ರಾಷ್ಟ್ರಪತಿಗಳ ಕಾರ್ಯಾಲಯ

63 ನೇ ರಾಷ್ಟ್ರೀಯ ರಕ್ಷಣಾ ಕಾಲೇಜು ಶಿಕ್ಷಣದ ಪಠ್ಯಕ್ರಮದ ಅಧ್ಯಾಪಕರು ಮತ್ತು ಸದಸ್ಯರು ರಾಷ್ಟ್ರಪತಿಯವರನ್ನು ಭೇಟಿ ಮಾಡಿದರು


ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ವಾತಾವರಣದಲ್ಲಿ, ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಚೆನ್ನಾಗಿ ಸಿದ್ಧರಾಗಿರಬೇಕು: ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

Posted On: 04 OCT 2023 12:49PM by PIB Bengaluru

63 ನೇ ರಾಷ್ಟ್ರೀಯ ರಕ್ಷಣಾ ಕಾಲೇಜು ಶಿಕ್ಷಣದ ಪಠ್ಯಕ್ರಮದ ಅಧ್ಯಾಪಕರು ಮತ್ತು ಸದಸ್ಯರು ,ಇಂದು (ಅಕ್ಟೋಬರ್ 4, 2023) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು “ಇಂದು, ನಮ್ಮ ಭದ್ರತಾ ಕಾಳಜಿಗಳು ಪ್ರಾದೇಶಿಕ ಸಮಗ್ರತೆಯ ಸಂರಕ್ಷಣೆಯನ್ನು ಮೀರಿ ವಿಸ್ತರಿಸಿದೆ. ಆರ್ಥಿಕತೆ, ಪರಿಸರ, ಇಂಧನ ಭದ್ರತೆ ಮತ್ತು ಸೈಬರ್ ಭದ್ರತೆಯ ಇತರ ಆಯಾಮಗಳೊಂದಿಗೆ ವ್ಯವಹರಿಸುವಾಗ ಯೋಗಕ್ಷೇಮದ ಇತರ ಆಯಾಮಗಳನ್ನು ಕೂಡಾ ಒಳಗೊಂಡಿದೆ. ಸಶಸ್ತ್ರ ಪಡೆಗಳ ಪಾತ್ರವು ಇಂದು ಸಾಂಪ್ರದಾಯಿಕ ಮಿಲಿಟರಿ ವಿಷಯಗಳನ್ನು ಮೀರಿ ವಿಸ್ತರಿಸಿದೆ. ಸಂಕೀರ್ಣ ರಕ್ಷಣಾ ಮತ್ತು ಭದ್ರತಾ ಪರಿಸರದಲ್ಲಿ, ಭವಿಷ್ಯದ ಸಂಘರ್ಷಗಳಿಗೆ ಹೆಚ್ಚು ಸಮಗ್ರ ಬಹು-ರಾಜ್ಯ ಮತ್ತು ಬಹು-ಸಂಸ್ಥೆಗಳ ವಿಧಾನ ಅಗತ್ಯವಿರುತ್ತದೆ. ಆದ್ದರಿಂದ, ಭವಿಷ್ಯದ ಸಂಕೀರ್ಣ ಭದ್ರತಾ ವಾತಾವರಣವನ್ನು ಸಮಗ್ರ ರೀತಿಯಲ್ಲಿ ಎದುರಿಸಲು ಸೈನ್ಯ ಮತ್ತು ನಾಗರಿಕ ಸೇವಾ ಅಧಿಕಾರಿಗಳನ್ನು ಸಿದ್ಧಪಡಿಸುವಲ್ಲಿ ರಾಷ್ಟ್ರೀಯ ರಕ್ಷಣಾ ಕಾಲೇಜು ಶಿಕ್ಷಣದ ಪಠ್ಯಕ್ರಮದ ಪ್ರಮುಖ ಪಾತ್ರ ವಹಿಸುತ್ತದೆ.” ಎಂದು ಹೇಳಿದರು

