿ ಸಹಕಾರ ಸಂಘಗಳ ಪಾತ್ರವನ್ನು ಕುರಿತು ಚರ್ಚಿಸಲಾಗುವುದು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರ “ಸಹಕಾರ್ ಸೇ ಸಮೃದ್ಧಿ” ಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಸಾವಯವ ಉತ್ಪನ್ನಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಲು ಎನ್.ಸಿ.ಒ.ಎಲ್. ಅನ್ನು ರಾಷ್ಟ್ರೀಯ ಮಟ್ಟದ ಬಹು-ರಾಜ್ಯ ಸಹಕಾರಿ ಸಂಘವಾಗಿ ಸ್ಥಾಪಿಸಲಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಕೇಂದ್ರ ಸಹಕಾರ ಸಚಿವಾಲಯವು ಕಳೆದ 27 ತಿಂಗಳುಗಳಲ್ಲಿ ದೇಶದಲ್ಲಿ ಸಹಕಾರ ಚಳುವಳಿಯನ್ನು ಬಲಪಡಿಸಲು ನೂತನ 54 ಉಪಕ್ರಮಗಳನ್ನು ಕೈಗೊಂಡಿದೆ.

ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ರಾಷ್ಟ್ರೀಯ ಮಟ್ಟದ ಸಹಕಾರಿಯ ಸ್ಥಾಪನೆಯು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ, "ಮೇಕ್ ಇನ್ ಇಂಡಿಯಾ" ಅನ್ನು ಉತ್ತೇಜಿಸುವುದರ ಜೊತೆಗೆ "ಆತ್ಮನಿರ್ಭರ ಭಾರತ್" ಮತ್ತು "ಸ್ಥಳೀಯದಿಂದ ಜಾಗತಿಕ" ಗೆ ದಾರಿ ಮಾಡಿಕೊಡುತ್ತದೆ.

Posted On: 06 NOV 2023 3:51PM by PIB Bengaluru

ನವದೆಹಲಿಯ ಪುಸಾದ ಐ.ಸಿ.ಎ.ಆರ್ ಕನ್ವೆನ್ಷನ್ ಸೆಂಟರ್ ನಲ್ಲಿ ಬುಧವಾರ, ನವೆಂಬರ್ 08, 2023ರಂದು ನ್ಯಾಷನಲ್ ಕೋಆಪರೇಟಿವ್ ಆರ್ಗಾನಿಕ್ಸ್ ಲಿಮಿಟೆಡ್ (ಎನ್.ಸಿ.ಒ.ಎಲ್.) ಆಯೋಜಿಸುತ್ತಿರುವ ಸಾವಯವ ಉತ್ಪನ್ನಗಳ ಉತ್ತೇಜನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭಾಷಣ ಮಾಡಲಿದ್ದಾರೆ.

ಎನ್.ಸಿ.ಒ.ಎಲ್. ನ ಲಾಂಛನ, ಜಾಲತಾಣ ಮತ್ತು ಬ್ರೋಷರ್ ಗಳನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಬಿಡುಗಡೆ ಮಾಡಲಿದ್ದಾರೆ, ಮತ್ತು ಎನ್.ಸಿ.ಒ.ಎಲ್. ಸದಸ್ಯರಿಗೆ ಸದಸ್ಯತ್ವ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ. ಒಂದು ದಿನದ ವಿಚಾರ ಸಂಕಿರಣದಲ್ಲಿ ಎನ್.ಸಿ.ಒ.ಎಲ್.ನ ಉದ್ದೇಶಗಳು, ಸಾವಯವ ಉತ್ಪನ್ನಗಳ ಪ್ರಾಮುಖ್ಯತೆ ಜೊತೆಗೆ ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಗತಿ ಮತ್ತು ಉನ್ನತಿಯಲ್ಲಿ ಸಹಕಾರ ಸಂಘಗಳ ಪಾತ್ರವನ್ನು ಮುಂತಾದ ವಿಷಯಗಳ ಕುರಿತು ಚರ್ಚಿಸಲಾಗುವುದು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರ “ಸಹಕಾರ್ ಸೇ ಸಮೃದ್ಧಿ” ಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಸಾವಯವ ಉತ್ಪನ್ನಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಲು ಎನ್.ಸಿ.ಒ.ಎಲ್. ಅನ್ನು ರಾಷ್ಟ್ರೀಯ ಮಟ್ಟದ ಬಹು-ರಾಜ್ಯ ಸಹಕಾರಿ ಸಂಘವಾಗಿ ಸ್ಥಾಪಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಸಹಕಾರ ಸಚಿವಾಲಯವು ದೇಶದಲ್ಲಿ ಸಹಕಾರ ಚಳುವಳಿಯನ್ನು ಬಲಪಡಿಸಲು ಕಳೆದ 27 ತಿಂಗಳುಗಳಲ್ಲಿ ನೂತನ 54 ಉಪಕ್ರಮಗಳನ್ನು ಕೈಗೊಂಡಿದೆ. ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ರಾಷ್ಟ್ರೀಯ ಮಟ್ಟದ ಸಹಕಾರಿಯ ಸ್ಥಾಪನೆಯು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ, "ಮೇಕ್ ಇನ್ ಇಂಡಿಯಾ" ಅನ್ನು ಉತ್ತೇಜಿಸುವುದರ ಜೊತೆಗೆ "ಆತ್ಮನಿರ್ಭರ್ ಭಾರತ್" ಮತ್ತು "ಸ್ಥಳೀಯದಿಂದ ಜಾಗತಿಕ ಮಟ್ಟ" ಕ್ಕೆ ಸಾಗುವ ದಾರಿ ಸುಲಭವಾಗಿ ಲಭ್ಯ ಮಾಡಿಕೊಡುತ್ತದೆ.

