ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
4 ನೇ ಏಷ್ಯನ್ ಪ್ಯಾರಾ ಗೇಮ್ಸ್ ಗಾಗಿ ಕ್ರೀಡಾಪಟುಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಶ್ರೀ ಹರ್ದೀಪ್ ಎಸ್ ಪುರಿ ಮತ್ತು ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಭಾಗವಹಿಸಿದರು
4 ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕ್ರೀಡಾ ಉತ್ಸಾಹದ ವೈಭವ ತೋರಲಿರುವ ಪ್ಯಾರಾ ಅಥ್ಲೀಟ್ ಗಳನ್ನು ಇಂಡಿಯನ್ ಆಯಿಲ್ ಬೆಂಬಲಿಸುತ್ತದೆ
Posted On:
12 OCT 2023 6:55PM by PIB Bengaluru
ಹ್ಯಾಂಗ್‌ಝೌ, ಚೀನಾ, 22-28 ಅಕ್ಟೋಬರ್ 2023 ರಿಂದ ನಡೆಯಲಿರುವ ಅಭೂತಪೂರ್ವ ಬೆಂಬಲ ಮತ್ತು ಪ್ರೋತ್ಸಾಹದ ಕ್ರೀಡಾ ಪ್ರದರ್ಶನದಲ್ಲಿ, ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ 196 ಪುರುಷ ಮತ್ತು 113 ಮಹಿಳಾ ಅಥ್ಲೀಟ್‌ಗಳು ಸೇರಿದಂತೆ 309 ಅಥ್ಲೀಟ್‌ಗಳ ತಂಡವನ್ನು ಸಶಕ್ತಗೊಳಿಸಿ ಪ್ರೋತ್ಸಾಹಿಸುತ್ತಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತು ಕೇಂದ್ರ ಯುವ ವ್ಯವಹಾರಗಳು ಮತ್ತು ಕೇಂದ್ರ ಕ್ರೀಡಾ ಮತ್ತು ಮಾಹಿತಿ ಹಾಗೂ ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ , ಇಂಡಿಯನ್ ಆಯಿಲ್ ಅಧ್ಯಕ್ಷ ಶ್ರೀ ಶ್ರೀಕಾಂತ್ ಮಾಧವ್ ವೈದ್ಯ,ಮತ್ತು ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ ಇದರ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು
ಈ ಸಂದರ್ಭದಲ್ಲಿ, ಏಷ್ಯನ್ ಪ್ಯಾರಾ ಗೇಮ್ಸ್ ನ ಭಾರತೀಯ ಧ್ವಜಧಾರಿಗಳು ಹಾಜರಿದ್ದ ಗಣ್ಯರಿಗೆ ಸ್ಮರಣೀಯ ಜೆರ್ಸಿಗಳನ್ನು ನೀಡಿದರು.
"196 ಪುರುಷರು ಮತ್ತು 113 ಮಹಿಳೆಯರು ಸೇರಿದಂತೆ 309 ಅಥ್ಲೀಟ್‌ಗಳ ಈ ತಂಡವು ನಮ್ಮ ಪ್ಯಾರಾ-ಸ್ಪೋರ್ಟ್ಸ್ ತಾರೆಗಳ ಅದಮ್ಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ದೃಢಸಂಕಲ್ಪ, ಉತ್ಸಾಹ ಮತ್ತು ಪ್ರತಿಭೆಗೆ ಯಾವುದೇ ಇತಿಮಿತಿಯಿಲ್ಲ ಎಂದು ತೋರಿಸುತ್ತದೆ. ಅವರು ಈ ಸ್ಮರಣೀಯ ಪ್ರಯಾಣವನ್ನು ಪ್ರಾರಂಭಿಸಿದಾಗ, ಅವರು ತಮ್ಮೊಂದಿಗೆ ರಾಷ್ಟ್ರದ ಆಕಾಂಕ್ಷೆಗಳನ್ನು ಹೊತ್ತೊಯ್ಯುತ್ತಾರೆ. ಈ ಬೀಳ್ಕೊಡುಗೆ ಸಮಾರಂಭವು ನಾವು ನಿಮ್ಮನ್ನು ನಂಬುತ್ತೇವೆ ಎಂದು ಹೇಳುವ ನಮ್ಮ ರೀತಿಯಾಗಿದೆ ಮತ್ತು ನೀವು 4ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿ ಸಾಧನೆ ಮಾಡುತ್ತೀರಿ ಎಂಬ ವಿಶ್ವಾಸ ನಮಗಿದೆ” ಎಂದು ತಮ್ಮ ಭಾಷಣದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಭಾರತದ ಪ್ಯಾರಾ-ಅಥ್ಲೀಟ್‌ಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು,
"ಈ ಕ್ರೀಡಾಪಟುಗಳು ಕ್ರೀಡಾ ಮನೋಭಾವ ಮತ್ತು ಸಮರ್ಪಣೆಯ ನಿಜವಾದ ಸಾರವನ್ನು ಉದಾಹರಿಸುತ್ತಾರೆ. ಅವರ ಪ್ರಯಾಣವು ಎಲ್ಲರಿಗೂ ಸ್ಫೂರ್ತಿಯ ಮೂಲವಾಗಿದೆ, ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಒಬ್ಬರು ಏನನ್ನಾದರೂ ಸಾಧಿಸಬಹುದು. ಸರ್ಕಾರವಾಗಿ, ನಾವು ಅವರ ಹಿಂದೆ ದೃಢವಾಗಿ ನಿಲ್ಲುತ್ತೇವೆ ಮತ್ತು ಅವರು ಭಾರತವನ್ನು ಹೆಮ್ಮೆಪಡುವುದನ್ನು ನೋಡಲು ಉತ್ಸುಕರಾಗಿದ್ದಾರೆ.”ಎಂದು ಕೇಂದ್ರ ಕ್ರೀಡಾ ಮತ್ತು ಮಾಹಿತಿ ಹಾಗೂ ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ತಮ್ಮ ಮೆಚ್ಚುಗೆಯನ್ನು ಹಂಚಿಕೊಂಡರು.
