ಸಂಸದೀಯ ವ್ಯವಹಾರಗಳ ಸಚಿವಾಲಯ

9ನೇ 20 ಸಂಸದೀಯ ಸ್ಪೀಕರ್ ಗಳ ಶೃಂಗಸಭೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು (ಪಿ20)


"ಶೃಂಗಸಭೆಯು ಪ್ರಪಂಚದಾದ್ಯಂತದ ವಿವಿಧ ಸಂಸದೀಯ ಪದ್ಧತಿಗಳ ವಿಶಿಷ್ಟ ಸಂಗಮವಾಗಿದೆ": ಪ್ರಧಾನಮಂತ್ರಿ

ನಾರಿ ಶಕ್ತಿ ವಂದನ್ ಮಸೂದೆ ಅಂಗೀಕಾರವು ಪಂಚಾಯತ್ ನಿಂದ ಸಂಸತ್ತಿನವರೆಗೆ ನೀತಿ ನಿರೂಪಣೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ: ಲೋಕಸಭಾ ಸ್ಪೀಕರ್

ಡಿಜಿಟಲ್ ತಂತ್ರಜ್ಞಾನದ ಬಳಕೆಯು ಒಳಗೊಳ್ಳುವಿಕೆ, ಪಾರದರ್ಶಕತೆ ಮತ್ತು ಉತ್ತಮ ಆಡಳಿತದ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಿದೆ: 9 ನೇ ಪಿ20 ಶೃಂಗಸಭೆಯಲ್ಲಿ ಲೋಕಸಭಾ ಸ್ಪೀಕರ್ ಹೇಳಿಕೆ

Posted On: 13 OCT 2023 8:57PM by PIB Bengaluru

ನಿನ್ನೆ ನಡೆದ ಮಿಷನ್ ಲೈಫ್ನ ಸಂಸದೀಯ ಚರ್ಚೆಯ ನಂತರ, 9 ನೇ ಜಿ 20 ಸಂಸದೀಯ ಸ್ಪೀಕರ್ ಗಳ ಶೃಂಗಸಭೆ (ಪಿ 20 ಶೃಂಗಸಭೆ) ಇಂದು ದೆಹಲಿಯ ಯಶೋಭೂಮಿ, ದ್ವಾರಕಾ, ಇಂಡಿಯಾ ಇಂಟರ್ನ್ಯಾಶನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ಶೃಂಗಸಭೆಯ ಉದ್ಘಾಟನೆಯೊಂದಿಗೆ ಭವ್ಯವಾಗಿ  ಆರಂಭವಾಯಿತು. ಲೋಕಸಭಾ ಸ್ಪೀಕರ್, ಶ್ರೀ ಓಂ ಬಿರ್ಲಾ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. ಜಿG20 ರಾಷ್ಟ್ರಗಳು ಮತ್ತು ಆಹ್ವಾನಿತ ರಾಷ್ಟ್ರಗಳ ಸಂಸತ್ತಿನ ಅಧ್ಯಕ್ಷರು; ಇಂಟರ್ ಪಾರ್ಲಿಮೆಂಟರಿ ಯೂನಿಯನ್ (ಐಪಿಯು) ಅಧ್ಯಕ್ಷ ಶ್ರೀ ಡುವಾರ್ಟೆ ಪಚೆಕೊ ಮತ್ತು ಇತರ ನಾಯಕರು ಸಹ ಶೃಂಗಸಭೆಯಲ್ಲಿ ಹಾಜರಿದ್ದರು. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ ಸಂಸತ್ತು' ಎಂಬ ವಿಷಯದೊಂದಿಗೆ ಭಾರತದ ಜಿ20 ಅಧ್ಯಕ್ಷತೆಯ ವಿಶಾಲ ಚೌಕಟ್ಟಿನ ಅಡಿಯಲ್ಲಿ ಶೃಂಗಸಭೆಯನ್ನು ಭಾರತದ ಸಂಸತ್ತು ಆಯೋಜಿಸಿದೆ.

