ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರಿಂದ ಅಕ್ಟೋಬರ್ 19ರಂದು 511 ಪ್ರಮೋದ್ ಮಹಾಜನ್ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳ ಉದ್ಘಾಟನೆ
प्रविष्टि तिथि:
18 OCT 2023 11:04AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಅಕ್ಟೋಬರ್ 19ರಂದು ಸಂಜೆ ಸುಮಾರು 4:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದಲ್ಲಿ 511 ಪ್ರಮೋದ್ ಮಹಾಜನ್ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ಈ ಕೇಂದ್ರಗಳನ್ನು ಮಹಾರಾಷ್ಟ್ರದಾದ್ಯಂತ 34 ಗ್ರಾಮೀಣ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ.
ಈ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳು ಗ್ರಾಮೀಣ ಯುವಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸಲು ನಾನಾ ವಲಯಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಲಿವೆ. ಪ್ರತಿಯೊಂದು ಕೇಂದ್ರವು ಕನಿಷ್ಠ ಎರಡು ವೃತ್ತಿಪರ ಕೋರ್ಸ್ ಗಳಲ್ಲಿ 100 ಯುವಜನತೆಗೆ ತರಬೇತಿ ನೀಡಲಿವೆ. ರಾಷ್ಟ್ರೀಯ ಕೌಶಲ್ಯ ಅಬಿವೃದ್ಧಿ ನಿಗಮದ ಆಶ್ರಯದಲ್ಲಿರುವ ಸಂಸ್ಥೆಗಳು ಹಾಗೂ ನೋಂದಾಯಿತ ಕೈಗಾರಿಕಾ ಪಾಲುದಾರರು ತರಬೇತಿಯನ್ನು ನೀಡಲಿದ್ದಾರೆ. ಈ ಕೇಂದ್ರಗಳ ಸ್ಥಾಪನೆಯು ಹೆಚ್ಚು ಸಮರ್ಥ ಮತ್ತು ನುರಿತ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವತ್ತ ಗಮನಾರ್ಹ ಪ್ರಗತಿಯನ್ನು ಸಾಧಿಸಲು ಆ ಪ್ರದೇಶಕ್ಕೆ ಸಹಾಯ ಮಾಡುತ್ತದೆ.
***
(रिलीज़ आईडी: 1968753)
आगंतुक पटल : 128
इस विज्ञप्ति को इन भाषाओं में पढ़ें:
Odia
,
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam