ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ವಿಶೇಷ ಅಭಿಯಾನ 3.0 ಪೂರ್ಣಗತಿಯ ಪ್ರಗತಿಯಲ್ಲಿದೆ


ಸ್ವಚ್ಛತೆಗಾಗಿ ದೇಶಾದ್ಯಂತ 900ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದೆ

ರದ್ದಿಗಳ ವಿಲೇವಾರಿ ಸೇರಿದಂತೆ ಸ್ವಚ್ಛತಾ ಕಾರ್ಯಗಳ ಕುರಿತು ಜಾಗೃತಿ ಮೂಡಿಸಲು 644 ವಿಶೇಷ ಬಾಹ್ಯಕ್ಷೇತ್ರ(ಹೊರಾಂಗಣ ಪರಿಸರ) ಅಭಿಯಾನಗಳನ್ನು ನಡೆಸಲಾಗುವುದು

Posted On: 05 OCT 2023 5:50PM by PIB Bengaluru

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ವಿವಿಧ ಭಾಗಗಳಲ್ಲಿರು ಇಲಾಖೆಯ ಮುಖ್ಯ ಕಾರ್ಯದರ್ಶಿ ಮತ್ತು ಅದರ ಅಧೀನ / ಉಪ / ಸಂಬಂಧಿತ ಕಛೇರಿಗಳಲ್ಲಿ ಸ್ವಚ್ಛತಾ ಚಟುವಟಿಕೆಯ ಕುರಿತು ವಿಶೇಷ ಅಭಿಯಾನ 3.0 ಅನ್ನು ಪ್ರಾರಂಭಿಸಿದೆ. ಸೆಪ್ಟೆಂಬರ್ 15 , 2023 ರಿಂದ ಪೂರ್ವಸಿದ್ಧತಾ ಹಂತದಲ್ಲಿ, ಪ್ರಚಾರದ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಡಿಎಪಿಆರ್.ಜಿ ಮಾರ್ಗಸೂಚಿಗಳ ಪ್ರಕಾರ 2023 ಗುರಿಗಳನ್ನು ವಿವಿಧ ನಿಯತಾಂಕಗಳ ಅಡಿಯಲ್ಲಿ ಅಂತಿಮಗೊಳಿಸಲಾಗಿದೆ. ಅಭಿಯಾನದ ಮುಖ್ಯ ಹಂತವು 2 ನೇ ಅಕ್ಟೋಬರ್, 2023 ರಿಂದ ಪ್ರಾರಂಭವಾಯಿತು ಮತ್ತು 31 ನೇ ಅಕ್ಟೋಬರ್ 2023 ರವರೆಗೆ ಸ್ವಚ್ಛತಾ ಕಾರ್ಯಚಟುವಟಿಕೆ ಮುಂದುವರಿಯುತ್ತದೆ. ಅಭಿಯಾನದ ಸಮಯದಲ್ಲಿ, ಸ್ಥಳಗಳನ್ನು ಸ್ವಚ್ಛಗೊಳಿಸಲು ಮತ್ತು ಸ್ವಚ್ಛತೆಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಮತ್ತು ಕಚೇರಿಗಳಲ್ಲಿ ಉತ್ತಮ ಅಭ್ಯಾಸಗಳನ್ನು ಅನುಸರಿಸಲು ವಿಶೇಷ ಗಮನ ನೀಡಲಾಗುತ್ತದೆ.

ಸ್ವಚ್ಛಗೊಳಿಸಲು ಗುರುತಿಸಲಾದ ಸ್ಥಳಗಳ ಕೆಲವು ಛಾಯಾಚಿತ್ರಗಳು

IMG_20230929_155322.jpg   ddk panaji1

2.jpg

ಇಲಾಖೆಯ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಕಾರ್ಯ ಚಟುವಟಕೆಗಳ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ನಿಯಮಿತವಾಗಿ ಅನುಷ್ಠಾನಗೊಳಿಸುವ ಮತ್ತು ಮೇಲ್ವಿಚಾರಣೆ ಮಾಡುವ ಕಾರ್ಯವಿಧಾನವನ್ನು ಕೂಡಾ ಪರಿಶೀಲಿಸಿದರು. ವಿಶೇಷ ಅಭಿಯಾನ 2.0 ರ ಸಮಯದಲ್ಲಿ ಖಾಲಿಯಾದ ಜಾಗದ ಮರು ಬಳಕೆ ಸೇರಿದಂತೆ ಅನುಷ್ಠಾನವನ್ನು ವೀಕ್ಷಿಸಲು ಮತ್ತು ಮಾರ್ಗದರ್ಶನ ನೀಡಲು ಅಭಿಯಾನದ ಸಮಯದಲ್ಲಿ ಅಧಿಕಾರಿಗಳ ತಂಡವನ್ನು ಕ್ಷೇತ್ರಕ್ಕೆ ಭೇಟಿಗಾಗಿ ನಿಯೋಜಿಸಲು ನಿರ್ಧರಿಸಲಾಯಿತು.

WhatsApp Image 2023-09-28 at 6.05.31 PM (1)  rni1

CPC4

3. ಸ್ವಚ್ಛತಾ ಗುರಿಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ವಿವಿಧ ಮಾನದಂಡಗಳ ಆಧಾರದಲ್ಲಿ ಸ್ವಚ್ಛತಾ ಕ್ರಮವು ಪ್ರಗತಿಯಲ್ಲಿದೆ:

 

ಕ್ರ.ಸಂ

ನಿಯತಾಂಕ (ಮಾನದಂಡ)

ಗುರಿ

  1.  

ಬಾಹ್ಯ (ಹೊರಾಂಗಣ ಪರಿಸರ) ಅಭಿಯಾನಗಳ ಸಂಖ್ಯೆ

644

  1.  

ವಿಲೇವಾರಿ ಮಾಡಲು ಗುರುತಿಸಲಾದ ರದ್ದಿ ವಸ್ತುಗಳು (ಕೆಜಿಯಲ್ಲಿ)

89,926

  1.  

ಸಂಸದರುಗಳಿಂದ ಬಾಕಿ ಉಳಿದಿರುವ ಉಲ್ಲೇಖಗಳ ಸಂಖ್ಯೆ

92

  1.  

ಬಾಕಿ ಉಳಿದಿರುವ ಸಂಸದೀಯ ಭರವಸೆಗಳು

15

  1.  

ಬಾಕಿ ಉಳಿದಿರುವ ಪ್ರಧಾನಮಂತ್ರಿ ಕಾರ್ಯಾಲಯದ ಉಲ್ಲೇಖಗಳು

04

  1.  

ಬಾಕಿ ಉಳಿದಿರುವ ಸಾರ್ವಜನಿಕ ಕುಂದುಕೊರತೆಗಳು

296

  1.  

ಬಾಕಿ ಉಳಿದಿರುವ ಪಿ.ಜಿ.ಯವರ ಮೇಲ್ಮನವಿಗಳು

61

  1.  

ಪರಿಶೀಲಿಸಬೇಕಾದ ಕಡತಗಳ ಸಂಖ್ಯೆ

49984

  1.  

ಅಂತಿಮಗೊಳಿಸಿ ಮುಚ್ಚಲು ಗುರುತಿಸಲಾದ ಇ-ಫೈಲ್‌ಗಳ ಸಂಖ್ಯೆ

1640

 *****


(Release ID: 1965021) Visitor Counter : 91