ಸಹಕಾರ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ (ಎನ್‌ ಸಿ ಡಿ ಸಿ) 89 ನೇ ಸಾಮಾನ್ಯ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಸಹಕಾರ್ ಸೇ ಸಮೃದ್ಧಿʼಯ ದೃಷ್ಟಿಯನ್ನು ಈಡೇರಿಸುವಲ್ಲಿ ಎನ್‌ ಸಿ ಡಿ ಸಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಎನ್‌ ಸಿ ಡಿ ಸಿ ಹಣಕಾಸಿನ ನೆರವು ವಿತರಣೆಯಲ್ಲಿ 2013-14ರಲ್ಲಿದ್ದ 5,300 ಕೋಟಿ ರೂ.ಗಳಿಂದ 10 ಪಟ್ಟು ಬೆಳವಣಿಗೆಯನ್ನು ಸಾಧಿಸಲು ಸಜ್ಜಾಗಿದೆ.

ಎನ್‌ ಸಿ ಡಿ ಸಿ 2023-2024ರಲ್ಲಿ 50,000 ಕೋಟಿ ರೂ. ಗುರಿಯನ್ನು ಸಾಧಿಸುತ್ತದೆ ಎಂದು ನನಗೆ ವಿಶ್ವಾಸವಿದೆ, 2022-23 ಕ್ಕೆ ಸಾಲ ವಸೂಲಾತಿ ದರವು ಶೇ.99 ಕ್ಕಿಂತ ಹೆಚ್ಚಿದ್ದು, ಕಾರ್ಪೊರೇಷನ್‌ ನ ನಿವ್ವಳ ಎನ್‌ಪಿಎಯನ್ನು 'ಶೂನ್ಯ'ದಲ್ಲಿ ನಿರ್ವಹಿಸಲಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ.

 ಎನ್‌ ಸಿ ಡಿ ಸಿ ಪ್ರತಿ ತ್ರೈಮಾಸಿಕ ಗುರಿಗಳೊಂದಿಗೆ ಮುಂದಿನ 3 ವರ್ಷಗಳಲ್ಲಿ ವಾರ್ಷಿಕ 1 ಲಕ್ಷ ಕೋಟಿ ರೂ. ವಿತರಣೆಯ ಗುರಿಯನ್ನು ನಿಗದಿಪಡಿಸಬೇಕು

ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಸಹಕಾರ ಸಚಿವಾಲಯವು ರಚನೆಯಾದಾಗಿನಿಂದ ಕಳೆದ 27 ತಿಂಗಳುಗಳಲ್ಲಿ ದೇಶದಲ್ಲಿ ಸಹಕಾರ ಆಂದೋಲನವನ್ನು ಬಲಪಡಿಸಲು ಮತ್ತು ಜಿಡಿಪಿಯಲ್ಲಿ ಸಹಕಾರಿ ಸಂಸ್ಥೆಗಳ ಪಾಲನ್ನು ಹೆಚ್ಚಿಸಲು 54 ಉಪಕ್ರಮಗಳನ್ನು ತೆಗೆದುಕೊಂಡಿದೆ.

ಈ ಉಪಕ್ರಮಗಳು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿಎಸಿಎಸ್) ಬಲಪಡಿಸಲು ವಿಶೇಷ ಗಮನವನ್ನು ಹೊಂದಿವೆ.‌

Posted On: 09 OCT 2023 7:13PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ (ಎನ್‌ ಸಿ ಡಿ ಸಿ) 89 ನೇ ಸಾಮಾನ್ಯ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

