ಕಲ್ಲಿದ್ದಲು ಸಚಿವಾಲಯ
azadi ka amrit mahotsav

​​​​​​​ಕಲ್ಲಿದ್ದಲು ಸಚಿವಾಲಯದ ವಿಶೇಷ ಅಭಿಯಾನ 3.0 ಪೂರ್ಣವಾಗಿ ಕಲ್ಲಿದ್ದಲು ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆ


763 ತಾಣಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುವುದು

5218 MT ಸ್ಕ್ರ್ಯಾಪ್ ಅನ್ನು ವಿಲೇವಾರಿ ಮಾಡಲು ಕ್ರಮ

Posted On: 10 OCT 2023 1:35PM by PIB Bengaluru

ಕಲ್ಲಿದ್ದಲು ಸಚಿವಾಲಯವು ತನ್ನ ಎಲ್ಲಾ ಸರ್ಕಾರಿ ಸ್ವಾಮ್ಯ ಸಂಸ್ಥೆಗಳು ಮತ್ತು ಕ್ಷೇತ್ರ ಕಚೇರಿಗಳೊಂದಿಗೆ 02 ರಿಂದ 31 ಅಕ್ಟೋಬರ್ 2023 ರವರೆಗೆ ಸ್ವಚ್ಛತಾ ವಿಶೇಷ ಅಭಿಯಾನ 3.0 ಅನ್ನು ನಡೆಸಲಾಯಿತು. ಅಭಿಯಾನದ ಪೂರ್ವಸಿದ್ಧತಾ ಹಂತವು ಸೆಪ್ಟೆಂಬರ್ 15 ರಿಂದ ಪ್ರಾರಂಭವಾಯಿತು, ಅಭಿಯಾನದ ಸಮಯದಲ್ಲಿ ಸಾಧಿಸಬೇಕಾದುದನ್ನು ಗುರುತಿಸಲಾಗಿತ್ತು. ಅಭಿಯಾನದ ಮುಖ್ಯ ಹಂತವು ಅಧಿಕೃತವಾಗಿ ಅಕ್ಟೋಬರ್ 2 ರಿಂದ ಪ್ರಾರಂಭವಾಯಿತು ಮತ್ತು ಅಕ್ಟೋಬರ್ 31, 2023 ರವರೆಗೆ ಮುಂದುವರಿಯುತ್ತದೆ. ಅಭಿಯಾನದ ಕೇಂದ್ರೀಕೃತ ಕ್ಷೇತ್ರಗಳು ಸಾರ್ವಜನಿಕ ಕುಂದುಕೊರತೆಗಳ ಪರಿಣಾಮಕಾರಿ ವಿಲೇವಾರಿ, ಸಂಸತ್ತಿನ ಸದಸ್ಯರ ಉಲ್ಲೇಖಗಳು, ಸಂಸತ್ತಿನ ಭರವಸೆಗಳು, ಸ್ವಚ್ಛತಾ ಅಭಿಯಾನ, ಸ್ಕ್ರ್ಯಾಪ್ ವಿಲೇವಾರಿ ಮತ್ತು ಫೈಲ್‌ ಗಳ ಮತ್ತು ಇತರ ಸ್ವಚ್ಛತಾ ಸಂಬಂಧಿತ ಚಟುವಟಿಕೆ ನಡೆಸಲಾಗುವುದು. 

ಹೆಚ್ಚುವರಿ ಕಾರ್ಯದರ್ಶಿಗಳ ಮಟ್ಟದಲ್ಲಿ ಪೂರ್ವಸಿದ್ಧತಾ ಸಭೆಯನ್ನು ಕಲ್ಲಿದ್ದಲು ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಕಾರ್ಯತಂತ್ರವನ್ನು ರೂಪಿಸಲು, ಜಾಗೃತಿ ಮೂಡಿಸಲು ಮತ್ತು ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಮತ್ತು ವಿವಿಧ ವರ್ಗಗಳ ವಿಶೇಷ ಅಭಿಯಾನದ ಅಡಿಯಲ್ಲಿ ಗುರಿಗಳನ್ನು ಸಾಧಿಸಲು ಸಚಿವಾಲಯದ ವ್ಯಾಪ್ತಿಯೊಳಗೆ ಎಲ್ಲಾ ಪಾಲುದಾರರನ್ನು ಸಜ್ಜುಗೊಳಿಸಲಾಯಿತು. 3.0 ಅಭಿಯಾನವನ್ನು ಎಲ್ಲರೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗಿದೆ.

ImageImage

ಪೂರ್ವಸಿದ್ಧತಾ ಹಂತದಲ್ಲಿ, ಕಲ್ಲಿದ್ದಲು ಸಚಿವಾಲಯವು ಸ್ವಚ್ಛತಾ ಅಭಿಯಾನಕ್ಕಾಗಿ 763 ಜಾಗಗಳನ್ನು  ಗುರುತಿಸಿದೆ ಮತ್ತು ಉತ್ತಮ ದಾಖಲೆ ನಿರ್ವಹಣೆಗಾಗಿ 129,301 ಭೌತಿಕ ಫೈಲ್‌ ಗಳ ಮತ್ತು 59,213 ಇ-ಫೈಲ್‌ ಗಳನ್ನು ಪರಿಶೀಲಿಸುವ ಗುರಿಯನ್ನು ಹೊಂದಿದೆ. ವಿಲೇವಾರಿ ಮಾಡಲು ಒಟ್ಟು 5218 ಮೆಟ್ರಿಕ್ ಟನ್ ಸ್ಕ್ರ್ಯಾಪ್ ಗುರುತಿಸಲಾಗಿದೆ.

ಕಲ್ಲಿದ್ದಲು ಸಚಿವಾಲಯವು ವಿವಿಧ ಚಟುವಟಿಕೆಗಳನ್ನು ಅತ್ಯುತ್ತಮ ಅಭ್ಯಾಸಗಳಾಗಿ ಕೈಗೊಳ್ಳುತ್ತಿದೆ ಮತ್ತು ಅಭಿಯಾನ ಕೊನೆಗೊಳ್ಳುವ ವೇಳೆಗೆ ಈ ಕಾರ್ಯಗಳನ್ನು ಸಾಧಿಸಲು ಗುರಿ ಹೊಂದಲಾಗಿದೆ. ಇದು ಸ್ವಚ್ಛತೆಯನ್ನು ಉತ್ತೇಜಿಸುತ್ತದೆ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಶಾಶ್ವತವಾದ ಬದಲಾವಣೆಯ ಮೇಲೆ ಪರಿಣಾಮ ಬೀರುವ ಕೆಲಸದ ಅನುಭವಗಳನ್ನು ಹೆಚ್ಚಿಸುತ್ತದೆ

***



(Release ID: 1966299) Visitor Counter : 91


Read this release in: English , Urdu , Hindi , Tamil , Telugu