 


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶೃಂಗಸಭೆಯು ಪ್ರಪಂಚದಾದ್ಯಂತದ ಎಲ್ಲಾ ಸಂಸದೀಯ ಆಚರಣೆಗಳ 'ಮಹಾ ಕುಂಭ ಮೇಳ' ಎಂದು ಹೇಳಿದರು. ಇಂದು ಉಪಸ್ಥಿತರಿರುವ ಎಲ್ಲಾ ಪ್ರತಿನಿಧಿಗಳು ವಿವಿಧ ದೇಶಗಳ ಸಂಸದೀಯ ಚೌಕಟ್ಟಿನ ಅನುಭವವನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು ಇಂದಿನ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ತೃಪ್ತಿ ವ್ಯಕ್ತಪಡಿಸಿದರು.

"ಪ್ರಜಾಪ್ರಭುತ್ವದ ತಾಯಿ ಎಂದು ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಕರೆಯಲ್ಪಡುವ ನೆಲದಲ್ಲಿ ಪಿ20 ಶೃಂಗಸಭೆ ನಡೆಯುತ್ತಿದೆ"

ಪ್ರಜಾಪ್ರಭುತ್ವದ ತಾಯಿ ಎಂದು ಮಾತ್ರವಲ್ಲದೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನೆಲದಲ್ಲಿ ಪಿ20 ಶೃಂಗಸಭೆ ನಡೆಯುತ್ತಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇತಿಹಾಸದಿಂದ ಅಂತಹ ಚರ್ಚೆಗಳ ನಿಖರ ಉದಾಹರಣೆಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು  ಚರ್ಚೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಐದು ಸಾವಿರ ವರ್ಷಗಳಷ್ಟು ಹಳೆಯದಾದ ಭಾರತದ ವೇದಗಳು ಮತ್ತು ಧರ್ಮಗ್ರಂಥಗಳಲ್ಲಿ ಸಭೆಗಳು ಮತ್ತು ಸಮಿತಿಗಳ ಬಗ್ಗೆ ಹೇಳಲಾಗಿದೆ, ಅಲ್ಲಿ ಸಮಾಜದ ಒಳಿತಿಗಾಗಿ ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದಎಂದು ಅವರು ಮಾಹಿತಿ ನೀಡಿದರು.

ಕಾಲಕ್ಕೆ ತಕ್ಕಂತೆ ಭಾರತದ ಸಂಸದೀಯ ಸಂಪ್ರದಾಯಗಳ ನಿರಂತರ ವಿಕಸನ ಮತ್ತು ಬಲವರ್ಧನೆಯ ಕುರಿತು ಪ್ರಧಾನಮಂತ್ರಿಯವರ ಮಾತನಾಡಿದರು. ಸ್ವಾತಂತ್ರ್ಯ ನಂತರ ಭಾರತದಲ್ಲಿ 17 ಸಾರ್ವತ್ರಿಕ ಚುನಾವಣೆಗಳು ಮತ್ತು 300 ಕ್ಕೂ ಹೆಚ್ಚು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆದಿವೆ ಎಂದು ಅವರು ಮಾಹಿತಿ ನೀಡಿದರು. ಈ ಅತಿ ದೊಡ್ಡ ಚುನಾವಣಾ ಕಾರ್ಯದಲ್ಲಿ ಜನರ ಭಾಗವಹಿಸುವಿಕೆ ಸತತವಾಗಿ ಹೆಚ್ಚುತ್ತಿದೆ. 2019ರ ಸಾರ್ವತ್ರಿಕ ಚುನಾವಣೆಯು ಮಾನವ ಇತಿಹಾಸದ ಅತಿದೊಡ್ಡ ಚುನಾವಣೆಯಾಗಿದ್ದು, 600 ದಶಲಕ್ಷ ಮತದಾರರು ಅದರಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳಿದರು.

"ಭಾರತವು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತಿದೆ"

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಇತ್ತೀಚಿನ ನಿರ್ಧಾರದ ಬಗ್ಗೆ ಪ್ರಧಾನಮಂತ್ರಿಯವರುʼ ಪ್ರತಿನಿಧಿಗಳಿಗೆ ತಿಳಿಸಿದರು. ಸ್ಥಳೀಯ ಸ್ವ ಸರ್ಕಾರಿ ಸಂಸ್ಥೆಗಳಲ್ಲಿ 3 ದಶಲಕ್ಷಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳಲ್ಲಿ ಸುಮಾರು ಶೇಕಡಾ 50ರಷ್ಟು  ಮಹಿಳೆಯರಿದ್ದಾರೆ ಎಂದು ಅವರು ಅವರಿಗೆ ತಿಳಿಸಿದರು.

