ಪ್ರಧಾನ ಮಂತ್ರಿಯವರ ಕಛೇರಿ
ಎನ್ ಜಿಎಂಎನಲ್ಲಿ ಪ್ರಧಾನಮಂತ್ರಿ ಅವರಿಗೆ ನೀಡಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಪ್ರದರ್ಶಿಸುವ ಪ್ರದರ್ಶನ
ನಮಾಮಿ ಗಂಗೆಯ ಪ್ರಯೋಜನಕ್ಕಾಗಿ ಉಡುಗೊರೆಗಳನ್ನು ಹರಾಜು ಹಾಕಲಾಗುವುದು
Posted On:
02 OCT 2023 4:26PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ತಮಗೆ ನೀಡಲಾದ ವ್ಯಾಪಕ ಶ್ರೇಣಿಯ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಪ್ರದರ್ಶಿಸುವ ಪ್ರದರ್ಶನದ ಬಗ್ಗೆ ಹಂಚಿಕೊಂಡಿದ್ದಾರೆ.
ಭಾರತದಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಈ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ತಮಗೆ ನೀಡಲಾಗಿದೆ ಮತ್ತು ಇವು ಭಾರತದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಮತ್ತು ಕಲಾತ್ಮಕ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಎಂದಿನಂತೆ, ಈ ವಸ್ತುಗಳನ್ನು ಹರಾಜು ಮಾಡಲಾಗುವುದು ಮತ್ತು ಅದರಿಂದ ಬರುವ ಆದಾಯವು ನಮಾಮಿ ಗಂಗೆ ಉಪಕ್ರಮಕ್ಕೆ ಬೆಂಬಲ ನೀಡುತ್ತದೆ ಎಂದು ಪ್ರಧಾನಿ ತಿಳಿಸಿದರು.
ವೈಯಕ್ತಿಕವಾಗಿ ಎನ್ ಜಿಎಂಎಗೆ ಭೇಟಿ ನೀಡಲು ಸಾಧ್ಯವಾಗದವರಿಗಾಗಿ ಶ್ರೀ ನರೇಂದ್ರ ಮೋದಿ ಅವರು ವೆಬ್ ಸೈಟ್ ಲಿಂಕ್ ಅನ್ನು ಹಂಚಿಕೊಂಡರು.
ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ;
"ಇಂದಿನಿಂದ, @ngma_delhi ಪ್ರದರ್ಶನವು ಇತ್ತೀಚಿನ ದಿನಗಳಲ್ಲಿ ನನಗೆ ನೀಡಿದ ವ್ಯಾಪಕ ಶ್ರೇಣಿಯ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಪ್ರದರ್ಶಿಸುತ್ತದೆ.
ಭಾರತದಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ನನಗೆ ನೀಡಲಾದ ಉಡುಗೊರೆಗಳು ಭಾರತದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಮತ್ತು ಕಲಾತ್ಮಕ ಪರಂಪರೆಗೆ ಸಾಕ್ಷಿಯಾಗಿವೆ.
ಎಂದಿನಂತೆ, ಈ ವಸ್ತುಗಳನ್ನು ಹರಾಜು ಮಾಡಲಾಗುವುದು ಮತ್ತು ಅದರಿಂದ ಬರುವ ಆದಾಯವು ನಮಾಮಿ ಗಂಗೆ ಉಪಕ್ರಮವನ್ನು ಬೆಂಬಲಿಸುತ್ತದೆ.
ಅವುಗಳನ್ನು ನಿಮ್ಮದಾಗಿಸಿಕೊಳ್ಳಲು ನಿಮಗೆ ಇಲ್ಲಿದೆ ಅವಕಾಶ!
ಇನ್ನಷ್ಟು ತಿಳಿದುಕೊಳ್ಳಲು ಎನ್ ಜಿಎಂಎಗೆ ಭೇಟಿ ನೀಡಿ. ವೈಯಕ್ತಿಕವಾಗಿ ಭೇಟಿ ನೀಡಲು ಸಾಧ್ಯವಾಗದವರಿಗೆ ವೆಬ್ ಸೈಟ್ ಲಿಂಕ್ ಹಂಚಿಕೊಳ್ಳುವುದು. http://pmmementos.gov.in"
***
(Release ID: 1963649)
Visitor Counter : 94
Read this release in:
English
,
Gujarati
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Odia
,
Tamil
,
Telugu
,
Malayalam