“ಜಾಗತಿಕ ಭೌಗೋಳಿಕ ರಾಜಕೀಯ ಪರಿಸರವು ಕ್ರಿಯಾತ್ಮಕವಾಗಿದೆ ಮತ್ತು ಹಲವಾರು ಸವಾಲುಗಳನ್ನು ಒಡ್ಡುತ್ತದೆ. ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸರದಲ್ಲಿ, ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಚೆನ್ನಾಗಿ ಸಿದ್ಧರಾಗಿರಬೇಕು. ರಾಷ್ಟ್ರೀಯ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದುವ ಅವಶ್ಯಕತೆಯಿದೆ. ನಾವು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಭದ್ರಪಡಿಸುವುದು ಮಾತ್ರವಲ್ಲದೆ ಸೈಬರ್ ಆಕ್ರಮಣ, ತಂತ್ರಜ್ಞಾನ ಸಕ್ರಿಯಗೊಳಿಸಿದ ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಂತಹ ಹೊಸ ಭದ್ರತಾ ಸವಾಲುಗಳಿಗೆ ಸಿದ್ಧರಾಗಬೇಕು. ವ್ಯಾಪಕವಾದ ಸಂಶೋಧನೆಯ ಆಧಾರದ ಮೇಲೆ ನವೀಕರಿಸಿದ ಜ್ಞಾನ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅನ್ವಯಿಸುವ ಅಗತ್ಯವಿದೆ. ” ಎಂದು ರಾಷ್ಟ್ರಪತಿಯವರು ಹೇಳಿದರು

“ರಾಷ್ಟ್ರೀಯ ರಕ್ಷಣಾ ಕಾಲೇಜು ಪಠ್ಯಕ್ರಮದಲ್ಲಿ ಆಡಳಿತ, ತಂತ್ರಜ್ಞಾನ, ಇತಿಹಾಸ ಮತ್ತು ಅರ್ಥಶಾಸ್ತ್ರದ ಜೊತೆಗೆ ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ಕ್ಷೇತ್ರಗಳನ್ನು ಒಳಗೊಂಡಿರುವ ಒಂದು-ರೀತಿಯ ಶಿಕ್ಷಣವಾಗಿದೆ” ಎಂದು ರಾಷ್ಟ್ರಪತಿಯವರು ಹೇಳಿದರು

 “ಸಮಗ್ರ ಕಲಿಕೆಯ ವಿಧಾನ - ಸಂಶೋಧನೆ, ತರಗತಿಯ ಚರ್ಚೆಗಳು, ಪ್ರಖ್ಯಾತ ಭಾಷಣಕಾರರಿಂದ ಒಳನೋಟಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಭೇಟಿಗಳ ಮೂಲಕ ಕ್ಷೇತ್ರಾನುಭವ (ಆನ್-ಗ್ರೌಂಡ್ ಎಕ್ಸ್ಪೋಸರ್), ಮುಂತಾದವುಗಳ ಮೂಲಕ ರಾಷ್ಟ್ರೀಯ ರಕ್ಷಣಾ ಕಾಲೇಜು ಪಠ್ಯಕ್ರಮವು ಸಮಕಾಲೀನ ಸವಾಲುಗಳನ್ನು ಎದುರಿಸುವ ವಿಷಯದಲ್ಲಿ ಪಠ್ಯಕ್ರಮದ ಸದಸ್ಯರನ್ನು ಶ್ರೀಮಂತಗೊಳಿಸಿದೆ ” ಎಂದು ರಾಷ್ಟ್ರಪತಿಯವರು ಹೇಳಿದರು 

http://ರಾಷ್ಟ್ರಪತಿಯವರ ಸಂಪೂರ್ಣ ಭಾಷಣಕ್ಕಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -


****



(Release ID: 1964093) Visitor Counter : 88