ಪ್ರಧಾನಮಂತ್ರಿಯವರು ಭಾರತದ ಸಂಸದೀಯ ಸಂಪ್ರದಾಯಗಳಲ್ಲಿ ನಾಗರಿಕರ ಅಚಲವಾದ ನಂಬಿಕೆಯನ್ನು ಎತ್ತಿ ತೋರಿಸಿದರು ಮತ್ತು ಅದರ ವೈವಿಧ್ಯತೆ ಮತ್ತು ಚೈತನ್ಯವೇ ಇದಕ್ಕೆ ಕಾರಣ ಎಂದರು. “ನಾವು ಇಲ್ಲಿ ಎಲ್ಲಾ ಧರ್ಮದ ಜನರನ್ನು ಹೊಂದಿದ್ದೇವೆ ಮತ್ತು ನೂರಾರು ರೀತಿಯ ಆಹಾರ, ಜೀವನ ವಿಧಾನಗಳು, ಭಾಷೆಗಳು, ಉಪಭಾಷೆಗಳು” ಇವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

"ವಿಭಜಿತ ಜಗತ್ತು ಮಾನವಕುಲವು  ಎದುರಿಸುತ್ತಿರುವ ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ"

ಪ್ರಪಂಚದ ಅಂತರ್ಸಂಪರ್ಕಿತ ಸ್ವಭಾವವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಂಘರ್ಷ ಮತ್ತು ಘರ್ಷಣೆಯಿಂದ ತುಂಬಿದ ಜಗತ್ತು ಯಾರಿಗೂ ಹಿತಾಸಕ್ತಿಯದಲ್ಲ ಎಂದು ಹೇಳಿದರು. “ವಿಭಜಿತ ಜಗತ್ತು ಮಾನವೀಯತೆ ಎದುರಿಸುತ್ತಿರುವ ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ. ಇದು ಶಾಂತಿ ಮತ್ತು ಸಹೋದರತ್ವದ ಸಮಯ, ಒಟ್ಟಿಗೆ ನಡೆಯುವ ಸಮಯ. ಇದು ಎಲ್ಲರ ಬೆಳವಣಿಗೆ ಮತ್ತು ಯೋಗಕ್ಷೇಮದ ಸಮಯ. ನಾವು ಜಾಗತಿಕ ನಂಬಿಕೆಯ ಬಿಕ್ಕಟ್ಟನ್ನು ನಿವಾರಿಸಬೇಕು ಮತ್ತು ಮಾನವ ಕೇಂದ್ರಿತ ಚಿಂತನೆಯೊಂದಿಗೆ ಮುನ್ನಡೆಯಬೇಕು. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎನ್ನುವ ಮನೋಭಾವದಿಂದ ನಾವು ಜಗತ್ತನ್ನು ಕಾಣಬೇಕು.

"ಭಯೋತ್ಪಾದನೆ ಎಲ್ಲಿಯೇ ಸಂಭವಿಸಲಿ, ಯಾವುದೇ ಕಾರಣಕ್ಕಾಗಿ, ಯಾವುದೇ ರೂಪದಲ್ಲಿ ಇರಲಿ, ಅದು ಮಾನವ ಕುಲಕ್ಕೆ ವಿರುದ್ಧವಾಗಿದೆ"

