ಪ್ರಧಾನ ಮಂತ್ರಿಯವರ ಕಛೇರಿ

​​​​​​​ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಕುಸ್ತಿಪಟು ಅಮನ್ ಶೆರಾವತ್ ಗೆ ಪ್ರಧಾನಿ ಅಭಿನಂದನೆ

Posted On: 06 OCT 2023 10:04PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು  ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಕುಸ್ತಿ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಕುಸ್ತಿಪಟು ಅಮನ್ ಶೆರಾವತ್ ಅವರನ್ನು ಅಭಿನಂದಿಸಿದ್ದಾರೆ. 

ಶೆರಾವತ್ ಅವರ ಅಸಾಧಾರಣ ತಂತ್ರವನ್ನು ಶ್ಲಾಘಿಸಿದ ಪ್ರಧಾನ ಮಂತ್ರಿಗಳು ಇದು ಅದ್ಭುತ ಸಾಧನೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಪುರುಷರ ಕುಸ್ತಿ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಅಮನ್ ಶೆರಾವತ್ ಅವರಿಗೆ ಅಭಿನಂದನೆಗಳು! ಅವರ ಅಸಾಧಾರಣ ತಂತ್ರದ ಪ್ರದರ್ಶನವು ಈ ಅದ್ಭುತ ಸಾಧನೆಗೆ ಕಾರಣವಾಯಿತು, ಅವರ ಕಠಿಣ ಪರಿಶ್ರಮ ಮತ್ತು ತರಬೇತಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.

 

***



(Release ID: 1965855) Visitor Counter : 63