ಕಲ್ಲಿದ್ದಲು ಸಚಿವಾಲಯ

ಶೇ.16 ರಷ್ಟು ಹೆಚ್ಚಳವನ್ನು ಸಾಧಿಸಿ, ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯು 2023 ರ ಸೆಪ್ಟೆಂಬರ್ ನಲ್ಲಿ 67.21 ದಶಲಕ್ಷ ಟನ್ ಗೆ ತಲುಪಿದೆ


ಕೋಲ್ ಇಂಡಿಯಾ ಲಿಮಿಟೆಡ್ ಉತ್ಪಾದನೆ 51.44 ದಶಲಕ್ಷ ಟನ್ ಗೆ ಏರಿಕೆ

ಶೇ. 11 ರಷ್ಟು ಹೆಚ್ಚಳದೊಂದಿಗೆ, ಸೆಪ್ಟೆಂಬರ್ ವರೆಗೆ ಸಂಚಿತ ಕಲ್ಲಿದ್ದಲು ರವಾನೆ 462.32 ದಶಲಕ್ಷ ಟನ್ ಆಗಿದೆ

Posted On: 03 OCT 2023 12:55PM by PIB Bengaluru

ಕಲ್ಲಿದ್ದಲು ಸಚಿವಾಲಯವು 2023 ರ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯಲ್ಲಿ ಗಣನೀಯ ಏರಿಕೆಯನ್ನು ಸಾಧಿಸಿದೆ. 67.21 ದಶಲಕ್ಷ ಟನ್ (ಎಂಟಿ) ಉತ್ಪಾದನೆಯನ್ನು ಸಾಧಿಸಿದೆ, ಇದು ಹಿಂದಿನ ವರ್ಷದ ಇದೇ ತಿಂಗಳ 58.04 ದಶಲಕ್ಷ ಟನ್ ಅಂಕಿಅಂಶಗಳನ್ನು ಮೀರಿದೆ, ಇದು ಶೇ.15.81 ರಷ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಉತ್ಪಾದನೆಯು 2023 ರ ಸೆಪ್ಟೆಂಬರ್ ತಿಂಗಳಲ್ಲಿ 51.44 ದಶಲಕ್ಷ ಟನ್ ಗೆ ಏರಿದೆ, ಇದು 2022 ರ ಸೆಪ್ಟೆಂಬರ್ ನಲ್ಲಿ 45.67 ದಶಲಕ್ಷ ಟನ್ ಗೆ ಹೋಲಿಸಿದರೆ ಶೇ. 12.63 ರಷ್ಟು ಬೆಳವಣಿಗೆಯೊಂದಿಗೆ ಸಂಚಿತ ಕಲ್ಲಿದ್ದಲು ಉತ್ಪಾದನೆ (ಸೆಪ್ಟೆಂಬರ್ 2023 ರವರೆಗೆ) 2023-24ರ ಹಣಕಾಸು ವರ್ಷದಲ್ಲಿ 428.25 ದಶಲಕ್ಷ ಟನ್ ಗೆ ಏರಿದೆ, ಇದು 2022-23ರ ಇದೇ ಅವಧಿಯಲ್ಲಿ 382.16 ದಶಲಕ್ಷ ಟನ್ ಗೆ  ಹೋಲಿಸಿದರೆ, ಶೇ.12.06 ರಷ್ಟು ಬೆಳವಣಿಗೆಯಾಗಿದೆ.