ಸಾವಯವ ರೈತರು ಮತ್ತು ಉತ್ಪಾದಕ ಸಂಸ್ಥೆಗಳಿಗೆ ಮಾರುಕಟ್ಟೆಗೆ ನೇರ ಪ್ರವೇಶವನ್ನು ನೀಡುವುದರೊಂದಿಗೆ ಉತ್ಪನ್ನದ ಮೇಲಿನ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಎನ್.ಸಿ.ಒ.ಎಲ್. ಹೊಂದಿದೆ. ಬಲವಾದ ಬ್ರಾಂಡ್ ಅಡಿಯಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶವನ್ನು ಹೊಂದುವ ಮೂಲಕ, ಸದಸ್ಯರು ತಮ್ಮ ಸಾವಯವ ಉತ್ಪನ್ನಗಳಿಗೆ ಉತ್ತಮ ಲಾಭವನ್ನು ಪಡೆಯುತ್ತಾರೆ. ಭಾರತ ಸರ್ಕಾರದ ಸಂಬಂಧಪಟ್ಟ ಸಚಿವಾಲಯಗಳ ಸಹಯೋಗದೊಂದಿಗೆ ದೇಶಾದ್ಯಂತ ವಿವಿಧ ಸಹಕಾರ ಸಂಘಗಳು ಮತ್ತು ಸಂಬಂಧಿತ ಸಂಸ್ಥೆಗಳು ಉತ್ಪಾದಿಸುವ ಸಾವಯವ ಉತ್ಪನ್ನಗಳ ಸಂಪೂರ್ಣ ಪೂರೈಕೆ ಸರಪಳಿಯನ್ನು ನಿರ್ವಹಿಸುವ ಮೂಲಕ, 'ಇಡೀ ಸರ್ಕಾರದ ವಿಧಾನ' ಅನುಸರಿಸುತ್ತಾ, ಒಂದು ಏಕಗವಾಕ್ಷ ಸಂಸ್ಥೆಯಾಗಿ ಎನ್.ಸಿ.ಒ.ಎಲ್. ಕಾರ್ಯನಿರ್ವಹಿಸಲಿದೆ.

ಸಹಕಾರಿ ಸಂಸ್ಥೆಗಳು ಉತ್ಪಾದಿಸುವ ಸಾವಯವ ಉತ್ಪನ್ನಗಳ ಒಟ್ಟುಗೂಡಿಸುವಿಕೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಯನ್ನು ಇದು ಕೈಗೊಳ್ಳುತ್ತದೆ ಮತ್ತು ಉತ್ತೇಜಿಸುತ್ತದೆ, ಹಾಗೂ ರೈತರಿಗೆ ಪ್ರಗತಿಯ ದಾರಿ ತೋರಿಸಿಕೊಡುತ್ತದೆ. ಯಾವುದೇ ಸಹಕಾರಿ ಸೊಸೈಟಿ ಅಥವಾ ವ್ಯಕ್ತಿಗಳ ಸಂಘ (ಕೇಂದ್ರ ರಿಜಿಸ್ಟ್ರಾರ್ ಅನುಮತಿ ನೀಡಬಹುದು) ಎನ್.ಸಿ.ಒ.ಎಲ್. ನ ಸದಸ್ಯರಾಗಬಹುದು. ಇಂದಿನ ದಿನಾಂಕದಂತೆ, ಸಮಕಾಲೀನವಾಗಿ, ಸುಮಾರು 2,000 ಸಹಕಾರಿ ಸಂಘಗಳು ಈಗಾಗಲೇ ಎನ್.ಸಿ.ಒ.ಎಲ್. ನ ಸದಸ್ಯತ್ವ ಪಡೆದಿವೆ ಅಥವಾ ಅದರ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿವೆ.

