ಉಪರಾಷ್ಟ್ರಪತಿಗಳ ಕಾರ್ಯಾಲಯ

​​​​​​​ಐತಿಹಾಸಿಕ ಕ್ರಮ: ರಾಜ್ಯಸಭೆಯಲ್ಲಿ ಮಹಿಳಾ ಉಪ ಸಭಾಪತಿಗಳ ಸಮಿತಿ ರಚಿಸಿದ ಸಭಾಪತಿಗಳು


ನಾರಿ ಶಕ್ತಿ ವಂದನ್ ಅಧಿನಿಯಮ್ 2023 ಕುರಿತು ರಾಜ್ಯಸಭೆಯಲ್ಲಿ ಚರ್ಚಿಸುತ್ತಿರುವ ಮಧ್ಯೆ 13 ಮಹಿಳಾ ಸದಸ್ಯರು ಸಮಿತಿಗೆ ನಾಮ ನಿರ್ದೇಶನ

Posted On: 21 SEP 2023 12:13PM by PIB Bengaluru

ಐತಿಹಾಸಿಕ ನಡೆಯೊಂದರಲ್ಲಿ, ರಾಜ್ಯಸಭೆಯ ಸಭಾಪತಿಗಳಾದ ಉಪ ರಾಷ್ಟ್ರಪತಿ ಶ್ರೀ ಜಗದೀಪ್  ಧನ್ ಖರ್ ಅವರು 13 ಮಂದಿ ರಾಜ್ಯಸಭೆಯ ಮಹಿಳಾ ಸದಸ್ಯರನ್ನು ಒಳಗೊಂಡ ಉಪ ಸಭಾಪತಿಗಳ ಸಮಿತಿಯನ್ನು ನಾರಿ ಶಕ್ತಿ ವಂದನ್ ಅಧಿನಿಯಮ್ ಮಸೂದೆ, 2023 ನ್ನು ಚರ್ಚಿಸುತ್ತಿರುವುದರ ಮಧ್ಯೆ ಮರು ರಚನೆ ಮಾಡಿದ್ದಾರೆ. 

ರಾಜ್ಯಸಭೆಯಲ್ಲಿ ಮಹಿಳೆಯರ ಉಪಸ್ಥಿತಿಯು ವಿಶ್ವಕ್ಕೆ ಪ್ರಬಲವಾದ ಸಂದೇಶವನ್ನು ರವಾನಿಸುತ್ತದೆ. ಈ ಬದಲಾವಣೆಯ ಯುಗಕಾಲದ ಕ್ಷಣದಲ್ಲಿ ಮಹಿಳೆಯರು 'ಆಜ್ಞೆಯ ಸ್ಥಾನ'ವನ್ನು ಹೊಂದಿದ್ದಾರೆ ಎಂಬುದನ್ನು ಸಂಕೇತಿಸುತ್ತದೆ ಎಂದು ಉಪ ರಾಷ್ಟ್ರಪತಿಗಳು ಪ್ರತಿಪಾದಿಸಿದ್ದಾರೆ. 

ಉಪ ಸಭಾಪತಿಗಳ ಸಮಿತಿಗೆ ನಾಮನಿರ್ದೇಶನಗೊಂಡ ಮಹಿಳಾ ರಾಜ್ಯಸಭಾ ಸದಸ್ಯರ ಹೆಸರುಗಳು ಕೆಳಕಂಡಂತಿವೆ:

1. ಶ್ರೀಮತಿ ಪಿ. ಟಿ. ಉಷಾ 

2. ಶ್ರೀಮತಿ ಎಸ್. ಫಾಂಗ್ನಾನ್ ಕೊನ್ಯಾಕ್ 

3. ಶ್ರೀಮತಿ ಜಯಾ ಬಚ್ಚನ್ 

4. ಶ್ರೀಮತಿ ಸರೋಜ್ ಪಾಂಡೆ 

5. ಶ್ರೀಮತಿ ರಜನಿ ಅಶೋಕರಾವ್ ಪಾಟೀಲ್ 

6. ಡಾ. ಫೌಜಿಯಾ ಖಾನ್ 

7. ಶ್ರೀಮತಿ ಡೋಲಾ ಸೇನ್ 

8. ಶ್ರೀಮತಿ ಇಂದು ಬಾಲ ಗೋಸ್ವಾಮಿ 

9. ಡಾ. ಕನಿಮೊಳಿ ಎನ್ವಿಎನ್ ಸೋಮು 

10. ಶ್ರೀಮತಿ ಕವಿತಾ ಪಾಟಿದಾರ್ 

11. ಶ್ರೀಮತಿ ಮಹುವಾ ಮಜಿ 

12. ಡಾ. ಕಲ್ಪನಾ ಸೈನಿ 

13. ಶ್ರೀಮತಿ ಸುಲತಾ ದೇ

***



(Release ID: 1959419) Visitor Counter : 97