"ಇಂಡಿಯನ್ ಆಯಿಲ್ ಇವರ ಕ್ರೀಡೆಯಲ್ಲಿ ಸೇರ್ಪಡೆಗೊಳ್ಳಲು ಹೆಮ್ಮೆಪಡುತ್ತದೆ, ಭಾರತದ ಪ್ಯಾರಾ-ಅಥ್ಲೀಟ್‌ಗಳನ್ನು ಚಾಂಪಿಯನ್ ಮಾಡುವುದು ಮತ್ತು ಅವರ ಪ್ರಯಾಣವನ್ನು ಬೆಂಬಲಿಸುವುದು ನಮ್ಮ ಸಂಕಲ್ಪ ಮತ್ತು ಮಾನವನ ಸ್ಥಿತಿಸ್ಥಾಪಕತ್ವಕ್ಕೆ ಸಾಕ್ಷಿಯಾಗಿದೆ. ಈ ಅಸಾಮಾನ್ಯ ಸಾಧಕ ಅಥ್ಲೀಟ್‌ಗಳನ್ನು ಬೆಂಬಲಿಸುವುದು ನಮ್ಮ 'ನೇಷನ್-ಫಸ್ಟ್' ಮೌಲ್ಯದೊಂದಿಗೆ ಹೊಂದಾಣಿಕೆಯಾಗುತ್ತದೆ. ಎಂದು ಇಂಡಿಯನ್ ಆಯಿಲ್‌ನ ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ಮಾಧವ್ ವೈದ್ಯ ಅವರು ಅಸಾಧಾರಣ ಪ್ರತಿಭೆಗಳಿಗೆ ಕಂಪನಿಯ ಬದ್ಧತೆಯ ಬಗ್ಗೆ ಸಂಸ್ಥೆಯ ಮಾಹಿತಿ ನೀಡಿದರು.
ಜಾಗತಿಕ ಗಮನಾರ್ಹವಾದ ಸಾಧನೆಯಲ್ಲಿ, ಭಾರತವು ಮೊದಲ ಬಾರಿಗೆ ಐದು ಕ್ರೀಡೆಗಳಾದ ಕ್ಯಾನೋ, ಬ್ಲೈಂಡ್ ಫುಟ್ಬಾಲ್, ಲಾನ್ ಬೌಲ್ಸ್, ರೋಯಿಂಗ್ ಮತ್ತು ಟೇಕ್ವಾಂಡೋ ಸೇರಿದಂತೆ ಹದಿನೇಳು ವಿಭಾಗಗಳಲ್ಲಿ ಭಾಗವಹಿಸುತ್ತಿದೆ. ಬೀಳ್ಕೊಡುಗೆ ಸಮಾರಂಭ ಮೂಲಕ ಈ ಕ್ರೀಡಾಪಟುಗಳನ್ನು ಸಂತೋಷಭರಿತವಾಗಿಸಲಾಯಿತು ಮತ್ತು ಅವರು ಕ್ರೀಡಾ ಇತಿಹಾಸದ ವಾರ್ಷಿಕ ಪುಟದಲ್ಲಿ ತಮ್ಮ ಹೆಸರನ್ನು ಕೆತ್ತಲು ತಯಾರಿ ನಡೆಸುತ್ತಿರುವಾಗ, ಅವರಿಗೆ ಪ್ರೋತ್ಸಾಹ ಮತ್ತು ದೃಢತೆಯನ್ನು ತುಂಬಿದರು.