ಹೆಚ್ಚುವರಿಯಾಗಿ, ಕಲ್ಲಿದ್ದಲು ರವಾನೆಯು 2023 ರ ಸೆಪ್ಟೆಂಬರ್ ರಲ್ಲಿ ಗಮನಾರ್ಹ ಉತ್ತೇಜನವನ್ನು ಕಂಡು, 70.33 ದಶಲಕ್ಷ ಟನ್ ತಲುಪಿದೆ, ಇದು 2022 ರ ಸೆಪ್ಟೆಂಬರ್ ನಲ್ಲಿ ದಾಖಲಾದ 61.10 ದಶಲಕ್ಷ ಟನ್ ಗೆ ಹೋಲಿಸಿದರೆ ಗಮನಾರ್ಹ ಪ್ರಗತಿಯನ್ನು ಪ್ರದರ್ಶಿಸಿ ಶೇ. 15.12 ರಷ್ಟು ಬೆಳವಣಿಗೆಯ ದರವನ್ನು ಸೂಚಿಸುತ್ತದೆ. ಅದೇ ಸಮಯದಲ್ಲಿ, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ರವಾನೆಯು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ್ದು, 2023 ರ ಸೆಪ್ಟೆಂಬರ್ ನಲ್ಲಿ 55.06 ದಶಲಕ್ಷ ಟನ್ ತಲುಪಿದೆ, ಇದು 2022 ರ ಸೆಪ್ಟೆಂಬರ್ ನಲ್ಲಿನ 48.91 ದಶಲಕ್ಷ ಟನ್ ಗೆ  ಹೋಲಿಸಿದರೆ, ಶೇ.12.57 ರಷ್ಟು ಬೆಳವಣಿಗೆಯನ್ನು ಸೂಚಿಸುತದೆ. ಸಂಚಿತ ಕಲ್ಲಿದ್ದಲು ರವಾನೆ (ಸೆಪ್ಟೆಂಬರ್ 2023 ರವರೆಗೆ) 2023-24ರ ಹಣಕಾಸು ವರ್ಷದಲ್ಲಿ 462.32 ದಶಲಕ್ಷ ಟನ್ ಗೆ ಗಮನಾರ್ಹ ಏರಿಕೆ ಕಂಡಿದೆ, ಇದು 2022-23ರ ಇದೇ ಅವಧಿಯಲ್ಲಿ 416.64 ಮೆಟ್ರಿಕ್ ಟನ್ ಗೆ ಹೋಲಿಸಿದರೆ ಶೇ.10.96 ರಷ್ಟು ಬೆಳವಣಿಗೆಯಾಗಿದೆ.

ಕಲ್ಲಿದ್ದಲು ವಲಯವು ಅಭೂತಪೂರ್ವ ಏರಿಕೆಗೆ ಸಾಕ್ಷಿಯಾಗಿದೆ. ಉತ್ಪಾದನೆ, ರವಾನೆ ಮತ್ತು ದಾಸ್ತಾನು ಮಟ್ಟಗಳು ಗಮನಾರ್ಹ ಎತ್ತರಕ್ಕೆ ಏರಿವೆ. ಈ ಅಸಾಧಾರಣ ಬೆಳವಣಿಗೆಗೆ ಕಲ್ಲಿದ್ದಲು ಪಿಎಸ್ ಯುಗಳ ಅಚಲ ಸಮರ್ಪಣೆ ಕಾರಣವಾಗಿದೆ, ಇದು ಈ ಅಸಾಧಾರಣ ಪ್ರಗತಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಕಲ್ಲಿದ್ದಲು ಪೂರೈಕೆ ಸರಪಳಿಯ ದಕ್ಷತೆಯನ್ನು ಒತ್ತಿಹೇಳುತ್ತದೆ. ಜತೆಗೆ ದೇಶಾದ್ಯಂತ ಕಲ್ಲಿದ್ದಲಿನ ತಡೆರಹಿತ ವಿತರಣೆಯನ್ನು ಖಚಿತಪಡಿಸುತ್ತದೆ.

ಕಲ್ಲಿದ್ದಲು ಸಚಿವಾಲಯವು ಸ್ಥಿರವಾದ ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದ್ದು, ರಾಷ್ಟ್ರದ ನಿರಂತರ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುವ ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಇಂಧನ ವಲಯಕ್ಕೆ ನಿರಂತರ ಪೂರೈಕೆಯನ್ನು ಖಚಿತಪಡಿಸುತ್ತದೆ

****



(Release ID: 1963655) Visitor Counter : 79