ಲೋಕಸಭೆಯ ಸ್ಪೀಕರ್ ಪ್ರತಿನಿಧಿಗಳಿಗೆ ಹೊಸ ಸಂಸತ್ತಿನ ವಿವರವನ್ನು ನೀಡುವುದರ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವು ದಶಕಗಳಿಂದ ಎದುರಿಸುತ್ತಿರುವ ಸಾವಿರಾರು ಅಮಾಯಕರ ಪ್ರಾಣ ತೆಗೆದ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಎತ್ತಿ ತೋರಿಸಲು ಈ ಅವಕಾಶವನ್ನು ಬಳಸಿಕೊಂಡರು. ಸುಮಾರು 20 ವರ್ಷಗಳ ಹಿಂದೆ ಭಾರತದ ಸಂಸತ್ತಿನ ಅಧಿವೇಶನದಲ್ಲಿ ಭಯೋತ್ಪಾದಕರು ನಡೆಸಿದ ಭಯೋತ್ಪಾದಕ ದಾಳಿಯನ್ನು ಮತ್ತು ಸಂಸದರನ್ನು ಒತ್ತೆಯಾಳಾಗಿ ತೆಗೆದುಕೊಂಡು ಅವರನ್ನು ನಿರ್ಮೂಲನೆ ಮಾಡಲು ಭಯೋತ್ಪಾದಕರು ಸಿದ್ಧರಾಗಿದ್ದರು ಎನ್ನುವುದನ್ನು ಶ್ರೀ ಮೋದಿ ನೆನೆದರು. "ಅಂತಹ ಅನೇಕ ಭಯೋತ್ಪಾದಕ ಘಟನೆಗಳನ್ನು ನಿಭಾಯಿಸಿದ ನಂತರ ಭಾರತವು ಇಂದು ಇಲ್ಲಿಗೆ ತಲುಪಿದೆ" ಎಂದು ಅವರು ಒತ್ತಿಹೇಳಿದರು, ಏಕೆಂದರೆ ಪ್ರಪಂಚವೂ ಈಗ ಭಯೋತ್ಪಾದನೆಯ ದೊಡ್ಡ ಸವಾಲನ್ನು ಜಗತ್ತು ಅರಿತುಕೊಳ್ಳುತ್ತಿದೆ. ಭಯೋತ್ಪಾದನೆ ಎಲ್ಲಿ ಸಂಭವಿಸಲಿ, ಯಾವುದೇ ಕಾರಣಕ್ಕಾಗಿ, ಯಾವುದೇ ರೂಪದಲ್ಲಿ ಅದು ಮಾನವಕುಲಕ್ಕೆ ವಿರುದ್ಧವಾಗಿದೆ ಎಂದು ಶ್ರೀ ಮೋದಿ ಅವರು ಮುಂದುವರಿಸಿ, ಅಂತಹ ಪರಿಸ್ಥಿತಿಯನ್ನು ಎದುರಿಸುವಾಗ ರಾಜಿ ಮಾಡಿಕೊಳ್ಳಬಾರದು ಎನ್ನುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

"ವಿಶ್ವದ ಸವಾಲುಗಳನ್ನು ಎದುರಿಸಲು ಸಾರ್ವಜನಿಕ ಸಹಭಾಗಿತ್ವಕ್ಕಿಂತ ಉತ್ತಮ ಮಾಧ್ಯಮವಿಲ್ಲ"

ಭಾಷಣದ ಮುಕ್ತಾಯದ ಹಂತದಲ್ಲಿ  ಪ್ರಧಾನಮಂತ್ರಿಯವರು, ಪ್ರಪಂಚದ ಸವಾಲುಗಳನ್ನು ಎದುರಿಸಲು ಸಾರ್ವಜನಿಕ ಸಹಭಾಗಿತ್ವಕ್ಕಿಂತ ಉತ್ತಮವಾದ ಮಾಧ್ಯಮ ಇನ್ನೊಂದಿಲ್ಲ ಎಂದು ಒತ್ತಿ ಹೇಳಿದರು. ಸರ್ಕಾರಗಳು ಬಹುಮತದಿಂದ ರಚನೆಯಾಗುತ್ತವೆ, ಆದರೆ ದೇಶವು ಒಮ್ಮತದಿಂದ ನಡೆಯುತ್ತದೆ. ನಮ್ಮ ಸಂಸತ್ತುಗಳು ಮತ್ತು ಈ ಪಿ20 ವೇದಿಕೆಯು ಸಹ ಈ ಭಾವನೆಯನ್ನು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು ಮತ್ತು ಸಂವಾದ ಮತ್ತು ಚರ್ಚೆಗಳ ಮೂಲಕ ಈ ಜಗತ್ತನ್ನು ಸುಧಾರಿಸುವ ಪ್ರಯತ್ನಗಳು ಖಂಡಿತವಾಗಿಯೂ ಯಶಸ್ವಿಯಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ, ಪಿ20 ಶೃಂಗಸಭೆಯು ಪ್ರಜಾಸತ್ತಾತ್ಮಕ ಮೌಲ್ಯಗಳು, ಅಂತರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಪ್ರಾಮುಖ್ಯತೆ ಮತ್ತು ಸಮಕಾಲೀನ ಸವಾಲುಗಳ ಸಮಸ್ಯೆಗಳನ್ನು ಪರಿಹರಿಸಲು ಜಂಟಿ ಸಂಸದೀಯ ಪ್ರಯತ್ನಗಳಿಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
 