https://static.pib.gov.in/WriteReadData/userfiles/image/image001VKHE.jpg

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಸಹಕಾರ್ ಸೇ ಸಮೃದ್ಧಿ’ಯ ದೃಷ್ಟಿಕೋನವನ್ನು ಈಡೇರಿಸುವಲ್ಲಿ ಎನ್‌ ಸಿ ಡಿ ಸಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಬಂಡವಾಳವಿಲ್ಲದ ದೇಶದ 60 ಕೋಟಿ ಜನಸಂಖ್ಯೆಯ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳು ಏಕೈಕ ಮಾಧ್ಯಮವಾಗಿವೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಸಹಕಾರ ಸಚಿವಾಲಯವು ರಚನೆಯಾದಾಗಿನಿಂದ ಕಳೆದ 27 ತಿಂಗಳುಗಳಲ್ಲಿ ದೇಶದಲ್ಲಿ ಸಹಕಾರ ಆಂದೋಲನವನ್ನು ಬಲಪಡಿಸಲು ಮತ್ತು ಜಿಡಿಪಿಯಲ್ಲಿ ಸಹಕಾರಿ ಸಂಸ್ಥೆಗಳ ಪಾಲನ್ನು ಹೆಚ್ಚಿಸಲು 54 ಉಪಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಈ ಉಪಕ್ರಮಗಳು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿಎಸಿಎಸ್) ಬಲಪಡಿಸಲು ವಿಶೇಷ ಗಮನವನ್ನು ಹೊಂದಿವೆ. ವ್ಯವಹಾರವನ್ನು ಸುಲಭಗೊಳಿಸಲು ಉದ್ದೇಶಿಸಿರುವ ಉಪಕ್ರಮಗಳಲ್ಲಿ ಪಿಎಸಿಎಸ್ ಗಣಕೀಕರಣ, ಮಾದರಿ ಬೈಲಾಗಳು, ಡೈರಿ, ಗೋಡೌನ್‌‌ ಗಳ ಸ್ಥಾಪನೆ, ಎಲ್‌ ಪಿ ಜಿ/ಪೆಟ್ರೋಲ್/ಹಸಿರು ಇಂಧನ ವಿತರಣಾ ಸಂಸ್ಥೆ, ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ ಗಳು, 30 ಕ್ಕೂ ಹೆಚ್ಚು ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಪಿಎಸಿಎಸ್‌ ಕಾರ್ಯನಿರ್ವಹಣೆಯನ್ನು ವಿಸ್ತರಿಸುವುದು ಸೇರಿವೆ. ಪಿಎಸಿಎಸ್‌ ಗಳು ಸಾಮಾನ್ಯ ಸೇವಾ ಕೇಂದ್ರಗಳಾಗಿ (ಸಿ ಎಸ್‌ ಸಿ) 300 ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸಬಹುದು ಮತ್ತು ಸಹಕಾರಿ ಸಂಸ್ಥೆಗಳ ನವೀಕರಿಸಿದ ಡೇಟಾ ರೆಪೊಸಿಟರಿಯನ್ನು ಸಿದ್ಧಪಡಿಸಬಹುದು ಎಂದು ಅವರು ಹೇಳಿದರು.

ಪಿಎಸಿಎಸ್ ಮಹತ್ವದ ಉಪಕ್ರಮಗಳಾದ ಜನೌಷಧಿ ಕೇಂದ್ರಗಳಾಗಿ, ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಮತ್ತು ಪಾನಿ ಸಮಿತಿಗಳಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕೆಲಸವನ್ನು ಕೈಗೊಳ್ಳುವ ಮೂಲಕ ಪಿಎಸಿಎಸ್ ಗಳಿಗೆ ಸುಸ್ಥಿರ ಆದಾಯ ಮತ್ತು ಗ್ರಾಮೀಣ ಪ್ರದೇಶದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಬಹುದು ಎಂದು ಸಹಕಾರ ಸಚಿವರು ಹೇಳಿದರು. ರಾಜ್ಯ ಸರ್ಕಾರಗಳ ನೆರವಿನೊಂದಿಗೆ ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ, ಇದು 8.00 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳ ಸಮಗ್ರ, ಅಧಿಕೃತ ಮತ್ತು ನವೀಕರಿಸಿದ ಡೇಟಾವನ್ನು ಹೊಂದಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image002ENKZ.jpg

 

ಎನ್‌ ಸಿ ಡಿ ಸಿ ಯು ಭಾರತ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಏಜೆನ್ಸಿಯಾಗಿದೆ ಮತ್ತು ಸಹಕಾರಿ ಸಂಘಗಳಿಗೆ ಅನುಕೂಲವಾಗುವಂತೆ ತನ್ನ ಸಾಲದೊಂದಿಗೆ ಸಬ್ಸಿಡಿ ಘಟಕವನ್ನು ಸಂಯೋಜಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎನ್‌ ಸಿ ಡಿ ಸಿ 2022-23ರ ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ದೇಶಾದ್ಯಂತ 41,000 ಕೋಟಿ ರೂ.ಗೂ ಹೆಚ್ಚು ಆರ್ಥಿಕ ಸಹಾಯವನ್ನು ವಿತರಿಸಿದೆ ಎಂದು ಅವರು ಹೇಳಿದರು. ಎನ್‌ ಸಿ ಡಿ ಸಿ ಆರ್ಥಿಕ ನೆರವು ವಿತರಣೆಯಲ್ಲಿ 2013-14ರಲ್ಲಿದ್ದ 5,300 ಕೋಟಿ ರೂ.ಗಳಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 10 ಪಟ್ಟು ಬೆಳವಣಿಗೆಯನ್ನು ಸಾಧಿಸಲು ಸಜ್ಜಾಗಿದೆ ಎಂದು ಸಹಕಾರ ಸಚಿವರು ಹೇಳಿದರು. ಇಂತಹ ಪ್ರಭಾವಶಾಲಿ ಪ್ರದರ್ಶನದೊಂದಿಗೆ, ಎನ್‌ ಸಿ ಡಿ ಸಿ ಯು 2023-2024 ಕ್ಕೆ ನಿಗದಿಪಡಿಸಲಾದ 50,000 ಕೋಟಿ ರೂ. ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಶ್ರೀ ಶಾ ಹೇಳಿದರು. 2022-23 ಕ್ಕೆ ಸಾಲ ವಸೂಲಾತಿ ದರವು ಶೇ.99 ಕ್ಕಿಂತ ಹೆಚ್ಚಿರುವ ಕಾರ್ಪೊರೇಷನ್‌ ನ ನಿವ್ವಳ ಎನ್‌ ಪಿ ಎ 'ಶೂನ್ಯ'ದಲ್ಲಿ ನಿರ್ವಹಿಸಲ್ಪಟ್ಟಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.

