ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಎಫ್ಎಫ್ಐ-54 ರ ಮಾಂತ್ರಿಕತೆಯನ್ನು ಅನುಭವಿಸಲು ಮಾಧ್ಯಮ ಪ್ರತಿನಿಧಿಗಳಿಗೆ ನೋಂದಣಿಯ ಆಹ್ವಾನ
ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ-54ನೇ ಆವೃತ್ತಿಗೆ ಮಾಧ್ಯಮ ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ
ಪಣಜಿ, 11ನೇ ಅಕ್ಟೋಬರ್ 2023
2023ರ ನವೆಂಬರ್ 20ರಿಂದ 28ರವರೆಗೆ ಗೋವಾ ರಾಜ್ಯದಲ್ಲಿ ನಡೆಯಲಿರುವ ಐಎಫ್ಎಫ್ಐನ-54ನೇ ಆವೃತ್ತಿಗಾಗಿ ಮಾಧ್ಯಮ ಪ್ರತಿನಿಧಿಗಳ ನೋಂದಣಿಯನ್ನು ತೆರೆಯುವುದಾಗಿ ಘೋಷಿಸಲು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಹೆಮ್ಮೆಪಡುತ್ತದೆ. ಈ ಚಿತ್ರೋತ್ಸವವು ಭಾರತ ಮತ್ತು ಪ್ರಪಂಚದಾದ್ಯಂತದ ಸಮಕಾಲೀನ ಮತ್ತು ಕ್ಲಾಸಿಕ್ ಸಿನೆಮಾದ ಅತ್ಯುತ್ತಮತೆಯನ್ನು ಪ್ರದರ್ಶಿಸುವ ಭರವಸೆಯನ್ನು ನೀಡುತ್ತದೆ.
ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ-54ರಲ್ಲಿ ಮಾಧ್ಯಮ ಪ್ರತಿನಿಧಿಗಳು ವಿಶ್ವದ ಅತ್ಯುತ್ತಮ ಚಲನಚಿತ್ರ ನಿರ್ಮಾಪಕರು, ನಟರು, ತಂತ್ರಜ್ಞರು, ವಿಮರ್ಶಕರು, ಶಿಕ್ಷಣ ತಜ್ಞರು ಮತ್ತು ಸಹ ಚಲನಚಿತ್ರ ಉತ್ಸಾಹಿಗಳನ್ನು ಭೇಟಿಯಾಗುವ ಭಾಗ್ಯವನ್ನು ಪಡೆಯಲಿದ್ದಾರೆ.
ಮಾಧ್ಯಮ ಪ್ರತಿನಿಧಿಯಾಗಲು, ನಿಮಗೆ ಜನವರಿ 1, 2023ಕ್ಕೆ 21 ವರ್ಷಗಳು ಪೂರ್ಣಗೊಂಡಿರಬೇಕು. ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಅಥವಾ ಆನ್ಲೈನ್ ಮಾಧ್ಯಮ ಸಂಸ್ಥೆಗೆ ಸೇರಿದವರಾಗಿರಬೇಕು. ವಯಸ್ಸಿನ ಮಾನದಂಡವನ್ನು ಪೂರೈಸುವ ಸ್ವತಂತ್ರ ಪತ್ರಕರ್ತರು ಕೂಡಾ ತಮ್ಮ ಹೆಸರನ್ನು ನೋಂದಾಯಿಸಬಹುದು. ನೋಂದಣಿ ಪ್ರಕ್ರಿಯೆಯು ಸರಳವಾಗಿದ್ದು, ಆನ್ ಲೈನ್ ನಲ್ಲಿhttp://https://my.iffigoa.org/extranet/media/ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದು.
ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಯಶಸ್ವಿಗೊಳಿಸಲು, ಸಿನೆಮಾ ಮೆಚ್ಚುಗೆಯ ಸಂಸ್ಕೃತಿಯನ್ನು ಬೆಳೆಸಲು ಮತ್ತು ಚಲನಚಿತ್ರ ನಿರ್ಮಾಣದ ಕಲೆಯ ಬಗ್ಗೆ ಜನರಲ್ಲಿ ನಿಜವಾದ ಪ್ರೀತಿಯನ್ನು ಪೋಷಿಸಲು ಮಾಹಿತಿ ಮತ್ತು ಪ್ರಸಾರ ಸಂವಹನವು ಪ್ರಮುಖ ಪಾತ್ರ ವಹಿಸುತ್ತದೆ. ಚಲನಚಿತ್ರೋತ್ಸವಕ್ಕೆ ನೋಂದಾಯಿಸಿಕೊಳ್ಳಲು ಮತ್ತು ಅದರಲ್ಲಿ ಭಾಗವಹಿಸಲು ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನದ ಜೊತೆಗೆ, ಮಾಧ್ಯಮದ ಶಕ್ತಿಯನ್ನು ಬಳಸಿಕೊಂಡು ಐಎಫ್ಎಫ್ಐ ಆಚರಣೆಗೆ ಕೊಡುಗೆ ನೀಡುವ ವೃತ್ತಿಪರ ಸವಲತ್ತುಗಳನ್ನು ಸ್ವೀಕರಿಸಲು ಕೋರಲಾಗಿದೆ.
ಪ್ರತಿಯೊಂದೂ ಸಿನೆಮಾ ಕೂಡಾ ಅವುಗಳ ಸೃಷ್ಟಿಕರ್ತರ ಜೀವನ, ಅವರ ಕನಸು, ಆಕಾಂಕ್ಷೆಗಳು ಮತ್ತು ಹೋರಾಟಗಳ ವಿಶಿಷ್ಟ ನೋಟವನ್ನು ನೀಡುತ್ತದೆ. ಸಿನೆಮಾದ ಸಂಪೂರ್ಣ ಸಂತೋಷ ಮತ್ತು ಈ ಚಲನಚಿತ್ರಗಳು ಹೆಣೆದ ಆಕರ್ಷಕ ಕಥೆಗಳು ಐಎಫ್ಎಫ್ಐ-54ರಲ್ಲಿ ಪ್ರದರ್ಶನಗೊಳ್ಳಲಿವೆ. ಚಲನಚಿತ್ರಗಳ ಆಚರಣೆಯು ಪರದೆಯ ಮೇಲಿನ ಸಿನಿಮಾ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೆ, ಐಎಫ್ಎಫ್ಐ ಮತ್ತು ಇತರ ಶ್ರೇಷ್ಠ ಚಲನಚಿತ್ರೋತ್ಸವಗಳ ಸಾರವನ್ನು ವ್ಯಾಖ್ಯಾನಿಸುವ ಮಾಸ್ಟರ್ ಕ್ಲಾಸ್, ಪ್ಯಾನಲ್ ಚರ್ಚೆಗಳು, ಸೆಮಿನಾರ್ ಗಳು ಮತ್ತು ಸಂಭಾಷಣೆಗಳ ಶ್ರೇಣಿಯನ್ನು ಹೊಂದಿರುತ್ತದೆ.
ನೋಂದಣಿ ಪ್ರಕ್ರಿಯೆಯ ಸಮಯದಲ್ಲಿ ಯಾವುದೇ ಸಂದೇಹ, ಸಮಸ್ಯೆಗಳಿದ್ದರೆ, ದಯವಿಟ್ಟು https://static.pib.gov.in/WriteReadData/specificdocs/documents/2023/oct/doc20231011259501.pdfಮತ್ತು ನೋಂದಣಿ ಕೊಂಡಿಯಲ್ಲಿ ಒದಗಿಸಲಾದ ಮಾರ್ಗಸೂಚಿಗಳನ್ನು ನೋಡಿ. ಯಾವುದೇ ಹೆಚ್ಚಿನ ಸಹಾಯ ಅಥವಾ ಮಾಹಿತಿಗಾಗಿ, ದಯವಿಟ್ಟು ಪಿಐಬಿಯನ್ನು pib-goa[at]gov[dot]in ನಲ್ಲಿ ಇಮೇಲ್ ಮೂಲಕ ಅಥವಾ +91-832-2956418 ನಲ್ಲಿ ಫೋನ್ ಮೂಲಕ ಸಂಪರ್ಕಿಸಬಹುದು. ಎಲ್ಲಾ ಕೆಲಸದ ದಿನಗಳಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಈ ದೂರವಾಣಿ ಸಂಖ್ಯೆ ಸಕ್ರಿಯವಾಗಿರುತ್ತದೆ.