"ಭಾರತವು ಈಗಾಗಲೇ ಎಸ್ಡಿಜಿಗಳಿಗಾಗಿ ನೀತಿ ಚೌಕಟ್ಟನ್ನು ಸಿದ್ಧಪಡಿಸಿದೆ"

ಶೃಂಗಸಭೆಯ ಕಾರ್ಯಸೂಚಿಯ ಬಗ್ಗೆ ಪ್ರಸ್ತಾಪಿಸಿದ ಸ್ಪೀಕರ್, ಭಾರತವು ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ಈಗಾಗಲೇ ನೀತಿ ಚೌಕಟ್ಟನ್ನು ಸಿದ್ಧಪಡಿಸಿದೆ, ಇದು ಸಮಗ್ರ ಮಾನವ ಅಭಿವೃದ್ಧಿಯ ಮೂಲಕ ಉತ್ತಮ ಜಗತ್ತನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಇದನ್ನು ಭಾರತದ ಸಂಸತ್ತಿನಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
"ಹವಾಮಾನ ಬದಲಾವಣೆಯನ್ನು ಪರಿಹರಿಸುವಲ್ಲಿ ಸುಸ್ಥಿರ ಶಕ್ತಿ ಪರಿವರ್ತನೆಯ ಅತಿದೊಡ್ಡ ಅಗತ್ಯ"
ಹವಾಮಾನ ಬದಲಾವಣೆಯ ದೃಷ್ಟಿಕೋನದಿಂದ, ಸುಸ್ಥಿರ ಇಂಧನ ಪರಿವರ್ತನೆಯು ಈಗಿನ ಅತಿದೊಡ್ಡ ಅಗತ್ಯವಾಗಿದೆ ಮತ್ತು ಭಾರತವು ಸುಸ್ಥಿರ ಇಂಧನ ಪರಿವರ್ತನೆಯ ಕ್ಷೇತ್ರದಲ್ಲಿ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಹಸಿರು ಬೆಳವಣಿಗೆ ಮತ್ತು ಹಸಿರು ಭವಿಷ್ಯಕ್ಕೆ ಆದ್ಯತೆ ನೀಡುತ್ತದೆ ಎಂದು ಸ್ಪೀಕರ್ ಹೇಳಿದರು.

"ಮಹಿಳಾ ನೇತೃತ್ವದ ಅಭಿವೃದ್ಧಿಯು 21 ನೇ ಶತಮಾನದ ಜಗತ್ತಿನಲ್ಲಿ ಮಹತ್ತರವಾದ ಬದಲಾವಣೆಯನ್ನು ಉಂಟುಮಾಡುತ್ತದೆ"
ಇತ್ತೀಚಿನ ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಅನ್ನು ಉಲ್ಲೇಖಿಸಿದ ಶ್ರೀ ಬಿರ್ಲಾ, ಮಹಿಳಾ ಸಬಲೀಕರಣವು ಯಾವುದೇ ದೇಶದ ಅಭಿವೃದ್ಧಿಯ ಪ್ರತಿಬಿಂಬವಾಗಿದೆ ಮತ್ತು ಭಾರತವು ಈಗ ಮಹಿಳಾ ಸಬಲೀಕರಣದಿಂದ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಸಾಗಿದೆ ಎಂದು ಹೇಳಿದರು. "ಈಗ ಪಂಚಾಯತ್ ನಿಂದ ಸಂಸತ್ತಿನವರೆಗೆ ನೀತಿ ನಿರೂಪಣೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಲಾಗಿದೆ. ವಿಶೇಷ ಅಧಿವೇಶನದ ಮೊದಲ ದಿನದಂದು ಭಾರತದ ಸಂಸತ್ತಿನಲ್ಲಿ ನಾರಿ ಶಕ್ತಿ ವಂದನ್ ಮಸೂದೆಯನ್ನು ಅಂಗೀಕರಿಸಲಾಯಿತು, ಅದರ ಮೂಲಕ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಈಗ ಮಹಿಳೆಯರಿಗೆ ಮೀಸಲಿಡಲಾಗುವುದು. ಮಹಿಳಾ ನೇತೃತ್ವದ ಅಭಿವೃದ್ಧಿಯು 21 ನೇ ಶತಮಾನದ ಜಗತ್ತಿನಲ್ಲಿ ಮಹತ್ತರವಾದ ಬದಲಾವಣೆಯ ವಾಹನವಾಗಿದೆ ಎಂದು ಶ್ರೀ ಬಿರ್ಲಾ ವಿಶ್ವಾಸ ವ್ಯಕ್ತಪಡಿಸಿದರು.

"ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯವು ಸಮಾಜದ ಕಟ್ಟ ಕಡೆಯ  ವ್ಯಕ್ತಿಯ ಜೀವನವನ್ನು ಬದಲಾಯಿಸಿದೆ"
ಸಾರ್ವಜನಿಕ ಡಿಜಿಟಲ್ ವೇದಿಕೆಗಳ ಮೂಲಕ ಜನರ ಜೀವನವನ್ನು ಪರಿವರ್ತಿಸುವ ಕುರಿತು ಮಾತನಾಡಿದ ಲೋಕಸಭೆ ಸ್ಪೀಕರ್, ಈ ವೇದಿಕೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಜೀವನದಲ್ಲಿ ಬದಲಾವಣೆಯನ್ನು ತರಲು ಅನುವು ಮಾಡಿಕೊಟ್ಟಿವೆ ಎಂದು ಹೇಳಿದರು. "ಡಿಜಿಟಲ್ ತಂತ್ರಜ್ಞಾನದ ಬಳಕೆಯು ಒಳಗೊಳ್ಳುವಿಕೆ, ಪಾರದರ್ಶಕತೆ ಮತ್ತು ಉತ್ತಮ ಆಡಳಿತದ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಡಿಬಿಟಿ, ಯುಪಿಐ ನಂತಹ ಡಿಜಿಟಲ್ ವ್ಯವಸ್ಥೆಗಳು ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಅಂತರ್ಗತ ಆಡಳಿತಕ್ಕೆ ದಾರಿ ಮಾಡಿಕೊಟ್ಟಿವೆ. ತಂತ್ರಜ್ಞಾನದ ಬಳಕೆಯು ಸಂಸತ್ತನ್ನು ಸಾರ್ವಜನಿಕರಿಗೆ ಹೆಚ್ಚು ಸುಗಮವಾಗಿ ಲಭ್ಯವಾಗುವಂತೆ  ಮಾಡಿದೆ.

ಭಾರತದ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿ20 ಶೃಂಗಸಭೆಯಲ್ಲಿ ನವದೆಹಲಿ ನಾಯಕರ ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸಿರುವುದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಜಾಗತಿಕ ದೃಷ್ಟಿಕೋನ ಮತ್ತು ಭಾಗವಹಿಸುವ ದೇಶಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಕೆಳಮನೆಯ ಸ್ಪೀಕರ್ ಒತ್ತಿ ಹೇಳಿದರು. ಜಾಗತಿಕ ಸಮಸ್ಯೆಗಳು. ಭಾರತದ ಜಿ-20 ಅಧ್ಯಕ್ಷ ಸ್ಥಾನವು ಒಳಗೊಳ್ಳುವ, ಮಹತ್ವಾಕಾಂಕ್ಷೆಯ, ಕಾರ್ಯ ಸಾಧ್ಯವಾದ, ನಿರ್ಣಾಯಕ ಮತ್ತು ಜನಕೇಂದ್ರಿತವಾಗಿದೆ ಎಂದು ಶ್ರೀ ಬಿರ್ಲಾ ಹೇಳಿದರು.

'ವಸುಧೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಶೃಂಗಸಭೆಯ ವಿಷಯವು ಪ್ರಾಚೀನ ಕಾಲದಿಂದಲೂ ಪ್ರಪಂಚದ ಸಮಗ್ರ ಅಭಿವೃದ್ಧಿಯನ್ನು ಅನುಸರಿಸುತ್ತಿರುವ ಭಾರತದ ಸಾಂಸ್ಕೃತಿಕ ನೀತಿಯಲ್ಲಿ ಬೇರೂರಿದೆ ಎಂದು ಸ್ಪೀಕರ್ ಹೇಳಿದರು. 

Image

 
"ಸಂಸದರು ಶಾಂತಿಯನ್ನು ರಕ್ಷಿಸಬೇಕು, ಇದು ಸುಸ್ಥಿರ ಅಭಿವೃದ್ಧಿಗೆ ಅವಶ್ಯಕವಾಗಿದೆ"
ಇಂಟರ್ ಪಾರ್ಲಿಮೆಂಟರಿ ಯೂನಿಯನ್ (ಐಪಿಯು) ಅಧ್ಯಕ್ಷ ಶ್ರೀ ಡುವಾರ್ಟೆ ಪಚೆಕೊ ಅವರು ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಮತ್ತು ಭಾರತದ ಸಂಸತ್ತು ನೀಡಿದ ಆತ್ಮೀಯ ಆತಿಥ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಜಿ-20 ಶೃಂಗಸಭೆಯ ಯಶಸ್ವಿ ನಾಯಕತ್ವಕ್ಕಾಗಿ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತದ ಸ್ಥಾನಮಾನವನ್ನು ಉಲ್ಲೇಖಿಸಿದ ಶ್ರೀ. ಪಚೆಕೊ, ಭಾರತೀಯ ಪ್ರಜಾಪ್ರಭುತ್ವಕ್ಕೆ ಭಾರತದ ಸಂಸತ್ತಿನ ಕೇಂದ್ರೀಯತೆ ಮತ್ತು ಪ್ರಸ್ತುತತೆಯಿಂದಾಗಿ ಪಿ20 ಶೃಂಗಸಭೆಯ ಯಶಸ್ಸು ಮುಂಚೂಣಿಯಲ್ಲಿದೆ ಎಂದು ಹೇಳಿದರು.
ವಿಶ್ವ ಶಾಂತಿಯ ಮೂಲಭೂತ ಮೌಲ್ಯವನ್ನು ಒತ್ತಿಹೇಳುತ್ತಾ, ಸಂಸದರು ವಿಶ್ವದ ಎಲ್ಲಾ ಭಾಗಗಳಲ್ಲಿ ಶಾಂತಿಯನ್ನು ರಕ್ಷಿಸಬೇಕು ಎಂದು ಪಚೆಕೊ ಹೇಳಿದರು. ಶಾಂತಿ ಇಲ್ಲದಿದ್ದರೆ ಜಗತ್ತು ಸುಸ್ಥಿರ ಅಭಿವೃದ್ಧಿಯಂತಹ ಇತರ ಗುರಿಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು. ಸಂಸದರು ಸಂವಾದ ಮತ್ತು ಚರ್ಚೆಯ ಆಧಾರದ ಮೇಲೆ ಒಮ್ಮತ ನಿರ್ಮಾಣವನ್ನು ಅರ್ಥಮಾಡಿಕೊಂಡಂತೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರ ಪಾತ್ರವನ್ನು ವಿಸ್ತರಿಸಬೇಕು ಎಂದು ಶ್ರೀ ಪ್ಯಾಚೆಕೊ ಹೇಳಿದರು. ಈ ದಿಸೆಯಲ್ಲಿ ಐಪಿಯು ಮತ್ತು ಪಿ20 ಸಂಸ್ಥೆಗಳ ಕಾರ್ಯವನ್ನು ಅವರು ಶ್ಲಾಘಿಸಿದರು.