"ಈ ಕ್ರೀಡಾಪಟುಗಳು ನಡೆದು ಬಂದ ಹಾದಿಯು ಸಮರ್ಪಣೆ, ಅಚಲವಾದ ನಿರ್ಣಯ ಮತ್ತು ಲೆಕ್ಕವಿಲ್ಲದಷ್ಟು ಗಂಟೆಗಳ ಕಠಿಣ ಪರಿಶ್ರಮದಿಂದ ತುಂಬಿದೆ. 4 ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅವರ ಭಾಗವಹಿಸುವಿಕೆಯು ಅವರ ನಿರಂತರತೆಯ ಮನೋಭಾವ ಮತ್ತು ಇಂಡಿಯನ್ ಆಯಿಲ್, ಸರ್ಕಾರ ಮತ್ತು ಅವರ ಪಕ್ಕದಲ್ಲಿರುವ ಎಲ್ಲಾ ಹಿತೈಷಿಗಳ ಬೆಂಬಲಕ್ಕೆ ಸಾಕ್ಷಿಯಾಗಿದೆ." ಎಂದು ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷೆ ಮತ್ತು ಸ್ವತಃ ಏಷ್ಯನ್ ಕ್ರೀಡಾಕೂಟದ ಪದಕ ವಿಜೇತೆ ಡಾ. ದೀಪಾ ಮಲಿಕ್ ಅವರು ಅಗಾಧ ಬೆಂಬಲಕ್ಕಾಗಿ ತಮ್ಮ ಕೃತಜ್ಞತೆ ಸಲ್ಲಿಸಿದರು.
"ಈ ಬೀಳ್ಕೊಡು ಸಮಾರಂಭವು ಕೇವಲ ವಿದಾಯವಲ್ಲ; ಇದು ನಿಮ್ಮ ಶಕ್ತಿ, ಧೈರ್ಯ ಮತ್ತು ದೃಢತೆಯ ಆಚರಣೆಯಾಗಿದೆ. ನೀವು ಭಾರತವನ್ನು ಪ್ರತಿನಿಧಿಸುವುದು ಮಾತ್ರವಲ್ಲ; ನೀವು ಲಕ್ಷಾಂತರ ಜನರ ಭರವಸೆ ಮತ್ತು ಕನಸುಗಳನ್ನು ನಿಮ್ಮೊಂದಿಗೆ ಹೊತ್ತಿದ್ದೀರಿ. 4 ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ನಿಮ್ಮ ಪ್ರದರ್ಶನವು ಭಾರತೀಯ ಕ್ರೀಡಾಪಟುಗಳ ಅದಮ್ಯ ಮನೋಭಾವಕ್ಕೆ ಉಜ್ವಲ ಉದಾಹರಣೆಯಾಗಲಿ” ಎಂದು ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಗುರುಶರಣ್ ಸಿಂಗ್ ಅವರು ಕ್ರೀಡಾಪಟುಗಳಿಗೆ ಸಂದೇಶವನ್ನು ನೀಡಿದರು,.
ಇದೀಗ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲಿ 107 ಪದಕಗಳನ್ನು ಗೆದ್ದ ಭಾರತೀಯ ತಂಡದ ಐತಿಹಾಸಿಕ ಪ್ರದರ್ಶನವು ಅಥ್ಲೀಟ್‌ಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಉತ್ತೇಜನ ನೀಡಿದೆ, 4 ನೇ ಏಷ್ಯನ್ ಪ್ಯಾರಾ ಗೇಮ್ಸ್ ಅನೇಕ ದಾಖಲೆಗಳನ್ನು ಮುರಿಯಲಿದೆ ಮತ್ತು ದೇಶದ ಪ್ಯಾರಾ ಗೇಮ್ಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯಾಗಲಿದೆ. ಭಾರತದ 309 ಪ್ಯಾರಾ ಅಥ್ಲೀಟ್‌ಗಳು 4 ನೇ ಏಷ್ಯನ್ ಪ್ಯಾರಾ ಗೇಮ್ಸ್‌ಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿರುವಾಗ, ಇಡೀ ರಾಷ್ಟ್ರವು ಅವರ ಹಿಂದೆ ದೃಢವಾಗಿ ನಿಂತಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್, ಸರ್ಕಾರ ಮತ್ತು ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾದ ಬೆಂಬಲದೊಂದಿಗೆ, ಈ ಕ್ರೀಡಾಪಟುಗಳು ಇತಿಹಾಸವನ್ನು ನಿರ್ಮಿಸಲು, ಇತರರಿಗೆ ಸ್ಫೂರ್ತಿ ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಸಿದ್ಧರಾಗಿದ್ದಾರೆ.
*****
(Release ID: 1967292)
Visitor Counter : 86