ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಒಂದು ತಾರೀಕು ಒಂದು ದಿನ ಓಟ್ಟಾಗಿ (ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್)
ಕೇಂದ್ರ ಸಚಿವ ಶ್ರೀ ಹರ್ದೀಪ್ ಎಸ್ ಪುರಿ ದೆಹಲಿಯ ಕೋಪರ್ನಿಕಸ್ ಮಾರ್ಗದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು
Posted On:
01 OCT 2023 2:56PM by PIB Bengaluru
ಅಕ್ಟೋಬರ್ 1 ರಂದು ರಾಷ್ಟ್ರದಾದ್ಯಂತ ಸ್ವಚ್ಛತಾ ಅಭಿಯಾನ ನಡೆಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯರು ಮಾಡಿದ ಮನವಿಯಂತೆ, 'ಸ್ವಚ್ಛತೆಯೇ ಸೇವೆ(ಸ್ವಚ್ಛತಾ ಹಿ ಸೇವಾ)' ಉಪಕ್ರಮದ ಭಾಗವಾಗಿ ನಡೆದ 'ಸ್ವಚ್ಛತೆಗಾಗಿ ಶ್ರಮದಾನ' ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಭಾಗವಹಿಸಿದರು.
ನವದೆಹಲಿಯ ಕೋಪರ್ನಿಕಸ್ ಮಾರ್ಗದಲ್ಲಿರುವ ಪ್ರಿನ್ಸೆಸ್ ಪಾರ್ಕ್ನಲ್ಲಿ ಸಚಿವರು ಸ್ವಚ್ಛತಾ ಸೇವಾ ಅಭಿಯಾನಕ್ಕೆ ಚಾಲನೆ ನೀಡಿದರು. ನೈರ್ಮಲ್ಯ ಕಾರ್ಯಕರ್ತರು, ವಿದ್ಯಾರ್ಥಿಗಳು, ಪ್ರದೇಶದ ನಿವಾಸಿಗಳು ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಚಾಲನೆಯಲ್ಲಿ ಪಾಲ್ಗೊಂಡರು.
ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಸಂದೇಶ ಹಂಚಿಕೆ ಮಾಡಿದ ಕೇಂದ್ರ ಸಚಿವರು, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಸ್ವಚ್ಛತಾ ಹಿ ಸೇವಾ ಕರೆಯಿಂದ ಪ್ರೇರಿತರಾಗಿ, ಕೋಪರ್ನಿಕಸ್ ಮಾರ್ಗದಲ್ಲಿರುವ ಪ್ರಿನ್ಸೆಸ್ ಪಾರ್ಕ್ನಲ್ಲಿರುವ ತಾತ್ಕಾಲಿಕ ವಸಾಹತು ನಿವಾಸಿಗಳೊಂದಿಗೆ ಕಸ ಮುಕ್ತ ಭಾರತ ನಿಟ್ಟಿನಲ್ಲಿ ಒಂದು ಗಂಟೆಯ ಶ್ರಮದಾನದಲ್ಲಿ ಭಾಗವಹಿಸಿ ಕಸ ಸಂಗ್ರಹಿಸಿ ಕಸದಕುಪ್ಪೆಯಲ್ಲಿ ಹಾಕಿದ್ದೇನೆ.”
ಈ ತಿಂಗಳ ಆರಂಭದಲ್ಲಿಪ್ರಸಾರವಾದ, ಮನ್ ಕಿ ಬಾತ್ ನ 105 ನೇ ಸಂಚಿಕೆಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು (ಮಹಾತ್ಮ ಗಾಂಧಿಯವರ ಜನ್ಮ ವಾರ್ಷಿಕೋತ್ಸವದ ಮುನ್ನಾದಿನದಂದು) ತಮ್ಮ ತಮ್ಮ ಪರಿಸರದಲ್ಲಿ"ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ" ನಡೆಸಲು ಹಾಗೂ ಭಾಗವಹಿಸುವಂತೆ ಎಲ್ಲಾ ನಾಗರಿಕರಲ್ಲಿ ವಿನಂತಿಸಿದ್ದರು. ಇದನ್ನು, ಮಹಾತ್ಮ ಗಾಂಧಿಯವರಿಗೆ ನಾವು ನೀಡುವ ಗೌರವ ನಮನ ('ಸ್ವಚ್ಛಾಂಜಲಿ') ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಹೊಸದಿಲ್ಲಿಯ ಕೋಪರ್ನಿಕಸ್ ಮಾರ್ಗದಲ್ಲಿ ನಡೆದ "ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ" ಕಾರ್ಯಕ್ರಮದ ಚಾಲನೆಯ ಛಾಯಾಚಿತ್ರಗಳು:
*****
(Release ID: 1962807)
Visitor Counter : 107