ಸಹಕಾರಿ ಕ್ಷೇತ್ರದ ಬೃಹತ್ ಜ್ಞಾನ ಭಂಡಾರವನ್ನು ರಚಿಸುವುದು ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ನಡೆಸುವುದು ಸೇರಿದಂತೆ ವಿವಿಧ ಚಟುವಟಿಕೆಗಳ ಸುಗಮಗೊಳಿಸುವಿಕೆಯ ಮೂಲಕ ಎನ್.ಸಿ.ಒ.ಎಲ್. ನ ಉದ್ದೇಶವನ್ನು ಸಾಧಿಸಲಾಗುತ್ತದೆ. ಸಾವಯವ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿರುವ ಸಹಕಾರಿ ವಲಯ ಮತ್ತು ಸಂಬಂಧಿತ ಕಂಪನಿಗಳಿಗೆ ಹಣಕಾಸು, ಸಾಮರ್ಥ್ಯ ವೃದ್ಧಿ, ತಾಂತ್ರಿಕ ಮಾರ್ಗದರ್ಶನ, ಮಾರುಕಟ್ಟೆ ಗುಪ್ತಚರ ವ್ಯವಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆ ಇತ್ಯಾದಿಗಳನ್ನು ಒಳಗೊಂಡಿರುವಂತೆ ಎನ್.ಸಿ.ಒ.ಎಲ್. ಸಂಪೂರ್ಣ ಬೆಂಬಲವನ್ನು ನೀಡುತ್ತದೆ. 

ಈ ವಿಚಾರ ಸಂಕಿರಣವು ಸಾವಯವ ಉತ್ಪಾದನೆ - ಸಮಯದ ಅಗತ್ಯತೆ, ಪ್ರಮಾಣೀಕರಣ ಪ್ರಕ್ರಿಯೆ ಮತ್ತು ಸಾವಯವ ಉತ್ಪನ್ನಗಳ ಮಾನದಂಡ, ಸಾವಯವ ಪ್ರಮಾಣೀಕರಣ ಪ್ರಯೋಗಾಲಯಗಳ ಪ್ರಾಮುಖ್ಯತೆ ಇತ್ಯಾದಿ ವಿಷಯಗಳ ಕುರಿತು ತಾಂತ್ರಿಕ ಅಧಿವೇಶನವಗಳನ್ನು ಸಹ ಹೊಂದಿರುತ್ತದೆ. ಎನ್.ಸಿ.ಒ.ಎಲ್. ಸದಸ್ಯರು, ಅಧಿಕಾರಿಗಳು ಸೇರಿದಂತೆ 1000 ಕ್ಕೂ ಹೆಚ್ಚು ಭಾಗವಹಿಸುವವರು ಇದರ ವಿವಿಧ ಸಿಂಪೋಸಿಯಂಗೆ ಹಾಜರಾಗಲಿದ್ದಾರೆ. ಭಾರತ ಸರ್ಕಾರ/ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು, ಎಂ.ಎಸ್.ಎಂ.ಇ ಗಳು / ಎಫ್.ಐ.ಗಳು / ಸಹಕಾರಿ ಸಂಘಗಳು /ಜಿಲ್ಲಾ ಸಹಕಾರ ಸಂಘಗಳು /ಸಾವಯವ ಪ್ರಮಾಣೀಕರಣ ಸಂಸ್ಥೆಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳು, ಸಾವಯವ ವಲಯದ ತಜ್ಞರು ಮತ್ತು ದೇಶಾದ್ಯಂತದ ಇತರ ಮಧ್ಯಸ್ಥಗಾರರು ಹೆಚ್ಚಿನ ಸಂಖ್ಯೆಯಲ್ಲಿ ವಿಡಿಯೊ ಸಮಾವೇಶ ಮೂಲಕ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 

ಎನ್.ಸಿ.ಒ.ಎಲ್. ಅನ್ನು ಮಲ್ಟಿ-ಸ್ಟೇಟ್ ಕೋಆಪರೇಟಿವ್ ಸೊಸೈಟೀಸ್ ಆಕ್ಟ್, 2002 ರ ಅಡಿಯಲ್ಲಿ 25 ಜನವರಿ, 2023 ರಂದು ನೋಂದಾಯಿಸಲಾಗಿದೆ. ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್, ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಮತ್ತು ರಾಷ್ಟ್ರೀಯ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ನಫೀಡ್) – ದೇಶದ ಈ ಮೂರು ಪ್ರಮುಖ ಸಹಕಾರ ಸಂಘಗಳು ಒಟ್ಟಾಗಿ ಎನ್.ಸಿ.ಒ.ಎಲ್. ಅನ್ನು ಸ್ಥಾಪಿಸಿವೆ. ಭಾರತ ಸರ್ಕಾರದ ಎರಡು ಪ್ರಮುಖ ಶಾಸನಬದ್ಧ ಸಂಸ್ಥೆಗಳಾದ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಸಹಕಾರಿ ಅಭಿವೃದ್ಧಿ ನಿಗಮ ಜಂಟಿಯಾಗಿ ಎನ್.ಸಿ.ಒ.ಎಲ್. ಅನ್ನು ಪ್ರೋತ್ಸಾಹಿಸಿ ಉತ್ತೇಜಿಸುತ್ತಿವೆ.

*****


(Release ID: 1975088) Visitor Counter : 113