ಎನ್‌ ಸಿ ಡಿ ಸಿ ಪ್ರತಿ ತ್ರೈಮಾಸಿಕಕ್ಕೆ ಗುರಿಯೊಂದಿಗೆ ಮುಂದಿನ 3 ವರ್ಷಗಳಲ್ಲಿ ವಾರ್ಷಿಕ 1 ಲಕ್ಷ ಕೋಟಿ ರೂ.ಸಾಧಿಸುವ ಗುರಿಯನ್ನು ಹೊಂದಬೇಕು ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಎನ್‌ ಸಿ ಡಿ ಸಿ ಕಡಿಮೆ ದರದಲ್ಲಿ ಸಾಲ ಪಡೆಯುವ ಮಾರ್ಗಗಳನ್ನು ಅನ್ವೇಷಿಸಬೇಕು ಮತ್ತು ಕಡಿಮೆ ಬಡ್ಡಿದರವನ್ನು ಇಟ್ಟುಕೊಂಡು ಸಹಕಾರಿ ಕ್ಷೇತ್ರಕ್ಕೆ ಸಾಲ ನೀಡಬೇಕು ಎಂದು ಸಚಿವರು ಹೇಳಿದರು. ಎನ್‌ ಸಿ ಡಿ ಸಿ ಯ ಉದ್ದೇಶ ಲಾಭ ಗಳಿಸುವುದು ಮಾತ್ರವಲ್ಲದೆ ಸಹಕಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುವುದಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಸಹಕಾರಿ ಅಭಿವೃದ್ಧಿಗೆ ಸಹಾಯ ಮಾಡುವಲ್ಲಿ ಎನ್‌ ಸಿ ಡಿ ಸಿ ಪಾತ್ರವನ್ನು ಶ್ರೀ ಅಮಿತ್ ಶಾ ಶ್ಲಾಘಿಸಿದರು, ಅವರು ಕೃಷಿ ಮಾರುಕಟ್ಟೆ ಮತ್ತು ಕೃಷಿ ಪರಿಕರಗಳಿಂದ ಸಂಸ್ಕರಣೆ, ಸಂಗ್ರಹಣೆ ಮತ್ತು ಶೀತ ಸರಪಳಿಯವರೆಗೆ ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಕ್ಷೇತ್ರಗಳನ್ನು ಸೇರಿಸಲು ಮತ್ತು ದೇಶದಲ್ಲಿ ಯುವಕರ ಆದಾಯವನ್ನು ಹೆಚ್ಚಿಸಲು ಎನ್‌ ಸಿ ಡಿ ಸಿ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ಹೇಳಿದರು. ದೇಶದಲ್ಲಿ 8.00 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳಿದ್ದು, 29 ಕೋಟಿ ರೈತರು ಸದಸ್ಯರಾಗಿದ್ದಾರೆ. ಎನ್‌ ಸಿ ಡಿ ಸಿ 1963 ರಲ್ಲಿ ಪ್ರಾರಂಭವಾದಾಗಿನಿಂದ ಕೃಷಿ ಮತ್ತು ತೋಟಗಾರಿಕೆ ಸಹಕಾರ ಸಂಘಗಳು ಸೇರಿದಂತೆ ಸಹಕಾರಿ ಸಂಸ್ಥೆಗಳಿಗೆ ಒಟ್ಟು 2,78,378 ಕೋಟಿ ರೂ.ಗಳ ಹಣಕಾಸಿನ ನೆರವು ನೀಡಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image003DXTJ.jpg

ದೇಶದಲ್ಲಿ ವಿಭಿನ್ನ ಬೈಲಾಗಳನ್ನು ಹೊಂದಿರುವ ಪಿಎಸಿಎಸ್‌ ಗಳ ಕಾರ್ಯನಿರ್ವಹಣೆಯಲ್ಲಿ ಏಕರೂಪತೆಯನ್ನು ತರಲು ಕೆಲಸ ನಡೆಯುತ್ತಿದೆ ಎಂದು ಸಹಕಾರ ಸಚಿವರು ಹೇಳಿದರು. ಸಹಕಾರ ಸಚಿವಾಲಯವು ರಚಿಸಿದ ಪಿಎಸಿಎಸ್‌ ನಲ್ಲಿ ಹೆಚ್ಚಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮಾದರಿ ಬೈಲಾಗಳನ್ನು ಅಳವಡಿಸಿಕೊಂಡಿವೆ ಎಂದು ಅವರು ಹೇಳಿದರು. ಪಿಎಸಿಎಸ್ ಕಾರ್ಯದ ವ್ಯಾಪ್ತಿಯನ್ನು ಈಗ ವಿಸ್ತರಿಸಲಾಗಿದೆ, ಅವುಗಳು ಡೈರಿ ಮತ್ತು ಮೀನುಗಾರಿಕೆಯಂತಹ 25 ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು ಮತ್ತು ಸಾಮಾನ್ಯ ಸೇವಾ ಕೇಂದ್ರಗಳಾಗಿ (ಸಿ ಎಸ್‌ ಸಿ) ಕೆಲಸ ಮಾಡಬಹುದು. ಸಿ ಎಸ್‌ ಸಿ ಗಳಾಗುವ ಮೂಲಕ ಪಿಎಸಿಎಸ್‌ ಗ್ರಾಮೀಣ ಜನರಿಗೆ 300 ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸಬಹುದು ಎಂದು ಶ್ರೀ ಶಾ ಹೇಳಿದರು.

ಎನ್‌ ಸಿ ಡಿ ಸಿ ಯ ಸಾಮರ್ಥ್ಯವನ್ನು ಗುರುತಿಸಿ, ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಆಹಾರ ಸಂಗ್ರಹಣಾ ಯೋಜನೆಯ ಯೋಜನಾ ಅನುಷ್ಠಾನ ಸಂಸ್ಥೆಯಾಗಿ ಇದನ್ನು ಗೊತ್ತುಪಡಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎನ್‌ ಸಿ ಡಿ ಸಿ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ 10,000 ರೈತ ಉತ್ಪಾದಕ ಸಂಸ್ಥೆಗಳ (ಎಫ್‌ ಪಿ ಒ) ರಚನೆ ಮತ್ತು ಪ್ರಚಾರವನ್ನು ಉತ್ತೇಜಿಸುವ ಅನುಷ್ಠಾನ ಏಜೆನ್ಸಿಗಳಲ್ಲಿ ಒಂದಾಗಿದೆ, ಇದು ಎಫ್‌ ಪಿ ಒ ಗಳಾಗಿ ಹೊಸ ಸಹಕಾರಿಗಳ ನೋಂದಣಿ ಮತ್ತು ಬೆಂಬಲವನ್ನು ಒದಗಿಸುತ್ತದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಮೀನು ಕೃಷಿಕರ ಉತ್ಪಾದಕರ ಸಂಘಟನೆಯ (ಎಫ್‌ ಎಫ್‌ ಪಿ ಒ) ರಚನೆ ಮತ್ತು ಉತ್ತೇಜನಕ್ಕಾಗಿಯೂ ಎನ್‌ ಸಿ ಡಿ ಸಿ ಅನುಷ್ಠಾನ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು.

ರಫ್ತು, ಸಾವಯವ ಮತ್ತು ಬೀಜ ಉತ್ಪಾದನೆಯಲ್ಲಿ ಮೂರು ಹೊಸ ರಾಷ್ಟ್ರೀಯ ಮಟ್ಟದ ಸಹಕಾರ ಸಂಘಗಳನ್ನು ಉತ್ತೇಜಿಸಲು ಎನ್‌ ಸಿ ಡಿ ಸಿ ಗಮನಹರಿಸಬೇಕು ಎಂದು ಕೇಂದ್ರ ಸಹಕಾರ ಸಚಿವರು ಒತ್ತಿ ಹೇಳಿದರು, ಇದರಿಂದಾಗಿ ಈ ಸಂಘಗಳು ಸಹಕಾರಿ ಕ್ಷೇತ್ರದ ಅನೇಕ ದೊಡ್ಡ ಬ್ರ್ಯಾಂಡ್‌ ಗಳಂತೆ ತಮ್ಮ ವ್ಯವಹಾರದಲ್ಲಿ ಬೆಳೆಯುತ್ತವೆ. ನಗರ ಸಹಕಾರಿ ಬ್ಯಾಂಕ್‌ ನ ಉದ್ದೇಶಿತ ಸಮೂಹ ಸಂಸ್ಥೆಯಲ್ಲಿ ಎನ್‌ ಸಿ ಡಿ ಸಿ ಈಕ್ವಿಟಿಯ ಮೊದಲ ಕೊಡುಗೆದಾರನಾಗಿರಬೇಕು ಎಂದು ಸಚಿವರು ಹೇಳಿದರು.

*****

 

 



(Release ID: 1966159) Visitor Counter : 173