ಲೋಕಸಭೆಯ ಸ್ಪೀಕರ್ ಕೊರಿಯಾದ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಅವರನ್ನು ಭೇಟಿ ಮಾಡಿದರು
ಸಂಸತ್ತಿನ 20 ನೇ ಶೃಂಗಸಭೆಯ ಹೊರತಾಗಿ, ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಕೊರಿಯಾ ಗಣರಾಜ್ಯದ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಶ್ರೀ ಕಿಮ್ ಜಿನ್-ಪ್ಯೋ ಅವರನ್ನು ಭೇಟಿಯಾದರು. 2023 ರ ವರ್ಷವು ಭಾರತ ಮತ್ತು ಕೊರಿಯಾ ಎರಡಕ್ಕೂ ಮಹತ್ವದ್ದಾಗಿದೆ ಎಂದು ಶ್ರೀ ಬಿರ್ಲಾ ಮಾಹಿತಿ ನೀಡಿದರು, ಏಕೆಂದರೆ ಇದು ಉಭಯ ದೇಶಗಳ ನಡುವಿನ 50 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಪೂರ್ಣಗೊಳಿಸುತ್ತದೆ. ಭಾರತ ಮತ್ತು ಕೊರಿಯಾ ಗಣರಾಜ್ಯವು ಬಹು ಆಯಾಮದ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದೆ ಎಂದು ಅವರು ಮತ್ತಷ್ಟು ಮಾಹಿತಿ ನೀಡಿದರು. "ರಾಜಕೀಯ, ವ್ಯಾಪಾರ, ಹೂಡಿಕೆ, ರಕ್ಷಣೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಜನರಿಂದ ಜನರ ಸಂಪರ್ಕಗಳಂತಹ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸಂಬಂಧಗಳು ಬಲಗೊಂಡಿವೆ. ಬೌದ್ಧ ಸನ್ಯಾಸಿಗಳ  ಆಗಿಂದ್ದಾಗೆ ನೀಡುವ ಭೇಟಿ ಮತ್ತು ಜ್ಞಾನ ಮತ್ತು ವಿಚಾರಗಳ ವಿನಿಮಯದ ಮೂಲಕ ಎರಡೂ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಬೌದ್ಧಧರ್ಮವು ಪ್ರಮುಖ ಪಾತ್ರವನ್ನು ವಹಿಸಿದೆ. ಭಾರತ ಮತ್ತು ಕೊರಿಯಾ ಗಣರಾಜ್ಯದ ನಡುವೆ ಸಂಸದೀಯ ಸಹಕಾರವನ್ನು ಗಾಢವಾಗಿಸುವ ಬಗ್ಗೆಯೂ ಸ್ಪೀಕರ್ ಒತ್ತಿ ಹೇಳಿದರು.

ಒಂಬತ್ತನೇ ಪಿ20 ಶೃಂಗಸಭೆಯ ಮೊದಲ ದಿನದ ದ್ವಿತೀಯಾರ್ಧದಲ್ಲಿ, ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ಅಧ್ಯಕ್ಷರು ಜಂಟಿ ಹೇಳಿಕೆಯನ್ನು ಸರ್ವಾನುಮತದಿಂದ ಅಂಗೀಕರಿಸಿದರು. ಇಲ್ಲಿ ಇನ್ನಷ್ಟು ಓದಿ
https://pib.gov.in/PressReleasePage.aspx?PRID=1967503

ಪಿ20 ಶೃಂಗಸಭೆಯ ಕುರಿತು ಹೆಚ್ಚಿನ ಮಾಹಿತಿಯು ಈ ಕೊಂಡಿಗಳಲ್ಲಿವೆ :

  1. Ninth G20 Parliamentary Speakers’ Summit (P20) and Parliamentary Forum
  2. Prime Minister to inaugurate 9th G20 Parliamentary Speakers' Summit (P-20) in New Delhi on 13th October
  3. Presiding Officers of G20 Nations begin arriving in India for 9th P20 Summit
  4. 9th P20 Summit to be preceded by Parliamentary Forum on Mission LiFE
  5. Mission LiFE has given the world a new comprehensive approach for protecting environment and addressing challenges such as climate change: Lok Sabha Speaker
  6. President of African Union and Speakers of Parliaments of Australia, UAE and Bangladesh call on Lok Sabha Speaker on the sidelines of 9th P20 Summit
  7. PM inaugurates 9th G20 Parliamentary Speakers' Summit (P20)
  8. P20 Summit unanimously adopts Joint Statement

 
#Parliament20 ಎಂಬ ಹ್ಯಾಶ್ ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಸಂವಾದಕ್ಕೆ ಸೇರಿರಿ.

.***.



(Release ID: 1968118) Visitor Counter : 116


Read this release in: English , Urdu , Hindi