ನೋಂದಣಿಗೆ ಕೊನೆಯ ದಿನಾಂಕವನ್ನು ನವೆಂಬರ್ 18, 2023 ರಂದು ಭಾರತೀಯ ಕಾಲಮಾನ ರಾತ್ರಿ 11:59:59ಕ್ಕೆ ನಿಗದಿಪಡಿಸಲಾಗಿದೆ.
ಮಾಧ್ಯಮ ಸಂಸ್ಥೆಯ ಆವರ್ತಕತೆ, ಅದರ ಪ್ರಸಾರ, ಪ್ರೇಕ್ಷಕರನ್ನು ತಲುಪುವಿಕೆ, ಸಿನೆಮಾದ ಮೇಲೆ ಅದರ ಗಮನ ಮತ್ತು ಐಎಫ್ಎಫ್ಐನ ನಿರೀಕ್ಷಿತ ಮಾಧ್ಯಮ ಪ್ರಸಾರದಂತಹ ಅಂಶಗಳ ಆಧಾರದ ಮೇಲೆ ಪ್ರತಿ ಮಾಧ್ಯಮ ಸಂಸ್ಥೆಗೆ ನೀಡಬೇಕಾದ ಮಾನ್ಯತೆಗಳ ಸಂಖ್ಯೆಯನ್ನು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ನಿರ್ಧರಿಸುತ್ತದೆ.
ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಬಗ್ಗೆ:
1952ರಲ್ಲಿ ಸ್ಥಾಪನೆಯಾದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) ಏಷ್ಯಾದ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಪ್ರಾರಂಭದಿಂದಲೂ, ಐಎಫ್ಎಫ್ಐ ಚಲನಚಿತ್ರಗಳು, ಅವುಗಳ ಆಕರ್ಷಕ ಕಥೆಗಳು ಮತ್ತು ಅವುಗಳ ಹಿಂದಿನ ಪ್ರತಿಭಾವಂತ ವ್ಯಕ್ತಿಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಈ ಉತ್ಸವವು ಚಲನಚಿತ್ರಗಳ ಬಗ್ಗೆ ಆಳವಾದ ಮೆಚ್ಚುಗೆ ಮತ್ತು ಪ್ರೀತಿಯನ್ನು ಹರಡಲು ಪ್ರಯತ್ನಿಸುತ್ತದೆ, ಜನರಲ್ಲಿ ತಿಳುವಳಿಕೆ ಮತ್ತು ಸ್ನೇಹದ ಸೇತುವೆಗಳನ್ನು ನಿರ್ಮಿಸಿ ವೈಯಕ್ತಿಕ ಮತ್ತು ಸಾಮೂಹಿಕ ಶ್ರೇಷ್ಠತೆಯ ಹೊಸ ಉತ್ತುಂಗಕ್ಕೆ ತಲುಪಲು ಅವರನ್ನು ಪ್ರೇರೇಪಿಸುತ್ತದೆ.
ಐಎಫ್ಎಫ್ಐ ಅನ್ನು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರತಿ ವರ್ಷ ಗೋವಾ ಸರ್ಕಾರದ ಮನರಂಜನಾ ಸೊಸೈಟಿಯ ಸಹಯೋಗದೊಂದಿಗೆ ಆಯೋಜಿಸುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯ (ಡಿಎಫ್ಎಫ್) ಸಾಮಾನ್ಯವಾಗಿ ಚಲನಚಿತ್ರೋತ್ಸವದ ನೇತೃತ್ವ ವಹಿಸುತ್ತಿದ್ದು, ಚಲನಚಿತ್ರ ಮಾಧ್ಯಮ ಘಟಕಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ ವಿಲೀನಗೊಳಿಸಿದ ಪರಿಣಾಮವಾಗಿ, ಎನ್ಎಫ್ ಡಿಸಿ ಉತ್ಸವದ ಉಸ್ತುವಾರಿ ನಿರ್ವಹಣೆಯನ್ನು ವಹಿಸಿಕೊಂಡಿದೆ. 54ನೇ ಐಎಫ್ಎಫ್ಐನ ಇತ್ತೀಚಿನ ಅಪ್ ಡೇಟ್ ಗಳಿಗಾಗಿ, http://www.iffigoa.orgಗೆ ಭೇಟಿ ನೀಡಿ. ಟ್ವಿಟರ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ಐಎಫ್ಎಫ್ಐ ಅನ್ನು ಹಿಂಬಾಲಿಸಿ.
*****
(Release ID: 1966676)
Visitor Counter : 162