ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಟಿಐಎಫ್ಎಫ್ 2023ರಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ ಡಾ.ಎಲ್.ಮುರುಗನ್
Posted On:
30 SEP 2023 11:56AM by PIB Bengaluru
ಸೆಪ್ಟೆಂಬರ್ 29 ರಂದು ನಡೆದ 15 ನೇ ತಾಷ್ಕೆಂಟ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು ನೇತೃತ್ವದ ತಂಡ ಭಾರತವನ್ನು ಪ್ರತಿನಿಧಿಸಿತು. ಭಾರತೀಯ ನಿಯೋಗವು ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಶ್ರೀ ಉಮೇಶ್ ಮೆಹ್ರಾ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್‌ಎಫ್‌ಡಿಸಿ) ಅಧಿಕಾರಿಗಳನ್ನು ಒಳಗೊಂಡಿತ್ತು.
ಭಾರತ ಮತ್ತು ಉಜ್ಬೇಕಿಸ್ತಾನ್ ದೇಶಗಳು ಹಿಂದಿನ ಸೋವಿಯತ್ ಒಕ್ಕೂಟದ ಕಾಲಘಟ್ಟದಿಂದಲೂ ಚಲನಚಿತ್ರ ನಿರ್ಮಾಣದಲ್ಲಿ ಸಹಕಾರದ ಬಲವಾದ ಸಂಪ್ರದಾಯವನ್ನು ಹೊಂದಿವೆ. ಎನ್‌ಎಫ್‌ಡಿಸಿ ಮತ್ತು ಉಜ್ಬೆಕ್ ಕಿನೋ (ಉಜ್ಬೆಕ್ ಫಿಲ್ಮ್ಸ್) ಜಂಟಿ ಕೆಲಸದಿಂದ ಈ ಸಂಬಂಧಗಳು ಕೊಂಡಿಗಳನ್ನು ಬಲಪಡಿಸಲು ಸದಾ ಪ್ರಯತ್ನಿಸಲಾಗಿದೆ.
ಉಜ್ಬೇಕಿಸ್ತಾನ್ ನ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಒಜೊಡ್‌ಬೆಕ್ ನಜರ್ಬೆಕೋವ್ ಅವರನ್ನು ಸಚಿವ ಡಾ. ಮುರುಗನ್ ಅವರು ಭೇಟಿ ಮಾಡಿದರು. ಎರಡೂ ದೇಶಗಳ ನಡುವಿನ ಸಾಂಪ್ರದಾಯಿಕ ಸ್ನೇಹ , ವ್ಯವಹಾರ ಮತ್ತು ಸಹಕಾರವನ್ನು ಚರ್ಚಿಸಿದರು. ಚಲನಚಿತ್ರ ನಿರ್ಮಾಣ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವ ಅಗತ್ಯವನ್ನು ಒಪ್ಪಿಕೊಂಡರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕ್ರಿಯಾತ್ಮಕ ನಾಯಕತ್ವದಲ್ಲಿ ಭಾರತದ ಸೃಜನಶೀಲ ಆರ್ಥಿಕತೆಯನ್ನು ಬಲಪಡಿಸಲು ಭಾರತ ಸರ್ಕಾರದ ದೃಢವಾದ ನೀತಿಗಳಿಗೆ ಉಜ್ಬೆಕ್ ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು. ಸಹ-ನಿರ್ಮಾಣ, ಶೂಟಿಂಗ್ ಮತ್ತು ನಿರ್ಮಾಣ ನಂತರದ ಕ್ಷೇತ್ರದಲ್ಲಿ ಸಹಕಾರವನ್ನು ಇಬ್ಬರೂ ಸಚಿವರು ಮಾಹಿತಿ ನೀಡಿದರು.
ಫಿಲ್ಮ್ಸ್ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ದಂತಹ ಸಂಸ್ಥೆಗಳಲ್ಲಿ ಉಜ್ಬೆಕ್ ಚಲನಚಿತ್ರ ನಿರ್ಮಾಪಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಭಾರತ ಸಿದ್ಧವಾಗಿದೆ. ಭಾರತದ ಶ್ರವಣ-ದೃಶ್ಯ ವಲಯದಲ್ಲಿ ಕಂಡುಬರುವ ಅದ್ವಿತೀಯ ಬೆಳವಣಿಗೆಯ ಕುರಿತು ಡಾ. ಮುರುಗನ್ ಅವರು ಉಜ್ಬೆಕ್ ತಂಡಕ್ಕೆ ವಿವರಿಸಿದರು
ಚಲನಚಿತ್ರೋತ್ಸವದ ಸಂದರ್ಭದಲ್ಲಿ, ಡಾ. ಮುರುಗನ್ ಅವರು ಟರ್ಕಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಉಪ ಸಚಿವ ಡಾ. ಬಿ. ಮುಮ್ಕು ನೇತೃತ್ವದ ಟರ್ಕಿ ನಿಯೋಗವನ್ನು ಭೇಟಿ ಮಾಡಿದರು.
ಭಾರತದಲ್ಲಿ ಚಿತ್ರೀಕರಣಕ್ಕೆ ಅತ್ಯುತ್ತಮ ಅವಕಾಶಗಳು ಮತ್ತು ಲಭ್ಯವಿರುವ ಚಲನಚಿತ್ರ ನಿರ್ಮಾಣದ ಅತ್ಯಾಧುನಿಕ ತಾಂತ್ರಿಕ ಮೂಲಸೌಕರ್ಯಗಳ ಬಳಕೆಯ ಬಗ್ಗೆ ಟರ್ಕಿಶ್ ತಂಡಕ್ಕೆ ವಿವರಿಸಲಾಯಿತು.
**
(Release ID: 1962399)
Visitor Counter : 97